Zomato ಡೆಲಿವರಿ ಮಾಡುವವನ ವೈರಲ್ ವೀಡಿಯೊ ಹಿಂದಿರೋ ಸತ್ಯ ತಿಳಿದರೆ, ನಿಮಗೂ ಕೂಡ ಆ ವ್ಯಕ್ತಿಯ ಮೇಲೆ ಅನುಕಂಪ ಮೂಡುತ್ತದೆ!!

0
1301

ಜನರೆಲ್ಲರೂ ಒಂದೇ ರೀತಿಯಲ್ಲಿರುವುದಿಲ್ಲ. ಕೆಲವೊಬ್ಬರು ಆಹಾರವನ್ನು ಅರ್ಧಂಬರ್ದ ತಿಂದು ಎಸೆಯುವ ಜನರಿದ್ದರೆ. ಕೆಲವೊಬ್ಬರು ಒಂದು ಹೊತ್ತಿನ ಊಟಕ್ಕೂ ಪರದಾಡುವ ಜನರಿದ್ದಾರೆ. ಇದೆಲ್ಲವನ್ನು ತಿಳಿದು ಕೆಲವೊಬ್ಬರು ಬಡಜನರ ಪರದಾಟವನ್ನೇ ವೀಡಿಯೊ ಮಾಡಿ ತಾವು ಮೆಚ್ಚುಗೆ ಪಡೆದು ಅಮಾಯಕರ ಮಾನ ಹರಾಜು ಹಾಕುತ್ತಿದ್ದಾರೆ. ಇವರಿಗೆ ಅಲ್ಪಮಟ್ಟದ ಬುದ್ದಿ ಇಲ್ಲವೆಂದರೆ, ಅವರು ಮಾಡಿದ ವೀಡಿಯೊ ಒಂದಕ್ಕೆ ಕಣ್ಣು ಮುಚ್ಚಿ ಲೈಕ್ ಶೇರ್ ಮಾಡುವ ಜನರಿಗೆ ಸ್ವಲ್ಪಮಟ್ಟಿನ ವಿಚಾರ ಶಕ್ತಿ ಇಲ್ವಾ?
ಹೌದು ಎರಡು ದಿನಗಳ ಹಿಂದೆ ಕೇರಳದಲ್ಲಿ zomoto ಡಿಲಿವೆರಿಮ್ಯಾನ್ ತನ್ನ ಬ್ಯಾಗ್-ನಲ್ಲಿದ ಆಹಾರವನ್ನು ತಿನ್ನುತ್ತಿರುವಾಗ ಕಿಡಿಗೇಡಿಗಳು ವೀಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿ ಮಸ್ತ್ ಮಜಾ ತಗೆದೊಕೊಂಡರು. ಈ ವಿಷಯಕ್ಕೆ ದೇಶದ ತುಂಬೆಲ್ಲ ಬಾರಿ ಮಾತುಗಳು ಬಂದು ಕೊನೆಗೆ zomoto ಡಿಲಿವೆರಿಮ್ಯಾನ್-ನನ್ನು ಕೆಲಸದಿಂದ ತೆಗೆದು ಹಾಕಲಾಯಿತು. ಇದೆಲ್ಲವಕ್ಕೂ ಹಿಂದಿರುವ ಅಸಲಿ ಸತ್ಯ ಇಲ್ಲಿದೆ ನೋಡಿ.


Also read: ಓದಿದ್ದು MTECH.. ಸಿಕ್ಕಿದ್ದು‌ ಸರ್ಕಾರಿ ರೈಲ್ವೆ ಆಫೀಸರ್ ಕೆಲಸ ಆದರೆ ಇವರು ಮಾಡುತ್ತಿರುವ ಕೆಲಸ ಸಮಾಜ ಸೇವೆ.. ಯಾರಿವರು??. ಎಲೆ ಮರೆ ಕಾಯಿಯಂತೆ ಸಮಾಜ ಸೇವೆ ಮಡುತ್ತಿರುವ ಸುನಿತಾ ಮಂಜುನಾಥ್ ರವರ ಬಗ್ಗೆ ನಿಮಗೆಷ್ಟು ಗೊತ್ತು?

ಹಸಿವಿನಿಂದ ಆಹಾರ ತಿಂದ ವ್ಯಕ್ತಿ ಕದ್ದು ಆಹಾರ ತಿಂದಿದ್ದಾನೆ ಅಂತ ಹೇಗೆ ಅಪವಾದ ಹೊರಿಸುತ್ತಿರ? ಅದರ ಹಿಂದೆ ಬೇರೆಯಾವುದೋ ಕಾರಣಗಳು ಇರಬಹುದು ಅಲ್ವ? ಆ ಕಂಪನಿ ತಮ್ಮ ಕೆಲಸಗಾರರಿಗೆ ತಿನ್ನಲು ಕೊಟ್ಟಿರುವ ಆಹಾರವಾಗಿರಬಹುದು. ಇಲ್ಲ ಅತೀಯಾದ ಹೊಟ್ಟೆ ಹಸಿವಿನಿಂದ ತಲೆ ಸುತ್ತುವ ಸ್ಥಿತಿ ಬಂದು ಆಹಾರ ತಿಂದಿರಬಹುದು. ಮತ್ತೆ ಆರ್ಡರ್ ಮಾಡಿದ ಗ್ರಾಹಕರು ಇಲ್ಲದೆ ಇರುವಾಗ ಆ ಆಹಾರವನ್ನು ನೀವೆ ತೆಗೆದುಕೊಳ್ಳಿ ಅಂತ ಕೊಟ್ಟಿರಬಹುದು. ಇನ್ನೂ ಹೆಚ್ಚಿಗೆ ಹೇಳಬೇಕಾದರೆ. ಇಂತಹ ಕಂಪನಿಗಳಲ್ಲಿ ನೀಡುವ ಸಣ್ಣ ಸಂಬಳದ ಕಾರಣವೂ ಕೂಡಾ ಈ ಕೃತ್ಯ ಎಸಗಲು ಕಾರಣವಾಗಿರ ಬಹುದಲ್ಲವೆ? ಆ ಸಣ್ಣ ಮೊತ್ತದ ಸಂಬಳದಲ್ಲಿ ಹೊರಗಿನ ಊಟ ಮಾಡದೆ ಚಿಲ್ಲರೆ ಹಣವನ್ನು ತನ್ನ ಮಡದಿ ಮಕ್ಕಳಿಗಾಗಿ ಉಳಿಸುವ ಪ್ರಯತ್ನವು ಆತನನ್ನು ಈ ಕೃತ್ಯ ಎಸಗುವಂತೆ ಮಾಡಿರಬಹುದಲ್ಲವೆ? ವಿಧ್ಯಾಭ್ಯಾಸವಿದ್ದರೂ ಸಿಗದ ನೌಕರಿ, ಕಿತ್ತು ತಿನ್ನುವ ಬಡತನದ ಮಧ್ಯೆ ಕೆಲಸ ಮುಗಿಸಿ ಮನೆಗೆ ತಲುಪಿದಾಗ ಮಡದಿ ಮಕ್ಕಳ ಪೆಚ್ಚು ಮುಖದಲ್ಲಿ ಸಣ್ಣ ನಗೆ ತರಲಿಕ್ಕಾಗಿ, ಮದ್ಯಾಹ್ನದ ಊಟ ಮಾಡದೆ ಒಂದೆರಡು ರೂಪಾಯಿ ಉಳಿಸುವುದಕ್ಕಾಗಿ ಈ ರೀತಿ ಮಾಡಿರ ಬಹುದಲ್ಲವೆ?.

Also read: 30 ರ ಹರೆಯಕ್ಕೆ ಕಾಲಿಡುವ ಮುನ್ನ ಮುಂದಿನ ಜೀವನ ಭದ್ರತ್ರೆಗಾಗಿ ಪ್ರತಿಯೊಬ್ಬರು ಯೋಚಿಸಲೇಬೇಕಾದ ಉಳಿತಾಯದ ಯೋಜನೆಗಳು..

ಇದ್ಯಾವುದನ್ನು ವಿಚಾರ ಮಾಡದೆ ನಾ ಮುಂದು ತಾ ಮುಂದು ಎಂದು ಶೇರ್ ಮಾಡುತ್ತಿದ್ದಾರೆ. ಮನಸೋ ಇಚ್ಚೆ ಕಾಮೆಂಟ್ಸ್ ಮಾಡುತ್ತಿದ್ದಾರೆ. ಆದರೆ ಆತನ ಆ ಕಾರ್ಯಕ್ಕೆ ಕಾರಣ ಏನಾಗಿರಬಹುದು ಎಂದು ನಾವೇನಾದರು ಯೋಚಿಸಿದ್ದೇವಾ? ಸಾಮಾಜಿಕ ತಾಣದ ಬಳಕೆದಾರರು ಒಂದು ಕಡೆಯಾದರೆ, ರಾಷ್ಟ್ರ ಮಟ್ಟದ ಹಾಗೂ ರಾಜ್ಯ ಮಟ್ಟದ ಸುದ್ದಿ ಮಾಧ್ಯಮಗಳು ಕೂಡ ಆ ವ್ಯಕ್ತಿ ಅದ್ಯಾವುದೋ ದೇಶದ್ರೋಹದ ಕಾರ್ಯ ಮಾಡಿದಂತೆ ಬಿತ್ತರಿಸಿವೆ. ಇದರಿಂದ ಆ ವ್ಯಕ್ತಿಯ ಕೆಲಸ ಹೋಗಿ ಅವನ ಬಡ ಕುಟುಂಬ ಬೀದಿಗೆ ಬಂದಿದೆ. ಒಂದು ಸಣ್ಣ ತನ, ಒಬ್ಬ ವ್ಯಕ್ತಿಯ ಜೀವನವನ್ನೇ ಕಿತ್ತುಕೊಂಡಿದೆ. ಈ ಕೆಲಸ ಕೇರಳದಲ್ಲಿ ಆಹಾರ ಕದ್ದು ತಿಂದ ಮದು ಎಂಬ ಆದಿವಾಸಿಯನ್ನು ಥಳಿಸಿ ಕೊಂದ ಘಟನೆಗೆ ಈ ವೈರಲ್ ಗೆ ವ್ಯತಾಸವೆ ಇಲ್ಲ.


Also read: ನಾನ್ ವೆಜ್ ಪ್ರಿಯರಿಗೆ ಸಿಹಿಸುದ್ದಿ; ರಾಜ್ಯ ಸರ್ಕಾರದಿಂದ ಚಿಕನ್, ಮಟನ್ ಭಾಗ್ಯ!

ಅಸಲಿ ಸತ್ಯವೇನು?

zomoto ಕೆಲಸಗಾರನನ್ನು ವಿಚಾರಿಸಿದ್ದಾಗ ಹೇಳಿದು ಹೀಗೆ ನಾನು ಡೆಲಿವೆರಿ ಕೊಡಲು ತೆರಳಿದ್ದಾಗ ಪಾರ್ಸಲ್ ಪಡದು ಕೊಳ್ಳುವವರು ಸಂಪರ್ಕಕ್ಕೆ ಸಿಕ್ಕಿರದ ಕಾರಣ ಹಿಂತಿರುಗಿಸಲಾಗಿತ್ತು. ದಾರಿ ಮಧ್ಯೆ ಟ್ರಾಫಿಕ್ ಕಾರಣದಿಂದಾಗ ತಡವಾಗಿ ತುಂಬಾ ಹಸಿವಾಗಿತ್ತು. ನಾನು ಶುಗರ್ ಪೇಶೆಂಟ್, ಕಾರಣ ಸರಿಯಾದ ಸಮಯಕ್ಕೆ ಊಟ ಮಾಡದೆ, ಹೊಟ್ಟೆ ಹಸಿದರೆ ಶುಗರ ಹೆಚ್ಚಾಗುತ್ತದೆ. ಹಾಗಾಗಿ ರಿಟರ್ನ್ ಬಂದ ಆಹಾರದಲ್ಲಿ ಸ್ವಲ್ಪ ತಿಂದೆ” ಎಂದು ಹೇಳುತ್ತಾನೆ. ಇಷ್ಟು ಸಣ್ಣ ವಿಷಯಕ್ಕೆ ಎಷ್ಟೊಂದು ಅವಮಾನ ಆಗಿದೆ ಆ ವ್ಯಕ್ತಿಗೆ ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡರೆ ಅದಕ್ಕೆ ಹೊಣೆಯಾರು? ಆದಕಾರಣ ಯಾವುದೇ ಒಂದು ಘಟನೆಯನ್ನು ಸರಿಯಾಗಿ ತಿಳಿದು ಪರೀಕ್ಷಿಸಿ ನಂತರ ವೈರಲ್ ಮಾಡುವುದು ನಿಮಗೂ ಮತ್ತು ಎದುರಿನ ವ್ಯಕ್ತಿಗೂ ಒಳ್ಳೆಯದು.