ಚೆನ್ನೈನಿಂದ ಬೆಂಗಳೂರಿಗೆ 30 ನಿಮಿಷದಲ್ಲಿ ತಲುಪಹುದು!

0
2850

ಇದು ಯಾವುದೋ ಸಿನಿಮಾ ಕತೆಯಲ್ಲ. ಏಕೆಂದರೆ ಬೆಂಗಳೂರಿನ ಒಂದು ಕಡೆಯಿಂದ ಮತ್ತೊಂದು ಕಡೆಗೆ 8ರಿಂದ 10 ಕಿ.ಮೀ. ದೂರ ಇದ್ದರೂ ಗಂಟೆಗಟ್ಟಲೆ ಸಮಯ ತೆಗೆದುಕೊಳ್ಳುತ್ತೆ. ಹಾಗಿದ್ದ ಮೇಲೆ 300 ಕಿ.ಮೀ.ಗಿಂತಲೂ ಹೆಚ್ಚು ದೂರ ಇರುವ ಚೆನ್ನೈ ಮತ್ತು ಬೆಂಗಳೂರು ಮಧ್ಯೆ 30 ನಿಮಿಷದಲ್ಲಿ ತಲುಪಬಹುದು ಎಂದರೇ ಸುಮ್ಮನೆನಾ? ವಿಮಾನದಲ್ಲೇ ಹೋಗಬೇಕು ಅಂದರೆ ಕನಿಷ್ಠ ಒಂದು ಗಂಟೆಯಾದರೂ ಬೇಕು.

ಹೌದು, ಅಮೆರಿಕ ಮೂಲದ ಕಂಪನಿ ಇಲೋನ್ ಮಸ್ಕ್‍ ಸಂಸ್ಥೆಯ `ಹೈಪರ್‍ ಲೂಪ್‍’ ಈ ಎರಡು ಮಹಾನಗರಗಳ ನಡುವಣ ದೂರವನ್ನು ಮತ್ತಷ್ಟು ಹತ್ತಿರ ಮಾಡುವ ಯೋಜನೆಗೆ ಮುಂದೆ ಬಂದಿದ್ದು, ಭಾರತೀಯ ರೈಲ್ವೆಯಲ್ಲಿ ಹೊಸ ಕ್ರಾಂತಿ ಎಂದೇ ಭಾವಿಸಲಾದ ಯೋಜನೆ ಇದಾಗಿದೆ.

56595328

ಕಾಂಕ್ರಿಟ್‍ನಿಂದ ನಿರ್ಮಿಸಲಾದ ಪಿಲ್ಲರ್‍ ಗಳ ಮೇಲೆ ಪೈಪ್‍ಲೈನ್‍ ಮಾದರಿಯ ಟ್ಯೂಬ್‍ ರಚಿಸಲಾಗಿದ್ದು, ಇದರೊಳಗೆ ರೈಲು ಸಂಚರಿಸಲಿದೆ. ಪೈಪ್‍ನೊಳಗೆ ಗಾಳಿಯ ಅಡೆತಡೆ ಇಲ್ಲದ ಕಾರಣ ಗರಿಷ್ಠ 1200 ಕಿ.ಮೀ. ವೇಗದಲ್ಲಿ ಇದು ಸಂಚರಿಸುವ ಸಾಮರ್ಥ್ಯ ಹೊಂದಿದೆ. ಒಂದು ವೇಳೆ ಈ ಯೋಜನೆ ಜಾರಿಗೆ ಬಂದರೆ ಕೇವಲ 30 ನಿಮಿಷದಲ್ಲಿ ಚೆನ್ನೈನಿಂದ ಬೆಂಗಳೂರಿಗೆ ತಲುಪಬಹುದು ಎಂದು ಹೇಳಲಾಗಿದೆ.

ಚೆನ್ನೈ- ಬೆಂಗಳೂರು ಮಾತ್ರವಲ್ಲ, ತಿರುವನಂತಪುರಂ- ಮುಂಬೈ- ದೆಹಲಿ ನಡುವಣ ರೈಲು ಸಂಚಾರದ ಕುರಿತೂ ಚರ್ಚೆಗಳು ನಡೆಯುತ್ತಿವೆ ಎಂದು ಸಂಸ್ಥೆ ಟ್ವೀಟ್‍ ಮಾಡಿದೆ.

56595323

ಕೇಂದ್ರ ಸರಕಾರ ಈಗಾಗಲೇ ಬೆಂಗಳೂರು-ಚೆನ್ನೈ ಸೇರಿದಂತೆ ದೇಶದ ನಾನಾ ಕಡೆ ಬುಲೆಟ್‍ ಟ್ರೈನ್‍ ಯೋಜನೆಗೆ ಆಸಕ್ತಿ ವಹಿಸಿದ್ದು, ಜಪಾನ್‍ ಮತ್ತು ಚೀನಾ ತಂಡಗಳು ಪ್ರಸ್ತಾಪ ಇರುವ ನಗರಗಳ ರೈಲು ಮಾರ್ಗಗಳ ಕುರಿತು ಸಮೀಕ್ಷೆಯಲ್ಲಿ ತೊಡಗಿವೆ. ಒಂದು ವೇಳೆ ಹೈಪರ್‍ ಲೂಪ್‍ ಪ್ರಸ್ತಾಪ ಕುರಿತು ಸರಕಾರ ಹಸಿರುನಿಶಾನೆ ತೋರಿದರೆ 30 ನಿಮಿಷಗಳ ಪ್ರಯಾಣದ ಕನಸು ನನಸಾಗಲಿದೆ.