ಮೋದಿ ಸರ್ಕಾರ ಬಂದಮೇಲೆ ಕನ್ನಡಿಗರಿಗೆ ಅನ್ಯಾಯದ ಮೇಲೆ ಅನ್ಯಾಯ; ಐ.ಬಿ.ಪಿ.ಎಸ್.ನಲ್ಲಿ ಕರ್ನಾಟಕದಲ್ಲಿ ಕನ್ನಡಿಗರು 20% ಅನ್ಯರು 80%!!

0
468

ಕೇಂದ್ರ ಸರ್ಕಾರ ನಡೆಸುವ ಐ.ಬಿ.ಪಿ.ಎಸ್. ಪರೀಕ್ಷೆ, ಬ್ಯಾಂಕಿಂಗ್ ಕ್ಷೇತ್ರದ ನೇಮಕಾತಿಯ ಉದ್ಯೋಗದಲ್ಲಿ ಕರ್ನಾಟಕದವರಿಗೆ ನಿಡುವ ಆದ್ಯತೆಯಲ್ಲಿ 20/80 ಅನುಪಾತದಲ್ಲಿ ಅನ್ಯಾಯವಾಗುತ್ತಿದೆ ಅಂದರೆ ಕರ್ನಾಟಕದಲ್ಲಿರುವ ಬ್ಯಾಂಕ್- ಗಳಲ್ಲಿ ಕನ್ನಡಿಗರಿಗೆ 20% ಆದ್ಯತೆ ನೀಡಿದರೆ ಹೊರಗಿನವರಿಗೆ 80% ಆದ್ಯತೆ ನಿಡುತ್ತಿದ್ದಾರೆ. ಇದನ್ನು ಕೂಲಂಕುಷವಾಗಿ ಬೇರೆರಾಜ್ಯಗಳಿಗೆ ಹೋಲಿಕೆ ಮಾಡಿ ನೋಡಿದರೆ.


Also read: ಖಾಸಗಿ ವಲಯದ ಉದ್ಯೋಗದಲ್ಲಿ ಕನ್ನಡಿಗರಿಗೆ ಆದ್ಯತೆ; ನವಂಬರ್ ಅಂತ್ಯದೊಳಗೆ ಜಾರಿಗೆ ತರುವಂತೆ ಒತ್ತಾಯ…

  • ಕರ್ನಾಟಕ :ಸ್ಥಳಿಯರಿಗೆ – 20%, ಹೊರರಾಜ್ಯದವರಿಗೆ -80%
  • ಆಂಧ್ರಪ್ರದೇಶ :ಸ್ಥಳಿಯರಿಗೆ – 95%, ಹೊರರಾಜ್ಯದವರಿಗೆ -5%
  • ತಮಿಳುನಾಡು : ಸ್ಥಳಿಯರಿಗೆ – 95%, ಹೊರರಾಜ್ಯದವರಿಗೆ -5%
  • ಮಹಾರಾಷ್ಟ್ರ : ಸ್ಥಳಿಯರಿಗೆ – 85%, ಹೊರರಾಜ್ಯಗಳಿಗೆ -15%
  • ತೆಲಂಗಾಣ : ಸ್ಥಳಿಯರಿಗೆ -100% ಹೊರರಾಜ್ಯಗಳಿಗೆ -00
  • ಕೇರಳ : ಸ್ಥಳಿಯರಿಗೆ -100% ಹೊರರಾಜ್ಯಗಳಿಗೆ -00


Also read: ಮುಂದಿನ ಚುನಾವಣೆಯಲ್ಲಿ ಬಿ.ಜೆ.ಪಿ ಸೋಲೋ ಭಯ ಹುಟ್ಟಿಕೊಂಡಿದೆ, ಕ್ರಿಕೆಟಿಗರಾದ ಧೋನಿ, ಗಂಭೀರ್-ರನ್ನು ಕಣಕ್ಕೆ ಇಳಿಸುತ್ತಾರಂತೆ…

ಇಷ್ಟೊಂದು ಅನ್ಯಾಯವಾಗುತ್ತಿದರು ಇದ್ದಕೆ ಸಂಬಂಧಪಟ್ಟವರು ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಕಲಾಪ ನಡೆಸಿಕೊಡುವಾಗ ಡಾಎಲ್.ಹನುಮಂತಯ್ಯ ಈ ವಿಚಾರವನ್ನು ಪ್ರಸ್ತಾಪಿಸಿ. ಬ್ಯಾಂಕಿಂಗ್ ಕೇತ್ರದಲ್ಲಿ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯದ ವಿರುದ್ದ ಮಾತನಾಡಿ. ಕರ್ನಾಟಕದ ಎಲ್ಲ ಬ್ಯಾಂಕ್ ಗಳಲ್ಲಿ ಹೊರ ರಾಜ್ಯದಿಂದ ಬಂದವರು ಶೇಕಡಾ 80 ರಷ್ಟು ಇದ್ದಾರೆ ಇವರೆಲ್ಲಗಿಗೂ ಕನ್ನಡವನ್ನು ಮಾತನಾಡಲು ಬರುವುದೇ ಇಲ್ಲ ಗ್ರಾಮೀಣ ಪ್ರದೇಶದ ಜನರಿಗೆ ಹಿಂದಿ ಇಂಗ್ಲಿಷ್ ಮಾತನಾಡಲು ಬರುವುದೇ ಇಲ್ಲ ಇದರಿಂದ ಬ್ಯಾಂಕ್ ವ್ಯವಹಾರದಲ್ಲಿ ಜನ ಸಾಮಾನ್ಯರಿಗೆ ತೊಂದರೆಯಾಗುತ್ತಿದೆ ಅಷ್ಟೇ ಅಲ್ಲದೆ ಕನ್ನಡಿಗರಿಗೆ ಬ್ಯಾಂಕಿಂಗ್ ಉದ್ಯೋಗದಲ್ಲಿ ದೊಡ್ಡ ಮಟ್ಟದ ಅನ್ಯಾಯವಾಗುತ್ತಿದೆ ಎಂದು ರಾಜ್ಯಸಭೆಯಲ್ಲಿ ಮಾತನಾಡಿದರು.


Also read: LIC ಪಾಲಸಿದಾರರ ಗಮನಕ್ಕೆ ಇನ್ನುಮುಂದೆ ಈ 111 ಪಾಲಸಿಗಳು ಇಲ್ಲ..

ಇಂದಿಗ ವಿಷಯವಾಗಿ ಸಂಸತ್ ಸದ್ಯಸರಾದ GC ಚಂದ್ರಶೇಖರ್- ರವರು twitter ನಲ್ಲಿ ಅಭಿಪ್ರಾಯ ಹಚ್ಚಿಕೊಂಡು IBPS ನೇಮಕಾತಿಯಲ್ಲಿ ತನ್ನನಾಡಿನಲ್ಲೇ ಕನ್ನಡಿಗರಿಗೆ ಅನಾಥ ಪ್ರಜ್ಞೆ ಕಾಡುತ್ತಿರುವುದು ಬೇಸರದ ಸಂಗತಿ ನಾವು ಎಲ್ಲ ಸಂಸತ್ ಸದ್ಯಸರು ಪಕ್ಷ ಭೇದ ಮರೆತು ಒಗ್ಗಟ್ಟಿನಿಂದ ಕನ್ನಡಿಗರ ಹಿತರಕ್ಷಣೆ ಕಾಪಾಡುವ ಸಲುವಾಗಿ ಬರುವ ಅಧಿವೇಶನದಲ್ಲಿ ಇದನ್ನು ಪ್ರಮುಖ್ಯ ವಿಷ್ಯಯವನ್ನಾಗಿ ತೆಗೆದುಕೊಂಡು ವಿದ್ಯಾರ್ಥಿಗಳಿಗೆ ನ್ಯಾಯ ಕೊಡಿಸಲು ಪ್ರಾಮಾಣಿಕವಾಗಿ ಪ್ರಯತ್ನಸುತ್ತೇವೆ ಎಂದು ತಿಳಿದ್ದಾರೆ ಇದ್ದಕ್ಕೆ ಹಲವರು ಪ್ರತಿಕ್ರಿಯೆ ನೀಡಿ. ibps ಪರೀಕ್ಷೆಗೆ ಅರ್ಜಿ ಸಲ್ಲಿಸುವಾಗ ಆ ರಾಜ್ಯದ ಭಾಷೆಯ ಬಗ್ಗೆ ಮಾಹಿತಿ ನೀಡಬೇಕಾಗುತ್ತದೆ ಆದರೆ ಹೊರ ರಾಜ್ಯದವರು ಸುಳ್ಳು ಮಾಹಿತಿ ನೀಡಿ ನೇಮಕ ಗೊಲ್ಲುತ್ತಾರೆ. ಇದನ್ನು ಕೇಂದ್ರ ಸರ್ಕಾರದ ಸರಿಯಾಗಿ ಪರಿಗಣಿಸುತ್ತಿಲ್ಲ ಎಂದು ಅಭಿಪ್ರಾಯ ಸೂಚಿಸಿದ್ದಾರೆ.

ಒಟ್ಟಾರೆಯಾಗಿ: ಕೇಂದ್ರ ಸರ್ಕಾರವು ನಡೆಸುವ ibps ಪರೀಕ್ಷೆಯಿಂದ ಕನ್ನಡಿಗರಿಗೆ ಅನ್ಯಾಯವಾಗುತ್ತಿರುವುದು ಕಂಡು ಬರುತ್ತಿದು ಬೇರೆ ರಾಜ್ಯದಲ್ಲಿ ಸ್ಥಳಿಯರಿಗೆ ನೀಡಿದ ಆದ್ಯತೆಯನ್ನು ಕರ್ನಾಟಕದಲ್ಲಿವೂ ಜಾರಿಗೆ ತಂದು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸಬೇಕು ಎಂದು ಮಾತುಗಳು ಕೇಳಿಬರುತ್ತಿವೆ.