ಮೋದಿಯ ದುರಾಡಳಿತ ಹೀಗೆ ಮುಂದುವರೆದರೆ, ಹಣದುಬ್ಬರ ಹೆಚ್ಚಾಗಿ, ಬಡವರು ಹೇಗೆ ಬದುಕಬೇಕು?

0
424

ಒಂದೆಡೆ ಪೆಟ್ರೋಲ್, ಡೀಸಲ್, ಗ್ಯಾಸ್ ಬೆಲೆ ಏರಿಕೆಯಾಗುತ್ತಿದ್ದರೆ ಇನ್ನೊಂದೆಡೆ, ರೂಪಾಯಿ ಮೌಲ್ಯ ದಿನದಿಂದ ದಿನಕ್ಕೆ ನೆಲ ಕಚ್ಚುತ್ತಿವೆ. ದೇಶದ ಆರ್ಥಿಕ ಪರಿಸ್ಥಿತಿಯೂ ತೀರಾ ಹದಗೆಟ್ಟಿದ್ದು ಬ್ಯಾಂಕುಗಳೇ ಸಾಲದ ಸುಳಿಯಲ್ಲಿ ನರಳುತ್ತಿವೆ. ನಿರುದ್ಯೋಗ ಸಮಸ್ಯೆ ಒಂದೆಡೆಯಾದರೆ, ಫಾರಿನ್ ಡೈರೆಕ್ಟ್ ಇನ್ವೆಸ್ಟ್ ಮೆಂಟ್ ಕೂಡಾ ದಿನಗೂಲಿ ನೌಕರರ ಅನ್ನ ಕಿತ್ತುಕೊಳ್ಳತೊಡಗಿದೆ.

Also read: ದೇಶ ಬಿಡುವುದಕ್ಕೆ ಮುಂಚೆ ವಿಜಯ್ ಮಲ್ಯ ಬಿ.ಜೆ.ಪಿ.ಗೆ 35 ಕೋಟಿ ರು.ಗಳ ಚೆಕ್ ನೀಡಿದ್ದರ ಹಿಂದಿನ ಮರ್ಮ ಏನು?

ನೋಟ್ ಅಮಾನ್ಯೀಕರಣದ ಹೊಡೆತಕ್ಕೆ ತತ್ತರಿಸಿದ್ದ ಭಾರತೀಯರ ಮೇಲೆ, ಸ್ವಿಸ್ ನಿಂದ ತರುವ ಕಪ್ಪು ಹಣದ ಬಹುದೊಡ್ಡ ಆಮಿಷ ಒಡ್ಡಲಾಗಿತ್ತು. ನೋಟು ಅಮಾನ್ಯೀಕರಣದ ನಂತರದ ದಿನಗಳಲ್ಲಿ ದೇಶದೆಲ್ಲೆಡೆ ಆವರಿಸಿಕೊಂಡಿದ್ದ ಶೇ40ಕ್ಕೂ ಹೆಚ್ಚು ಮೌಲ್ಯದ ಕಪ್ಪು ಹಣದಿಂದ ಭಾರತ ಆರ್ಥಿಕವಾಗಿ ಪ್ರಗತಿ ಹೊಂದುವುದರಲ್ಲಿ ಯಾವುದೇ ಅನುಮಾನವಿರುತ್ತಿರಲಿಲ್ಲ. ಆದರೆ, ಹಾಗೆ ಸಂಗ್ರಹವಾದ ಕಪ್ಪು ಹಣದ ಲೆಕ್ಕವೇ ದೇಶದ ಆರ್ಥಿಕ ತಜ್ಞರೇ ಮೂಗ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿತ್ತು. ಸರಕಾರೀ ಲೆಕ್ಕಕ್ಕೆ ಸಿಕ್ಕ ಶೇಖಡಾ 98ಭಾಗದ ಹಣಕ್ಕೆ ಸರಿಯಾದ ಆಧಾರವಿತ್ತು. ಹಾಗಾದರೆ ಕೇವಲ 2%ನಷ್ಟು ಮಾತ್ರವೇ ಕಪ್ಪು ಹಣ ಪತ್ತೆಯಾಯಿತೇ? ಇದೊಂದು ಬಹುದೊಡ್ಡ ಹೊಡೆತ ನೀಡಿದ್ದು ಸುಳ್ಳಲ್ಲ.

Also read: ಲೈಂಗಿಕ ದೌರ್ಜನ್ಯದ ವಿರುದ್ದ ಹೋರಾಡಿದ ಇಬ್ಬರಿಗೆ ಈ ಬಾರಿಯ ನೊಬೆಲ್ ಶಾಂತಿ ಪ್ರಶಸ್ತಿ; ಅವರಿಬ್ಬರ ಬಗ್ಗೆ ತಿಳಿದುಕೊಳ್ಳಿ ನಿಮಗೂ ಸ್ಪೂರ್ಥಿಯಾಗುತ್ತೆ!!

ಡಿಜಿಟಲ್ ಇಂಡಿಯಾದ ಹುಸಿ ಭರವಸೆಯೇ ಸಧ್ಯ ಭಾರತದ ಆರ್ಥಿಕ ಮಟ್ಟ ಹಿಂದೆಂದೂ ಕಾಣದ ರೀತಿಯಲ್ಲಿ ಪಾತಾಳ ತಲುಪಿದೆ. ಜನಧನ ಖಾತೆ, ಡಿಜಿಟಲ್ ಕ್ಯಾಶ್ ಲೆಸ್ ವ್ಯವಹಾರದ ಗೋಜಿಗೆ ಬಿದ್ದ ಕೇಂದ್ರ ಸರಕಾರ ಜನರ ಖಾತೆಯ ಹಣದ ಬಗ್ಗೆ ತಲೆ ಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಜಿಯೋ ಸಿಮ್ ನ ಸಹಿತ ಎಲ್ಲಾ ಕೇಂದ್ರದ ಆಫರ್ ಗಳೂ ಅನುಪಯೋಗಿ ಆಧಾರ್ ಕಾರ್ಡ್ ಜಾಗೃತಿ ಮೂಡಿಸುವ ಸಲುವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಂತೆ ಕಾಣುತ್ತಿದೆ.

Also read: ಇತಿಹಾಸದಲ್ಲೇ ಅತ್ಯಂತ ಹೀನಾಯ ಸ್ಥಿತಿ ತಲುಪಿದ “ರುಪಾಯಿ” ಬೆಲೆ, ಮೋದಿಯ ಫೇಲ್ ಆದ Demonetization ನ ಧಗೆ ಈಗ ಭಾರತಕ್ಕೆ ತಟ್ಟಿದೆ!!

ದಿನದಿಂದ ದಿನಕ್ಕೆ ಪೆಟ್ರೋಲ್-ಡೀಸಲ್ ದರ ಏರಿಕೆಯಾಗುತ್ತಲೇ ಇದ್ದರೆ, ಗ್ಯಾ್್ ಸಿಲಿಂಡರ್ ಬೆಲೆ ಏರಿಕೆಯೂ ಜನಸಾಮಾನ್ಯರನ್ನು ಪರದಾಟಕ್ಕೀಡು ಮಾಡಿದೆ. ಸೆನ್ಸೆಕ್ಸ್ ಕುಸಿದ, ಶೇರು ಮಾರುಕಟ್ಟೆಯಲ್ಲಿ ದಿಢೀರ್ ಕುಸಿತ ಕಂಡು ಬಂದಿದ್ದು, ಡಾಲರ್ ಎದುರು ರೂಪಾಯಿಯದು ಸವಕಲು ನಾಣ್ಯದ ಪಾಡಾಗಿದೆ. ಸಧ್ಯ ಡಾಲರ್ ಎದುರು ರೂಪಾಯ್ ಮೌಲ್ಯ ಸಾರ್ವಕಾಲಿಕ ಕುಸಿತ ಕಂಡಿದ್ದು 75ರೂಪಾಯಿ ಗೆ ಇಳಿಯುವ ಎಲ್ಲಾ ಸಾಧ್ಯತೆಗಳೂ ಇವೆ. ಪೆಟ್ರೋಲ್ -ಡೀಸೆಲ್ ದರವೂ ನೂರರ ಆಸುಪಾಸಿಲ್ಲಿದ್ದು ಇಂದೋ ನಾಳೆಯೋ ನೂರರ ಗಢಿ ದಾಟುವ ಆಘಾತದಲ್ಲಿದೆ. ಸಧ್ಯದ ಪರಿಸ್ಥಿತಿಯೇ ಮುಂದುವರೆದಲ್ಲಿ ದೇಶ ಹಿಂದೆಂದೂ ಕಾಣದ ಅಧಃಪತನಕ್ಕೆ ನೂಕಲ್ಪಡಲಿರುವುದರಲ್ಲಿ ಯಾವುದೇ ಅನುಮಾನವಿಲ್ಲ.