ಐಬಿಪಿಎಸ್ ನಲ್ಲಿ ಹಲವು ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ; ಅರ್ಜಿ ಸಲ್ಲಿಸುವುದು ಹೇಗೆ??

0
158

ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಸುವರ್ಣಾವಕಾಶ. ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನೆಲ್ ನಲ್ಲಿ ಹಲವು ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ ಹೊರಡಿಸಿ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ ಮೂಲಕ ಆಗಸ್ಟ್‌ 31, 2020ರ ಒಳಗೆ ಅರ್ಜಿ ಸಲ್ಲಿಸಬೇಕು.

ಹುದ್ದೆಗೆ ಸಂಬಂಧಪಟ್ಟ ಮಾಹಿತಿ:

ಹುದ್ದೆಯ ಹೆಸರು:

ಇನ್‌ಸ್ಟಿಟ್ಯೂಟ್‌ ಆಫ್‌ ಬ್ಯಾಂಕಿಂಗ್ ಪರ್ಸೊನೆಲ್ (ಐಬಿಪಿಎಸ್‌), ಡಿವಿಷನ್ ಹೆಡ್‌( ಫೈನಾನ್ಸಿಶಯಲ್ ಮತ್ತು ಅಲ್ಲೈಡ್ ಸರ್ವೀಸ್, ಟೆಕ್ನಿಕಲ್ ಸಪೋರ್ಟ್‌ ಸರ್ವೀಸ್‌), ಬ್ಯಾಂಕರ್ ಫ್ಯಾಕಲ್ಟಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.

ವಿದ್ಯಾರ್ಹತೆ ಏನಿರಬೇಕು :

ಡಿವಿಷನಲ್ ಹೆಡ್ (ಫೈನಾನ್ಸಿಯಲ್ ಅಂಡ್ ಅಲ್ಲೈಡ್ ಸರ್ವೀಸ್ ) ಅಂಡ್ ಸಿಎಫ್‌ಒ ಹುದ್ದೆಗಳಿಗೆ ಬಿ.ಕಾಂ / ಎಂ.ಕಾಂ ಅನ್ನು ಅಂಗೀಕೃತ ವಿವಿಗಳಿಂದ ಪಡೆದಿರಬೇಕು. ಹೆಚ್ಚುವರಿಯಾಗಿ ಸಿಎ / ಐಸಿಡಬ್ಲ್ಯೂಎ / ಸಿಎಸ್‌ / ಎಂಬಿಎ ಶೈಕ್ಷಣಿಕ ಅರ್ಹತೆ ಇರುವವರಿಗೆ ವಿಶೇಷ ಆಧ್ಯತೆ ನೀಡಲಾಗುತ್ತದೆ.

ಡಿವಿಷನ್ ಹೆಡ್ ಟೆಕ್ನಾಲಜಿ ಸಪೋರ್ಟ್‌ ಸರ್ವೀಸ್ ಹುದ್ದೆಗಳಿಗೆ ಬ್ಯಾಚುಲರ್ ಅಥವಾ ಮಾಸ್ಟರ್ ಡಿಗ್ರಿಯನ್ನು ತಾಂತ್ರಿಕ ಶಿಕ್ಷಣದಲ್ಲಿ ಪಡೆದಿರಬೇಕು. ಇಲೆಕ್ಟ್ರಾನಿಕ್ಸ್‌, ಇಲೆಕ್ಟ್ರಾನಿಕ್ಸ್‌ ಅಂಡ್ ಕಂಮ್ಯೂನಿಕೇಷನ್ / ಇಲೆಕ್ಟ್ರಾನಿಕ್ಸ್‌ ಅಂಡ್ ಇನ್‌ಸ್ಟ್ರುಮೆಂಟೇಷನ್ / ಕಂಪ್ಯೂಟರ್ ಸೈನ್ಸ್‌ ವಿಭಾಗಗಳಲ್ಲಿ ಪಡೆದಿರಬೇಕು.

ಬ್ಯಾಂಕರ್ ಫ್ಯಾಕಲ್ಟಿ ಹುದ್ದೆಗಳಿಗೆ ಗ್ರಾಜುಯೇಟ್ ಅಥವಾ ಪೋಸ್ಟ್‌ ಗ್ರಾಜುಯೇಟ್‌ ಅನ್ನು ಯಾವುದೇ ವಿಷಯಗಳಲ್ಲಿ ಪಾಸ್‌ ಮಾಡಿರಬೇಕು.

ಆಯ್ಕೆ ಪ್ರಕ್ರಿಯೆ :

ಈ ಹುದ್ದೆಗಳನ್ನು ಶಾರ್ಟ್‌ಲಿಸ್ಟ್‌ ಆದ ಅಭ್ಯರ್ಥಿಗಳಿಗೆ ಸಂದರ್ಶನವನ್ನು ನಡೆಸಿ ಆಯ್ಕೆ ಮಾಡಲಾಗುತ್ತದೆ. ಸೆಪ್ಟೆಂಬರ್‌ನಲ್ಲಿ ಈ ಪ್ರಕ್ರಿಯೆಗಳು ನಡೆಯುವ ಸಾಧ್ಯತೆ ಇದೆ.

ಅರ್ಜಿ ಸಲ್ಲಿಸುವ ವಿಧಾನ:

ಅಭ್ಯರ್ಥಿಗಳು ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನೆಲ್ ನ ಅಧಿಕೃತ ವೆಬ್‌ಸೈಟ್‌ https://www.ibps.in/ ಗೆ ಭೇಟಿ ನೀಡಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡಿ ಮತ್ತು ಆನ್‌ಲೈನ್ ಮೂಲಕವೇ ಅರ್ಜಿ ಶುಲ್ಕವನ್ನು ಪಾವತಿಸುವ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

ಮುಖ್ಯ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಆರಂಭ ದಿನಾಂಕ 12-08-2020
  • ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ 31-08-2020
  • ಅಪ್ಲಿಕೇಶನ್‌ ತಿದ್ದುಪಡಿಗೆ ಕೊನೆ ದಿನಾಂಕ 31-08-2020
  • ಅಪ್ಲಿಕೇಶನ್ ಪ್ರಿಂಟ್ ತೆಗೆದುಕೊಳ್ಳಲು ಕೊನೆ ದಿನಾಂಕ 31-08-2020

ಹೆಚ್ಚಿನ ಮಾಹಿತಿಗಾಗಿ: https://ibpsonline.ibps.in/ibpsfdtaug20/ ಕ್ಲಿಕ್ ಮಾಡಿ.