ಸಂವಿಧಾನದ ಬಗ್ಗೆ ಅಸಮಾಧಾನವಿದೆ ಎಂದು ಸಂವಿಧಾನಕ್ಕೆ ಕೈ ಹಾಕಿದರೆ ರಕ್ತಪಾತವಾಗುತ್ತೆ; ಎಚ್ಚರಿಕೆ ನೀಡಿದ ಸಿದ್ದರಾಮಯ್ಯ..

0
175

ದೇಶದಲ್ಲಿ ಮಿಸಲಾತಿ ಮತ್ತು ಜಾತಿ ಬದಲಾವಣೆ ಸೇರ್ಪಡೆ ಸೇರಿದಂತೆ ಹಲವು ವಿವಾದಗಳು ನಡೆಯುತ್ತಾನೆ ಇವೆ. ಇವೆಲ್ಲವುಗಳ ತಿದ್ದುಪಡೆಗೆ ಸಂವಿಧಾನವನ್ನು ಬದಲಾಯಿಸಬೇಕು ಎನ್ನುವ ಮಾತುಗಳು ದೂರದಲ್ಲಿ ಕೇಳಿಬರುತ್ತಿದ್ದವು ಈ ವೆಲ್ಲ ವಿಚಾರವಾಗಿ ಸಿದ್ದರಾಮಯ್ಯ ಕಿಡಿಕಾರಿದ್ದು, ಅಂಬೇಡ್ಕರ್‌ ಅವರು ಸಂವಿಧಾನ ರಚಿಸದಿದ್ದರೆ ನಮಗೆ ಸಮಾನತೆಯ ಸಂವಿಧಾನ ಸಿಗಲು ಸಾಧ್ಯವಿರಲಿಲ್ಲ. ಈಗಲೂ ಕೆಲವು ಪಟ್ಟಭದ್ರ ಹಿತಾಸಕ್ತಿಗಳಿಗೆ ಈ ಸಂವಿಧಾನದ ಬಗ್ಗೆ ಅಸಮಾಧಾನವಿದೆ. ಆದ್ದರಿಂದ ಆಗಾಗ ಸಂವಿಧಾನ ಬದಲು ಮಾಡಬೇಕು ಎಂದು ಹೇಳುತ್ತಿರುತ್ತಾರೆ. ಈ ಕುರಿತು ಎಲ್ಲರೂ ಎಚ್ಚರವಾಗಿರಬೇಕು. ಇಲ್ಲದಿದ್ದರೆ ರಕ್ತಪಾತವಾಗುತ್ತೆ ಎಂದು ಹೇಳಿದ್ದಾರೆ.

 

Also read: ಸರ್ಕಾರಿ ಅಧಿಕಾರಿಗಳ ಮೇಲೆ ಹಲ್ಲೆ ಮಾಡಿದ ಶಾಸಕನ ವಿರುದ್ಧ ಮೋದಿ ಗರಂ; ಯಾರ ಮಗ ಆಗಿದ್ದರೂ ಸರಿ ಪಕ್ಷದಿಂದ ಹೊರ ಹಾಕಿ..

ಹೌದು ನಗರದ ಪುರಭವನದ ಸಭಾಂಗಣದಲ್ಲಿ ‘ಕರ್ನಾಟಕ ರಾಜ್ಯ SC/ST ಗುತ್ತಿಗೆದಾರರ ಸಂಘ’ ಆಯೋಜಸಿದ್ದ ರಾಜ್ಯಮಟ್ಟದ ಸಮಾವೇಶ ಮತ್ತು ಮಿಲ್ಲ​ರ್ಸ್ ವರದಿ ಶತಮಾನೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ಜಾತಿ ವ್ಯವಸ್ಥೆ ಆಳವಾಗಿ ಬೇರೂರಿದೆ. ಬುದ್ಧ, ಬಸವ, ಅಂಬೇಡ್ಕರ್‌ ಕಾಲದಲ್ಲೂ ಜಾತಿ ವ್ಯವಸ್ಥೆ ನಿರ್ಮೂಲನೆ ಸಾಧ್ಯವಾಗಲಿಲ್ಲ. ನಮ್ಮಲ್ಲಿ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಮತ್ತು ರಾಜಕೀಯವಾಗಿ ಸಮಾನತೆ ಬರದ ಹೊರತು ಜಾತಿ ವ್ಯವಸ್ಥೆ ತೊಲಗಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಎಲ್ಲರೂ ದುಡಿಯಬೇಕು. ಅದನ್ನು ಬಿಟ್ಟು ಸಂವಿಧಾನ ಬದಲು ಮಾಡಬೇಕು ಎಂದು ಹೇಳುತ್ತಿರುತ್ತಾರೆ. ಈ ಕುರಿತು ಎಲ್ಲರೂ ಎಚ್ಚರವಾಗಿರಬೇಕು. ಸಂವಿಧಾನ ಬದಲು ಮಾಡಲು ಕೈ ಹಾಕಿದರೆ ಈ ದೇಶದಲ್ಲಿ ರಕ್ತಪಾತವಾಗಲಿದೆ ಎಂದು ಹೇಳಿದ್ದಾರೆ.

ಅನುದಾನ ಖರ್ಚು ಮಾಡದಿದ್ದರೆ ಕ್ರಿಮಿನಲ್‌ ಕೇಸ್:

ಪರಿಶಿಷ್ಟಜಾತಿ ಮತ್ತು ಪಂಗಡದವರ ಅಭಿವೃದ್ಧಿಗೆ ಎಸ್ಸಿಪಿ, ಟಿಎಸ್‌ಪಿ ಯೋಜನೆಯಡಿ ಈ ಹಿಂದೆ ಐದು ವರ್ಷದಲ್ಲಿ ಕೇವಲ 7ರಿಂದ 8 ಸಾವಿರ ಕೋಟಿ ರುಗಳನ್ನು ಖರ್ಚು ಮಾಡಲಾಗುತ್ತಿತ್ತು. ಆದರೆ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಒಂದು ವರ್ಷಕ್ಕೆ 30 ಸಾವಿರ ಕೋಟಿ ರು.ಗಳನ್ನು ಈ ಯೋಜನೆಗೆ ಮೀಸಲು ಇಡಲಾಯಿತು. ಒಂದು ವೇಳೆ ಆ ಹಣ ಖರ್ಚು ಮಾಡಲಾಗದಿದ್ದರೆ ಮುಂದಿನ ವರ್ಷದಲ್ಲಿ ವೆಚ್ಚ ಮಾಡಲು ಅವಕಾಶವಿದೆ. ಜತೆಗೆ ಅನುದಾನ ಖರ್ಚು ಮಾಡದ ಅಧಿಕಾರಿಗಳ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಬಹುದಾಗಿದೆ ಎಂದು ಹೇಳಿದ ಅವರು ಸಂಘದ ಅಧ್ಯಕ್ಷ ಎನ್‌.ಮಹದೇವಸ್ವಾಮಿ ಮಾತನಾಡಿ, ಮೀಸಲಾತಿ ಅಧಾರದಲ್ಲಿ ಬಡ್ತಿ ಹೊಂದಿರುವ ಸರ್ಕಾರಿ ನೌಕರರಿಗೆ ತತ್ಪರಿಣಾಮದ ಜೇಷ್ಠತೆಯನ್ನು ವಿಸ್ತರಿಸುವ ಅಧಿನಿಯಮ 2017ರ ಅನುಷ್ಠಾನಕ್ಕೆ ಹೊರಡಿಸಿರುವ ಸುತ್ತೋಲೆ ಹಿಂಪಡೆಯಬೇಕು.

Also read: ನೈಋತ್ಯ ರೈಲ್ವೆ ವಲಯ (SWR) 112 ರೈಲುಗಳ ವೇಳಾಪಟ್ಟಿ ಬದಲಾವಣೆ; ರೈಲ್ವೆ ಪ್ರಯಾಣಿಕರೆ ಹೊಸ ವೇಳಾಪಟ್ಟಿ ನೋಡಿ ಪ್ರಯಾಣ ಮಾಡಿ..

ಸರ್ಕಾರದ ಆದೇಶದಂತೆ 50 ಲಕ್ಷ ರು.ಗಳವರೆಗಿನ ಕಾಮಗಾರಿಗಳನ್ನು ಒಂದು ಕೋಟಿ ರು.ಗಳಿಗೆ ಹೆಚ್ಚಿಸಬೇಕು. ಹಣ ವಿಳಂಬ ಪಾವತಿ ತಪ್ಪಿಸಲು ಎಸ್ಸಿಪಿ ಮತ್ತು ಟಿಎಸ್‌ಪಿ ಹಣದಿಂದ ಬಿಲ್‌ ಪಾವತಿ ಮಾಡಬೇಕು. ಲೋಕೋಪಯೋಗಿ, ನೀರಾವರಿ ಸೇರಿದಂತೆ ಇತರ ಪ್ರಮುಖ ಇಲಾಖೆಗಳ ಗುತ್ತಿಗೆಗಳಲ್ಲಿ ಮೀಸಲಾತಿ ಜಾರಿಯಾಗಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸೂಚಿಸಿದರು. ಅದರಂತೆ ಕೆಲವು ತಿಂಗಳ ಹಿಂದೆವೂ ಇದೆ ವಿಚಾರವಾಗಿ ಮಾತನಾಡಿದ ಸಿದ್ದರಾಮಯ್ಯ ಸಂವಿಧಾನದ ವಿಷಯಕ್ಕೆ ಬಂದರೆ ರಕ್ತಪಾತವಾಗುತ್ತೆ ಅಂತ ಹೇಳಿದರು ಆದರೆ ಯಾವ ರೀತಿಯಲ್ಲಿ ಹೇಳಿದ್ದಾರೆ, ಹೇಗೆ ದೇಶದಲ್ಲಿ ಗೊಂದಲ ಸೃಷ್ಟಿಯಾಗುತ್ತೆ ಎನ್ನುವುದು ತಿಳಿಸಿಲ್ಲ, ಬರಿ ಇಂತಹ ಕಾರ್ಯಕ್ರಮಗಳಲ್ಲಿ ಹೇಳಿಕೆಗಳನ್ನು ಮಾತ್ರ ಕೊಡುತ್ತಾರೆ ಎನ್ನುವುದು ಜನರ ಅಭಿಪ್ರಾಯವಾಗಿದೆ.