ಪಾಲಕರೇ ಬಾಯಿ ಚಪ್ಪರಿಸಿ ತಿನ್ನುವ ವೆರೈಟಿ ಐಸ್ ಕ್ರೀಂ-ಗಳನ್ನು ನಿಮ್ಮ ಮಕ್ಕಳಿಗೆ ಕೊಡಿಸುವ ಮುನ್ನ ಎಚ್ಚರ; ಯಾಕೇ ಅಂತ ಈ ಮಾಹಿತಿ ನೋಡಿ.!

0
411

ಐಸ್ ಕ್ರೀಂ ಎಂದರೆ ಮಕ್ಕಳಿಗೆ ಅಷ್ಟೇ ಅಲ್ಲ 90 ವರ್ಷದ ಅಜ್ಜ-ಅಜ್ಜಿಯರ ಬಾಯಲ್ಲಿ ನೀರು ಬರುತ್ತೆ, ಹಾಗಂತ ಗಾಡಿಯಲ್ಲಿ ಬರುವ ವೆರೈಟಿ ‘ಐಸ್ ಕ್ರೀಂ’ ಗಳನ್ನು ತಿಂದರೆ 90 ವೇಗದಲ್ಲಿ ಜೀವ ಕಳೆದುಕೊಳ್ಳುವುದು ಗ್ಯಾರಂಟಿ. ಏಕೆಂದರೆ ಐಸ್ ಕ್ರಿಂ ತಯಾರಿಸುವ ವಿಧಾನ ಮತ್ತು ಅದಕ್ಕೆ ಬಳಸುವ ನೀರು, ಅದಕ್ಕೆ ಬಳಸುವ ಕೆಲವು ಕೆಮಿಕಲ್ಸ್ ನೋಡಿದರೆ ಜೀವನದಲ್ಲಿ ‘ಐಸ್ ಕ್ರಿಂ’ ತಿನ್ನಲೇ ಬಾರದು ಮನೆಯಲ್ಲಿ ಮಕ್ಕಳಿಗೆ ಕೂಡಾ ಕೊಡಿಸಬಾರದು ಅನಿಸುತ್ತೆ. ಇಂತಹ ಸತ್ಯವನ್ನು ಪಬ್ಲಿಕ್ ಟಿವಿ ಬಹಿರಂಗ ಮಾಡಿದ್ದು. ಸಂಪೂರ್ಣ ವಿಷಯ ಕೇಳಿದರೆ ಶಾಕ್ ಆಗುವುದು ಗ್ಯಾರಂಟಿ.

ಏನಿದು ಐಸ್ ಕ್ರೀಂ ಮರಣ?

ಆಯೋ ಪ್ರತಿನಿತ್ಯವೂ ನಮ್ಮ ಮನೆಯಲ್ಲಿ ಎಷ್ಟೊಂದು ರುಚಿಯಾದ ಕಲರ್ ಫುಲ್ ಕ್ರೀಂ ವೆರೈಟಿ ಚೆರ್ರಿಗಳನ್ನು ಹಾಕಿರುವ ಐಸ್ ಕ್ರೀಂ ಗಳು ಅದಕ್ಕಾಗಿ ಸ್ವಲ್ಪ ದುಡ್ಡು ಇಟ್ಟೆ ಇರಬೇಕು ಏಕೆಂದರೆ ಇನ್ನೂ ಬೇಸಿಗೆ ಕೂಡ ಅದಕ್ಕಾಗಿ ಪ್ರತಿನಿತ್ಯ ಮಕ್ಕಳಿಗೆ ಒಂದು ‘ಐಸ್ ಕ್ರಿಂ’ ಕೊಡಿಸಿದರೆ ಎಷ್ಟೊಂದು ಕುಶಿಯಾಗುತ್ತೆ. ಎನ್ನುವುದು ಪ್ರತಿಯೊಬ್ಬರ ಇಚ್ಚೆಯಾಗಿದೆ. ಅದರಂತೆ ಬೆಂಗಳೂರು ಸಿಟಿಯಲ್ಲಿ ಐಸ್ ಕ್ರೀಂಪಾರ್ಲರಿಗೆ ಹೋಗಿ ತಿನ್ನುವ ಟ್ರೆಂಡ್ ನಷ್ಟೇ ಜೋರಾಗಿ ಗಾಡಿಯಲ್ಲಿ ಬರುವ ಐಸ್ ಕ್ರೀಂ ತಿನ್ನುವ ಟ್ರೆಂಡ್ ಸಹ ಪ್ರಾರಂಭವಾಗಿದೆ. ಇದು ಬರಿ ಬೆಂಗಳೂರಿನಲ್ಲಿ ಅಷ್ಟೇ ಅಲ್ಲದೆ ರಾಜ್ಯದ ಪ್ರತಿಯೊಂದು ಪುಟ್ಟ ಪುಟ್ಟ ಹಳ್ಳಿ ಗಳಲ್ಲಿ ‘ಐಸ್ ಕ್ರಿಂ’ ಗಳು ಬರುತ್ತೇವೆ.

@publictv.in

ಅದರಲ್ಲಿ ಜಾತ್ರೆಯಲ್ಲಿ, ಶಾಲಾ ಕಾಲೇಜು, ಪಾರ್ಕ್, ಶಾಪಿಂಗ್ ಮಾಲ್ ಹಾಗೂ ಸೆಂಟರ್ ಗಳ ಮುಂದೆ ಹೀಗೆ ಎಲ್ಲ ಕಡೆ ಐಸ್ ಕ್ರೀಂ ಗಾಡಿಯವರು ಕಾಣಸಿಗುತ್ತಾರೆ. ಕಂಡ ತಕ್ಷಣ ವಿವಿಧ ಬಗೆಯ ಐಸ್ ಕ್ರೀಂಗಳನ್ನು ತಿನ್ನಲು ಬಯಸುತ್ತೇವೆ. ಆದರೆ ಟೇಸ್ಟಿ ಎಂದು ತಿನ್ನುವ ಐಸ್ ಕ್ರೀಂ ಗಾಡಿಗಳತ್ತ ಅಥವಾ ಗಾಡಿಗಳಲ್ಲಿನ ಕ್ರೀಂ, ಅದಕ್ಕೆ ಬಳಸುವ ನೀರು, ಪಾಚಿ ಕಟ್ಟಿರುವ ಬಾಕ್ಸ್ ನೋಡಿದರೆ ಖಂಡಿತಾ ಐಸ್ ಕ್ರೀಂ ತಿನ್ನುಲು ಹೋಗಲ್ಲ. ಅದರಲ್ಲಿರುವ ಗಲೀಜು, ಪಾಚಿ ತುಂಬಿರುವ ನೀರು, ತೊಳೆಯದೇ ವರ್ಷ ಆಯಿತೇನೋ ಅನ್ನುವಷ್ಟೂ ಹಳೆಯ, ತುಕ್ಕು ಹಿಡಿದಿರುವ, ಅಲ್ಲಲ್ಲಿ ಕಪ್ಪು ಕಪ್ಪಾಗಿ ಗಲೀಜು ತುಂಬಿರುವ ಐಸ್ ಕ್ರೀಂ ಪೆಟ್ಟಿಗೆಯನ್ನು ಕಂಡರೆ ಗಾಬರಿಯಾಗುತ್ತದೆ.

ಐಸ್ ಕ್ರೀಂ ನೋಡಿದರೇನೆ ವಾಕರಿಕೆ ಬರುವಂತೆ ಅನ್ನಿಸುತ್ತದೆ. ಈ ಐಸ್ ಕ್ರೀಂಗೆ ಬಳಸುವ ನೀರಿನಿಂದಲೇ ನಿಮಗೆ ರೋಗ ಬರುತ್ತದೆ. ಐಸ್ ಕ್ರೀಂನ್ನು ಕೋನ್‍ಗೆ ಹಾಕುವ ಚಮಚದೊಳಗೆ ಕೂಡ ಗಲೀಜು ತುಂಬಿರುತ್ತದೆ. ಸದ್ಯ ಬೆಂಗಳೂರಿನ ಎಂಜಿ ರಸ್ತೆ, ಜಯನಗರದ ಸೇರಿದಂತೆ ವಿವಿಧ ಪ್ರತಿಷ್ಠಿತ ಪ್ರದೇಶಗಳಲ್ಲಿ ಈ ದೃಶ್ಯಗಳು ಕಂಡುಬಂದಿವೆ. ಇಂತಹ ಏರಿಯಾದಲ್ಲೇ ಈ ರೀತಿಯಾದರೆ ಇನ್ನು ಗಲ್ಲಿಗಳಲ್ಲಿ ಇನ್ಯಾವ ರೀತಿಯ ಐಸ್ ಕ್ರೀಂ ಸಿಗುತ್ತವೆ ಎಂಬುದನ್ನು ತಿನ್ನುವ ಮುನ್ನ ವಿಚಾರ ಮಾಡಲೇಬೇಕು. ಈ ಐಸ್ ಕ್ರೀಂ ತಿಂದರೆ ನಿಮ್ಮ ಹೊಟ್ಟೆ ಕೆಡುವುದು, ಆರೋಗ್ಯ ಹದಗೆಡುವುದು ಮಾತ್ರವಲ್ಲ, ಕ್ರೀಂಗಳಿಗೆ ಕಲರ್ ಬರಲು ವಿವಿಧ ರೀತಿಯ ಕೆಮಿಕಲ್ ಹಾಕುತ್ತಾರೆ.

ಅದಕ್ಕಾಗಿ ನೀವು ಇಷ್ಟಪಟ್ಟು ತಿನ್ನುವ ಐಸ್ ಕ್ರೀಂ ನಿಮ್ಮ ಆರೋಗ್ಯ ಕೆಡಿಸಬಹುದು. ಕಂಡ ಕಂಡಲ್ಲಿ ನಿಮ್ಮ ಮಕ್ಕಳಿಗೆ ಅಥವಾ ನೀವೇ ಐಸ್ ಕ್ರೀಂ ತಿನ್ನುವ ಮುನ್ನ ಎಚ್ಚರ ವಹಿಸಿ. ಇಲ್ಲದಿದ್ದಲ್ಲಿ ನಿಮ್ಮ ಆರೋಗ್ಯ ಹದಗೆಡುವುದು ಪಕ್ಕಾ ಇಂತಹ ಕೆಟ್ಟ ಪದಾರ್ಥಗಳನ್ನು ತಿನ್ನುವುದರಿಂದಲೇ ಜನರ ಅರ್ಧ ವಯಸ್ಸು ಕಡಿಮೆಯಾಗಿದೆ.