ಪ್ರೀತಿಸುವ ಹುಡುಗರಲ್ಲಿ ಈ ಗುಣಗಳು ಇದ್ದರೆ ಹುಡುಗಿಯರೇ ನಿಮ್ಮನು ಹುಡುಕಿಕೊಂಡು ಬರುತ್ತಾರಂತೆ.!

0
483

ಇತ್ತೀಚಿನ ದಿನಗಳಲ್ಲಿ ಪ್ರೀತಿಸಲು ಹುಡುಗ ಹುಡುಗಿಯಾರಿಗೇನು ಕಡಿಮೆ ಇಲ್ಲ ಆದರೆ ಬರಿ ಆಕರ್ಷಣೆಯಿಂದ ಆಗುವ ಪ್ರೀತಿ ಬಹು ದಿನ ಉಳಿಯುವುದಿಲ್ಲ, ಏಕೆಂದರೆ ಎಷ್ಟೊಂದು ಬೇಗನೆ ಪ್ರೀತಿ ಹುಟ್ಟುತ್ತೆ ಅಷ್ಟೊಂದು ಬೇಗನೆ ಮುರಿದು ಹೋಗುತ್ತೆ, ಇದರಲ್ಲಿ ಹುಡುಗಿಯರೇ ಹೆಚ್ಚು ಮೋಸ ಮಾಡುವುದು ಎನ್ನುವುದು ದೂರುಗಳೇ ಹೆಚ್ಚು ಆದರೆ ಪ್ರತಿಯೊಂದು ಹುಡುಗಿರಲ್ಲಿವೂ ತಮ್ಮ ಪ್ರೀತಿಯ ಹುಡುಗ ಹೀಗೆ ಇರಬೇಕು ಎನ್ನುವ ಇಚ್ಛೆ ಇರುತ್ತದೆ. ಅದೇನಾದರೂ ಹೊಂದಾಣಿಕೆಯಲ್ಲಿ ಮರೆಯಾದರೆ ಸ್ವಲ್ಪ ದಿನದಲ್ಲೇ ಪ್ರೀತಿ ಉಳಿಯುದಿಲ್ಲವಂತೆ, ಹಾಗಾದ್ರೆ ಹುಡುಗಿಯರಿಗೆ ಯಾವ ತರಹದ ಹುಡುಗರು ಹೆಚ್ಚು ಇಷ್ಟವಾಗುವುದು ಹುಡುಗರಲ್ಲಿ ಯಾವ ಗುಣಗಳಿದ್ದರೆ ಪ್ರೀತಿ ಸದಾ ಕಾಲ ವಿರುತ್ತೆ ಎನ್ನವ ಕುರಿತು ಸಂಶೋಧನೆಯೊಂದು ನಡೆದಿದ್ದು ಹೀಗಿದೆ ನೋಡಿ.

love-is-great-2
source:metro.co.uk

Also read: ಹುಡುಗಿ ನಿಮ್ಮನ್ನು ಇಷ್ಟ ಪಡುತ್ತಿದ್ದಾಳೆ ಎಂದು ತಿಳಿದುಕೊಳ್ಳಬೇಕೇ…? ಇದನ್ನೊಮ್ಮೆ ಓದಿ…

ಹೌದು ಕೇವಲ ಹ್ಯಾಂಡ್‌ಸಮ್ ಆಗಿದ್ದರೆ ಹುಡುಗಿಯರನ್ನು ಬುಟ್ಟಿಗೆ ಹಾಕಿಕೊಳ್ಳಬಹುದು ಎಂಬ ಕಲ್ಪನೆ ನಿಮ್ಮಲ್ಲಿದ್ದರೆ ಆ ಕಲ್ಪನೆಯಿಂದ ಇಂದೇ ಹೊರ ಬನ್ನಿ. ಏಕೆಂದರೆ ನೀವೆಷ್ಟು ಸುರಸುಂದರಾಗಿದ್ದರೂ ನಿಮ್ಮಲ್ಲಿ ಕೆಲ ಗುಣಗಳಿಲ್ಲದಿದ್ದರೆ ಅಪ್ಪಿ ತಪ್ಪಿಯೂ ನಿಮಗೆ ಗರ್ಲ್​ ಫ್ರೆಂಡ್ ಸಿಗುವುದಿಲ್ಲ. ಸಿಕ್ಕರೂ ಹೆಚ್ಚು ದಿನ ಉಳಿಯುವುದಿಲ್ವಂತೆ.

1. ಮಾತಿನಲ್ಲಿ ನಗುವಿರಬೇಕಂತೆ:

ಹೌದು ಚೆಂದದ ಹುಡುಗಿಯರಿಗೆ ಚೆಂದದ ಹುಡುಗನೇ ಬೆಕಂತಿಲ್ಲವಂತೆ, ನಗುತ್ತಾ ಮಾತನಾಡುವ ಹುಡುಗರೆಂದರೆ ಬಲು ಇಷ್ಟವಂತೆ. ಸದಾ ಯಾವುದೇ ವಿಚಾರವನ್ನು ನಗುವಿನೊಂದಿಗೆ ಹೇಳುವ ಹುಡುಗರು ಗರ್ಲ್ಸ್​ ಬೇಗನೆ ಫಿದಾ ಆಗಿಬಿಡುತ್ತಾರೆ. ಅಂದರೆ ಹುಡುಗಿಯರೊಂದಿಗೆ ಮಾತನಾಡುವಾಗ ನಗುತ್ತಾ ಸ್ಪಂದಿಸುವುದನ್ನು ಇಷ್ಟಪಡುತ್ತಾರೆ. ಅದರಲ್ಲಿ ಕೆಲವು ಭಾವನಾತ್ಮಕ ವಿಷಯವನ್ನು ಸಂಧರ್ಭಕ್ಕೆ ತಕ್ಕಂತೆ ಹೇಳುವ ಜಾಣ್ಮೆಇರಬೇಕಂತೆ.

2. ಹೊಗಳಿಕೆ ಮತ್ತು ಭರವಸೆ:

ಹದೆಯದ ಹುಡುಗಿಯರಿಗೆ ಪ್ರತಿಯೊಂದು ಕೆಲಸಕ್ಕೂ ಬೆಂಬಲವಾಗಿ ನಿಲ್ಲುವ ಮತ್ತು ಭರವಸೆ ಮೂಡಿಸುವ ಹುಡುಗರನ್ನು ಹುಡುಗಿಯರು ಕಣ್ಣುಮುಚ್ಚಿ ಇಷ್ಟಪಡುತ್ತಾರೆ. ಏಕೆಂದರೆ ಹುಡುಗಿಯರು ತನಗೆ ಸಾಥ್ ನೀಡುವಂತಹ ಪಾರ್ಟನರ್ ಬಗ್ಗೆ ಹೆಚ್ಚಾಗಿ ಕನಸು ಕಾಣುತ್ತಾಳೆ. ಹಾಗೆಯೇ ಗೆಳೆಯ-ಗೆಳೆತಿಯರ ನಡುವೆ ನಡೆಯುವ ತಮಾಷೆ ಹರಟೆ ವೇಳೆ ಸದಾ ಅವಳ ಬೆಂಬಲಕ್ಕೆ ನೀವು ನಿಲ್ಲಿ. ಇದರಿಂದ ಕೂಡ ನಿಮ್ಮ ಮೇಲೆ ಭರವಸೆ ಮೂಡುತ್ತದೆ.

3. ಸೈಲೆಂಟ್ ಬಾಯ್ಸ್:

ಕೆಲವು ಹುಡುಗಿಯರು ಹೇಳುತ್ತಾರೆ ಗಳಿಬಿಳಿಯಾಗಿ ಮಾತನಾಡುವ ಹುಡುಗರು ಬೇಕಂತೆ ಅಂತ ಆದರೆ ಜೀವನ ಪೂರ್ತಿ ಸಂಗಾತಿಯಾಗಲು ಸೈಲೆಂಟ್ ಹುಡುಗರು ಬೇಕಂತೆ. ಅದರಂತೆ ನಿಮ್ಮ ನಡೆ ನುಡಿಗಳು ಶಾಂತವಾಗಿದ್ದರೆ ಬೇಗನೆ ಹುಡುಗಿಯರು ಪ್ರೀತಿಯ ಬಲೆಗೆ ಬೀಳುತ್ತಾಳೆ. ಅವರೊಂದಿಗಿನ ವರ್ತನೆ, ನಿಮ್ಮ ಮಾತುಗಾರಿಕೆ ಇಲ್ಲಿ ಮುಖ್ಯ ಅಸ್ತ್ರವಾಗಿದೆ. ಸದಾ ಅವರೊಂದಿಗೆ ಶಾಂತ ಸ್ವಭಾವದಿಂದ ಸಲುಗೆಯ ನುಡಿಗಳಿಗೆ ಹುಡುಗಿಯರು ಫಿದಾ ಆಗುವುದು ಹೆಚ್ಚು.

love-is-great-1
source:pinterest.com

Also read: ಈ ಹನ್ನೊಂದು ವಿಷಯಗಳನ್ನು ನಿಮ್ಮ ಪ್ರೇಯಸಿಯಲ್ಲಿ ಕಂಡರೆ ಅವಳನ್ನು ಕಳೆದುಕೊಳ್ಳಬೇಡಿ!!

3. ನಗುವ ರೀತಿಯಲ್ಲಿ ಅರಿವು ಮುಖ್ಯ:

ಹುಡುಗಿಯರು ಹುಡುಗರನ್ನು ಮೆಚ್ಚುವ ಅಂಶಗಳಲ್ಲಿ ನಿಮ್ಮ ಸ್ಟೈಲ್ ಕೂಡ ಒಂದು. ಒಂದು ಹುಡುಗಿಯನ್ನು ಆಕರ್ಷಿಸಲು ನೀವು ದುಬಾರಿ ಡ್ರೆಸ್​ಗಳನ್ನು ಧರಿಸಬೇಕಿಲ್ಲ. ಸಾಮಾನ್ಯ ಉಡುಗೆ ತೊಡುಗೆಗಳನ್ನು ನೀಟಾಗಿ ಧರಿಸಿದರೂ ಅವರು ಆಕರ್ಷಿತರಾಗುತ್ತಾರೆ. ಹಾಗಾಗಿ ನಿಮ್ಮ ಲುಕ್‌ನತ್ತ ಹೆಚ್ಚಿನ ಗಮನ ನೀಡಿ.

4. ಸೆಳೆಯುವ ಕಲೆ:

ಮೊದಲು ಪ್ರೀತಿ ನಿಮ್ಮಿಂದಲೇ ಶುರುವಾಗಿದ್ದರೆ ಹುಡುಗಿಯನ್ನು ನಿಮ್ಮತ್ರ ಆಕರ್ಷಿಸಬೇಕಾಗುತ್ತದೆ. ಇದಕ್ಕಾಗಿ ನೀವು ಮಾಡಬೇಕಿರುವುದು ಅವಳ ಇಷ್ಟದ ಕೆಲಸಗಳು. ಇಲ್ಲಿ ನಿಮ್ಮ ಕಣ್ಣುಗಳು ಕೂಡ ಪ್ರಧಾನ ಪಾತ್ರವಹಿಸುತ್ತದೆ. ಹಾಗೆಯೇ ಅವಳಿಗೆ ಏನು ಇಷ್ಟವೆಂದು ಅರಿತು ಆ ದಾರಿಯಲ್ಲಿ ನಡೆದರೆ ಪ್ರೀತಿಯ ಪಯಣದಲ್ಲಿ ಅರ್ಧಯುದ್ಧ ಗೆದ್ದಂತೆ.

5. ಸಾಮಾನ್ಯ ಮುಗ್ಧತೆ:

ಪ್ರೀತಿಸುವ ಪ್ರತಿಯೋಬ್ಬರಲ್ಲಿವೂ ಮುಗ್ದತೆ ಇದ್ದರೆ ಅದು ಕೂಡ ಪ್ಲಸ್ ಪಾಯಿಂಟ್ ಆಗಲಿದೆ. ಆಕೆಂದರೆ ಹುಡುಗಿಯರು ಮುಗ್ದರೊಂದಿಗೆ ಬೇಗನೆ ಆಕರ್ಷಿತರಾಗುತ್ತಾರೆ. ಹಾಗೆಯೇ ಮುದ್ದು ಮುದ್ದಾಗಿ ಮಾತನಾಡಿ ಎಂತಹ ಕ್ಲಿಷ್ಟಕರ ಪರಿಸ್ಥಿತಿಯನ್ನು ನಿಭಾಯಿಸುವ ಗುಣವನ್ನು ರೂಢಿಸಿಕೊಳ್ಳಿ. ಇದರಿಂದ ಸದಾ ಅವಳು ನೀವು ಜೊತೆಗಿರಬೇಕೆಂದು ಬಯಸುತ್ತಾಳೆ.

Also read: ಮದುವೆಯಾದವರು ಈ 5 ಗುಣಗಳನ್ನು ಅನುಸರಿಸದೆ ಇದ್ದಲ್ಲಿ, ನಿಮ್ಮ ಸಂಬಂಧದಲ್ಲಿ ಬಿರುಕು ಮೂಡುವು ಖಂಡಿತ!

6. ನಿಮ್ಮ ಬಗ್ಗೆ ನಿಮಗೆ ಹೆಚ್ಚಿನ ಕಾಳಜಿ:

ನಿಮ್ಮ ಡ್ರೆಸ್ಸಿಂಗ್ ಸೆನ್ಸ್​ ಪ್ರೀತಿ ವಿಷಯದಲ್ಲಿ ಹೇಗೆ ವರ್ಕ್​ ಆಗುತ್ತದೆಯೋ ಹಾಗೆಯೇ ದೇಹ ಸೌಂದರ್ಯ ಕೂಡ ಮುಖ್ಯ ಪಾತ್ರವಹಿಸುತ್ತದೆ. ಅಂದರೆ ಇಲ್ಲಿ ನೀವು ಬೆಳ್ಳಗಿದ್ದೀರೋ ಅಥವಾ ಕಪ್ಪಗಿದ್ದಿರೋ ವಿಷಯವಲ್ಲ. ಬದಲಾಗಿ ಕಟುಮಸ್ತಿನ ದೇಹ, ಶರೀರ ಸೌಂದರ್ಯದ ಬಗ್ಗೆ ಕಾಳಜಿವಹಿಸುವ ಹುಡುಗರನ್ನು ಹುಡುಗಿಯರು ಹೆಚ್ಚಾಗಿ ಇಷ್ಟಪಡುತ್ತಾರೆ. ಇದಕ್ಕಾಗಿ ಸಿಕ್ಸ್ ಪ್ಯಾಕ್ ಮಾಡಬೇಕೆಂದಿಲ್ಲ. ಬದಲಾಗಿ ವ್ಯಾಯಾಮ ಮಾಡಿ ದೇಹ ಸೌಂದರ್ಯವನ್ನು ಕಾಪಾಡಿಕೊಂಡರೂ ಸಾಕು.

7. ವಿಶೇಷ ಪ್ರತಿಭೆ:

ಹೆಚ್ಚಿನ ಲವ್ ಸ್ಟೋರಿ ನೋಡಿದರೆ ಪ್ರತಿಭಾವಂತ ಹುಡುಗರು ಕೂಡ ಹುಡುಗಿಯರನ್ನು ಬೇಗನೆ ಆಕರ್ಷಿಸುತ್ತಾರೆ. ನಿಮಗೆ ಸಂಗೀತ, ಡ್ಯಾನ್ಸ್ ಬರುತ್ತಿದ್ದರೆ ಪ್ರೀತಿಯಲ್ಲಿ ಹುಡುಗಿಯರು ಬೀಳಲು ಕಾರಣಬೇಕಷ್ಟೆ. ಆದರೆ ನೆನಪಿಟ್ಟುಕೊಳ್ಳಿ, ನಿಮ್ಮ ಪ್ರತಿಭೆಯೊಂದಿಗೆ ಸ್ವಭಾವೂ ಕೂಡ ಮುಖ್ಯವಾಗಿರುತ್ತದೆ. ಇಂತಹ ಅತ್ಯುತ್ತಮ ಗುಣಗಳಿದ್ದರೆ ನಿಮಗೆ ಹುಡುಗಿ ಹೃದಯದಲ್ಲಿ ನಿಮಗೆ ಸ್ಥಾನ ಖಚಿತವೆಂದೇ ಅರ್ಥ. ಇಂತಹ ಅತ್ಯುತ್ತಮ ಗುಣಗಳಿದ್ದರೆ ನಿಮಗೆ ಹುಡುಗಿ ಹೃದಯದಲ್ಲಿ ನಿಮಗೆ ಸ್ಥಾನ ಖಚಿತವೆಂದೇ ಅರ್ಥ.