ಗ್ರಾಮೀಣ ಬ್ಯಾಂಕುಗಳಲ್ಲಿ 14192 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ..

0
2621

ಬ್ಯಾಂಕ್ ಸಿಬ್ಬಂದಿ ನೇಮಕಾತಿ ಸಂಸ್ಥೆ ಇನ್‌ಸ್ಟಿಟ್ಯೂಟ್‌ ಆಫ್ ಬ್ಯಾಂಕಿಂಗ್‌ ಪರ್ಸನಲ್‌ ಸೆಲೆಕ್ಷನ್‌ (ಐಬಿಪಿಎಸ್) ಗ್ರಾಮೀಣ ಬ್ಯಾಂಕುಗಳಲ್ಲಿ ಖಾಲಿ ಇರುವ 14192 ಹುದ್ದೆಗಳ ನೇಮಕಾತಿಗೆ ಸಾಮಾನ್ಯ ಪರೀಕ್ಷೆ ನಡೆಸುತ್ತಿದ್ದರಿಂದ ಅರ್ಜಿ ಆಹ್ವಾನಿಸಲಾಗಿದೆ.

ಗ್ರೂಪ್-ಎ, ಬಿ, ಕಚೇರಿ ಸಹಾಯಕ, ಸಹಾಯಕ ಅಧಿಕಾರಿ ಸೇರಿದಂತೆ ಹಲವು ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದ್ದು, ಆನ್ ಲೈನ್ ನಲ್ಲಿ ದಿನಾಂಕ 12-07-2017ರಿಂದ ಅರ್ಜಿ ಸಲ್ಲಿಸಬಹುದಾಗಿದೆ.

01-08-2017 ಅರ್ಜಿ ಸಲ್ಲಿಸಲು ಕೊನೆ ದಿನವಾಗಿದೆ.

ಹುದ್ದೆಗಳು: 14192

1. Office Assistant (Multipurpose): 7374 Posts

2. Officers Scale I: 4865 Posts

3. Officers Scale II (Agriculture Officer): 169 Posts

4. Officers Scale II (Marketing Officer): 33 Posts

5. Officers Scale II (Treasury Manager): 11 Posts

6. Officers Scale II (Law Officer): 21 Posts

7. Officers Scale II (Chartered Accountant): 34 Posts

8. Officers Scale II (Information Technology Officer): 83 Posts

9. Officers Scale II (General Banking Officer): 1395 Posts

10. Officers Scale III: 207 Posts

ವಯೋಮಿತಿ: ಸಾಮಾನ್ಯ ಅಭ್ಯರ್ಥೀಗಳಿಗೆ 18 ರಿಂದ 28 ವರ್ಷ, ಹಿಂದೂಳಿದ ವರ್ಗದವರಿಗೆ 3 ವರ್ಷ ಸಡಿಲಿಕೆ, ಎಸ್ಸಿ ಮತ್ತು ಎಸ್ಟಿ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ 5 ವರ್ಷ ಸಡಿಲಿಕೆ ಮಾಡಲಾಗಿದೆ.

ವಿದ್ಯಾರ್ಹತೆ: ತಿಳಿಸಲಾಗಿರುವ ಎಲ್ಲಾ ಹುದ್ದೆಗಳಿಗೆ ಅರ್ಜಿ ಸಲ್ಲಿಸವ ಅಭ್ಯರ್ಥಿಗಳು ಮಾನ್ಯತೆ ಪಡೆದಿರುವ ವಿಶ್ವವಿದ್ಯಾಲಯಗಳಲ್ಲಿ ಯಾವುದೇ ವಿಭಾಗದಲ್ಲಿ ಪದವಿ (ಡಿಗ್ರಿ) ಪಡೆದಿರಬೇಕು.

ಆಯ್ಕೆ ಮಾನದಂಡ: ಆಯ್ಕೆ ಸಮಿತಿಯಿಂದ ನಡೆಸಲ್ಪಡುವ ವೈಯಕ್ತಿಕ ಸಂದರ್ಶನ, ಆನ್ ಲೈನ್ ಪರೀಕ್ಷೆಯ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.

ಹೆಚ್ಚಿನ ವಿವರಗಳಿಗೆ : www.ibps.in