ಹೊಸ ಸಂಶೋಧನೆ ತಿಳಿಸಿದ ಆಘಾತಕಾರಿ ಸುದ್ದಿ ಕೇವಲ 31 ವರ್ಷಗಳಲ್ಲಿ ಮನುಕುಲ ಅವನತಿಯಾಗುತ್ತೆ ಅಂತೆ..

0
819

ಭೂಮಿಯಲ್ಲಿ ಮಾನವನ ಕೆಟ್ಟ ವರ್ತನೆಯಿಂದ ಅಳುವಿನ ಅಂಚಿನಲ್ಲಿದೆ ಎನ್ನುವುದು ಬಹಳಷ್ಟು ಸಂಶೋಧನೆಗಳು ತಿಳಿಸಿವೆ. ಅದಕ್ಕೆ ಸಂಬಂಧಪಟ್ಟಂತೆ, ಆಸ್ಟ್ರೇಲಿಯಾ ರಕ್ಷಣಾ ಪಡೆಗಳ ಮಾಜಿ ಮುಖ್ಯಸ್ಥ ಮತ್ತು ರಾಯಲ್ ಆಸ್ಟ್ರೇಲಿಯನ್ ನೌಕಾಪಡೆಯ ನಿವೃತ್ತ ಅಡ್ಮಿರಲ್ ಕ್ರಿಸ್‍ಬ್ಯಾರಿ ಈ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದು, ಇದರಲ್ಲಿನ ಕೆಲವು ಅಂಶಗಳು ಆಘಾತಕಾರಿಯಾಗಿದ್ದು. ಇದನ್ನು ಗಂಭೀರವಾಗಿ ಗಣನೆಗೆ ತೆಗೆದುಕೊಂಡರೆ ಮನುಕುಲದ ನಾಗರಿಕತೆ ಯುಗ 2050ರ ವೇಳೆಗೆ ಕೊನೆಗೊಳ್ಳುವ ಸಾಧ್ಯತೆ ಇದೆ ಎಂದು ವರದಿಯಲ್ಲಿ ತಿಳಿಸಿದೆ.

Also read: ಹೆಚ್ಚು ವೇಗವಾಗಿ ನಡೆದರೆ ಹೆಚ್ಚು ಕಾಲ ಬದುಕಬಹುದಂತೆ; ನಿಮ್ಮ ನಡೆಗೆಯ ಮೇಲೆ ನಿಮ್ಮ ಅಯುಷ್ಯ ಹೇಗಿದೆ ಎನ್ನುವುದನ್ನು ತಿಳಿಸಿದ ಹೊಸ ಸಂಶೋಧನೆ..

ಹೌದು ನಿರಂತರವಾಗಿ ಆಗುತ್ತಿರುವ ಮಾಲಿನ್ಯದಿಂದ ಭೂಮಿ ಮೇಲೆ ಆಗುವ ಪರಿಣಾಮದಿಂದ ಅಪಾಯಕಾರಿ ಮಟ್ಟದಲ್ಲಿ ಬೆಳವಣಿಗೆ ಆಗುತ್ತಿರುವ ಪರಿಸರ ಮಾಲಿನ್ಯ, ವಾತಾವರಣ ಬದಲಾವಣೆಯ ಸಂಕಷ್ಟ, ನೈಸರ್ಗಿಕ ದುರಂತರಗಳ ಸರಮಾಲೆ ಇವುಗಳಿಂದ ಭೂಮಂಡಲ ಈಗಾಗಲೇ ಅವನತಿಯ ಅಂಚಿನತ್ತ ಸಾಗುತ್ತಿದ್ದು. ಪರಿಸರ ಮಾಲಿನ್ಯವು ವಾತಾವರಣ ಬದಲಾವಣೆಯ ಅಪಾಯಗಳಿಗೆ ತನ್ನ ಗರಿಷ್ಠ ಏರಿಕೆ ಯಾಗುತ್ತಿದ್ದು ಇದು ವರ್ಷಗಳು ಉರುಳಿದಂತೆ ಹಂತ ಹಂತವಾಗಿ ದೊಡ್ಡ ಪ್ರಮಾಣದಲ್ಲಿ ಪ್ರಕೃತಿ ವಿನಾಶ ರೂಪದಲ್ಲಿ ಕಂಡು ಬರುತ್ತಿದೆ.

2050ರ ವೇಳೆಗೆ ಮನುಕುಲದ ಅವನತಿ?

ಮಾನವ ನಿರ್ಮಿತ ಮಾಲಿನ್ಯದಿಂದ ಮನುಕುಲದ ಮೇಲೆ ದುಷ್ಪರಿಣಾಮ ಬೀರುವುದರ ಜತೆಗೆ ಪ್ರಕೃತಿ ಮತ್ತು ಜೀವ ಸಂಕುಲಗಳ ಮೇಲೆ ಅಗಾಧ ಪ್ರಭಾವ ಬೀರುತ್ತಿವೆ. ಇವೆಲ್ಲವುಗಳ ಒಟ್ಟಾರೆ ಫಲಿತಾಂಶವೇ ಭೂಮಂಡಲದ ಅವನತಿ. ಅಂದರೆ ಮನುಕುಲದ ಅಂತ್ಯ ಎಂದು ವರದಿಯ ಪ್ರಸ್ತಾವನೆಯಲ್ಲಿ ಉಲ್ಲೇಖಿಸಲಾಗಿದೆ. ಮಾನವ ಪ್ರಕೃತಿ ಮೇಲೆ ನಿರಂತರವಾಗಿ ನಡೆಸುತ್ತಿರುವ ಮಾಲಿನ್ಯದ ಪ್ರಭಾವವೇ ಈಗ ವಿಶ್ವದ ವಿವಿಧೆಡೆ ನೀರು ಮತ್ತು ಆಹಾರದ ಕೊರತೆ ಎದ್ದಿದೆ. ಮುಂದಿನ ದಿನಗಳಲ್ಲಿ ಈ ಸಮಸ್ಯೆ ಮತ್ತಷ್ಟು ಹೆಚ್ಚಲಿದೆ. ಅದಕ್ಕಾಗಿ ಮುಂದಿನ ಮೂರು ದಶಕಗಳಲ್ಲಿ ವಾತಾವರಣದಲ್ಲಿ ಭಾರೀ ಏರುಪೇರು ಉಂಟಾಗಲಿದ್ದು, ಮನುಕುಲ ಅಪಾಯದ ಅಂಚಿನತ್ತ ಸರಿಯಲಿದೆ ಎಂದು ವರದಿಯಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ.

Also read: ಸಚಿವ ಗಡ್ಕರಿ ಹೊಸ ಸಂಶೋಧನೆ; ಮೂತ್ರ ಸಂಗ್ರಹಿಸಿದರೆ ದೇಶದ ರೈತರಿಗೆ ಸಾಕಾಗುವಷ್ಟು ಯೂರಿಯಾ ತಯಾರಿಸಬಹುದು..

ಅವನತಿ ಮುಖ್ಯ ಲಕ್ಷಣಗಳು;

ಪ್ಲಾಸ್ಟಿಕ್, ಹಸಿರುಮನೆ ಅನಿಲ ಹಾಗೂ ಕೈಗಾರಿಕೆಗಳ ತ್ಯಾಜ್ಯ ಮತ್ತು ಪ್ರದೂಷಣಗಳು ವಾತಾವರಣ ಕಲುಷಿತಗೊಳ್ಳಲು ತನ್ನ ಪಾಲನ್ನು ನೀಡುತ್ತಿದೆ. 2030ರ ವೇಳೆಗೆ ಜಾಗತಿಕ ಮಾಲಿನ್ಯಮಟ್ಟ ಈಗಿರುವ ಪ್ರಮಾಣಕ್ಕಿಂತಲೂ ಎರಡರಷ್ಟು ಏರಿಕೆಯಾಗಲಿದೆ ಎಂದು ವರದಿಯಲ್ಲಿ ಅಂಕಿ-ಅಂಶ ಸಹಿತ ವಿವರಿಸಲಾಗಿದೆ. ಅಂಟಾರ್ಟಿಕ್ ಮತ್ತು ಆರ್ಕಿಟಿಕ್ಟ್ ಧೃವ ಪ್ರದೇಶಗಳಲ್ಲಿ ವಾತಾವರಣ ವೈಪರೀತ್ಯಗಳಿಂದಾಗಿ ಬೃಹತ್ ನೀರ್ಗಲ್ಲುಗಳು ಕರಗುತ್ತಿವೆ. ಇದರಿಂದ ಆ ಪ್ರದೇಶಗಳ ಭೌಗೋಳಿಕ ಗುಣಲಕ್ಷಣಗಳೇ ಬದಲಾಗುತ್ತಿವೆ. ಇನ್ನೊಂದೆಡೆ ಸಹರಾದಂತಹ ಮರುಭೂಮಿ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದೆ. ಇವೆಲ್ಲವೂ ವಾತಾವರಣ ಬದಲಾವಣೆಯ ಅಪಾಯದ ಸೂಚನೆಗಳು ಎಂದು ವರದಿಯಲ್ಲಿ ತಿಳಿಸಿದೆ.

Also read: ಹೊಸ ಸಂಶೋಧನೆಯಿಂದ ದೃಡಪಟ್ಟಿದ್ದೇನೆಂದರೆ, ಭವ್ಯ ಹಂಪಿಯ ಸಾಮ್ರಾಜ್ಯದ ಮೂಲ ಹೆಸರು “ಕರ್ನಾಟಕ ಸಾಮ್ರಾಜ್ಯ” ನಂತರ ಅದನ್ನು “ವಿಜಯನಗರ” ಸಾಮ್ರಾಜ್ಯವೆಂದು ತಿರುಚಲಾಗಿದೆ!!

ಇದಕ್ಕೆ ಸಂಬಂಧಪಟ್ಟಂತೆ ರಿಪೋರ್ಟ್ಸ ಹೆಸರಿನ ಈ ಹೊಸ ವರದಿಯನ್ನು ಮೆಲ್ಬೋರ್ನ್ ಮೂಲದ ಬ್ರೇಕ್‍ಥ್ರೂ ನ್ಯಾಷನಲ್ ಸೆಂಟಲ್ ಫಾರ್ ಕ್ಲೈಮ್ಯಾಟಿಕ್ ರೆಸ್ಟೊರೇಷನ್ ಎಂಬ ಚಿಂತಕರ ವರದಿ ಸಲ್ಲಿಸಿದ್ದು, ವಿಶ್ವದ ಬಹುತೇಕ ದೇಶಗಳಲ್ಲಿ ಮಳೆಯ ಪ್ರಮಾಣದಲ್ಲಿ ಅರ್ಧದಷ್ಟು ಕುಂಠಿತವಾಗಿದ್ದರೆ, ಇನ್ನೊಂದೆಡೆ ತಾಪಮಾನದಲ್ಲಿ ಭಾರೀ ಏರಿಕೆ ಕಂಡುಬಂದಿದೆ. ಹವಾಮಾನದ ವೈಪರೀತ್ಯಗಳ ದುಷ್ಪರಿಣಾಮಗಳ ಗಂಡಾಂತರವನ್ನು ಮುನ್ಸೂಚನೆಯಾಗಿ ವರದಿಯಲ್ಲಿ ತಿಳಿಸಿದೆ.