ಕಾರ್ಮಿಕರ ಹಿತ ಕಾಯಲು ಭ್ರಷ್ಟಾಚಾರಕ್ಕೆ ಅಡ್ಡಿಯಾಗಿದ್ದ ದಕ್ಷ ಅಧಿಕಾರಿ ರೋಹಿಣಿ ಸಿಂಧೂರಿಗೆ ಯಾವುದೇ ಸ್ಥಾನ ನೀಡದೇ ದಿಢೀರ್ ವರ್ಗಾವಣೆ.!

0
208

ರಾಜ್ಯದಲ್ಲಿ ದಕ್ಷ ಅಧಿಕಾರಿಗಳಿಗೆ ಉಳಿಗಾಲವೇ ಇಲ್ಲದಂತಾಗಿದೆ. ಅತೀಯಾದ ಒಳ್ಳೆತನ ಅಧಿಕಾರಿಗಳಿಗೆ ಒಳಿತನ್ನು ಮಾಡುತ್ತಿಲ್ಲ, ಅಕ್ರಮವಾಗಿ ನಡೆಯುವ ಕೆಲಸಗಳಿಗೆ ಪ್ರೋಸ್ತಾಹ ನೀಡಿದರೆ ಮಾತ್ರ ಅಧಿಕಾರಿಗಳು ಹೇಳಿದ ಸ್ಥಳದಲ್ಲಿ ಇರುತ್ತಾರೆ ಇಲ್ಲದಿದ್ದರೆ ತಿಂಗಳಿಗೆ ಒಂದು ಬಾರಿ ವರ್ಗಾವಣೆಯಾಗುತ್ತಾರೆ. ಸದ್ಯ ಇಂತಹ ಪರಿಸ್ಥಿತಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಬಂದಿದ್ದು ಇವರ ನಿಷ್ಠುರ ನ್ಯಾಯದ ಕೆಲಸ ಸರ್ಕಾರಕ್ಕೆ ಹಿಡಿಸುತ್ತಿಲ್ಲ ಅನಿಸುತ್ತೆ. ಅದಕ್ಕಾಗಿ ಮತ್ತೆ ಅವರಿಗೆ ಯಾವುದೇ ಹುದ್ದೆ ತೋರಿಸದೆ, ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿ ಕಾರ್ಯದರ್ಶಿ ಸ್ಥಾನದಿಂದ ಎತ್ತಂಗಡಿ ಮಾಡಲಾಗಿದೆ.

ಮತ್ತೆ ರೊಹಿಣಿ ಸಿಂಧೂರಿ ವರ್ಗಾವಣೆ?

ಹೌದು ಕಟ್ಟಡ ಕಾರ್ಮಿಕ ಕಲ್ಯಾಣ ನಿಧಿಯ ದುರ್ಬಳಕೆಗೆ ಒಪ್ಪದ ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ವರ್ಗಾವಣೆ ಮಾಡಿದ್ದು ರಾಜ್ಯದಲ್ಲಿ ಭ್ರಷ್ಟಾಚಾರ ಹತ್ತಿಕ್ಕುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವಂತಹ ರಾಜ್ಯದ ಪ್ರಾಮಾಣಿಕ ದಕ್ಷ ಅಧಿಕಾರಿಗಳಿಗೆ ಸರ್ಕಾರದ ಪ್ರೋತ್ಸಾಹ ಅಗತ್ಯ. ಆದ್ರೆ ಇಲ್ಲಿ ಕಾರ್ಮಿಕರ ಹಿತ ಕಾಯಲು ಹೋಗಿದ್ದ ಪ್ರಮಾಣಿಕ ದಕ್ಷ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಸಿಕ್ಕಿದ್ದು ವರ್ಗಾವಣೆ ಭಾಗ್ಯ ಈಗಾಗಲೇ ರೋಹಿಣಿ ಸಿಂಧೂರಿ ಜಾಗಕ್ಕೆ ಕೆ.ಜಿ. ಶಾಂತರಾಮ್ ಅವರನ್ನು ನಿಯೋಜಿಸಿದ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ವರ್ಗಾವಣೆ ಹಿಂದೆ ಕಾಂಟ್ರಾಕ್ಟರ್ಸ್ ಕೈವಾಡವಿದೆ ಎಂದು ಹೇಳಲಾಗುತ್ತಿದೆ.

ವರ್ಗಾವಣೆ ಕಾರಣವೇನು?

ಕಾರ್ಮಿಕರ ಕಲ್ಯಾಣ ನಿಧಿಯಲ್ಲಿರು ಸುಮಾರು 8000 ಕೋಟಿ ರು. ಹಣ ಡೈವರ್ಟ್ ಮಾಡಲು ಒಪ್ಪದಕ್ಕೆ ಮತ್ತು ಕಾರ್ಮಿಕರು ಮತ್ತು ಅವರ ಮಕ್ಕಳ ಕಲ್ಯಾಣ ಸೇವೆಗಾಗಿ ತಂತ್ರಜ್ಞಾನ ಆಧಾರಿತ ಸೇವೆಯನ್ನು (24/7 ಸಹಾಯವಾಣಿ) ಟೆಂಡರ್‌ ಕರೆಯದೆ ಕಿಯೋನಿಕ್ಸ್‌ಗೆ ನೀಡಬೇಕೆಂದು ಕಾರ್ಮಿಕ ಇಲಾಖೆ ಅಧಿಕಾರಿಯೊಬ್ಬರು ಒತ್ತಡ ಹಾಕಿದ್ದರು. ಆದರೆ, ನಿಯಮವನ್ನು ಮೀರಲು ಸಾಧ್ಯವೇ ಇಲ್ಲ ಎಂದು ರೋಹಿಣಿ ಸಿಂಧೂರಿ ಪಟ್ಟು ಹಿಡಿದಿದ್ದರು. ಹೀಗಾಗಿ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿ ಕಾರ್ಯದರ್ಶಿ ಹುದ್ದೆಯಿಂದ ಎತ್ತಂಗಡಿ ಮಾಲಾಗಿದೆ. ಈ ಕುರಿತು ಐಎಎಸ್‌ ಅಧಿಕಾರಿಗಳ ಸಂಘದ ಅಧ್ಯಕ್ಷ ಹಾಗೂ ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್‌ ಅವರಿಗೆ ರೋಹಿಣಿ ಸಿಂಧೂರಿ ದೂರು ಸಲ್ಲಿಸಿದ್ದಾರೆ.

ಈ ಹಿಂದೆ ಹಾಸನದ ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ವಿರುದ್ಧ ಜೆಡಿಎಸ್ ಪಕ್ಷಕ್ಕೆ ಪೂರಕವಾಗಿ ಕೆಲಸ ನಿರ್ವಹಿಸಿದ ಆರೋಪ ಇತ್ತು. ಹೀಗಾಗಿ ಅವರನ್ನು ಜಿಲ್ಲಾಧಿಕಾರಿ ಸ್ಥಾನದಿಂದ ಕಾರ್ಮಿಕ ಕಲ್ಯಾಣ ಇಲಾಖೆಯ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿ ಕಾರ್ಯದರ್ಶಿಯಾಗಿ ವರ್ಗಾವಣೆ ಮಾಡಲಾಗಿತ್ತು. ಇಲ್ಲಿವೂ ಭ್ರಷ್ಟಾಚಾರಕ್ಕೆ ಅಡ್ಡಿಯಾಗಿದ್ದ ರೋಹಿಣಿ ಸಿಂಧೂರಿಯನ್ನು ಎತ್ತಂಗಡಿಯೇನೋ ಮಾಡಿಲಾಗಿದೆ. ಆದ್ರೆ ಓರ್ವ ದಕ್ಷ, ಪ್ರಮಾಣಿಕ ಅಧಿಕಾರಿ ಎಂದೇ ಖ್ಯಾತಿ ಪಡೆದುಕೊಂಡಿರುವ ಇವರಿಗೆ ಯಾವುದೇ ಸ್ಥಾನ ನೀಡದೇ ದಿಢೀರ್ ವರ್ಗಾವಣೆ ಮಾಡಿರುವುದು ಸರ್ಕಾರದ ದುರುಪ್ರಯೋಗ ಎನ್ನುವ ಮಾತುಗಳು ಕೇಳಿಬರುತ್ತಿವೆ.

ವರ್ಗಾವಣೆಯ ವರದಿಯಲ್ಲಿ ಕಾರಣ ಏನಿದೇ?

ಬಡ ಕಾರ್ಮಿಕರು ಕಚೇರಿಗೆ ಬಂದು ತಮ್ಮ ಕೆಲಸ ಮಾಡಿಕೊಡುವಂತೆ ಗೋಗರೆದರೂ, ಈ ಕುರಿತು ಅಧಿಕಾರಿ ರೋಹಿಣಿ ಸಿಂಧೂರಿ ಗಮನಹರಿಸುತ್ತಿರಲಿಲ್ಲ. ಇದರಿಂದ ಬೇಸರಗೊಂಡ ಕಾರ್ಮಿಕರು ಸಿಎಂ ಯಡಿಯೂರಪ್ಪ ಹಾಗೂ ಪ್ರಧಾನಿ ನರೇಂದ್ರ ಮೋದಿ ಕಾರ್ಯಾಲಯಕ್ಕೆ ದೂರು ಸಲ್ಲಿಸಿದ್ದಾರೆ. ಪದೇ ಪದೇ ರೋಹಿಣಿ ಸಿಂಧೂರಿ ವಿರುದ್ಧ ಕಾರ್ಮಿಕರಿಂದ ದೂರು ದಾಖಲಾದ ಪರಿಣಾಮ ರಾಜ್ಯ ಸರ್ಕಾರ ರೋಹಿಣಿ ಅವರನ್ನು ಬೇರೊಂದು ಇಲಾಖೆಗೆ ವರ್ಗಾವಣೆ ಮಾಡಿರುವುದಾಗಿ ಮೂಲಗಳು ತಿಳಿಸಿವೆ.

Also read: ವಾಹನ ದಾಖಲಾತಿಯಲ್ಲಿ ಭಾರಿ ಬದಲಾವಣೆ; ಅಕ್ಟೋಬರ್​​ 1ರಿಂದಲೇ ದೇಶಾದ್ಯಂತ ಒಂದೇ ಮಾದರಿ ಡಿಎಲ್, ಆರ್.ಸಿ.