ಕೊಡಗಿನಲ್ಲಿ ಮತ ಬೇಧ ಅಳಿಸಿ ಮಾನವೀಯತೆ ಮೆರೆದ, ಮಂದಿರ-ಮಸೀದಿ-ಚರ್ಚ್!!

0
483

ಕೊಡಗಿನ ಮಹಾ ಜಲಪ್ರಳಯದಲ್ಲಿ ಅದು ಎಷ್ಟೋ ಜನರು ಆಸ್ತಿ ಅಂತಸ್ತು ನೆಲೆ ಕಳೆದುಕೊಂಡು ಪ್ರವಾಹದ ಮಡಿಲಲ್ಲಿ ಇದ್ದಾರೆ. ಇಂತಹ ಸಂತ್ರಸ್ತರಿಗೆ ಚರ್ಚ್, ದೇವಸ್ಥಾನಗಳು ಆಶ್ರಯ ಸ್ಥಳಗಳಾಗಿ ತಿರುಗಿವೆ ಇದರಲ್ಲಿ ಯಾವುದೇ ಜಾತಿ-ಧರ್ಮದ ಭೇದಭಾವವಿಲ್ಲದೆ ಎಲ್ಲರೂ ಒಂದಾಗಿ ಆಶ್ರಯ ಪಡೆಯುತ್ತಿರುವುದು ನಿಜವಾದ ಮನುಷ್ಯತ್ವವನ್ನು ಎತ್ತಿತೋರಿಸುತ್ತಿದೆ. ಇಷ್ಟೇ ಅಲ್ಲ ಪ್ರವಾಹದ ಅಲೆಗೆ ಸಿಲುಕಿ ಬೇರೆ ಬೇರೆಯಾದ ಕುಟುಂಬಗಳಿಗೆ ಒಂದೇ ಸ್ಥಳದಲ್ಲಿ ಇರಲು ಅವಕಾಶ ಕಲ್ಪಿಸಿವೆ, ಇಂತಹ ಸ್ಥಳಗಳಿಗೆ ಸಹಾಯದ ರೊಪದಲ್ಲಿ ಸಾಕಾಗುವಷ್ಟು ಆಹಾರ ಬಟ್ಟೆ ನೀರನ್ನು ನೀಡುತ್ತಿರುವ ಸಾರ್ವಜನಿಕರು ಪರಿಹಾರ ಶಿಬಿರಗಳ ಪೋಷಕರಾಗಿದ್ದಾರೆ.

ಪ್ರವಾಹದಲ್ಲಿ ಮುಳುಗಿದ 4,320 ಜನರನ್ನು ರಕ್ಷಿಸಿ ಪರಿಹಾರ ಕೇಂದ್ರಗಳಿಗೆ ಸುರಕ್ಷಿತವಾಗಿ ಮರಳಿ ತಂದಿದ್ದಾರೆ ಈ ಕಾರ್ಯಚರಣೆಯಲ್ಲಿ ಒಟ್ಟಾರೆಯಾಗಿ, KSRP, SDRF, Army, Navy and Airforce, NCC, Home Guards and District Administration ಗಳಿಂದ 1,725 ​​ವಿಶೇಷವಾಗಿ ತರಬೇತಿ ಪಡೆದ ತಜ್ಞರನ್ನು ರಕ್ಷಣಾ ಕಾರ್ಯಾಚರಣೆಗಳಲ್ಲಿ ನಿಯೋಜಿಸಲಾಗಿದೆ ಈ ಸವಾಲಿನ ಪರಿಸ್ಥಿತಿಯಲ್ಲಿ ಒಳ್ಳೆಯ ಹೊಂದಾಣಿಕೆಯಿಂದ ಕೆಲಸಮಾಡುತ್ತಿದ್ದಾರೆ ಇವರಿಲ್ಲರಿಗೂ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಹೃತ್ಪೂರ್ವಕ ವಂದನೆಗಳನ್ನು ಸಲ್ಲಿಸಿದ್ದಾರೆ. ಹಾಗೆಯೇ ತಮ್ಮ ಜೀವನೋಪಾಯವನ್ನು ಕಳೆದುಕೊಂಡಿರುವ ಸಾವಿರಾರು ನಾಗರಿಕರು ದುಃಖದಿಂದ ಜೀವಿಸುತ್ತಿದ್ದಾರೆ ಪ್ರವಾಹದಲ್ಲಿ ನಾಶವಾದವರ ಕುಟುಂಬಗಳಿಗೆ ಸರ್ಕಾರದಿಂದ 5 ಲಕ್ಷ ರೂ. ಪರಿಹಾರವನ್ನು ನೀಡುತ್ತೇವೆ ಒಟ್ಟು 100 ಕೋಟಿ ರೂ. ಕೊಡಗಿನ ಕಲ್ಯಾಣಕ್ಕಾಗಿ ನೀಡುತ್ತೇವೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದ್ದಾರೆ.

ಪರಿಹಾರ ಪ್ರಯತ್ನದ ಸಂಯೋಜಕರಾದ ಶಾಂತಿರಾಮ ಕಾಮತ್ ಅವರು ಹೇಳುವಹಾಗೆ ಕೊಡಗು ಪ್ರದೇಶದ ಭೂಕುಸಿತಗಳ ಬಗ್ಗೆ ಸುದ್ದಿ ಜಿಲ್ಲೆಯಲ್ಲೆ ಹರಡಿ ಬಂದಾಗ ನಮ್ಮ ಸ್ವಯಿಚ್ಚೆಯಿಂದ ಸಮಯವನ್ನು ವ್ಯರ್ಥಮಾಡದೆ, ಪರಿಹಾರ ಕಾರ್ಯದಲ್ಲಿ ತೊಡಗಿದ್ದೇವೆ ಕೆಲವು ಅಪಾಯಕಾರಿ ಮಾರ್ಗಗಳಲ್ಲಿ ವಾಹನ ಚಾಲನೆ ಮಾಡುತ್ತಿರುವುದು ಸಾಹಸವಾಗಿದೆ. ಇದರಲ್ಲಿ ಕೆಲವರು ಪರಿಹಾರ ಶಿಬಿರಗಳನ್ನು ತಲುಪಲು ಸ್ವಂತ ವಾಹನವನ್ನು ತೆಗೆದುಕೊಂಡು ಬಂದಿದ್ದಾರೆ. “ಮುಕುಡಲು, ಮಕಂದೂರು, ತಾಂತಿಪಾಲ, ಹಟ್ಟಿಹೋಲೆ, ಮತ್ತು ಕಂದನಕೊಲ್ಲಿ ಪ್ರದೇಶದ ಜನರು ಹೆಚ್ಚಿನ ನಿರಾಶ್ರಿತರಾಗಿದ್ದಾರೆ ಇವರೆಲ್ಲರನ್ನು ಸಂಕಷ್ಟದಿಂದ ಹೊರ ತರಲು ಇನ್ನೂ ಸುಮಾರು ಹತ್ತು ದಿನಗಳು ಬೇಕಾಗಿದೆ ಈ ಸಮಯದಲ್ಲಿ ನಾವು ಸಾಕಷ್ಟು ಪ್ರಯತ್ನವನ್ನು ಹೊಂದಿದ್ದೇವೆ ಈ ಎಲ್ಲಾ ಕಾರ್ಯಗಳು ಖಾಸಗಿಯಾಗಿ ನೆಡೆಯಿತ್ತಿರುವ ಕೊಡುಗೆಯಾಗಿದೆ ಎಂದು ತಿಳಿಸಿದ್ದಾರೆ.

ಪರಿಹಾರ ಶಿಬಿರದ ಮತ್ತೊಂದು ಸಂಯೋಜಕರಾದ ಬೋಪಣ್ಣಾ ಅವರು, “ನಾವು ಮೊದಲ ಎರಡು ದಿನಗಳಲ್ಲಿ ಸುಮಾರು 500 ಜನರನ್ನು ಸಂತ್ರಸ್ತರಿಗೆ ಆಶ್ರಯ ನೀಡಿದೆವೆ ಆದರೆ ಕೆಲವರು ತಮ್ಮ ಸಂಬಂಧಿಕರ ಜೊತೆ ಸೇರಲು ಇಚ್ಚಿಸುತ್ತಿದ್ದಾರೆ ಇದರಿಂದ ಕೊಠಡಿಗಳು ತುಂಬಿವೆ, ಮತ್ತು ಆಹಾರ ಅಥವಾ ಕುಡಿಯುವ ನೀರಿನ ಬಗ್ಗೆ ಯಾವುದೇ ಸಮಸ್ಯೆ ಇಲ್ಲ. ಇದನೆಲ್ಲ ನೀಡಿದ ಸಾರ್ವಜನಿಕರಿಗೆ ಧನ್ಯವಾದಗಳು ಹೇಳಿದ್ದಾರೆ. ಮತ್ತು ಇಂತಹ ಸಂತ್ರಸ್ತರಿಗೆ ಶಾಶ್ವತ ಪುನರ್ವಸತಿ ಕಲ್ಪಿಸುವುದು ನಿಜವಾದ ಸವಾಲಾಗಿದೆ. ಎಂದು ಹೇಳಿದ್ದಾರೆ. ಹೀಗೆ ಕೊಡಗಿನ ಜನರಿಗೆ ಆಶ್ರಯ ನೀಡಲು ಶ್ರೀ ರಾಮನ ದೇವಸ್ಥಾನ, ಸೇಂಟ್ ಆಂಥೋನಿಯ ಶಾಲೆ ಮತ್ತು ಸ್ಥಳೀಯ ಮದ್ರಾಸ ಆಶ್ರಮಗಳು ಮುಂದೆಬಂದು ಸುಮಾರು 1000 ಜನರಿಗೆ ಸುರಕ್ಷಿತ ಬಂದರುಗಳಾಗಿ ಜನರಿಗೆ ಆಶ್ರಯ ಮಾಡಿಕೊಟ್ಟಿವೆ ಇಂತಹ ಕಾರ್ಯಕೈಗೊಂಡ ಎಲ್ಲರಿಗೂ ದೇಶದ ಜನತೆ ದನ್ಯವಾದಗಳನ್ನು ಸಲ್ಲಿಸಿದ್ದಾರೆ.