ಸಾಮಾಜಿಕ ಜಾಲತಾಣಗಳಲ್ಲಿ ಸ್ನೇಹ ಮಾಡುವ ಮುನ್ನ ಎಚ್ಚರ; ಲಿಂಕ್ಡ್‌ಇನ್‌ ಮೂಲಕ ಫ್ರೆಂಡ್ ಆದ ವ್ಯಕ್ತಿಯಿಂದ 1 ಕೋಟಿ ರೂ. ಕಳೆದುಕೊಂಡ ಮಹಿಳೆ.!

0
108

ಇತ್ತೀಚಿಗೆ ಜನರು ಸಾಮಾಜಿಕ ಜಾಲತಾಣಗಳಲ್ಲಿ ಸ್ನೇಹ ಮಾಡಿಕೊಂಡು ಸಾಕಷ್ಟು ಮೋಸ ಹೋಗುತ್ತಿರುವುದು ಪ್ರಪಂಚದ್ಯಾದಂತ ನಡೆಯುತ್ತಾನೆ ಇದೆ. ಅದರಲ್ಲಿ ಯಾವುದೋ ದೇಶದ ವ್ಯಕ್ತಿಗಳನ್ನು ಪ್ರೀತಿ ಮಾಡಿ ಮೋಸ ಹೋಗುತ್ತಿರುವುದು ಗೊತ್ತೇ ಇದೆ. ಇದನ್ನೇ ಬಂಡವಾಳ ಮಾಡಿಕೊಂಡು ಹಲವಾರು ವಂಚನೆಗಳು ನಡೆಯುತ್ತಿವೆ. ಇಂತಹದೇ ಒಂದು ಪ್ರಕರಣ ನಡೆದಿದ್ದು ಲಿಂಕ್ಡ್‌ಇನ್‌ ಮೂಲಕ ಸ್ನೇಹಿತನಾಗಿದ್ದ ವ್ಯಕ್ತಿಯೋರ್ವ ಮಹಿಳೆಯಿಂದ 1 ಕೋಟಿ ರೂಪಾಯಿಗೂ ಅಧಿಕ ಹಣ ಪಡೆದು ಪಂಗನಾಮ ಹಾಕಿದ್ದಾನ ಘಟನೆ ನಡೆದಿದೆ.

ಏನಿದು ಘಟನೆ?

ಹೌದು ಸಾಮಾಜಿಕ ಜಾಲತಾಣದಲ್ಲಿ ಮೋಸ ಹೋಗಿ ಹಣದ ಜೊತೆಗೆ ಗುಣವನ್ನು ಕಳೆದುಕೊಳ್ಳುತ್ತಿರುವುದು ದೊಡ್ಡ ಮೋಸವೇ ಅನ್ನಬಹುದು. ಇದರಲ್ಲಿ ಬೇಸರದ ಸಂಗತಿ ಏನೆಂದರೆ ಎಲ್ಲದರ ಬಗ್ಗೆ ತಿಳಿದವರೇ ವಿದ್ಯಾವಂತರೇ ಹೆಚ್ಚಿನ ಮೋಸ ಹೋಗುತ್ತಿರುವುದು ಇನ್ನೊಂದು ದುರಂತ ಎನ್ನಬಹುದು. ಏಕೆಂದರೆ ಹೈದರಾಬಾದಿನ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಉದ್ಯೋಗಿಗಳ ಸಾಮಾಜಿಕ ಜಾಲತಾಣ ಲಿಂಕ್ಡ್‌ಇನ್‌ ಮೂಲಕ ಸ್ನೇಹಿತನಾಗಿದ್ದ ವ್ಯಕ್ತಿಯೋರ್ವನಿಂದ 1 ಕೋಟಿ ರೂ. ಕಳೆದುಕೊಂಡಿದ್ದಾಳೆ.

ಮಹಿಳೆ ಐಟಿ ಕಂಪನಿಯ ಉದ್ಯೋಗಿಯಾಗಿದ್ದು, ಕಳೆದ ಮೇ ತಿಂಗಳಲ್ಲಿ ಲಿಂಕ್ಡ್‌ಇನ್‌ ಮೂಲಕ ಅನಾಮಿಕ ವ್ಯಕ್ತಿಯೊಂದಿಗೆ ವಂಚನೆಗೊಳಗಾದ ಮಹಿಳೆ ಸ್ನೇಹ ಬೆಳೆಸಿಕೊಂಡಿದ್ದರು. ಮೊದಲು ಲಿಂಕ್ಡ್‌ಇನ್‌ ಮೂಲಕ ಫ್ರೆಂಡ್ ರಿಕ್ವೆಸ್ಟ್ ಬಂದಿತ್ತು. ಅದನ್ನು ಮಹಿಳೆ ಸ್ವೀಕರಿಸಿದರು. ತಾನು ಪೈಲಟ್, ಬ್ರಿಟಿಷ್ ಏರ್‌ವೇಸ್‌ನಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಆರೋಪಿ ಮಹಿಳೆ ಜೊತೆ ಸ್ನೇಹ ಬೆಳೆಸಿದ್ದನು. ಕೆಲ ದಿನಗಳವರೆಗೆ ಚಾಟಿಂಗ್ ಮಾಡಿದ ಬಳಿಕ ಇಬ್ಬರು ತಮ್ಮ ಫೋನ್ ನಂಬರ್ ಹಂಚಿಕೊಂಡಿದ್ದರು. ಹೀಗೆ ಇಬ್ಬರ ನಡುವೆ ಸ್ನೇಹ ಗಟ್ಟಿಯಾಯ್ತು, ಚಾಂಟಿಂಗ್ ಕೂಡ ಹೆಚ್ಚಾಯಿತು.

ಅಷ್ಟಕ್ಕೇ ನಿಲ್ಲದೆ ಹಣದ ವ್ಯವಹಾರವು ನಡೆಯಿತು. ಹೀಗೆ ಒಂದು ದಿನ ಆಕೆಗೆ ಐಫೋನ್, ರೊಲೆಕ್ಸ್ ವಾಚ್, ದುಬಾರಿ ಪರ್ಫ್ಯೂಮ್ ಗಳು ಮತ್ತು ಕೆಲ ಬ್ರಿಟನ್ ಕರೆನ್ಸಿಗಳನ್ನು ಗಿಫ್ಟ್ ಆಗಿ ಪಾರ್ಸೆಲ್ ಕಳುಹಿಸುತ್ತೇನೆ. ಅದಕ್ಕೆ ಮೊದಲು ಹಣ ಬೇಕು ಎಂದು ಸುಳ್ಳು ಹೇಳಿ ಆರೋಪಿ ಮಹಿಳೆಯಿಂದ 7 ಲಕ್ಷ ರೂಪಾಯಿ ಹಣ ಪಡೆದುಕೊಂಡಿದ್ದನು. ನಂತರ ಮತ್ತೆ ವಾಟ್ಸಾಪ್‍ನಲ್ಲಿ ಆರೋಪಿ ನನ್ನ ತಂದೆಗೆ ಕ್ಯಾನ್ಸರ್ ಇದೆ ಆಸ್ಪತ್ರೆಯಲ್ಲಿದ್ದಾರೆ, ತುರ್ತಾಗಿ ಹಣ ಬೇಕಿತ್ತು ಎಂದು ಮಹಿಳೆ ಬಳಿ ಸಹಾಯ ಕೋರಿದ್ದ. ಆತನ ಮಾತನ್ನು ನಂಬಿ ಮಹಿಳೆ 11 ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟು 94 ಲಕ್ಷ ರೂಪಾಯಿ ವರ್ಗಾಯಿಸಿದ್ದರು.

ಬಳಿಕ ಆರೋಪಿ ಮಹಿಳೆಗೆ ಸಂಪರ್ಕಿಸಿಲ್ಲ. ಅಷ್ಟೇ ಅಲ್ಲದೆ ಹಲವು ದಿನಗಳು ಕಳೆದರೂ ಮಹಿಳೆಗೆ ಯಾವುದೇ ಪಾರ್ಸೆಲ್ ಬಂದಿರಲಿಲ್ಲ. ಆಗ ಆಕೆಗೆ ತಾನು ಮೋಸ ಹೋಗಿರುವುದು ಅರಿವಾಗಿ, ಸೈಬರ್ ಕ್ರೈಂ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದಾರೆ. ಸದ್ಯ ಈ ಸಂಬಂಧ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಅದಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯವಾಗುವರನ್ನು ನಂಬಿ ಮನೆಬಿಟ್ಟು ಅವರ ಜೊತೆಗೆ ಹೋಗುವುದಾಗಲೀ ಹಣ ನೀಡುವುದಾಗಲಿ ಮಾಡುವ ಮುನ್ನ ಬಹಳ ಎಚ್ಚರದಿಂದ ಇರುವುದು ಒಳ್ಳೆಯದು.