ಉತ್ತರ ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಹುಲಿಗೆಮ್ಮ ದೇವಿ

0
1673

Kannada News | Karnataka Temple History

ಉತ್ತರ ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿರುವ ಕೊಪ್ಪಳ ತಾಲೂಕಿನ ಹುಲಿಗಿಯ ಹುಲಿಗೆಮ್ಮ ದೇವಿ ದೇವಸ್ಥಾನದಲ್ಲಿ ಭಕ್ತರ ಆಸೆಗಳನ್ನು ಈಡೇರಿಸಲು ರೇಣುಕಾಂಬ ದೇವಿಯೇ ಹುಲಿಗೆಮ್ಮಳಾಗಿ ನೆಲೆಸಿದ್ದಾಳೆ.

ಹುಲಿಗೆಮ್ಮ ದೇವಿ

ಶ್ರೀ ಹುಲಿಗೆಮ್ಮ ದೇವಿ ಅಥವಾ ಹುಲಿಗೆಮ್ಮ ಎಂದು ಕರೆಯಲಾಗುವ ಈ ದೇವಸ್ಥಾನ ಇರುವುದು ಉತ್ತರ ಕರ್ನಾಟಕದ ಕೊಪ್ಪಳ ತಾಲ್ಲೂಕಿನ, ತುಂಗ ಭದ್ರಾ ನದಿಯ ದಡದ ಮೇಲಿರುವ ಹುಲಿಗಿ ಎನ್ನುವ ಪಟ್ಟಣದಲ್ಲಿ. ಈ ಸ್ಥಳವನ್ನು ’ವ್ಯಾಘ್ರಪುರಿ’ ಎಂಬ ಸಂಸ್ಕೃದಲ್ಲೂ ಕರೆಯುತ್ತಾರೆ. ಇಲ್ಲಿರುವ ಮೂಲ ದೇವರೆಂದರೆ ದುರ್ಗಾ ದೇವಿ ಸ್ವರೂಪಿಯಾದ ಹುಲಿಗೆಮ್ಮ ದೇವಿ ಹಾಗು ಈ ದೇವಸ್ಥಾನದಲ್ಲೇ ಸೋಮನಾಥನ ದೇವಸ್ಥಾನ ಕೂಡ ಇದೆ. ಈ ದೇವಸ್ಥಾನದಲ್ಲಿ ಈಶ್ವರ ಸೋಮೇಶ್ವರನ ರೂಪದಲ್ಲಿ ನೆಲೆಸಿದ್ದಾನೆ.

ಹುಲಿಗೆಮ್ಮ ದೇವಿ 3

ಸುಮಾರು 13 ನೆಯ ಶತಮಾನಕ್ಕೆ ಸೇರಿದ ಈ ದೇವಸ್ಥಾನದಲ್ಲಿ ನಾಗಜೋಗಿ ಹಾಗು ಬಸವಜೋಗಿ ಎಂಬ ಇಬ್ಬರು ಭಕ್ತರ ಆಸೆಗಳನ್ನು ಈಡೇರಿಸಲು ರೇಣುಕಾಂಬ ದೇವಿಯೇ ಹುಲಿಗೆಮ್ಮಳಾಗಿ ನೆಲೆಸಿದ್ದಾಳೆ. ದೇವಸ್ಥಾನದಲ್ಲಿ ಇರುವ ಕೆತ್ತನೆಯ ಪ್ರಕಾರ ಈ ದೇವಸ್ಥಾನವನ್ನು ಚತುರ್ವೇದಿ ಭಟ್ಟರಿಗೆ ಒಬ್ಬ ಚಾಲುಕ್ಯ ರಾಜನಾದ ವಿಕ್ರಮಾದಿತ್ಯ VI ಉಡುಗೊರೆಯಾಗಿ ನೀಡಿದ್ದ. ದೇವಸ್ಥಾನದ ಮುಂದೆ 25 ಅಡಿ ಎತ್ತರದ ಧ್ವಜ ಸ್ಥಂಬವಿದ್ದು ಅದರ ಮುಂದೆ ಪ್ರತಿ ವರ್ಷ ಜಾತ್ರೆ ನಡೆಯುತ್ತದೆ. ಪ್ರತಿ ಮಂಗಳವಾರ ಹಾಗು ಶುಕ್ರವಾರ ದೇವಿಗೆ ವಿಶೇಷ ಪೂಜೆಗಳು ನಡೆಯುವುದರಿಂದ ಅಂದಿನ ದಿನ ಜನ ಸಂದಡಿ ಕೂಡ ಹೆಚ್ಚಾಗಿರುತ್ತದೆ.

ಹುಲಿಗೆಮ್ಮ ದೇವಿ 1

ಉತ್ತರ ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿರುವ ಕೊಪ್ಪಳ ತಾಲೂಕಿನ ಹುಲಿಗಿಯ ಹುಲಿಗೆಮ್ಮ ದೇವಿ ದೇವಸ್ಥಾನದಲ್ಲಿ ಫೆ. 10 ರಂದು ಭಾರತ ಹುಣ್ಣಿಮೆ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.

huligemma-jatre-huligedemma-devi-temple-huligemma-4

Aslo watch:

ಭಾರತ ಹುಣ್ಣಿಮೆಯ ಅಂಗವಾಗಿ ಅಂದು ಬೆಳಿಗ್ಗೆ 9 ಗಂಟೆಗೆ ದೇವಸ್ಥಾನದಲ್ಲಿ ಗಂಗಾದೇವಿಯವರಿಗೆ ಪೂಜೆ, ರಾತ್ರಿ 9-30 ಗಮಟೆಗೆ ಕ್ಷೇತ್ರಪಾಲ ಅಜ್ಜಪ್ಪ ದೇವರಿಗೆ ಗುಗ್ಗರಿ ಮುಟಿಗಿ ಪೂಜೆ, ರಾತ್ರಿ 9:45 ಗಂಟೆಗೆ ಮಾತಂಗಿ ದೇವಿಯವರಿಗೆ ಕ್ಷೀರ ಸಮರ್ಪಣೆ, ರಾತ್ರಿ 10 ಗಂಟೆಗೆ ಪೂಜಾರರರಿಗೆ ಗುಗ್ಗರಿ ಮುಟಿಗಿ ಉಡಿ ತುಂಬುವುದು ನಂತರ ಭಕ್ತಾದಿಗಳಿಗೆ ಗುಗ್ಗರಿ ಮುಟಿಗಿ ಪ್ರಸಾದ ವಿತರಣೆ ಜರುಗಲಿದೆ.

ಭಕ್ತಾದಿಗಳು ಭಾರತ ಹುಣ್ಣಿಮೆಯ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾಗಬೇಕು ಎಂದು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಸಿ.ಎಸ್.

Aslo read: ಕಲಶ ಪೂಜೆಯಲ್ಲಿ ವೀಳ್ಯದೆಲೆ ಇಟ್ಟು ಪೂಜೆ ಮಾಡುವ ಹಿಂದಿನ ವೈಜ್ಞಾನಿಕ ಕಾರಣ