ಐಟಿ ದಾಳಿಯಲ್ಲಿ 100 ಕೋಟಿ ರೂ.ಅಕ್ರಮ ಹಣ ಪತ್ತೆ; ಐಟಿ ಅಧಿಕಾರಿಗಳ ಪ್ರಶ್ನೆಗೆ ಉತ್ತರಿಸಲು ಆಗದೆ ಡಿಸಿಎಂ ಪರಮೇಶ್ವರ್ ಪಿಎ ಆತ್ಮಹತ್ಯೆ ಬೆದರಿಕೆ.!

0
229

ಮಾಜಿ ಉಪ ಮುಖ್ಯಮಂತ್ರಿ ಪರಮೇಶ್ವರ್ ಮೇಲೆ ಐಟಿ ದಾಳಿ ನಡೆದಿದ್ದು ಹಲವು ಅಕ್ರಮ ಹಣ ವಿದೆ ಎನ್ನುವ ವಿಚಾರಕ್ಕೆ, ದಾಳಿ ನಡೆದಿದೆ ಈ ವೇಳೆ ಕೋಟ್ಯಾಂತರ ಹಣ ಪತ್ಯೇಯಾಗಿದ್ದು, ಈ ಕುರಿತು ಪರಮೇಶ್ವರ್​ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಅಕ್ರಮ ಹಣ ಮಾಡಿಲ್ಲ, ಐಟಿ ದಾಳಿ ರಾಜಕೀಯ ಅಲ್ಲ. 100 ಕೋಟಿ ರೂ. ಅವ್ಯವಹಾರ ನಡೆದಿದ್ದರೆ ನನ್ನ ಸಹೋದರನ ಮಗ ಆನಂದ್​ ಉತ್ತರ ಕೊಡುತ್ತಾರೆ. ಮಂಗಳವಾರ ವಿಚಾರಣೆಗೆ ಹೋಗುತ್ತೇನೆ ಎಂದು ಪರಮೇಶ್ವರ್ ಹೇಳಿದ್ದಾರೆ.

Also read: ಬಿಗ್ ಬ್ರೇಕಿಂಗ್; ಬಿಎಲ್’ ಕಾರ್ಡ್ ದಾರರಿಗೆ ಬರೆ ಎಳೆದ ಸರ್ಕಾರ, ಇನ್ಮುಂದೆ ಆಯುಷ್ಮಾನ್ ಭಾರತ್ ಆರೋಗ್ಯ ಯೋಜನೆಯಲ್ಲಿ ಉಚಿತ ಚಿಕಿತ್ಸೆ ಇಲ್ಲ.!

ಇದು ಪರಮೇಶ್ವರ್ ಅವರ ಹೇಳಿಕೆಯಾದರೆ ಇಲ್ಲೊಂದು ಹೊಸ ವಿಚಾರ ಕೇಳಿಬರುತ್ತಿದ್ದು, ಪರಮೇಶ್ವರ್ ಪಿಎ ಮನೆ ಮೇಲೂ ದಾಳಿ ನಡೆಸಿದ್ದಾರೆ. ಹೀಗಾಗಿ ನನಗೆ ವಿಚಾರಣೆ ಎದುರಿಸುವುದಕ್ಕೆ ಆಗುವುದಿಲ್ಲ. ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಪಿಎ ರಮೇಶ್ ಬೆದರಿಕೆ ಹಾಕಿದ್ದು ತನ್ನ ಆಪ್ತರಿಗೆ ಕರೆ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿ ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾರೆ. ಇಬ್ಬರು ಆಪ್ತರ ಬಳಿ ಮಾತನಾಡಿ, ನಾನು ಯೂನಿವರ್ಸಿಟಿ ಕ್ಯಾಂಪಸ್‍ನಲ್ಲಿದ್ದೀನಿ ಎಂದು ಹೇಳಿ ರಮೇಶ್ ನಾಪತ್ತೆ ಆಗಿದ್ದಾರೆ. ಈ ವೇಳೆ ಕೆಲವು ವಿಚಾರಗಳನ್ನು ತಿಳಿಸಿದ್ದು ನಾನು ಬಡವ. ಹೀಗಿದ್ದರೂ ಐಟಿ ಅಧಿಕಾರಿಗಳು ನನ್ನ ಮನೆ ಮೇಲೆ ಐಟಿ ದಾಳಿ ನಡೆಸಿದ್ದಾರೆ. ನನಗೆ ಐಟಿ ವಿಚಾರಣೆ ಎದುರಿಸುವುದಕ್ಕೆ ಆಗುವುದಿಲ್ಲ. ಐಟಿ ಅಧಿಕಾರಿಗಳು ಸಿಕ್ಕಾಪಟ್ಟೆ ಪ್ರಶ್ನೆಗಳನ್ನು ಕೇಳುತ್ತಾರೆ. ನನಗೆ ಅವರ ಪ್ರಶ್ನೆಗಳಿಗೆ ಉತ್ತರಿಸಲು ಆಗುವುದಿಲ್ಲ ಎಂದು ಹೇಳಿ ಮೊಬೈಲ್ ಸ್ವಿಚ್ ಆಫ್ ಮಾಡಿ ಎಸ್ಕೇಪ್ ಆಗಿದ್ದಾರೆ.

100 ಕೋಟಿ ಅಕ್ರಮ ಹಣ?

Also read: ಭಾರತಕ್ಕೆ ಆಗಮಿಸಿದ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್; ಮಹಾಬಲಿಪುರಂ ನಗರವನ್ನೇ ಚೀನಾದ ಅಧ್ಯಕ್ಷ ಆಯ್ಕೆ ಮಾಡಿಕೊಂಡಿದ್ದು ಯಾಕೆ?

ಐಟಿ ಅಧಿಕಾರಿಗಳು ಪರಮೇಶ್ವರ್ ಅವರ ಮನೆಯಲ್ಲಿ ಶೋಧಕಾರ್ಯ ನಡೆಸಿದ್ದು, ಸಿಕ್ಕ ಸಂಪತ್ತು ನೋಡಿ ಶಾಕ್ ಗೆ ಒಳಗಾಗಿದ್ದಾರೆ. ಪರಮೇಶ್ವರ್ ಬರೋಬ್ಬರಿ 103 ಕೋಟಿ ಆಸ್ತಿಯನ್ನು ಬಹಿರಂಗಪಡಿಸಿಲ್ಲ. 100 ಕೋಟಿ ದಾಖಲೆ ಪತ್ರಗಳಿಗೆ ಉತ್ತರ ನೀಡಿಲ್ಲ. ಕಾಲೇಜಿನಲ್ಲಿ ದುಡಿದ ಹಣ ಪಂಚತಾರಾ ಹೋಟೆಲ್ ಮೇಲೆ ಹಾಗೂ ಕಾಲೇಜಿನ ಸಿಬ್ಬಂದಿಗೆ ಗೊತ್ತಾಗದ ರೀತಿಯಲ್ಲಿ ಅವರ ಹೆಸರಲ್ಲಿ 4.6 ಕೋಟಿ ಹೂಡಿಕೆ ಮಾಡಿದ್ದಾರೆ. ಸದಾಶಿವನಗರದ ನಿವಾಸದಲ್ಲಿ 89 ಲಕ್ಷ ರೂ., ನೆಲಮಂಗಲದ ಮನೆಯಲ್ಲಿ 1.8 ಕೋಟಿ ರೂ. ಹೀಗೆ ಪರಮೇಶ್ವರ್ ಗೆ ಸಂಬಂಧಿಸಿದ್ದ ಒಟ್ಟು 4.5 ಕೋಟಿ ರೂ. ನಗದು ದೊರಕಿದೆ. ಸಿದ್ದಾರ್ಥ ಶಿಕ್ಷಣ ಸಂಸ್ಥೆಯಿಂದ ಕೋಟಿ ಕೋಟಿ ತೆರಿಗೆ ವಂಚನೆ ಮಾಡಲಾಗಿದೆ. 2002ರಿಂದಲೂ ಎಂಜಿನಿಯರಿಂಗ್ ಕಾಲೇಜು ಆಡಳಿತ ಮಂಡಳಿ ತೆರಿಗೆ ಕಟ್ಟಿಲ್ಲ. ಈ ಮೂಲಕ ಶಿಕ್ಷಣ ಸಂಸ್ಥೆ ಪಾಲಿಕೆಗೆ ಸುಮಾರು 2 ಕೋಟಿ ತೆರಿಗೆ ಬಾಕಿ ಉಳಿಸಿಕೊಂಡಿದೆ. ಪರಮೇಶ್ವರ್ ಅಣ್ಣನ ಮಗ ಆನಂದ್ ಸಿದ್ದಾರ್ಥ್ ಬಳಿ ಡೈರಿ ಪತ್ತೆಯಾಗಿದ್ದು, ಡೈರಿಯಲ್ಲಿ ಮೆಡಿಕಲ್ ಸೀಟು ಹಂಚಿಕೆ ಬಗ್ಗೆ ಉಲ್ಲೇಖ ಮಾಡಿರುವುದನ್ನು ಮಾಡಿದನ್ನು ಆದಾಯ ತೆರಿಗೆ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ.

100 ಕೋಟಿಗೆ ಅಣ್ಣನ ಮಗ ಉತ್ತರ ಕೊಡುತ್ತಾರೆ

Also read: ಮುಸ್ಲಿಂ ಮಹಿಳೆಯರಿಂದ ನರೇಂದ್ರ ಮೋದಿ ಅವರ ದೇವಾಲಯ ನಿರ್ಮಾಣ; ಕಾಂಗ್ರೆಸ್ ಗೆ ಸಪೋರ್ಟ್ ಮಾಡೋ ಮುಸ್ಲಿಂ ಮಹಿಳೆಯರು ಮೋದಿ ಬೆಂಬಲ ನಿಂತ ಕಾರಣ??

ಐಟಿ ಅಧಿಕಾರಿಗಳು ನನ್ನನ್ನ ಪ್ರಶ್ನೆ ಮಾಡಿದರು. ಅವರು ಕೇಳಿದ್ದಕ್ಕೆಲ್ಲಾ ಸಮರ್ಪಕ ಉತ್ತರ ಕೊಟ್ಟಿದ್ದೇನೆ. ಮುಖ್ಯವಾಗಿ ಸಿದ್ಧಾರ್ಥ ಮೆಡಿಕಲ್​ ಕಾಲೇಜು ಬಗ್ಗೆ ಪ್ರಶ್ನೆ ಮಾಡಿದರು. ನೀಟ್​ ಅಲಾಟ್​ಮೆಂಟ್​ನಲ್ಲಿ ಸೀಟು ಹಂಚಿಕೆ ಬಗ್ಗೆ ಕೇಳಿದರು. 30 ವರ್ಷದಿಂದ ಸಂಸ್ಥೆಯಲ್ಲಿ ಇದ್ದೆ. ಆದರೆ ಅಣ್ಣ ನೋಡಿಕೊಳ್ಳುತ್ತಿದ್ದರು. 6ರಿಂದ 7 ತಿಂಗಳಿನಿಂದ ನನ್ನ ಅಣ್ಣನ ಮಗ ನೋಡಿಕೊಳ್ತಿದ್ದಾನೆ. ಅಣ್ಣನ ಮಗ, ಪ್ರಾಂಶುಪಾಲರು ಎಲ್ಲವನ್ನೂ ನೋಡಿಕೊಳ್ತಿದ್ದಾರೆ.