ಸಿನಿಮಾ ರೀತಿಯಲ್ಲಿ 7 ವರ್ಷದ ಬಾಲಕನನ್ನು ಕಿಡ್ನಾಪ್ ಮಾಡಿ 3 ಲಕ್ಷಕ್ಕೆ ಬೇಡಿಕೆ ಇಟ್ಟ 10ನೇ ಕ್ಲಾಸ್ ಅಪ್ರಾಪ್ತ ವಿದ್ಯಾರ್ಥಿ.!

0
109

ಸಾಮಾನ್ಯವಾಗಿ ಸಿನಿಮಾಗಳಲ್ಲಿ ತೋರಿಸುವಂತೆ, ದರೋಡೆ, ವಂಚನೆ, ಕಿಡ್ನಾಪ್ ಸೇರಿದಂತೆ ಹಲವು ದೃಶ್ಯಗಳನ್ನು ನೋಡಿ ಈಗಿನ ಮಕ್ಕಳು ಅದೇ ರೀತಿಯಲ್ಲಿ ಬೆಳೆಯುತ್ತಿರುವುದು ಹೆಚ್ಚಾಗುತ್ತಿದೆ. ಏಕೆಂದರೆ ಈಗಿನ ಮಕ್ಕಳಿಗೆ ಒಳ್ಳೆತನಕ್ಕಿಂತ ಕೆಟ್ಟ ವಿಷಯದ ಮೇಲೆ ಹೆಚ್ಚಿನ ಆಸಕ್ತಿ ಮೂಡುವುದರಿಂದ ಅದೇ ದಾರಿಯಲ್ಲಿ ನಡೆಯುತ್ತಿದ್ದಾರೆ. ಇದಕ್ಕೆ ಸಕ್ಷಿಯಾಗುವಂತ ಘಟನೆ ನಡೆದಿದ್ದು, 7 ವರ್ಷದ ಬಾಲಕನನ್ನು 10ನೇ ಕ್ಲಾಸ್ ವಿದ್ಯಾರ್ಥಿಯೊಬ್ಬ ಕಿಡ್ನಾಪ್ ಮಾಡಿ 3 ಲಕ್ಷ ರೂ.ಗೆ ಬೇಡಿಕೆ ಇಟ್ಟ ಘಟನೆ ಹೈದ್ರಾಬಾದ್‍ನ ಮೀರ್ ಪೇಟ್ ನಲ್ಲಿ ನಡೆದಿದ್ದು ಭಾರಿ ವೈರಲ್ ಆಗಿದೆ.

Also read: ಪುಸ್ತಕದಲ್ಲಿ ರಾಮನ ಹೆಸರು ಬರೆದರೆ ಬಹುಮಾನ; ರಾಮ್ ನಾಮ್ ಬ್ಯಾಂಕ್ ಘೋಷಣೆ.!

ಘಟನೆ ನಡೆದಿದ್ದು ಹೇಗೆ?

ಹಣಕ್ಕಾಗಿ 10ನೇ ತರಗತಿ ವಿದ್ಯಾರ್ಥಿ 7 ವರ್ಷದ ಅರ್ಜುನ್ ಎನ್ನುವ ಬಾಲಕನನ್ನು ಕಿಡ್ನಾಪ್ ಮಾಡಿ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ, ಅರ್ಜುನ್ ಭಾನುವಾರ ಮಧ್ಯಾಹ್ನ 2.30ರ ಸುಮಾರಿಗೆ ತನ್ನ ಸ್ನೇಹಿತನೊಂದಿಗೆ ಆಟವಾಡುತ್ತಿದ್ದನು. ಆಗ 10ನೇ ತರಗತಿ ವಿದ್ಯಾರ್ಥಿ ಅರ್ಜುನನ್ನು ನೋಡಿದ್ದಾನೆ. ತಕ್ಷಣವೇ ಬಾಲಕನ್ನು ಅಪಹರಿಸಿ ಅವರ ಕುಟುಂಬಸ್ಥರ ಬಳಿ ಹಣ ಕೇಳಲು ಪ್ಲಾನ್ ಮಾಡಿಕೊಂಡು ಅರ್ಜುನ್ ಜೊತೆ ಸ್ನೇಹ ಬೆಳೆಸಿದ್ದು, ನಂತರ ಬಾಲಕನನ್ನು ಅಲ್ಮಾಸ್ಗುಡಾದ ತನ್ನ ನಿವಾಸದ ಬಳಿ ಕರೆದೊಯ್ದು ದೇವಾಲಯದ ಒಳಗೆ ಕುಳಿತುಕೊಳ್ಳುವಂತೆ ಸೂಚಿಸಿದ್ದಾನೆ. ಬಾಲಕನನ್ನು ದೇವಸ್ಥಾನದಲ್ಲಿ ಕೂರಿಸಿಕೊಂಡು ಅರ್ಜುನ್ ತಂದೆ ರಾಜು ಅವರಿಗೆ ಕರೆ ಮಾಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದರು.

Also read: ಮೊಬೈಲ್ ರೇಡಿಯೇಷನ್​ ಅಪಾಯ ತಪ್ಪಿಸಲು ಮೊಬೈಲ್ ಕವರ್​ನ ಹಿಂದೆ ತುಳಸಿ ದಳಗಳನ್ನು ಇಡಿ; ಬಾಬಾ ರಾಮ್‍ದೇವ್ ಸಲಹೆ.!

ಮಾತನಾಡುವ ವೇಳೆ ತನ್ನ ಧ್ವನಿಯನ್ನು ಬದಲಾಯಿಸಲು ಯತ್ನಿಸಿದ್ದು, ನಂತರ 3 ಲಕ್ಷ ರೂ. ನೀಡುವಂತೆ ಬೇಡಿಕೆ ಹೇಳಿದ್ದಾನೆ. ಅಷ್ಟೇಅಲ್ಲದೆ ಯಾವುದೇ ಕಾರಣಕ್ಕೂ ಪೊಲೀಸರನ್ನು ಸಂಪರ್ಕಿಸಬೇಡಿ, ನಾನು ಹೇಳಿದಷ್ಟು ಮಾಡಿ ಎಂದು ಆವಾಜ್ ಹಾಕಿದ್ದಾನೆ. ಅಲ್ಲದೆ ಒಂದು ವೇಳೆ ಪೊಲೀಸರಿಗೆ ಮಾಹಿತಿ ನೀಡಿದಲ್ಲಿ ನಿಮ್ಮ ಮಗನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಮಾಹಿತಿ ನೀಡಿದರು. ಅರ್ಜುನ್ ತಂದೆ ರಾಜು ಮಗನ ಸುರಕ್ಷತೆಗಾಗಿ ಮನವಿ ಮಾಡಿದ್ದು, ಮತುಕತೆ ನಡೆಸಲು ಒಪ್ಪಿಕೊಂಡಿದ್ದಾರೆ. ಅಲ್ಲದೆ ತಮ್ಮ ಬಳಿ ಕೇವಲ 1.5 ಲಕ್ಷ ರೂ. ಮಾತ್ರ ಇದೆ ಎಂದು ತಿಳಿಸಿದ್ದಾರೆ. ಆದರೆ ಅಪ್ರಾಪ್ತ ಇದನ್ನು ಸ್ವೀಕರಿಸಲು ನಿರಾಕರಿಸಿದ್ದಾನೆ. ನಂತರ ರಾಜು ಅವರು 25 ಸಾವಿರ ರೂ. ನಗದು ಹಾಗೂ ಉಳಿದ ಹಣವನ್ನು ಚೆಕ್ ರೂಪದಲ್ಲಿ ನೀಡಲು ಮುಂದಾಗಿದ್ದಾರೆ ಇದಕ್ಕೆ ಬಾಲಕ ಒಪ್ಪಿಕೊಂಡಿದ್ದಾನೆ.

Also read: ಕಪ್ಪು ಹಣ ತಡೆಯಲು ಮೋದಿ ಸರ್ಕಾರದಿಂದ ಮತ್ತೊಂದು ಪ್ರಯತ್ನ?? ಕಪ್ಪು ಹಣ, ಬೇನಾಮಿ ಆಸ್ತಿಗಳ ಮೇಲೆ ಸರ್ಜಿಕಲ್ ಸ್ಟ್ರೈಕ್??

ಈ ಕುರಿತು ಮಾಹಿತಿ ನೀಡಿದ ಬಾಲಕನ ತಂದೆ. ರಾಜು, ಮಧ್ಯಾಹ್ನ 3 ಗಂಟೆ ಸುಮಾರಿಗೆ ನಮ್ಮ ಮಗ ಕಾಣೆಯಾಗಿದ್ದಾನೆ ಎಂದು ಅರಿವಾಯಿತು. ಕರೆ ಮಾಡಿದವರು ಹಣ ಕೇಳಿದರು. ನಾನು ಒಪ್ಪಿಕೊಳ್ಳದಿದ್ದರೆ ಅರ್ಜುನ್ ಎಂದಿಗೂ ಮನೆಗೆ ಹಿಂದಿರುಗುವುದಿಲ್ಲ ಎಂದು ಹೇಳಿದರು. ಹೀಗಾಗಿ ನಾವು ಭಯಭೀತರಾದೆವು. ನಂತರ ನಾವು ಮೀರ್ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆವು ಎಂದು ವಿವರಿಸಿದರು. ದೂರು ದಾಖಲಾದ ನಾಲ್ಕು ಗಂಟೆಗಳಲ್ಲಿ ಪೊಲೀಸರು ಅಪ್ರಾಪ್ತ ಆರೋಪಿ ಇದ್ದ ಸ್ಥಳವನ್ನು ಪತ್ತೆ ಹಚ್ಚಿದರು. ನಂತರ ಅಪ್ರಾಪ್ತ ಆರೋಪಿಯನ್ನು ವಶಕ್ಕೆ ಪಡೆಯಲಾಗಿದ್ದು, ಆತ ಅಪರಾಧವನ್ನು ಒಪ್ಪಿಕೊಂಡಿದ್ದಾನೆ.

ಅರ್ಜುನನ ತಂದೆಯಿಂದ ಹಣ ಸಂಗ್ರಹಿಸಿಕೊಳ್ಳಲು ಬಂದಾಗ ಅಪ್ರಾಪ್ತ ಆರೋಪಿಯನ್ನು ಹಿಡಿದಿದ್ದೇವೆ ಎಂದು ರಾಚಕೊಂಡ ಪೊಲೀಸ್ ಆಯುಕ್ತ ಮಹೇಶ್ ಭಾಗವತ್ ಹೇಳಿದ್ದಾನೆ. ಅಪ್ರಾಪ್ತ ಆರೋಪಿ ಅಪರಾಧದ ಇತಿಹಾಸ ಹೊಂದಿದವನಾಗಿದ್ದಾನೆ. ಈ ಹಿಂದೆ ಈತ ತನ್ನ ನೆರೆಯವರಿಂದ 1 ಲಕ್ಷ ರೂ.ಕದ್ದಿದ್ದ ಎಂದು ತಿಳಿದು ಬಂದಿದೆ. ಅದಕ್ಕಾಗಿ ಪ್ರತಿಯೊಬ್ಬ ತಂದೆ-ತಾಯಿಗಳು ತಮ್ಮ ಮಕ್ಕಳ ಬಗ್ಗೆ ಸರಿಯಾಗಿ ಗಮನ ಹರಿಸಿ ಮಕ್ಕಳ ಯೋಚನೆಯನ್ನು ತಿಳಿದುಕೊಳ್ಳುವುದು ಒಳ್ಳೆಯದು.