ಭಾರತದ ರಿಯಲ್ ಹೀರೋ ಅಭಿನಂದನ್ ತಾಯ್ನಾಡಿಗೆ; ಮುಂದಿನ ಕ್ರಮವೇನು? ಯಾವ ರೀತಿಯ ಪರೀಕ್ಷೆ ನಡೆಯಲಿದೆ ಗೊತ್ತಾ?

0
528

ಎರಡು ದಿನಗಳಿಂದ ಪಾಕಿಸ್ತಾನ ವಶದಲ್ಲಿದ್ದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಸುರಕ್ಷಿತವಾಗಿ ಭಾರತಕ್ಕೆ ಹಸ್ತಾಂತರ ಮಾಡಲಾಗಿದೆ. ಇವರನ್ನು ವಾಘಾ ಗಡಿಯಲ್ಲಿ ಭಾರತದ ಅಧಿಕಾರಿಗಳಿಗೆ ಹಸ್ತಾಂತರಿಸಿದೆ. ಲಾಹೋರ್ ನಿಂದ ಅಟಾರಿ ವಾಘಾ ಗಡಿಗೆ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಪಾಕ್ ಅಧಿಕಾರಿಗಳ ಜೊತೆ ಭಾರತೀಯ ವಾಯುಸೇನೆ ಸಲಹೆಗಾರ ಜಿಟಿ ಕುರಿಯನ್ ಕರೆತಂದಿದ್ದು, ಭಾರತೀಯ ಸೇನಾ ವರಿಷ್ಠರಿಗೆ, ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ. ಈ ಸಂದರ್ಭದಲ್ಲಿ ಅಭಿನಂದನ್ ಪೋಷಕರು ಕೂಡಾ ಹಾಜರಿದ್ದರು.

ಅಭಿನಂದನ್ -ಗೆ ಝಡ್ ಪ್ಲಸ್ ಸೆಕ್ಯೂರಿಟಿ?

ಅಭಿನಂದನ್ ಭಾರತಕ್ಕೆ ಬಂದಾಗ ಭದ್ರತೆಯ ದೃಷ್ಟಿಯ ಹಿನ್ನೆಲೆಯಲ್ಲಿ ವಾಯಸೇನೆ, ನೌಕಾಸೇನೆ ಹಾಗೂ ಭೂಸೇನಾ ಮುಖ್ಯಸ್ಥರಿಗೆ ಝಡ್ ಪ್ಲಸ್ ಭದ್ರತೆಯನ್ನು ನೀಡಲಾಗಿದೆ. ಭದ್ರತೆಯ ನೆಲೆಯಲ್ಲಿ ವಾಘಾ ಗಡಿಯಲ್ಲಿ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ. ಈ ಸಂದರ್ಭದಲ್ಲಿ ಜಮಾಯಿಸಿದ್ದ ಸಾರ್ವಜನಿಕರನ್ನು ಸೇನೆ ತೆರವುಗೊಳಿಸಿದೆ ಎಂದು ವರದಿ ತಿಳಿಸಿದೆ. ಅಭಿನಂದನ್ ಹಸ್ತಾಂತರ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ಇಲ್ಲ ಎಂದು ಸೇನೆ ಘೋಷಿಸಿದೆ. ಈಗಾಗಲೇ ಲಕ್ಷಾಂತರ ಜನರು ನೆರೆದಿದ್ದಾರೆ ಅಭಿನಂದನ್ ದೇಶದ ರಿಯಲ್ ಹೀರೋ ಸ್ವಾಗತಕ್ಕಾಗಿ, ದರ್ಶನಕ್ಕಾಗಿ ಸರದಿಯಲ್ಲಿ ನಿತ್ತಿದ್ದಾರೆ, ಇಡಿ ದೇಶವೇ ಕಾತುರದಲ್ಲಿದೆ. ಹಾಗಾದ್ರೆ ಅಭಿನಂದನ್ ಅವರಿಗೆ ಯಾವರೀತಿಯ ಪರೀಕ್ಷೆ ನಡೆಯಲಿದೆ ಎನ್ನುವುದು ಎಲ್ಲರಿಗೂ ಕಾತುರವಾಗಿದೆ.

ಅಭಿನಂದನ್ ಅವರಿಗೆ ಏನೇನೆಲ್ಲ ಪರೀಕ್ಷೆ ನಡೆಯುತ್ತೆ?

ಅಭಿನಂದನ್ ಅವರು ಪಾಕಿಸ್ತಾನದ ಅತ್ಯಾಧುನಿಕ ಎಫ್-16 ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದಲ್ಲದೆ, ಪಾಕಿಸ್ತಾನಿ ಸೈನಿಕರಿಗೆ ಸಿಕ್ಕಿಬಿದ್ದಿದ್ದರೂ, ವಿಚಾರಣೆಯ ಸಮಯದಲ್ಲಿ ಅತ್ಯಂತ ಜಾಗರೂಕತೆಯಿಂದ, ಜಾಣ್ಮೆಯಿಂದ ಮತ್ತು ಧೈರ್ಯದಿಂದ ಉತ್ತರಿಸಿದ್ದ ಅವರು ಎಲ್ಲ ಪ್ರಶಂಸೆಗೆ ಪಾತ್ರರಾಗಿದ್ದರು. ಜಿನೀವಾ ಒಪ್ಪಂದದ ಪ್ರಕಾರ ಪಾಕಿಸ್ತಾನ ಅವರನ್ನು ಬಿಡಗಡೆ ಮಾಡಲಾಗಿದೆ.

1. ಅಭಿನಂದನ್ ಅವರು ಭಾರತೀಯರ ‘ಹೀರೋ’ನೇ ಆಗಿದ್ದರೂ, ಕೆಲವೊಂದು ಫಾರ್ಮ್ಯಾಲಿಟಿಯನ್ನು ಪಾಲಿಸಲೇಬೇಕಾಗಿದೆ, ಯಾವುದೇ ಅನುಮಾನಗಳಿಗೆ ಆಸ್ಪದ ನೀಡದಂತೆ ಅವರನ್ನು ಹಲವಾರು ಪರೀಕ್ಷೆಗೆ ಗುರಿಪಡಿಸಲೇಬೇಕಾಗುತ್ತದೆ. ಆದರೆ ಆ ಪರೀಕ್ಷಾಗಳಾವುವು ಎಂಬುದನ್ನು ಸೇನಾ ಅಧಿಕಾರಿಗಳು ನಿರ್ಧರಿಸಲಿದ್ದಾರೆ.

2. ಅಭಿನಂದನ್ ಅವರು ಪಾಕಿಸ್ತಾನದಿಂದ ಭಾರತದ ಗಡಿಯೊಳಗೆ ಬರುತ್ತಿದ್ದಂತೆ, ಅವರನ್ನು ಕೂಡಲೆ ನೇರವಾಗಿ ಇಂಡಿಯನ್ ಏರ್ಫೋರ್ಸ್ ಇಂಟೆಲಿಜೆನ್ಸ್ ಯುನಿಟ್ ಗೆ ಕರೆದುಕೊಂಡು ಹೋಗಲಾಗುತ್ತದೆ.

3. ನಂತರ ಅವರ ದೈಹಿಕ ಮತ್ತು ಮಾನಸಿಕ ಸ್ಥಿತಿಗತಿಯನ್ನು ತಿಳಿಯಲು ಹಲವಾರು ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗುತ್ತದೆ.

4. ವಿರೋಧಿ ಸೇನೆ ಅವರ ದೇಹದಲ್ಲಿ ಯಾವುದಾದರೂ ಸಾಧನಗಳನ್ನು ಅಳವಡಿಸಿದೆಯೇ ಎಂದು ತಿಳಿಯಲು ಅವರ ದೇಹವನ್ನು ಸ್ಕ್ಯಾನ್ ಮಾಡಲಾಗುತ್ತದೆ.

5. ಅವರನ್ನು ಮಾನಸಿಕ ಪರೀಕ್ಷೆಗೂ ಒಳಪಡಿಸಲಾಗುತ್ತದೆ.

6 . ಅವರನ್ನು ವೈರಿಗಳು ಬಂಧಿಸಿದ್ದರಿಂದ ಅವರ ಮೇಲೆ ದೈಹಿಕ ಹಲ್ಲೆಗಳಾಗಿವೆಯಾ, ಮಾನಸಿಕ ಕಿರುಕುಳ ನೀಡಲಾಗಿದೆಯಾ, ಅವರು ಮತ್ತೇನಾದರೂ ರಹಸ್ಯ ಮಾಹಿತಿಯನ್ನು ಬಯಲುಗೊಳಿಸಿದ್ದಾರಾ ಎಂಬುದನ್ನು ಅರಿಯಲಾಗುತ್ತದೆ.

7. ನಂತರ ಅವರನ್ನು ಬೇಹುಗಾರಿಕೆ ಇಲಾಖೆ ಮತ್ತು ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್ (ರಾ) ಕೂಡ ತೀವ್ರವಾಗಿ ಪ್ರಶ್ನಿಸಲಿದೆ.

8. ಇಲ್ಲಿ ಎಲ್ಲ ರೀತಿಯ ಎಚ್ಚರಿಕೆಯ ಕ್ರಮಗಳನ್ನು ಜರುಗಿಸಲಾಗುತ್ತದೆ. ಡಿಬ್ರೀಫಿಂಗ್ ಪಾಲಿಸಲೇಬೇಕಾದ ಪ್ರಕ್ರಿಯೆಯಾಗಿದ್ದು,

9. ಬಂಧಿತ ವ್ಯಕ್ತಿಯಿಂದ ವೈರಿ ಸೈನಿಕರು ಏನಾದರೂ ಮಹತ್ತರ ಮಾಹಿತಿಯನ್ನು ಸಂಗ್ರಹಿಸಿದ್ದಾರಾ ಅಥವಾ ಅವರನ್ನೇ ತಮ್ಮ ಸೇನೆಯಲ್ಲಿ ಸೇರಿಸಿಕೊಂಡು, ಬೇಹುಗಾರನಾಗಿ ಬಿಡಲಾಗಿದೆಯಾ ಎಂಬಿತ್ಯಾದಿ ವಿಷಗಳನ್ನು ತಿಳಿಯಲಾಗುತ್ತದೆ.

10. ಈ ಪ್ರಕರಣದಲ್ಲಿ ಅಭಿನಂದನ್ ಅವರನ್ನು ನೇರವಾಗಿ ಮತ್ತೆ ವಿಂಗ್ ಕಮಾಂಡರ್ ಆಗಿ ಕೆಲಸಕ್ಕೆ ನಿಯೋಜಿಸದೆ, ಅವರು ಕೆಲ ಸಮಯ ಡೆಸ್ಕ್ ಕೆಲಸ ಮಾಡಬೇಕಾದ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ.

Also read: ಅಭಿನಂದನ್ ಬರಮಾಡಿಕೊಳ್ಳಲು ದೆಹಲಿಗೆ ತಲುಪಿದ ತಂದೆ ತಾಯಿಗೆ ಸಿಕ್ಕ ಗೌರವ; ಪ್ರತಿಯೊಂದು ಪಾಲಕರು ತಮ್ಮ ಮಕ್ಕಳನ್ನು ಬೆಳೆಸಲು ಮಾದರಿಯಾಗಿದೆ..