ಎಲ್ಐಸಿ ಪಾಲಿಸಿದಾರರಿಗೆ ಗುಡ್ ನ್ಯೂಸ್; ಪಾಲಿಸಿ ಸಮಸ್ಯೆ ಎದುರಿಸುತ್ತಿರುವ ಗ್ರಾಹಕರಿಗೆ 15 ದಿನಗಳಲ್ಲಿ ಪಾಲಿಸಿ ಬದಲಾಯಿಸುವ ಅಥವಾ ರದ್ದು ಮಾಡುವ ಅವಕಾಶ ಇಲ್ಲಿದೆ ನೋಡಿ..

0
872

ಜೀವನದ ಭದ್ರತೆಗಾಗಿ ಹಲವಾರು ವಿಮೆಗಳನ್ನು ತಂದು ಜನರಿಗೆ ಮತ್ತಷ್ಟು ಸುರಕ್ಷತೆ ನೀಡುತ್ತಿರುವ ಭಾರತೀಯ ಜೀವವಿಮಾ ನಿಗಮ ತನ್ನ ಗ್ರಾಹಕರಿಗೆ ಒಂದು ಮಹತ್ವದ ಅವಕಾಶ ನೀಡಿದ್ದು, ಚಿಂತೆಯಲ್ಲಿರುವ ಪಾಲಸಿದಾರರಿಗೆ ಸುವರ್ಣಾವಕಾಶ ವಾಗಿದೆ. ಇದೇನ್ ಅಂದರೆ ಪಾಲಿಸಿದಾರರು ಕೆಲವು ವಿಚಾರವನ್ನು ತಿಳಿಯದೆ ವಿಮೆ ಮಾಡಿಸಿ ನಂತರ ಹಣ ಕಟ್ಟಲಾಗದೆ. ಪಜೀತಿಗೆ ಸಿಲುಕಿ ಯಾಕಾದರೂ ಈ ಪಾಲಿಸಿ ಮಾಡಿಸಿದೆ. ಎನ್ನುವ ಜನರು ಆ ಪಾಲಿಸಿಯನ್ನು ಬದಲಾವಣೆ ಅಥವಾ ರದ್ದು ಮಾಡಿ ಮರು ಹಣ ಪಡೆಯಬಹುದು.

ಏನಿದು LIC ಬದಲಾವಣೆ?

Also read: LIC ತಂದ ಹೊಸ ಪಾಲಿಸಿ’ ತಿಂಗಳಿಗೆ 420 ರೂ ಕಟ್ಟಿ 15 ಲಕ್ಷದವರೆಗೆ ವಿಮೆ ಪಡೆಯರಿ..

ಹೌದು ಎಲ್ಐಸಿ ಪಾಲಿಸಿದಾರರಿಗೆ ಭಾರತೀಯ ಜೀವವಿಮಾ ನಿಗಮ ಸಿಹಿ ಸುದ್ದಿ ನೀಡಿದ್ದು. ಎಲ್ಐಸಿ ಪಾಲಿಸಿ ಸಮಸ್ಯೆ ಎದುರಿಸುತ್ತಿರುವ ಗ್ರಾಹಕರಿಗೆ ಇದು ಅನುಕೂಲಕರವಾದ ಕ್ರಮವಾಗಿದೆ. ಇದು ಮುಖ್ಯವಾಗಿ ಯಾರದೋ ಮಾತು ಕೇಳಿ ಅಥವಾ ಆನ್​​ಲೈನ್​​ನಲ್ಲಿ ನೋಡಿ ಲೈಫ್​​ ಇನ್ಸುರೆನ್ಸ್​ ಪಾಲಿಸಿ ಮಾಡಿಸಿಕೊಳ್ಳುವ. ಪಾಲಿಸಿ ಮಾಡಿಸಿದ ನಂತರ ಒಲ್ಲದ ಮನಸ್ಸಿನಿಂದ ಪ್ರೀಮಿಯಮ್​​ ಹಣ ಪಾವತಿಸಲು ಪಜೀತಿಯಲ್ಲಿರುವ. ಹಲವಾರು ಗ್ರಾಹಕರು ಇದ್ದಾರೆ. ಇಂತಹ ಸಮಸ್ಯೆ ನೀವು ಎದುರಿಸುತ್ತಿದ್ದರೆ ಆ ಚಿಂತೆ ಬಿಟ್ಟು ಬೀಡಿ ಏಕೆಂದರೆ ಈಗಾಗಲೇ ಇರುವ ಪಾಲಿಸಿ ಬೇಡ ಎನಿಸಿದರೆ ರದ್ದು ಮಾಡುವ ಅವಕಾಶವಿದೆ.

ಹೇಗಿದೆ ಪಾಲಿಸಿ ಬದಲಿಸುವ ಅವಕಾಶ?

ಭಾರತೀಯ ಜೀವವಿಮಾ ನಿಗಮವು ಪಾಲಿಸಿ ಸಮಸ್ಯೆ ಎದುರಿಸುತ್ತಿರುವ ಗ್ರಾಹಕರು 15 ದಿನಗಳಲ್ಲಿ ಪಾಲಿಸಿ ಬದಲಿಸುವ ಅಥವಾ ರದ್ದು ಮಾಡುವ ಅವಕಾಶ ನೀಡಿದೆ. ಒಲ್ಲದ ಮನಸ್ಸಿನಿಂದ ಮಾಡಿಸಿದ ಪಾಲಿಸಿ ಬೇಡದೆ ಹೋದಲ್ಲಿ ನೀವು ಈ ಅವಕಾಶವನ್ನು ಪಡೆಯಬಹುದಾಗಿದ್ದು, ಇದರ ಬಗ್ಗೆ ಹೇಳಬೇಕು ಎಂದರೆ ಎಲ್​ಐಸಿ ಪಾಲಿಸಿದಾರರಿಗೆ ‘ಫ್ರೀ ಲುಕ್​ ಪಿರಿಯಡ್​​​‘ ಎಂಬ ಆಪ್ಷನ್​​​ ಅನ್ನು ಇತ್ತೀಚೆಗೆ ಭಾರತೀಯ ಇನ್ಸೂರೆನ್ಸ್​ ಕಾರ್ಪೊರೇಷನ್​ ಜಾರಿಗೊಳಿಸಿದೆ. ಇದರ ಅಡಿಯಲ್ಲಿ ನೀವು ಪಾಲಿಸಿಯನ್ನು ಬದಲಾಯಿಸಿಕೊಳ್ಳಬಹುದಾಗಿದೆ. ಅಂತೆಯೇ ಇದಕ್ಕಾಗಿ ಕೊನೆಯ ನಿರ್ಣಯ ತೆಗೆದುಕೊಳ್ಳಲು ಫ್ರೀ ಲುಕ್​ ಪಿರಿಯಡ್ ಹೆಸರಿನಲ್ಲಿ​​ 15 ದಿನಗಳ ಕಾಲಾವಕಾಶ ನೀಡಲಾಗುತ್ತದೆ.

Also read: LIC ಪಾಲಸಿದಾರರ ಗಮನಕ್ಕೆ ಇನ್ನುಮುಂದೆ ಈ 111 ಪಾಲಸಿಗಳು ಇಲ್ಲ..

ಏನಿದು ಫ್ರೀ ಲುಕ್​ ಪಿರಿಯಡ್​?

ನಿಮ್ಮ ಪಾಲಿಸಿಗಾಗಿ ಕಟ್ಟಿದ ಸಂಪೂರ್ಣ ಪ್ರೀಮಿಯಂ ಹಣವನ್ನು ವಾಪಸ್ ಪಡೆದುಕೊಳ್ಳಬಹುದಾಗಿದೆ. ಇಲ್ಲದಿದ್ದರೆ ಬೇರೆ ಪಾಲಿಸಿ ಪ್ಲಾನ್ ಗೆ ಬದಲಾಯಿಸಿಕೊಳ್ಳಬಹುದಾಗಿದೆ . ಇದಕ್ಕಾಗಿ ನಿಮ್ಮ ಹತ್ತಿರದ ಎಲ್ಐಸಿ ಕಚೇರಿಗೆ ತೆರಳಿ ನಿಮ್ಮಿಷ್ಟದಂತೆ ಪಾಲಿಸಿ ಬದಲಾಯಿಸಿ ಇಲ್ಲವೇ ರದ್ದುಗೊಳಿಸಿಬಹುದು. ಈ ಅವಕಾಶ ವರ್ಷದ ಪೂರ್ತಿ ಇರುವುದಿಲ್ಲ ಕೇವಲ 15 ದಿನಗಳು ಇರುವುದರಿಂದ ಕಚೇರಿಗೆ ಹೋಗಿ ಮಾಹಿತಿ ಪಡೆದು ನಿಮ್ಮ ಯಾವರೀತಿ ಬೇಕು ಅದಕ್ಕೆ ಬದಲಾಯಿಸಿಕೊಳ್ಳಿ.

LIC ವಿಮೆಯ ಲಾಭವೇನು?

Also read: LIC ಯಿಂದ ಗ್ರಾಹಕರಿಗೆ ಭರ್ಜರಿ ಕೊಡುಗೆ ನ್ಯೂ ಮನಿ ಬ್ಯಾಕ್ ಪ್ಲಾನ್-ನಲ್ಲಿ ಬೋನಸ್: + 125% ಹೆಚ್ಚಿನ ವಿಮಾ ಮೊತ್ತ..

ಜೀವ ಮತ್ತು ಜೀವನಕ್ಕೆ ಭದ್ರತೆ ಒದಗಿಸುತ್ತದೆ. ಅಪಘಾತ, ಸಾವು, ಅನಾರೋಗ್ಯ ಅಥವಾ ಆಸ್ತಿಗೆ ಹಾನಿಯಾದ ಸಂದರ್ಭದಲ್ಲಿ ಹಣಕಾಸಿನ ನೆರವು ಪಡೆದುಕೊಳ್ಳಲು ವಿಮೆಯೇ ಆಧಾರವಾಗಿದೆ. ವಿಮೆ ಕೇವಲ ನಿಮ್ಮ ಜೀವನಕ್ಕೆ ಭದ್ರತೆ ಒದಗಿಸುವುದು ಮಾತ್ರವಲ್ಲದೇ ತೆರಿಗೆ ವಿನಾಯಿತಿ ಲಾಭ ಪಡೆದುಕೊಳ್ಳಲು ನೆರವು ನೀಡುತ್ತದೆ. ಕಾರು, ದ್ವಿಚಕ್ರ ವಾಹನ, ಮನೆ ಯಾವುದಕ್ಕೆ ಮೌಲ್ಯವಿರುತ್ತದೋ ಅವುಗಳಲ್ಲವನ್ನು ಇನ್ಶೂರನ್ಸ್ ಪರಿಧಿಗೆ ತರಬಹುದು. ಅನೇಕ ಕಂಪನಿಗಳು ವಿಮಾ ಸೌಲಭ್ಯವನ್ನು ನೀಡುತ್ತ ಬಂದಿವೆ. ಬಡ್ಡಿ, ಅವಧಿ, ಕಾಲ, ಪ್ರೀಮಿಯಂ ಸೇರಿದಂತೆ ವಿಮೆಯ ಲಕ್ಷಣ ಬದಲಾಗುವುದು. ಅದಕ್ಕಾಗಿ ಪ್ರತಿಯೊಬ್ಬರೂ ಪಾಲಿಸಿಯನ್ನು ಹೊಂದಬೇಕು.