ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ವ್ಯಕ್ತಿ ಅನಾಥಾಶ್ರಮಕ್ಕೆ ನೀಡಿದ ದೇಣಿಗೆ ಹಣದಿಂದಲೇ ಅಂತ್ಯಕ್ರಿಯೆ.!

0
257

ಅನಾಥ ಎನ್ನುವ ಕೊರಗಿನಲ್ಲಿ ಅದೆಷ್ಟೋ ಜನರು ಜೀವನ ಸಾಗಿಸುತ್ತಿದ್ದಾರೆ, ಹೆತ್ತವರಿಲ್ಲದೆ ತಮ್ಮ ಜೀವನದಲ್ಲಿ ನೋಡಿ, ಕೇಳಿ ಕಲಿತ ಅನುಭವದಿಂದ ಹೇಗೋ ಒಳ್ಳೆಯದ್ದನೆ ಕಲಿತು ತಮಗೆ ಆದಷ್ಟು ಸಹಾಯವನ್ನು ಬೇರೆಯವರಿಗೆ ಮಾಡಿ. ಮಾದರಿ ಯಾಗುತ್ತಿದ್ದಾರೆ. ಒಂದು ವೇಳೆ ಜೀವನದಲ್ಲಿ ನಮಗೆ ಯಾರು ಇಲ್ಲವೆಂದು ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆಯನ್ನು ಕೂಡ ಮಾಡುತ್ತಾರೆ. ಹೀಗೆ ಅನಾಥನಾಗಿ ಬೆಳೆದ ವ್ಯಕ್ತಿಯೊಬ್ಬ, ಕ್ಯಾಬ್ ಚಾಲಕನಾಗಿ ದುಡಿದು ಅನಾಥಾಶ್ರಮಕ್ಕೆ ಸಹಾಯ ಮಾಡುತ್ತಿದ್ದ ವ್ಯಕ್ತಿ ಕೊನೆಗೆ ಬಾರೀ ದಾನ ಮಾಡಿದ ಹಣದಿಂದ ಅವನ ಅಂತ್ಯಕ್ರಿಯೆ ನಡೆಡಿದೆ.

Also read: 13 ವರ್ಷಗಳಿಂದ 300 ಬಡ ಮಕ್ಕಳಿಗೆ ಮೆಟ್ರೋ ಬ್ರಿಡ್ಜ್ ಕೆಳಗೆ ಓಪನ್ ಶಾಲೆ ನಡೆಸುತ್ತಿರುವ ಈ ವ್ಯಕ್ತಿಯ ಸೇವೆ ಎಲ್ಲದಕ್ಕೂ ಮಿಗಿಲಾದ್ದದ್ದು.!

ಹೌದು ಹೈದರಾಬಾದಿನ ಕ್ಯಾಬ್ ಡ್ರೈವರ್ ತನ್ನ ಕೈಯಲ್ಲಿ ಆದಷ್ಟು ಸಹಾಯವನ್ನು ಅನಾಥ ಮಕ್ಕಳಿಗೆ ನೀಡಿ ದೊಡ್ಡ ತನ ಮೆರೆಯುತ್ತಿದ್ದ. ಇತ ಒಬ್ಬ ಅನಾಥನಾಗಿದ್ದ ಎರಡು ದಿನದ ಹಿಂದೆ ಸರ್ಕಾರೇತರ ಸಂಸ್ಥೆಗೆ(ಎನ್‍ಜಿಒ) ದೇಣಿಗೆ ನೀಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಚಾಲಕನ ಸಾವಿನ ಸುದ್ದಿ ತಿಳಿದು ದುಃಖಪಟ್ಟ ಎನ್‍ಜಿಒ ಸದಸ್ಯರು ಅದೇ ದೇಣಿಗೆ ಹಣದಿಂದ ಆತನ ಅಂತ್ಯಕ್ರಿಯೆ ಮಾಡಿದ ಘಟನೆ ಹೈದರಾಬಾದಿನಲ್ಲಿ ನಡೆದಿದ್ದು ಭಾರಿ ವೈರಲ್ ಆಗಿದೆ.

ವಿಜಯ್ ಓರ್ವ ಅನಾಥನಾಗಿದ್ದು, ಹೈದರಾಬಾದಿನಲ್ಲಿ ಕ್ಯಾಬ್ ಓಡಿಸಿಕೊಂಡು ಜೀವನ ಮಾಡುತ್ತಿದ್ದ. ಆದರೆ ಆತನಿಗೆ ತನ್ನಂಥೆ ಅನಾಥರಾಗಿರುವವರಿಗೆ ಸಹಾಯ ಮಾಡಬೇಕೆಂಬ ಆಸೆ ಇತ್ತು. ಆದ್ದರಿಂದ ವಿಜಯ್ ‘ಸರ್ವೇ ನೀಡಿ’ ಎಂಬ ಎನ್‍ಜಿಒಗೆ ತನ್ನ ದುಡಿಮೆಯಿಂದ 6 ಸಾವಿರ ರೂಪಾಯಿ ಹಣವನ್ನು ದೇಣಿಗೆ ನೀಡಿದ್ದನು. ಕ್ಯಾಬ್ ಓಡಿಸಿಕೊಂಡು ಅದರಿಂದ ಬರುವ ಹಣದಲ್ಲಿ ಜೀವನ ನಡೆಸುವುದೇ ಕಷ್ಟ. ಆದರೆ ಬೇರೆ ಅವರಿಗೆ ಸಹಾಯವಾಗಲಿ ಎಂದು ವಿಜಯ್ ತನ್ನ ದುಡಿಮೆಯನ್ನು ಎನ್‍ಜಿಒಗೆ ಕೊಟ್ಟಿದ್ದನ್ನು ಇಂತಹ ಒಳ್ಳೆತನವನ್ನು ಎಲ್ಲರು ಮೆಚ್ಚಿದ್ದರು.

ವಿಜಯ್ ದೇಣಿಗೆ ನೀಡುತ್ತಿದ್ದ ವೇಳೆ ಎನ್‍ಜಿಒ ನಡೆಸುತ್ತಿದ್ದ ಗೌತಮ್ ಅವರ ಜೊತೆ ಇದ್ದ ವಿಡಿಯೋ, ಫೋಟೋಗಳನ್ನು ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಂಡಿದ್ದನು. ವಿಜಯ್ ಸಹಾಯ ಗುಣವನ್ನು ಗೌತಮ್ ಅವರು ಕೂಡ ಹಾಡಿ ವಿಜಯ್ ಅವರಿಗೆ ದನ್ಯವಾದಗಳನ್ನು ತಿಳಿಸಿದರು ಆದರೆ ಇದೆಲ್ಲ ಮುಗಿದು ಎರಡು ದಿನಗಳ ಬಳಿಕ ವಿಜಯ್ ಶವ ರೈಲ್ವೆ ಹಳಿಗಳ ಮೇಲೆ ಪತ್ತೆಯಾಗಿತ್ತು. ಅಲ್ಲದೆ ಅಲ್ಲಿಯೇ ಒಂದು ಡೆತ್ ನೋಟ್ ಕೂಡ ಪತ್ತೆಯಾಗಿತ್ತು. ಅದರಲ್ಲಿ ನಾನು ಅನಾಥ, ನಾನೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಸಾವಿಗೆ ನಾನೇ ಕಾರಣ ಎಂದು ಬರೆದಿತ್ತು.

ಪತ್ರದಲ್ಲಿ ಕೂಡ ಅನಾಥ ಎಂದು ಬರೆದುಕೊಂಡಿದ್ದರಿಂದ ವ್ಯಕ್ತಿ ಶವವನ್ನು ನಗರ ಪಾಲಿಕೆಯವರು ಅಂತ್ಯಕ್ರಿಯೆ ಮಾಡಲು ಸಜ್ಜಾಗಿದ್ದರು ಆದರೆ ವಿಜಯ್ ಸಾವಿನ ಬಗ್ಗೆ ತಿಳಿದು NGO ಗೌತಮ್ ಹಾಗೂ ಇತರೆ ಸದಸ್ಯರು ಮುಂದೆ ಬಂದು ಇತರರಿಗೆ ಒಳ್ಳೆದನ್ನ ಬಯಸಿದ್ದ ವಿಜಯ್ ಅಂತ್ಯಸಂಸ್ಕಾರ ಅನಥವಾಗಿಯೇ ನಡೆಯೋದು ಬೇಡವೆಂದು, ತಮ್ಮ ಎನ್‍ಜಿಒಗೆ ವಿಜಯ್ ಕೊಟ್ಟಿದ್ದ ಹಣದಿಂದಲೇ ಆತನ ಅಂತ್ಯಕ್ರಿಯೆ ಮಾಡಿ, ಆತನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ.