ಹೈಪರ್ ಲೂಪ್ ರೈಲಿನಲ್ಲಿ ಬೆಂಗಳೂರಿನಿಂದ ಹುಬ್ಬಳ್ಳಿಗೆ ಕೇವಲ ಅರ್ಧ ಘಂಟೆ, ಕರ್ನಾಟಕ ಸರ್ಕಾರ ಇದನ್ನು ನಮಗೆ ತರಲಿದೆಯಂತೆ!!

0
555

ಜಗತ್ತಿನಲ್ಲೇ ಅತ್ಯಂತ ವೇಗದ ಸಂಚಾರ ವ್ಯವಸ್ಥೆ ಎಂದೇ ಪರಿಚಿತವಾಗಿರುವ ವರ್ಜಿನ್‌ ಹೈಪರ್‌ಲೂಪ್‌ ಕಂಪನಿ ಜತೆಗೆ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರ ಒಪ್ಪಂದವೊಂದನ್ನು ಮಾಡಿಕೊಂಡಿದೆ. ಈ ಯೋಜನೆ ಪೂರ್ಣವಾದರೆ ನೀವು ಬೆಂಗಳೂರಿನಿಂದ ಹುಬ್ಬಳ್ಳಿಗೆ ಕೇವಲ ಅರ್ಧಗಂಟೆಯಲ್ಲಿ ಹೋಗಬಹುದು. ಈ ಯೋಜನೆಯ ಕುರಿತು ವಿವರ ಇಲ್ಲಿದೆ.

ಬೆಂಗಳೂರಿನಲ್ಲಿ ಆರಂಭವಾದ ಟೆಕ್‌ ಸಮ್ಮಿಟ್‌ನಲ್ಲಿ ಐಟಿ-ಬಿಟಿ ಮತ್ತು ಪ್ರವಾಸೋದ್ಯಮ ಸಚಿವ ಪ್ರಿಯಾಂಕ್‌ ಖರ್ಗೆ ವರ್ಜಿನ್‌ ಹೈಪರ್‌ಲೂಪ್‌ ಒನ್‌ ಜತೆ ಒಡಂಬಡಿಕೆಗೆ ಸಹಿ ಮಾಡಿದ್ದಾರೆ. ಈ ಒಪ್ಪಂದದ ಪ್ರಕಾರ , ಬೆಂಗಳೂರು , ತುಮಕೂರು, ಹುಬ್ಬಳ್ಳಿ-ಧಾರವಾಡ ಮತ್ತು ಹೊಸೂರುಗಳಲ್ಲಿ ಈ ಯೋಜನೆಯ ಆಗು-ಹೋಗುಗಳ ಬಗ್ಗೆ ಪರಿಶೋಧನೆ ಮಾಡುವುದಲ್ಲದೇ , ಆರ್ಥಿಕವಾಗಿಯೂ ಇದು ಉಪಯೋಗಕ್ಕೆ ಬರುತ್ತದೆಯೇ ಎಂಬ ಬಗ್ಗೆಯೂ ಅಧ್ಯಯನ ನಡೆಸಲಿದೆ.

ರಾಜಧಾನಿ ಬೆಂಗಳೂರು ದೇಶದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿದೆ , ಇಲ್ಲಿ ಜಗತ್ತಿನ ಅತ್ಯಂತ ಪ್ರಮುಖ ಐಟಿ ಕಂಪನಿಗಳು ಕಾರ್ಯಾಚರಣೆ ನಡೆಸುತ್ತಿವೆ , ಒಂದು ವೇಳೆ ಹೈಪರ್‌ಲೂಪ್‌ನಂಥ ನವ ತಂತ್ರಜ್ಞಾನವನ್ನು ರಾಜ್ಯದಲ್ಲಿ ಅಳವಡಿಸಿದ್ದೇ ಆದರೆ , ಕರ್ನಾಟಕದ ಪ್ರಗತಿಯ ವೇಗ ಮತ್ತಷ್ಟು ಹೆಚ್ಚುತ್ತದೆ ಎಂದು ಪ್ರಿಯಾಂಕ್‌ ಖರ್ಗೆ ಹೇಳಿದರು. ೨೦೧೩ ರಲ್ಲಿ ಹೈಪರ್‌ಲೂಪ್‌ ಅಮೆರಿಕದ ನಾವಡಾ ಮರುಭೂಮಿಯಲ್ಲಿ ಪರೀಕ್ಷೆ ನಡೆಸಿ ಯಶಸ್ವಿಯೂ ಆಗಿದ್ದಾರೆ.

ಆದರೆ , ಈ ಯೋಜನೆಗೆ ಮತ್ತಷ್ಟು ಧನ ಸಹಾಯ ನೀಡಲು ಯಾರೂ ಮುಂದೆ ಬಂದಿರಲಿಲ್ಲ. ಕಳೆದ ತಿಂಗಳಷ್ಟೇ , ವರ್ಜಿನ್‌ ಏರ್‌ಲೈನ್ಸ್‌ನ ರಿಚರ್ಡ್‌ ಬ್ರಾನ್ಸನ್‌ ಅವರು ಹೈಪರ್‌ಲೂಪ್‌ ಯೋಜನೆಯಲ್ಲಿ ಹೂಡಿಕೆ ಮಾಡುವುದಾಗಿ ಘೋಷಿಸಿ , ಒಪ್ಪಂದವನ್ನೂ ಮಾಡಿಕೊಂಡಿದ್ದಾರೆ , ಎಲ್ಲವೂ ಅಂದುಕೊಂಡಂತಾದರೆ ೨೦೨೧ ಕ್ಕೆ ಯೋಜನೆ ಆರಂಭವಾಗಬಹುದು.

ಹೈಪರ್‌ಲೂಪ್‌ ಸಂಸ್ಥೆ ಅಮೆರಿಕ , ಬ್ರಿಟನ್‌ , ಕೆನಡಾ , ಯುಎಇ , ಫಿನ್ಲಂಡ್‌ ಮತ್ತು ಭಾರತದಲ್ಲಿ ಈ ಯೋಜನೆಯನ್ನು ಹಾಕಿಕೊಂಡಿದೆ. ಭಾರತದಲ್ಲಿ ಬೆಂಗಳೂರು , ತುಮಕೂರು , ಹೊಸೂರು , ಹುಬ್ಬಳ್ಳಿ , ಮುಂಬೈ , ಮತ್ತು ಪುಣೆ ನಗರಗಳಲ್ಲಿ ಹೈಪರ್‌ಲೂಪ್‌ ಸೇವೆ ದೊರಕಲಿದೆ. ಇದಕ್ಕೂ ಮೆಟ್ರೋ ಅಥವಾ ಬೇರೆ ಟ್ರೈನ್ ಗಳಿಗೆ ಏನು ವ್ಯತ್ಯಾಸ ಅಂದ್ರೆ , ಹೈಪರ್‌ಲೂಪ್‌ , ವಿಶೇಷವಾಗಿ ನಿರ್ಮಿಸಲಾದ ಕೊಳವೆಯೊಂದರಲ್ಲಿ ಪಾಡ್‌ಗಳು (ಸಣ್ಣ ವಾಹನಗಳು) ಸಾಗುವಂತೆ ಮಾಡುವುದು , ಈ ಕೊಳವೆಯನ್ನು ನೆಲದಿಂದ ಕೊಂಚ ಮೇಲೆಯೇ ನಿರ್ಮಿಸಲಾಗಿರುತ್ತದೆ , ಅಯಸ್ಕಾಂತೀಯ ಗುಣದೊಂದಿಗೆ ಪಾಡ್‌ ಕೊಳವೆಯ ಯಾವುದೇ ಬದಿಗೂ ತಗುಲದಂತೆ ಮಾಡಲಾಗುತ್ತದೆ.

ಈ ಕೊಳವೆಗೆ ಹೊರಗಿನಿಂದ ಗಾಳಿ ಹೋಗದಂತೆ ನಿರ್ಮಿಸಲಾಗುತ್ತದೆ ಅಂದರೆ ವಾಕ್ಯೂಮ್ನ್ ಅಳವಡಿಸಲಾಗಿದೆ. ಅಲ್ಲದೆ , ಇದೇ ಕಾಂತೀಯ ಶಕ್ತಿಯಿಂದಲೇ ಇದನ್ನು ಚಲಿಸುವಂತೆ ಮಾಡಲಾಗುತ್ತದೆ. ಆರಂಭದಲ್ಲಿ ಗಂಟೆಗೆ ೬೪೦ ಕಿ.ಮೀ. ವೇಗ ಎಂದು ಹೇಳಲಾಗಿತ್ತಾದರೂ , ಪ್ರಯೋಗ ಯಶಸ್ವಿಯಾದ ನಂತರ ಗಂಟೆಗೆ ೧೦೦೦ ಕಿ.ಮೀ. ವೇಗವಾಗಿ ಹೋಗಬಹುದು