ಭಾರತದ ಸಿಂಹ ಘರ್ಜನೆಗೆ ನಡುಗಿದ ಪಾಕ್; ಕಮಾಂಡರ್​ ಅಭಿನಂದನ್​ ವರ್ಥಮಾನ್​ ಅವರನ್ನು ನಾಳೆ ಬಿಡುಗಡೆ ಮಾಡಲಿದೆ..

0
545

ಪಾಕ್ ವಶದಲ್ಲಿರುವ ಭಾರತೀಯ ವಾಯುಪಡೆಯ ವಿಂಗ್​ ಕಮಾಂಡರ್​ ಅಭಿನಂದನ್​ ವರ್ಥಮಾನ್​’ ಅವರನ್ನು ಶಾಂತಿಯ ಸಂಕೇತವಾಗಿ ನಾಳೆ ಬಿಡುಗಡೆ’ ಮಾಡಲಾಗುತ್ತಿದೆ ಎಂದು ಪಾಕ್​ ಪ್ರಧಾನಿ ಇಮ್ರಾನ್​ ಖಾನ್ ಇಂದು ಜಂಟಿ ಸಂಸತ್​ ಅಧಿವೇಶನದಲ್ಲಿ ತಿಳಿಸಿ. ಎರಡು ದೇಶಗಳ ನಡುವೆ ಶಾಂತಿ ಸಂಕೇತವಾಗಿ ಅಭಿನಂದನ್​ ಅವರನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದು ಹೇಳಿರುವ ಅವರು, ಪರಿಸ್ಥಿತಿ ಕೈ ಮೀರದಂತೆ ಎರಡು ದೇಶಗಳು ನೋಡಿಕೊಳ್ಳಬೇಕಿದೆ ಎಂದು ಇಮ್ರಾನ್​ ಖಾನ್​ ಹೇಳಿದ್ದಾರೆ, ಇದೊಂದು ವಿಚಾರವಾದರೆ ಈಗಾಗಲೇ ಸಾಕಷ್ಟು ಬುದ್ಧಿಕಲಿಸಿದ ಭಾರತದ ಶಕ್ತಿಯನ್ನು ಕಂಡು ನಡುಗಿದ ಪಾಕ್ ಭಾರತದ ಯೋದ್ದನನ್ನು ಬಿಡುಗಡೆ ಮಾಡುತ್ತಿದೆ.

Also read: ಭಾರತ -ಪಾಕ್ ಸೈನೆ ಎಷ್ಟು ಬಲಿಷ್ಠವಾಗಿವೆ ಗೊತ್ತ? ಭಾರತ ಹೊಂದಿರುವ ಯುದ್ದದ ಬತ್ತಳಿಕೆಯ ಮುಂದೆ ಪಾಕ್ ಕೂದಲ ಸಮವಂತೆ..

ಅಭಿನಂದನ್ ಬಂದಿಸಿದ್ದು ಹೇಗೆ?

ಪುಲ್ವಾಮಾ ಉಗ್ರ ದಾಳಿಗೆ ಪ್ರತೀಕಾರವಾಗಿ ಭಾರತೀಯ ವಾಯುಸೇನೆಯ ಯುದ್ಧ ವಿಮಾನಗಳು ಫೆಬ್ರವರಿ 26ರಂದು ಪಾಕಿಸ್ತಾನಕ್ಕೆ ನುಗ್ಗಿ ಉಗ್ರರ ಕ್ಯಾಂಪ್ ಗಳನ್ನು ಧ್ವಂಸ ಮಾಡಿ ಯಶಸ್ವಿಯಾಗಿ ಹಿಂದಿರುಗಿದ್ದವು. ಇದಕ್ಕೆ ಪ್ರತಿಯಾಗಿ ಫೆಬ್ರವರಿ 27ರಂದು ಬೆಳಗ್ಗೆ ಪಾಕಿಸ್ತಾನದ ಮೂರು ಎಫ್-16 ಯುದ್ಧ ವಿಮಾನಗಳು ವಾಯುಸೀಮೆಯನ್ನು ದಾಟಿ ಭಾರತದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಮುಂದಾಗಿತ್ತು. ಭಾರತೀಯ ಯುದ್ಧ ವಿಮಾನಗಳು ಕಂಡ ತಕ್ಷಣ ಎಫ್-16 ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಹಿಂದಕ್ಕೆ ಪಲಾಯನ ಮಾಡುವ ವೇಳೆ ಮಿಗ್-21 ಹಾಗೂ ಸುಖೋಯ್ ವಿಮಾನ ಹಿಂದೆ ನುಗ್ಗಿ ಒಂದು ಎಫ್-16 ವಿಮಾನವನ್ನು ಹೊಡೆದುರುಳಿಸಿತ್ತು.

Also read: ಭಾರತಕ್ಕೆ ಯುದ್ಧದ ಕಾರ್ಮೋಡದ ಕವಿದ ಪರಿಸ್ಥಿತಿ ಬಂದಿದೆ, ನಾಗರೀಕರು ಬಾರ್ಡರ್-ನಲ್ಲಿ ಸೇವೆ ಸಲ್ಲಿಸಲಾಗದಿದ್ರು ನಾವು ಹೇಳಿರುವಂತೆ ಮಾಡಿ ನಿಮ್ಮ ಕರ್ತವ್ಯ ಸಲ್ಲಿಸಿ!!!

ಈ ವೇಳೆ ಮಿಗ್-21 ಹಾರಿಸುತ್ತಿದ್ದ ಅಭಿನಂದನ್ ವರ್ತಮಾನ್ ಅವರು ಎಫ್-16 ಅನ್ನು ಅಡ್ಡಗಟ್ಟಿ ಹೊಡೆದುರುಳಿಸಬೇಕು ಅನ್ನುವ ಯೋಚನೆಯಿಂದ ಅಭಿನಂದನ್ ತಮ್ಮ ವಿಮಾನವನ್ನು ಎಫ್-21 ಬೆನ್ನಟ್ಟಿ ಹೋಗುತ್ತಿದ್ದರು. ಈ ವೇಳೆ ಸುಖೋಯ್ ಯುದ್ಧ ವಿಮಾನ ಒಂದು ಎಫ್-16 ಅನ್ನು ಹೊಡೆದುರುಳಿಸಿತು. ಅಷ್ಟರಲ್ಲಿ ಅಭಿನಂದನ್ ಹಾರಿಸುತ್ತಿದ್ದ ಮಿಗ್-21 ಅನ್ನು ಭಾರತ ಗಡಿದಾಟಿ ಪಾಕ್ ಆಕ್ರಮಿತ ಕಾಶ್ಮೀರದೊಳಗೆ ನುಗ್ಗಿತ್ತು. ಈ ವೇಳೆ ಪಾಕಿಸ್ತಾನ ಕಡೆಯಿಂದ ಕ್ಷಿಪಣಿಯೊಂದು ಬಂದು ಮಿಗ್-21 ಗೆ ಬಡಿಯಿತು. ಈ ವೇಳೆ ಅಭಿನಂದನ್ ವಿಮಾನದಿಂದ ಜಿಗಿದಿದ್ದರು, ಆಗ ಅವರನ್ನು ಬಂಧಿಸಲಾಗಿತ್ತು.

ನಂತರ ಭಾರತೀಯ ಯೋದ್ಧನನ್ನು ಪಾಕ್ ಸ್ಥಳಿಯರು ಮತ್ತು ಸೈನಿಕರು ಚಿತ್ರಹಿಂಸೆ ಕೊಟ್ಟು ಹಲ್ಯೇ ನಡೆಸಿದರು ಅಷ್ಟೇಅಲ್ಲದೆ ಅಭಿನಂದನ್ ಮೇಲೆ ಹಲ್ಯೇ ಮಾಡುವುದ್ದನ್ನು ವಿಡಿಯೋ ಮಾಡಿ ಜಾಲತಾಣಗಳಲ್ಲಿ ಹರಿಬಿಟ್ಟಿದರು. ಮತ್ತು ಸತತವಾಗಿ 24 ಘಂಟೆಯಿಂದ ಚಿತ್ರ ಹಿಂಸೆ ನೀಡಿ ಮಾಹಿತಿಯನ್ನು ಕಲೆ ಹಾಳಲು ಪ್ರಯತ್ನಿಸಿದರು ದೇಶದ ಹೆಮ್ಮೆಯ ಪುತ್ರ ಯಾವುದೇ ಮಾಹಿತಿಯನ್ನು ಪಾಪಿಗಳಿಗೆ ನೀಡಿಲ ಎಂದು ಪಾಕ್ ಮಾದ್ಯಮಯೊಂದು ವರದಿ ಮಾಡಿದೆ ಇದರಿಂದ ದೇಶದಲ್ಲಿ ಮತ್ತಷ್ಟು ಬೆಂಕಿಹತ್ತಿ ಉರಿಯಲು ಕಾರಣವಾಯಿತು. ಅಭಿನಂದನ್ ಅವರು ಸುರಕ್ಷಿತವಾಗಿ ಭಾರತಕ್ಕೆ ಬರಲಿ ಎಂದು ಎಲ್ಲೆಡೆ ಮಾತುಗಳು ಕೇಳಿಬರುತ್ತಿದ್ದವು.

Also read: ಹೇಡಿ ಪಾಕ್ ಬಂಧಿಸಿರುವ ಅಭಿನಂದನ್ ಅವರನ್ನು ಭಾರತಕ್ಕೆ ಕಳುಹಿಸಿ ಎಂಬ ಕೂಗು ಪಾಕ್-ನಲ್ಲೆ ವ್ಯಾಪಕವಾಗಿ ಕೇಳಿ ಬರುತ್ತಿದೆ..

ಏಕೆಂದರೆ ಜಿನೀವಾ ಒಪ್ಪಂದದಂತೆ ಯುದ್ಧ ಕೈದಿಗಳನ್ನು ಮಾನವೀಯವಾಗಿ ನಡೆಸಿಕೊಳ್ಳಬೇಕು. ಗಾಯಗೊಂಡ, ಅನಾರೋಗ್ಯಕ್ಕೆ ತುತ್ತಾದ ಯುದ್ಧ ಕೈದಿಗಳಿಗೆ ಚಿಕಿತ್ಸೆ ನೀಡಬೇಕು. ಜಿನೀವಾ ಒಪ್ಪಂದ ಆರ್ಟಿಕಲ್ 3 ಅಘೋಷಿತ ಯುದ್ಧಕ್ಕೆ ಸಂಬಂಧಿಸಿದ್ದಾಗಿದೆ. ಯುದ್ಧ ಕೈದಿಯ ಕೊಲೆ, ಹಲ್ಲೆ, ಶಿರಚ್ಛೇದ, ಒತ್ತೆಯಂತಹ ಕೃತ್ಯಗಳನ್ನು ಮಾಡಬಾರದು. ಕಾನೂನು ಪ್ರಕ್ರಿಯೆಗಳನ್ನು ಮಾಡದೇ, ಆರೋಪ ಸಾಬೀತಾಗದೇ ಶಿಕ್ಷೆ ನೀಡಬಾರದು. ಆರೋಪ ಸಾಬೀತಾಗದೇ ಇದ್ದಲ್ಲಿ ಯುದ್ಧ ಕೈದಿಯನ್ನು ಅವರ ದೇಶಕ್ಕೆ ಒಪ್ಪಿಸಬೇಕು ಎಂಬ ನಿಯಮ ವಿದ್ದರು ಅದನ್ನು ಮೀರಿ ಈ ಪಾಕ್ ಪಾಪಿಗಳು ಹಿಂಸೆಯನ್ನು ನೀಡಿದರು. ಭಾರತ ಇದಕ್ಕೆ ಸರಿಯಾದ ಪಾಠ ಕಲಿಸುತ್ತೆ ಅಂತ ಹೆದರಿದ ಪಾಕ್ ನಮ್ಮ ದೇಶದ ಹುಲಿಯನ್ನು ನಾಳೆ ಭಾರತಕ್ಕೆ ಬಿಡುಗಡೆ ಮಾಡಿ ಕಳುಹಿಸುವುದಾಗಿ ಒಪ್ಪಿಕೊಂಡಿದ್ದಾರೆ.