ಇಡಗುಂಜಿ ಗಣೇಶ ದೇವಾಲಯದ ಪೌರಾಣಿಕ ಹಿನ್ನೆಲೆ

0
4431

ಇಡಗುಂಜಿ ವಿನಾಯಕ ದೇವಸ್ಥಾನವು ಕರ್ನಾಟಕದ ಬಹು ಪ್ರಸಿದ್ದ ಹಿಂದೂ ಧಾರ್ಮಿಕ ಕೇಂದ್ರವಾಗಿದ್ದೂ ಸುಮಾರು ೧೫೦೦ ವ‌ರ್ಷಕೂ ಮಿಗಿಲಾದ ಇತಿಹಾಸ ಹೊಂದಿರುತ್ತದೆ. ಇದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ರಾ.ಹೆ. ೬೬ (ರಾ.ಹೆ. ೧೭)ರಿಂದ ೭ ಕೀ.ಮಿ. ದೂರದಲ್ಲಿ ಪೂರ್ವ ದಿಕ್ಕಿನಲ್ಲಿ ಇದೆ. ಈ ದೇವಸ್ಥಾನವನ್ನು ಸಾಮಾನ್ಯವಾಗಿ “ಇಡಗುಂಜಿ ದೇವಸ್ಥಾನ” ಎಂದು ಕರೆಯುತ್ತಾರೆ. ಕರ್ನಾಟಕದ ಕಡಲ ತೀರದ ಪ್ರಸಿದ್ದ (ಗೋಕರ್ಣ, ಇಡಗುಂಜಿ, ಹಟ್ಟಿ ಅಂಗಡಿ, ಗುಡ್ಡಟು ಆನೆಗುಡ್ಡೆ, ಶರವು, ಸೌತಡ್ಕ, ಗಣಪತಿ ದೇವಸ್ಥಾನಗಳಲ್ಲಿ ಇಡಗುಂಜಿ ವಿನಾಯಕ ದೇವಸ್ಥಾನವು ಕೂಡ ಒಂದು. ಈ ದೇವಾಲಯದ ಪರಿಸರದಲ್ಲಿನ ಪ್ರಶಾಂತತೆ ನಿಜವಾಗಿಯೂ ಒಂದು ಅದ್ಭುತ ಅನುಭವ.

Also read: ಈ ಗಣೇಶನ ದರ್ಶನ ಪಡೆದು ನಾಮ ಸ್ಮರಣೆಯನ್ನು ಮಾಡಿದರೆ ಸಾಕು ನಮ್ಮ ದಿನನಿತ್ಯದ ಕೆಲಸ ಕಾರ್ಯಗಳು ಕೂಡ ಸರಾಗವಾಗಿ ನಡೆಯುತ್ತದೆ..!

ವಿನಾಯಕ ಮೂರ್ತಿ

ವಿನಾಯಕ (ಗಣಪತಿಯ ಒಂದು ರೂಪ)ನನ್ನು ಇಲ್ಲಿ “ಮಹೋತಭಾರ ಶ್ರೀ ವಿನಾಯಕ” ದೇವರು ಎಂದು ಕರೆಯುತ್ತಾರೆ. ಈ ದೇವಸ್ಥಾನದಲ್ಲಿ ವಿನಾಯಕ ಮೂರ್ತಿಯು ನಿಂತಿರುವ “ದ್ವಿ ಭುಜ” ಭಂಗಿಯಲ್ಲಿ ಸುಮಾರು ೮೮ ಸೆ.ಮೀ ಎತ್ತರ ಮತ್ತು ೫೯ಸೆ.ಮೀ ಅಗಲವನ್ನು ಹೊಂದಿರುತ್ತದೆ. ಮೂರ್ತಿಯ ಬಲ ಕೈಯಲ್ಲಿ ಕಮಲದ ಹೂ ಮತ್ತು ಎಡ ಕೈಯಲ್ಲಿ ವೋದಕವನ್ನು ಹೊಂದಿದೆ. ಗಣಪತಿಯ ವಾಹನ ಮೂಷಿಕ (ಇಲಿ)ನನ್ನು ಇಲ್ಲಿ ಮೂರ್ತಿಯ ಪಕ್ಕದಲ್ಲಿ ನೋಡಲು ಸಿಗುವುದಿಲ್ಲ.

Also read: ಮೋದಕ ಪ್ರಿಯ ಗಣೇಶನಿಗೆ ಪ್ರಿಯವಾದ ನೈವೇದ್ಯ ಮೋದಕ ಮಾಡುವ ವಿಧಾನ

ಪೌರಾಣಿಕ ಹಿನ್ನೆಲೆ

ಒಂದು ಪುರಾಣದ ಪ್ರಕಾರ ದ್ವಾಪರ  ಯುಗದ ಅಂತ್ಯದಲ್ಲಿ ಅಂದರೆ ಕಲಿಯುಗದ ಆರಂಭದಲ್ಲಿ  ಭೂಮಿಯ ಮೇಲಿರುವ ರಾಕ್ಷಸರನ್ನು ಸಂಹಾರ ಮಾಡಲೆಂದು ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರು ಈ ಅರಣ್ಯಕ್ಕೆ  ಬಂದರು. ಸಾಧು ಸಂತರಿಗೆ  ಅವರ ಯಜ್ಞ  ಯಾಗಕ್ಕೆ   ಸಹಾಯವಾಗಲೆಂದು  ಚಕ್ರತೀರ್ಥ ಮತ್ತು ಬ್ರಹ್ಮತೀರ್ಥ ಎಂಬ ಎರಡು  ಹೊಂಡಗಳನ್ನು  ಇಲ್ಲಿ  ನಿರ್ಮಿಸಿದ್ದರು.  ಕೆಲ ಕಾಲದ ನಂತರ  ರಾಕ್ಷಸರ ತೊಂದರೆ ಹೆಚ್ಚಾದಾಗ ವಾಲಖೀಲ್ಯ ಮುನಿಗಳು ನಾರದರನ್ನು ಪ್ರಾರ್ಥಿಸಿ ತಮ್ಮ ತಪಸ್ಸಿಗೆ ಆದ ವಿಘ್ನಗಳನ್ನು ನಿವಾರಣೆ ಮಾಡುವುದಕ್ಕೋಸ್ಕರ ಬೇಡಿಕೊಂಡಾಗ  ನಾರದರು  ಗಣೇಶನ ತಾಯಿ ಪಾರ್ವತಿಯ ಬಳಿ ಹೋಗಿ ಬಾಲ ಗಣೇಶನನ್ನು  ಭೂಲೋಕಕ್ಕೆ ಕಳುಹಿಸಿಕೊಡುವಂತೆ  ಬೇಡಿಕೊಂಡರು.  ಗಣೇಶನನ್ನು  ಕರೆತಂದು ಮುನಿಗಳ ಮುಖಾಂತರ ಈ ಕ್ಷೇತ್ರದಲ್ಲಿ    ನಂತರ ಗಣೇಶನ ಆಶೀರ್ವಾದದಿಂದ ವಾಲಖೀಲ್ಯ  ಮುನಿಗಳು ಇಲ್ಲಿ  ತಪ್ಪಸ್ಸಾಚರಿಸಿ ಸಿದ್ಧಿ  ಪಡೆದುಕೊಂಡರು. ಇಷ್ಟೇ ಅಲ್ಲದೇ   ನಾರದರು ಇಲ್ಲಿ  ದೇವತೀರ್ಥವೆಂಬ ಇನ್ನೊಂದು ಹೊಂಡವನ್ನೂ ನಿರ್ಮಿಸಿದರು ಎಂಬ ಪ್ರತೀತಿ ಕೂಡ ಇದೆ.

Also read: ಗಣೇಶನನ್ನು ಹಿಂಭಾಗದಿಂದ ದರ್ಶನ ಮಾಡಬಾರುದು!!!

ಸುಮಾರು 4 ರಿಂದ 5 ನೇ ಶತಮಾನದಲ್ಲಿ  ನಿರ್ಮಿಸಲಾದ ಈ  ದೆ‌àವಾಲಯ ವಿಶಾಲವಾಗಿದ್ದು  ಗರ್ಭಗುಡಿಯಲ್ಲಿ ಸುಂದರವಾದ ಕಪ್ಪು ಶಿಲೆಯಲ್ಲಿ  ನಿರ್ಮಿಸಿದ ವಿಜ್ಞೇಶ್ವರ  ಪೀಠದ ಮೇಲೆ ನಿಂತಿದ್ದಾನೆ.  ಆಭರಣ ಭೂಷಿತನಾದ ಗಣಪನಿಗೆ ಎರಡು ಕೈ, ಎರಡು ದಂತಗಳಿವೆ.   ಬಲಗೈಯಲ್ಲಿ ಪದ್ಮವನ್ನು ಹಿಡಿದಿದ್ದಾನೆ.   ಎಡಗೈಯಲ್ಲಿ ಮೋದಕ ತುಂಬಿದ ಪಾತ್ರೆಯಿದೆ.   ತನ್ನ  ಸೊಂಡಿಲಿನಿಂದ ಮೊದಕವನ್ನು ಸವಿಯುತ್ತಿರುವ ಗಣೇಶನ ಹೊಟ್ಟೆಗೆ ನಾಗರವಿಲ್ಲ.  ತಲೆಯ ಕೂದಲು  ಹಿಂದೆ ಹರಡಿಕೊಂಡಂತಿದೆ.   ಈ ಬಾಲ ಗಣಪತಿ ವಿಗ್ರಹದ ಒಂದು ವಿಶೇಷತೆ ಏನೆಂದರೆ ಈ ವಿಗ್ರಹವು ಎರಡು ಸಾವಿರ ವರ್ಷ ಪುರಾತನವಾದದ್ದು ಮತ್ತು ಇದಕ್ಕೆ  ಎರಡೂ ದಂತಗಳಿವೆ. ಸಾಮಾನ್ಯವಾಗಿ  ಪ್ರತಿಯೊಂದು ಗಣೇಶನ ವಿಗ್ರಹಕ್ಕೆ ಒಂದೇ ದಂತವಿರುತ್ತದೆ.   ಆ ಕಾರಣದಿಂದ ಗಣೇಶನಿಗೆ ಏಕದಂತ ಎನ್ನಲಾಗುತ್ತದೆ.   ಆದರೆ ಇಡಗುಂಜಿಯಲ್ಲಿರುವ ಗಣೇಶನಿಗೆ ಎರಡೂ ದಂತಗಳಿವೆ.

Also read: ಗಣೇಶ ತನ್ನ ಕುಟುಂಬದೊಡನೆ ನೆಲೆಸಿರುವ ಏಕೈಕ ದೇವಾಲಯ …!!

ಇಂಥ ಅಪರೂಪವಾದ  ಪುರಾತನ ದೇವಾಲಯದಲ್ಲಿ  ರಥ ಸಪ್ತಮಿಯಂದು ವಿಶೇಷ ಜಾತ್ರೆ ನಡೆಯುತ್ತದೆ.   ವರ್ಷದಲ್ಲಿ ಒಂದು ದಶಲಕ್ಷ ಭಕ್ತಾದಿಗಳು ಇಲ್ಲಿ ಭೇಟಿ ನೀಡುತ್ತಾರೆ.  ಸಾಗರೋಪಾದಿಯಲ್ಲಿ  ಬರುವ ಭಕ್ತಾದಿಗಳು  ಬಾಲ ಗಣಪತಿಯ  ಆಶೀರ್ವಾದ ಪಡೆದು ಪುನೀತರಾಗುತ್ತಾರೆ ಮತ್ತು ಅವರ ಎಲ್ಲಾ ಇಚ್ಛೆಗಳು ಈಡೇರುತ್ತವೆ ಎಂಬ ನಂಬಿಕೆ ಇದೆ. ಇಲ್ಲಿರುವ ಗಣೇಶನ ವಿಗ್ರಹಕ್ಕೂ  ಮತ್ತು  ಗೋಕರ್ಣದಲ್ಲಿರುವ ಗಣೇಶನ ವಿಗ್ರಹಕ್ಕೂ  ಸರಿಯಾಗಿ ಹೊಂದಿಕೆಯಿದೆ.   ಎರಡೂ ವಿಗ್ರಹಗಳು ಒಂದೇ ತೆರನಾಗಿವೆ.

ದೇವಸ್ಥಾನದ ಸಮಯ

  • ದರ್ಶನ ಸಮಯ: ಮುಂಜಾನೆ ೬:೦೦ ಗಂಟೆಯಿಂದ ಮಧ್ಯಾಹ್ನ ೧:೦೦ಗಂಟೆಯ ತನಕ ಮತ್ತು ಮಧ್ಯಾಹ್ನ ೩:೦೦ ಗಂಟೆಯಿಂದ ರಾತ್ರಿ ೮:೩೦ ರ ತನಕ
  • ಅಭಿಷೇಕದ ಸಮಯ: ಮುಂಜಾನೆ ೬:೦೦ ಗಂಟೆ, ಬೆಳಗ್ಗೆ ೧೧:೦೦ಗಂಟೆ (ಮಹಾ ಅಭಿಷೇಕ) ಮತ್ತು ರಾತ್ರಿ ೭:00 ಗಂಟೆಗೆ
  • ಪೂಜೆ ಸಮಯ:ಮುಂಜಾನೆ ೮:೦0 ಗಂಟೆ, ಮಧ್ಯಾಹ್ನ ೧೨:೩0 ಗಂಟೆ (ಮಹಾ ಪೂಜೆ) ಮತ್ತು ರಾತ್ರಿ ೮:00 ಗಂಟೆಗೆ

Also read: ದೇವರ ಪೂಜೆ ಮಾಡುವಾಗ ಪತ್ರೆಗಳನ್ನು ಉಪಯೋಗಿಸಿದರೆ, ಏನೆಲ್ಲಾ ಲಾಭಗಳು ಆಗುತ್ತವೆ ಗೊತ್ತ..?

ವಿಶೇಷ ಸೇವೆಗಳು

  • ತುಲಾಭಾರ
  • ಗಣ ಹೋಮ
  • ಮೂಢ ಗಣಪತಿ
  • ರಂಗ ಪೂಜೆ

ಇಲ್ಲಿಗೆ ತಲುಪುವುದು ಹೇಗೆ?

*ರಸ್ತೆ ಮಾರ್ಗ: ಭಟ್ಕಳ ಮತ್ತು ಹೊನ್ನಾವರ ದಿಂದ ರಾ.ಹೆ. ೬೬ (ರಾ.ಹೆ. ೧೭)ರಲ್ಲಿ ಖಾಸಗಿ ಮತ್ತು ಸರಕಾರಿ ಸಾರಿಗೆ ವ್ಯವಸ್ಥೆ ಇದೆ. ಭಟ್ಕಳ ಯಿಂದ ೩೨ ಕಿ.ಮೀ ಹಾಗೂ ಹೊನ್ನಾವರದಿಂದ ೧೫ ಕಿ.ಮೀ ದೂರ.

*ಹತ್ತಿರದ ರೈಲ್ವೆ ನಿಲ್ದಾಣ: ಹೊನ್ನಾವರ (ಕೊಂಕಣ ರೈಲ್ವೆ ) ಅಥವಾ ಮುರುಡೇಶ್ವರ (ಕೊಂಕಣ ರೈಲ್ವೆ ).

*ಹತ್ತಿರದ ವಿಮಾನ ನಿಲ್ದಾಣ: ಬಜಪೆ ವಿಮಾನ ನಿಲ್ದಾಣ, ಮಂಗಳೂರು

ಆಹಾರ ಮತ್ತು ವಸತಿ ಸೌಕರ್ಯಗಳು

ದೇವಸ್ಥಾನದಲ್ಲಿ ಪ್ರಸಾದ ರೂಪದಲ್ಲಿ ಆಹಾರವನ್ನು ಕೊಡುತ್ತಾರೆ. ದೇವಸ್ಥಾನದ ಆಡಳಿತ ಮಂಡಳಿಯ ಅತಿಥಿ ಗೃಹಗಳು ಇಲ್ಲಿ ಲಭ್ಯವಿವೆ. ಅತಿಥಿ ಗೃಹದಲ್ಲಿ ಉಳಿದುಕೊಳ್ಳಲು ಮುಂಗಡವಾಗಿ ಕಾಯ್ದಿರಿಸಬೇಕು. ಭಟ್ಕಳ, ಹೊನ್ನಾವರ ಮತ್ತು ಕುಮಟಾದಲ್ಲಿ ಉಳಿದುಕೊಳ್ಳಲು ಅತಿಥಿ ಗೃಹಗಳು ಲಭ್ಯವಿರುತ್ತದೆ.

ಸಂರ್ಪಕ ವಿಳಾಸ

ಶ್ರೀ ವಿನಾಯಕ ದೇವರು, ಇಡಗುಂಜಿ, ಅಂಚೆ: ಮಿಲನ ಇಡಗುಂಜಿ, ಹೊನ್ನಾವರ ತಾ||, ಉತ್ತರ ಕನ್ನಡ ಜಿ||, ಕರ್ನಾಟಕ ರಾ||, ಭಾರತ-೫೮೧ ೪೨೩ ಫೋ: (೦೮೩೮೭) ೨೪೭ ೨೨೭ ಇಮೇಲ್: contact@idagunjidevaru.com