ಅತ್ಯಾಚಾರ ಆರೋಪಿ ಎನ್‍ಕೌಂಟರ್ ವಿಷಯ ತಿಳಿದು ಭಾರತದೆಲ್ಲಡೆ ಸಂಭ್ರಮಾಚರಣೆ; ಬಲಿಯಾದ ಆರೋಪಿಗಳ ತಂದೆ, ತಾಯಿ ಪತ್ನಿ ಹೇಳಿದ್ದೇನೆ??

0
741

ಇಡೀ ದೇಶವನ್ನೇ ಬೆಚ್ಚಿಬೀಳಿಸಿದ ಪಶುವೈದ್ಯೆ ಅತ್ಯಾಚಾರ ಆರೋಪಿಗಳ ಎನ್‍ಕೌಂಟರ್ ಕುರಿತು ಪರ- ವಿರೋದ್ಧ ಚರ್ಚೆಗಳು ನಡೆಯುತ್ತಿದ್ದು, ಬಲಿ ಆರೋಪಿಗಳ ಮನೆಯವರು ಹೇಗೆ ಪ್ರತಿಕ್ರಿಯೆ ನೀಡಿದ್ದಾರೆ ಎನ್ನುವುದು ಕುತೂಹಲಕಾರಿ, ಏಕೆಂದರೆ ಮಾಡಿದ ತಪ್ಪಿಗೆ ಸರಿಯಾದ ಶಿಕ್ಷೆಯಾಗಿದೆ ಎಂದರೆ ಇನ್ನೊಂದೆಡೆ ಮಕ್ಕಳು ಸತ್ತೆ ಹೋದರಲ್ಲ ಎನ್ನುವ ನೋವು ಹೆತ್ತವರಲ್ಲಿ ಇದೇ ಇರುತ್ತದೆ. ಅದರಂತೆ ಆರೋಪಿಯ ಎನ್‍ಕೌಂಟರ್ ಮಾಡುವ ಮೊದಲು ನೋಡಲು ಅವಕಾಶ ನೀಡಬೇಕಿತ್ತು, ಎಂದರೆ ಆರೋಪಿಯ ನನ್ನ ಪತಿಯನ್ನು ಕೊಂದ ಜಾಗದಲ್ಲಿ ನನ್ನನ್ನು ಕೊಲ್ಲಿ ಎಂದು ಕಣ್ಣಿರು ಹಾಕಿದ್ದಾರೆ.

Also read: ಅಂದು ವಾರಂಗಲ್ ಎನ್‍ಕೌಂಟರ್ ಮಾಡಿದ್ದು, ಇಂದು ಪಶುವೈದ್ಯೆ ಅತ್ಯಾಚಾರಿಗಳನ್ನೂ ಎನ್‍ಕೌಂಟರ್ ಮಾಡಿದ್ದು ವೀರ ಕನ್ನಡಿಗ ವಿಶ್ವನಾಥ್ ಸಜ್ಜನವರ್.!

ಆರೋಪಿಗಳಾದ ಮೊಹಮ್ಮದ್ ಪಾಷಾ, ನವೀನ್, ಚೆನ್ನಕೇಶವುಲು ಹಾಗೂ ಶಿವಾ ನನ್ನು ಪೊಲೀಸರು ಎನ್‍ಕೌಂಟರ್ ಮಾಡಿದ್ದರು. ಪೊಲೀಸರ ಈ ಕಾರ್ಯಕ್ಕೆ ಇಡೀ ದೇಶ ಶ್ಲಾಘಿಸುತ್ತಿದೆ. ಅಲ್ಲದೆ ಹೈದರಾಬಾದ್ ವಿದ್ಯಾರ್ಥಿಗಳು ಪೊಲೀಸರಿಗೆ ಜೈಕಾರ ಹಾಕುತ್ತಿದ್ದಾರೆ. ಎನ್ ಕೌಂಟರ್ ಗೆ ಬಲಿಯಾದ ನಾಲ್ವರ ಪೈಕಿ ಚನ್ನಕೇಶವುಲು ಪತ್ನಿ, ತಾನು ಗಂಡನಿಲ್ಲದೆ ಹೇಗೆ ಬದುಕಲಿ ಎಂದು ಅಳಲು ತೋಡಿಕೊಂಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಚನ್ನಕೇಶವುಲು ಪತ್ನಿ, ನಮಗೆ ಮದುವೆಯಾಗಿ ಕೇವಲ ಒಂದು ವರ್ಷವಷ್ಟೇ ಆಗಿದೆ. ಈಗ ಗಂಡನನ್ನೇ ಕಳೆದುಕೊಂಡಿದ್ದೇನೆ. ಪೊಲೀಸರು ಕೇವಲ ವಿಚಾರಣೆ ನಡೆಸಿ ಬಿಟ್ಟು ಕಳುಹಿಸುವುದಾಗಿ ಗಂಡನನ್ನು ಕರೆದುಕೊಂಡು ಹೋಗಿದ್ದರು. ಆದರೆ ಈಗ ನನ್ನ ಗಂಡ ಹೆಣವಾಗಿದ್ದಾನೆ ಎಂದು ಕಣ್ಣೀರು ಹಾಕಿದ್ದಾರೆ.

ಸಾಯಿಸುವ ಮೊದಲು ಮುಖವಾದರು ತೋರಿಸಬೇಕಿತ್ತು;

ನನ್ನ ಮಗ ಹಾಗೂ ಉಳಿದ ಆರೋಪಿಗಳಿಗೆ ಜೈಲಿಗೆ ಹಾಕುವ ಬದಲು ಕೊಂದು ಬಿಡಿ ಎಂದು ನಾನು ಮೊದಲೇ ಹೇಳಿದ್ದೆ. ಆದರೆ ಎನ್‍ಕೌಂಟರ್ ಮಾಡುವ ಮೊದಲು ನೋಡಲು ಅವಕಾಶ ನೀಡಬೇಕಿತ್ತು ಎಂದು ಆರೋಪಿ ನವೀನ್ ತಂದೆ ಪ್ರತಿಕ್ರಿಯಿಸಿದ್ದಾರೆ. ಈ ಮೊದಲು ಚೆನ್ನಕೇಶವುಲು ತಾಯಿ, ನನ್ನ ಮಗ ತಪ್ಪು ಮಾಡಿದ್ದಾನೆ ಎಂದರೆ ಆತನಿಗೆ ಶಿಕ್ಷೆ ನೀಡಿ. ನನ್ನ ಮಗ ಅಪರಾಧ ಮಾಡಿದ್ದಾನೆಂದರೆ ಆತನನ್ನು ಸುಟ್ಟು ಕೊಲೆ ಮಾಡಿ. ನನ್ನ ಮಗ ನನಗೆ ಏನೂ ಅಲ್ಲ. ತಪ್ಪು ಯಾರು ಮಾಡಿದರೂ ತಪ್ಪೇ. ಸಂತ್ರಸ್ತೆಯ ತಾಯಿ 9 ತಿಂಗಳ ನಂತರ ತನ್ನ ಮಗಳಿಗೆ ಜನ್ಮ ನೀಡಿದ್ದರು. ಆದರೆ ಅವರ ಮಗಳು ಇಂತಹ ಅಪರಾಧಕ್ಕೆ ಬಲಿಯಾಗಿದ್ದಾಳೆ. ಅವರು ಎಷ್ಟು ಕಷ್ಟಪಟ್ಟಿರಬಹುದು ಎಂದು ಹೇಳಿದ್ದರು.

ಕೇವಲ ನಾಲ್ವರು ಆರೋಪಿಗಳಿಗೆ ಮಾತ್ರ ಏಕೆ ಈ ಶಿಕ್ಷೆ?

ಮೊಹಮ್ಮದ್ ಪಾಷಾನ ತಾಯಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ಪೊಲೀಸರು ನನ್ನ ಮಗನಿಗೆ ಏನು ಮಾಡಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಆದರೆ ನನ್ನ ಮಗ ಈಗ ಇಲ್ಲ. ಖಂಡಿತಾ ಇದು ತಪ್ಪು. ಆದರೆ ಏನೂ ಮಾಡಲಿ ನನ್ನ ಮಗ ಈಗ ಬದುಕಿಲ್ಲ. ನನಗೆ ಮಾತನಾಡಲು ಸಹ ಆಗುತ್ತಿಲ್ಲ ಎಂದು ಕಣ್ಣೀರು ಹಾಕಿದರು. ಆರೋಪಿ ಶಿವಾ ತಾಯಿ ಮಾತನಾಡಿ, ನನ್ನ ಮಗ ತಪ್ಪು ಮಾಡಿದ್ದಾನೆ ಎಂದರೆ ಆತನನ್ನು ಶೂಟ್ ಮಾಡಿ ಎಂದು ಕಣ್ಣೀರು ಹಾಕುತ್ತಾ ಪ್ರತಿಕ್ರಿಯೆ ನೀಡಿದ್ದಾರೆ. ಇತ್ತ ಶಿವಾ ತಂದೆ, ಕೇವಲ ನಾಲ್ವರು ಆರೋಪಿಗಳಿಗೆ ಮಾತ್ರ ಏಕೆ ಈ ಶಿಕ್ಷೆ? ಬೇರೆಯವರಿಗೂ ಇದೇ ಶಿಕ್ಷೆ ನೀಡಬೇಕು. ಅವರಿಗೇಕೆ ಈ ಶಿಕ್ಷೆ ನೀಡುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.

ಮಗಳ ಆತ್ಮಕ್ಕೆ ಶಾಂತಿ ಸಿಕ್ಕಿದೆ;

Also read: ಪಶುವೈದ್ಯೆಯನ್ನು ಅತ್ಯಾಚಾರ ಮಾಡಿ ಸುಟ್ಟು ಹಾಕಿದ ನಾಲ್ವರು ಆರೋಪಿಗಳು ಎನ್​ಕೌಂಟರ್; ಪೊಲೀಸರ ಕ್ರಮಕ್ಕೆ ದೇಶವೇ ಮೆಚ್ಚುಗೆ.!

ನನ್ನ ಮಗಳು ಮೃತಪಟ್ಟು 10 ದಿನಗಳಾಗಿದೆ. ಈ ಹಿನ್ನೆಲೆ ಎನ್‌ಕೌಂಟರ್‌ ಮಾಡಿದ್ದಕ್ಕೆ ಪೊಲೀಸರಿಗೆ ಹಾಗೂ ಸರಕಾರಕ್ಕೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ನನ್ನ ಮಗಳ ಆತ್ಮಕ್ಕೆ ಶಾಂತಿ ಸಿಕ್ಕಿದೆ ಎಂದು ಭಾವಿಸಿದ್ದೇನೆ ಎಂದು ಸುದ್ದಿಸಂಸ್ಥೆ ಎಎನ್‌ಐಗೆ ಪಶುವೈದ್ಯೆ ತಂದೆ ಪ್ರತಿಕ್ರಿಯೆ ನೀಡಿದ್ದಾರೆ. ಒಟ್ಟಾರೆಯಾಗಿ ಇಂತಹ ಶಿಕ್ಷೆ ದೇಶದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಇದನ್ನು ನೋಡಿ ಆದರು ಕಾಮುಕರು ಮಹಿಳೆಯರ ಮೇಲೆ ಮಾಡುವ ಅತ್ಯಾಚಾರವನ್ನು ನಿಲ್ಲಿಸುತ್ತಾರೋ ಏನೋ ಕಾದು ನೋಡಬೇಕಿದೆ.