ಹಲವು ವರ್ಷಗಳಿಂದ ಮಗಳ ಮೇಲೆಯೇ ನಿರಂತರ ಅತ್ಯಾಚಾರ ಮಾಡಿದ ಪಾಪಿ ತಂದೆಗೆ ಜೀವಾವಧಿ ಶಿಕ್ಷೆ.!

0
336

ದೇಶದಲ್ಲಿ ವಿಚಿತ್ರ ರೀತಿಯಲ್ಲಿ ಅತ್ಯಾಚಾರ ನಡೆಯುತ್ತಿದ್ದು, ಅಪ್ರಾಪ್ತ ಬಾಲಕಿಯರು ಬಲಿಯಾಗುತ್ತಿದ್ದಾರೆ, ಕೆಲವು ಅತ್ಯಾಚಾರಗಳು ಅಂತು ಕೇಳಲು ಅಸಹ್ಯ ರೀತಿಯಲ್ಲಿ ಇರುತ್ತೇವೆ ಏಕೆಂದರೆ ಅಪರಿಚಿತರು ಒಂದು ಕಡೆಯಾದರೆ ಸ್ವಂತ ತಂದೆಯೇ ಮಗಳ ಮೇಲೆ ಅತ್ಯಾಚಾರ ಮಾಡಿರುವ ಬಗ್ಗೆ ಸುದ್ದಿಯಾಗಿದೆ. ಇವೆಲ್ಲ ನೋಡಿದರೆ ಜನರು ಮಾನವಿತೆ ಮರೆತು ವಿಕೃತ ಮರೆಯುತ್ತಿದ್ದಾರೆ ಅನಿಸುತ್ತೆ. ಇಂತಹದೆ ಒಂದು ಪ್ರಕರಣ ಹೈದರಾಬಾದ್‍ನಲ್ಲಿ ನಡೆದಿದ್ದು. 2011ರಿಂದ ಮಗಳ ಮೇಲೆ ನಿರಂತರ ಅತ್ಯಾಚಾರ ಎಸಗಿದ ತಂದೆಗೆ ಹೈದರಾಬಾದ್​ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

ಹೌದು ಮಗಳ ಮೇಲೆ ಅತ್ಯಾಚಾರ ಎಸಗಿದ ಹೈದರಾಬಾದ್​ನ 42 ವರ್ಷದ ಆಟೋ ರಿಕ್ಷಾ ಚಾಲಕನ ಮೇಲೆ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಹೆಚ್ಚುವರಿ ಮೆಟ್ರೊಪಾಲಿಟನ್ ನ್ಯಾಯಾಲಯದ ನ್ಯಾಯಾಧೀಶರಾದ ಸುನೀತಾ ಕುಂಚಲಾ ಅವರು ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿ, ಮಹತ್ವದ ಆದೇಶ ನೀಡಿದ್ದಾರೆ. ಜೊತೆಗೆ ಐಪಿಸಿ ಸೆಕ್ಷನ್ 506 (ಅಪರಾಧ ಬೆದರಿಕೆ) ಅಡಿ ಅಪಾದಿತನಿಗೆ ಎರಡು ವರ್ಷ ಕಠಿಣ ಶಿಕ್ಷೆ ಮತ್ತು 3 ಸಾವಿರ ರೂಪಾಯಿ ದಂಡವನ್ನು ವಿಧಿಸಲಾಗಿದೆ. ಜೊತೆಗೆ ಜೀವಾವಧಿ ಶಿಕ್ಷೆಯೂ ಏಕಕಾಲದಲ್ಲಿಯೇ ಮುಂದುವರೆಯಲಿದೆ.

ಈ ಸಂಬಂಧ ಮೆಟ್ರೊಪಾಲಿಟನ್ ನ್ಯಾಯಾಲಯದ ನ್ಯಾಯಾಧೀಶರಾದ ಸುನೀತಾ ಕುಂಚಲಾ ಅವರು ವಿಚಾರಣೆ ನಡೆಸಿದ್ದು, ತಂದೆಯ ಮೇಲಿದ್ದ ಆರೋಪ ಸಾಬೀತಾಗಿದೆ. ಆದ್ದರಿಂದ ನ್ಯಾಯಾಲಯ ಕಾಮುಕ ತಂದೆಗೆ ಜೀವಾವಧಿ ಶಿಕ್ಷೆ ವಿಧಿಸಿ, ಮಹತ್ವದ ಆದೇಶ ಹೊರಡಿಸಿದ್ದಾರೆ. ಹಾಗೆಯೇ ದೋಷಿಗೆ ಐಪಿಸಿ ಸೆಕ್ಷನ್ 506 ಕಾಯ್ದೆ ಅಡಿ 2 ವರ್ಷ ಕಠಿಣ ಶಿಕ್ಷೆ ಮತ್ತು 3 ಸಾವಿರ ರೂಪಾಯಿ ದಂಡವನ್ನು ವಿಧಿಸಲಾಗಿದೆ. ಜೊತೆಗೆ ಜೀವಾವಧಿ ಶಿಕ್ಷೆಯೂ ಏಕಕಾಲದಲ್ಲಿಯೇ ಮುಂದುವರೆಯಲಿದೆ ಎಂದು ನ್ಯಾಯಾಲಯ ತಿಳಿಸಿದೆ.
2016ರ ನವೆಂಬರ್ ನಲ್ಲಿ ಸಂತ್ರಸ್ತೆ ತಂದೆಯ ಕ್ರೌರ್ಯದ ಬಗ್ಗೆ ತನ್ನ ಶಾಲಾ ಶಿಕ್ಷಕಿಯರ ಬಳಿ ಹೇಳಿದ್ದಳು. ಇದನ್ನು ಕೇಳಿ ಶಿಕ್ಷಕಿಯರು ದಂಗಾಗಿ ಬಾಲಕಿಯ ತಾಯಿಯನ್ನು ಶಾಲೆಗೆ ಬರಹೇಳಿ ಈ ಬಗ್ಗೆ ಕೇಳಿದಾಗ, 2011ರಿಂದಲೂ ಪತಿ ತನ್ನ ಮಗಳ ಮೇಲೆ ವಿಕೃತಿ ಮೆರೆಯುತ್ತಿದ್ದಾನೆ. ನಾನು ಮನೆಯಲ್ಲಿ ಇಲ್ಲದ ವೇಳೆ ನಿರಂತರ ಅತ್ಯಾಚಾರ ಎಸಗುತ್ತಾ ಬಂದಿರುವ ಬಗ್ಗೆ ಹೇಳಿದ್ದರು. ಆಗ ಸತ್ಯಾಂಶ ಬಯಲಿಗೆ ಬಂದಿತ್ತು. ಬಳಿಕ ಬಾಲಕಿಯ ತಾಯಿ ತನ್ನ ಗಂಡನ ವಿರುದ್ಧ ಹೈದರಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಹಿನ್ನೆಲೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು. ಈಗ ವಿಚಾರಣೆ ನಡೆದು ನ್ಯಾಯಾಲಯ ಕಾಮುಕ ತಂದೆಗೆ ಜೀವಾವಧಿ ಶಿಕ್ಷೆ ವಿಧಿಸಿ, ಮಹತ್ವದ ಆದೇಶ ಹೊರಡಿಸಿದ್ದಾರೆ.

ಇತ್ತಿಚೀಗೆ ದೆಹಲಿ ಪೋಲಿಸ್- ರು ಬಿಡುಗಡೆ ಮಾಡಿದ ಮಕ್ಕಳ ಅಪರಾಧ ಮಾಹಿತಿಯ ಪ್ರಕಾರ, ಪ್ರತಿದಿನವೂ ಸರಾಸರಿ ಇಬ್ಬರು ಮಕ್ಕಳು ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾರೆ. 2019 ರ ಅಕ್ಟೋಬರ್ 15 ರವರೆಗೆ 739 ಪ್ರಕರಣಗಳಲ್ಲಿ ಮಕ್ಕಳ ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ. 2017 ರಲ್ಲಿ 921 ಪ್ರಕರಣಗಳು ವರದಿಯಾಗಿವೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ತನ್ನ 2016 ರ ವರದಿಯಲ್ಲಿ “ಮಕ್ಕಳ ವಿರುದ್ಧದ ಅಪರಾಧವು ಕಳೆದ 3 ವರ್ಷಗಳಲ್ಲಿ 2016 ಕ್ಕಿಂತ (94,172) 2015 ರಲ್ಲಿ 13.6% (1,06,958) ನಷ್ಟು ಹೆಚ್ಚಳವಾಗಿದೆ.