ಗಂಡ ಪ್ರತಿ ದಿನ ಸ್ನಾನ, ಶೇವ್ ಮಾಡಲ್ಲ. ಹಲ್ಲು ಉಜ್ಜಲ್ಲ. ಗಬ್ಬು ನಾರುತ್ತಾನೆ, ಅವನಿಂದ ವಿಚ್ಚೇದನ ಕೊಡಿಸಿ ಎಂದು ಕೋರ್ಟ್ ಮೆಟ್ಟಿಲೇರಿದ ಪತ್ನಿ.!

0
150

ಇತ್ತೀಚಿನ ದಿನಗಳಲ್ಲಿ ಡೈವರ್ಸ್ ಎನ್ನುವುದು ಸಾಮಾನ್ಯವಾಗಿದೆ. ಅದಕ್ಕಂತಾನೆ ಪ್ರತ್ಯೇಕ ಕೋರ್ಟ್ ಇದ್ದು, ದೇಶದಲ್ಲಿ ನೂರಾರು ವಿಚ್ಚೇದನ ನಡೆಯುತ್ತಿವೆ, ಏಕೆಂದರೆ ಗಂಡ ಹೆಂಡತಿಯ ನಡುವೆ ಇರುವ ಹೊಂದಾಣಿಕೆಯಿಂದ ಅರ್ಧದಷ್ಟು ವಿಚ್ಛೇದನಗಳು ನಡೆದರೆ ಇನ್ನೂ ಉಳಿದ ಡೈವರ್ಸ್ ಕೇಸ್-ಗಳು ವಿಚಿತ್ರವಾಗಿದ್ದು, ಅದರಲ್ಲಿ ಕೆಲವು ಹೆಂಡತಿ ಸರಿಯಾಗಿ ಊಟ ಮಾಡುವುದಿಲ್ಲ, ಯಾವತ್ತು ಮೊಬೈಲ್ ಫೋನ್-ನಲ್ಲಿ ಗಂಡ ಇರುತ್ತಾನೆ, ಹೆಂಡತಿ ಸರಿಯಾದ ಬಟ್ಟೆ ಧರಿಸುವುದಿಲ್ಲ, ರಾತ್ರಿ ಕುಡಿದು ಮನೆಗೆ ಬರುತ್ತಾನೆ. ಎನ್ನುವ ಆರೋಪದ ಮೇಲೆ ಡೈವರ್ಸ್ ಕೊಡಿಸಿ ಎಂದು ಹಲವರು ಕೋರ್ಟ್ ಮೆಟ್ಟಿಲೇರುತ್ತಿದ್ದಾರೆ. ಆದರೆ ಇಲ್ಲೊಬ್ಬ ಹೆಂಡತಿ ಗಂಡನಿಂದ ಡೈವರ್ಸ್ ಕೇಳಿದ್ದು ಭಾರಿ ವೈರಲ್ ಆಗಿದೆ.

ಹೌದು ನನ್ನ ಗಂಡ ಗಬ್ಬು ವಾಸನೆ ಬರುತ್ತಾನೆ. ಹೀಗಾಗಿ ನನಗೆ ಆತನಿಂದ ವಿಚ್ಛೇದನ ಕೊಡಿಸಿ ಎಂದು ಪತ್ನಿಯೊಬ್ಬಳು ರಾಜ್ಯ ಮಹಿಳಾ ಆಯೋಗದ ಮೊರೆ ಹೋಗಿರುವ ಘಟನೆ ಬಿಹಾರದಲ್ಲಿ ನಡೆದಿದೆ. ಮಹಿಳೆಯನ್ನು ಸೋನಿ ದೇವಿ(20) ಎಂದು ಗುರುತಿಸಲಾಗಿದ್ದು, ಈಕೆ ವೈಶಾಲಿ ಜಿಲ್ಲೆಯ ನಯಗೌನ ಗ್ರಾಮದ ದೆಸ್ರಿ ಬ್ಲಾಕ್ ನಿವಾಸಿಯಾಗಿದ್ದಾರೆ. ಸದ್ಯ ಈಕೆ ತನ್ನ ಪತಿ ಮನೀಶ್(23) ನಿಂದ ವಿಚ್ಚೇದನಕ್ಕಾಗಿ ಕಾಯುತ್ತಿದ್ದಾರೆ. ನನ್ನ ಪತಿ ವಿಪರೀತ ವಾಸನೆ ಬರುತ್ತಾನೆ. ನನಗೆ ಅವನೊಂದಿಗೆ ಜೀವನ ನಡೆಸಲು ಕಷ್ಟವಾಗುತ್ತಿದೆ. ಹೀಗಾಗಿ ದಯವಿಟ್ಟು ಆತನಿಂದ ನನಗೆ ಡಿವೋರ್ಸ್ ಕೊಡಿಸಿ. ಈ ಮೂಲಕ ನನಗೆ ಆತನಿಂದ ಮುಕ್ತಿ ನೀಡಿ ಎಂದು ಬೇಡಿಕೊಂಡಿದ್ದಾಳೆ.

ಮಹಿಳೆ ಹೇಳಿದಂತೆ 2017 ರಲ್ಲಿ ಪ್ಲಂಬರ್ ಆಗಿದ್ದ ಮನೀಶ್(23) ಎನ್ನುವವನನ್ನು ವಿವಾಹವಾಗಿದ್ದರು. “ನನ್ನ ಪತಿ ಸುಮಾರು 10 ದಿನಗಳವರೆಗೆ ಕ್ಷೌರ ಮತ್ತು ಸ್ನಾನ ಮಾಡದ ಕಾರಣ ದುರ್ವಾಸನೆ ಬೀರುತ್ತಾನೆ. ಇದಲ್ಲದೆ, ಅವನು ಹಲ್ಲುಜ್ಜುವುದಿಲ್ಲ. ಅವನಿಗೆ ಶುಚಿತ್ವದ ಬಗ್ಗೆ ತಿಳುವಳಿಕೆ ಇಲ್ಲ. ಶಿಷ್ಟಾಚಾರಗಳನ್ನು ಅನುಸರಿಸುವುದಿಲ್ಲ ನಮಗೆ ಮಕ್ಕಳಾಗಿಲ್ಲ. ನಮ್ಮಿಬ್ಬರ ಸಂಬಂಧ ಚೆನ್ನಾಗಿಲ್ಲ. ಜೀವನಕ್ಕೆ ಅರ್ಥವಿಲ್ಲ. ಜೀವನ ನಿಷ್ಪ್ರೋಜಕ ಎಂದು ಬರೆದಿದ್ದಾರೆ. ಅಲ್ಲದೆ ವಿಚ್ಚೇದನದ ಜೊತೆಗೆ ಮದುವೆ ಸಮಯದಲ್ಲಿ ನನಗೆ ನನ್ನ ತವರು ಮನೆಯಿಂದ ನೀಡಿದ್ದ ಚಿನ್ನ ಹಾಗೂ ಇತರ ಬೆಲೆಬಾಳುವ ವಸ್ತುಗಳನ್ನು ಕೂಡ ಹಿಂದಿರುಗಿಸುವಂತೆ ಕೋರಿಕೊಂಡಿದ್ದಾರೆ. ಆದರೆ ಮಹಿಳೆಯ ವಿಚ್ಚೇದನ ಅರ್ಜಿ, ಅದರಲ್ಲಿ ಆಕೆ ಕೊಟ್ಟ ಕಾರಣ ಕಂಡು ಎಸ್‌ಡಬ್ಲ್ಯುಸಿ ಅಧಿಕಾರಿ ಅಚ್ಚರಿಗೆ ಒಳಗಾಗಿದ್ದಾರೆ.

ಆಯೋಗದ ಸದಸ್ಯೆ ಪ್ರತಿಮಾ, ದಂಪತಿಯನ್ನು ಒಂದು ಮಾಡಲು ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ ತಪ್ಪನ್ನು ತಿದ್ದಿಕೊಳ್ಳಲು ಸೋನಿ ಪತಿಗೆ 2 ತಿಂಗಳ ಕಾಲಾವಕಾಶ ನೀಡಿದ್ದಾರೆ. ಒಂದು ವೇಳೆ ಆತ ಈ 2 ತಿಂಗಳಲ್ಲಿ ಸರಿ ಹೋಗದಿದ್ದರೆ ಮುಂದಿನ ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದ್ದಾರೆ. ಅದಕ್ಕಾಗಿ ಪ್ರತಿಯೊಬ್ಬ ಪುರುಷ ತನ್ನ ಕೆಲಸದ ಜೊತೆಗೆ ದೈಹಿಕ ಮಾನಸಿಕವಾಗಿ ಸ್ವಚ್ಚತೆ ಕಾಪಾಡಿಕೊಳ್ಳುವುದು ಉತ್ತಮ ಸಂಸಾರಕ್ಕೆ ಸಾಕ್ಷಿಯಾಗಿದೆ.