ಹೌದು ಇತ್ತೀಚಿನ ದಿನಗಳಲ್ಲಿ ನಮ್ಮ ರಾಜ್ಯ ಸರ್ಕಾರದ ನಡೆಗಳನ್ನು ನೋಡಿದರೆ ನಿಜವಾಗಿಯೂ ವಿಚಿತ್ರ ಅನ್ಸುತ್ತೆ. ಯಾಕೆ ಅಂದ್ರೆ ಯಾವುದೇ ಒಂದು ಕ್ರಿಪಟುಗಳು ಸಾದನೆಗಳನ್ನು ಮಾಡಿದಾಗ ಅವರಿಗೆ ಸನ್ಮಾನಿಸುವುದು ಅಥವಾ ಸರ್ಕಾರದಿಂದ ಬಹುಮಾನ ಮತ್ತು ಯಾವುದಾದರು ಒಂದು ಹುದ್ದೆಯನ್ನು ನೀಡುವುದು ಎಲ್ಲಾರಿಗೂ ಗೊತ್ತಿರುವ ವಿಚಾರಗಳು.

ಏಕದಿನ ವಿಶ್ವಕಪ್ ಫೈನಲ್ ಹೋಗಿ ಇತಿಹಾಸ ನಿರ್ಮಿಸಿದ ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿಯರಿಗೆ ಬಿಸಿಸಿಐ ತಲಾ 50 ಲಕ್ಷ ರೂಪಾಯಿ ಬಹುಮಾನ ಮೊತ್ತ ಘೋಷಿಸಿತ್ತು. ಮತ್ತು ಆಟಗಾರ್ತಿಯರನ್ನು ಪ್ರತನಿಧಿಸುವ ಕೆಲ ರಾಜ್ಯ ಸರ್ಕಾರಗಳೂ ಸಹ ಆಟಗಾರ್ತಿಯರಿಗೆ ಬಹುಮಾನ ಮೊತ್ತ ಮತ್ತು ಸರ್ಕಾರಿ ಹುದ್ದೆ ನೀಡುವುದಾಗಿ ಭರವಸೆ ನೀಡಿದ್ದವು.

ಹರ್ಮನ್’ಪ್ರೀತ್ ಕೌರ್ಗೆ ಪಂಜಾಬ್ ಸರ್ಕಾರ ಎಸ್ಪಿ ಹುದ್ದೆ ನೀಡುವುದಾಗಿ ಹೇಳಿದೆ ಮತ್ತು ಸುಷ್ಮಾ ವರ್ಮಾ ಹಿಮಾಚಲ ಪ್ರದೇಶ ಸರ್ಕಾರ ಸರ್ಕಾರಿ ಉದ್ಯೋಗದ ಭರವಸೆ ನೀಡಿದೆ. ಆದ್ರೆ ನಮ್ಮ ಕರ್ನಾಟಕದ ವೇದಾ ಕೃಷ್ಣಮೂರ್ತಿ ಮತ್ತು ರಾಜೇಶ್ವರಿ ಗಾಯಕ್ವಾಡ್ ಅವರಿಗೆ ಕರ್ನಾಟಕ ಸರ್ಕಾರ ಯಾವುದೇ ಬಹುಮಾನ ಮೊತ್ತವಾಗಲಿ, ಉದ್ಯೋಗದ ಭರವಸೆಯಾಗಲಿ ನೀಡಿಲ್ಲ.

ಕರ್ನಾಟಕದ ಕೀರ್ತಿ ಪತಾಕೆಯನ್ನು ವಿಶ್ವಮಟ್ಟದಲಿ ಬೆಳಗಿಸಿದ ಮಹಿಳೆಯರನ್ನ ಕರ್ನಾಟಕ ಸರ್ಕಾರ ಪರಿಗಣಿಸಿಲ್ಲ.
ಸರ್ಕಾರ ಮುಂದಿನ ಚುನಾವಣೆಗೆ ಸಿದ್ದತೆ ಮತ್ತು ಜಾತಿ ಧರ್ಮ ಇದೆ ವಿಚಾರಗಳಲ್ಲಿ ಮುಳುಗಿರುವ ಸರ್ಕಾರಕ್ಕೆ ಯಾವುದೇ ಸಾಧಕರ ಸಾದನೆಗಳು ಕಣ್ಣಿಗೆ ಕಾಣಿಸುವುದಿಲ್ಲ. ಇಂತಹ ಸರ್ಕಾರಗಳಿಗೆ ಮುಂದಿನ ದಿನಗಳಲ್ಲಿ ಮತದಾರ ಪ್ರಭುಗಳು ತಕ್ಕ ಉತ್ತರ ನೀಡಲಿದ್ದಾರೆ ಅನ್ನೋದು ಜನ ಸಾಮಾನ್ಯರ ಮಾತಾಗಿದೆ.