ಅಧಾರ ಕಾರ್ಡ್ ಬಳಕೆ ಮಾಡದಿದ್ದರೆ ಅದು ರದ್ದಾಗುವ ಸಾಧ್ಯತೆ ಇದೆ, ಅದರಲ್ಲೂ ಮಕ್ಕಳ ಆಧಾರ್ ಸಂಖ್ಯೆ ರದ್ದಗಬಾರದು ಅಂದ್ರೆ ಇದನ್ನು ತಪ್ಪದೇ ಓದಿ!!

0
1154

ಆಧಾರ ಬಂದಾಗಿಂದ ಒಂದಿಲ್ಲದೊಂದು ಗೊಂದಲಗಳು ಮೂಡುತ್ತಿವೆ. ಈ ವಿಚಾರವಾಗಿ ಸುಪ್ರಿಂ ಕೋರ್ಟ್ ಕೂಡ ಹಲವು ಆದೇಶಗಳನ್ನು ನೀಡಿದ್ದು ಶಿಕ್ಷಣ ಸಂಸ್ಥೆ, ಬ್ಯಾಂಕ್‍ಗಳಲ್ಲಿ ಆಧಾರ್ ಕಡ್ಡಾಯವಲ್ಲ. ಮೊಬೈಲ್ ನಂಬರ್ ಗಳಿಗೂ ಆಧಾರ್ ಜೋಡಣೆ ಕಡ್ಡಾಯವಲ್ಲ. ಆದರೆ ಸರಕಾರದ ಯೋಜನೆಗಳಿಗೆ ಮಾತ್ರ ಆಧಾರ್ ಕಡ್ಡಾಯ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಹಾಗೆ ಪಾನ್ ಕಾರ್ಡ್ ಗೆ ಆಧಾರ್ ಜೋಡಣೆ ಕಡ್ಡಾಯ ಎಂದು ಕೋರ್ಟ್ ಹೇಳಿದೆ. ಆಧಾರ್ ಕಾರ್ಡ್ ನಲ್ಲಿರುವ ಮಾಹಿತಿ ತಿರುಚಲು ಸಾಧ್ಯವಿಲ್ಲ. ನಕಲಿ ಮಾಡಲು ಸಾಧ್ಯವಿಲ್ಲ. ನಕಲಿ ಸೃಷ್ಠಿ ಮಾಡಲು ಅವಕಾಶ ಇದ್ದರೆ ಅದನ್ನು ತಡೆಗಟ್ಟಿ, ಆಧಾರ್ ನಲ್ಲಿರುವ ಲೋಪದೋಷಗಳನ್ನು ಸರಿಪಡಿಸಿ ಎಂದು ಕೇಂದ್ರ ಸರಕಾರಕ್ಕೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಈಗ ಯಾವುದಾದರು ಸರ್ಕಾರಿ ಅನುಧಾನ ಅಥವಾ ಬ್ಯಾಂಕ್ ಮತ್ತು ಇತರೆ ಕೆಲಸದಲ್ಲಿ ಆಧಾರ್ ಜೋಡಣೆ ಮಾಡಿ ಬಳಸದೆ ಇದ್ದರೆ ನಿಷ್ಕ್ರಿಯಗೊಳ್ಳಬಹುದು. ಎನ್ನುವುದು ತಿಳಿದು ಬಂದಿದೆ.

ಹೌದು ವ್ಯಕ್ತಿಯ ಸಂಪೂರ್ಣ ವಿವರವನ್ನು ಹೊಂದಿರುವ ಆಧಾರ್ ಕಾರ್ಡ್ ಸರ್ಕಾರಿ ಕಲ್ಯಾಣ ಯೋಜನೆಗಳೊಂದಿಗೆ ಜೋಡಣೆ ಮಾಡಿ ಬಳಕೆ ಮಾಡಬೇಕು ಇಲ್ಲದಿದ್ದರೆ ಅದು ಮಾನ್ಯತೆಯನ್ನು ಕಳೆದುಕೊಳ್ಳುತ್ತದೆ. ಯುಐಡಿಎಐ ಅಧಿಕಾರಿಗಳ ಪ್ರಕಾರ, ನಿಮ್ಮ ಆಧಾರ್ ಕಾರ್ಡ್ ಮೂರು ವರ್ಷಗಳಿಂದ ಯಾವುದೇ ಸೇವೆಗೆ ಅದನ್ನು ಲಿಂಕ್ ಮಾಡದಿದ್ದರೆ ನಿಷ್ಕ್ರಿಯಗೊಳ್ಳಬಹುದು. ಇದಲ್ಲದೆ 5 ರಿಂದ 15 ವರ್ಷದ ಒಳಗಿನವರು ಬಯೋಮೆಟ್ರಿಕ್ ಮಾಹಿತಿಯನ್ನು ಒಮ್ಮೆಗೆ ಅಪ್ಲೋಡ್ ಮಾಡಬೇಕಾಗುತ್ತೆ. ಇಲ್ಲದಿದ್ದರೆ ಅಂತಹ ಆಧಾರ್ ಕಾರ್ಡ್-ಗಳು ರದ್ದಾಗಬಹುದು.

ಆಧಾರ್ ಕಾರ್ಡ್ ಲಿಂಕ್ ಆಗಿದೆ ಅಂತ ನೋಡಿವುದು ಹೇಗೆ?

ನಿಮ್ಮ ಆಧಾರ್ ಕಾರ್ಡ್ ಸಕ್ರಿಯವಾಗಿದೆಯೆ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಲು ಅಧಿಕೃತ ಯುಐಡಿಎಐ ವೆಬ್ ಸೈಟ್ ಪ್ರವೇಶಿಸಿ. ನಂತರ ‘ಆಧಾರ್ ಸೇವೆಗಳು’ ಮೆನು ಅಡಿಯಲ್ಲಿ ‘ಪರಿಶೀಲಿಸಲು ಆಧಾರ್ ಸಂಖ್ಯೆ’ ಲಿಂಕ್ ಕ್ಲಿಕ್ ಮಾಡಿ. ನಂತರ ಬರುವ ಮುಂದಿನ ಪುಟದಲ್ಲಿ ಮತ್ತು ಸಿಸ್ಟಮ್-ರಚಿತ ಭದ್ರತಾ ಕೋಡ್ ಅನ್ನು ನೀವು ನಮೂದಿಸಿ ಬಟನ್ ಕ್ಲಿಕ್ ಮಾಡಿ. ಈಗ ನಿಮ್ಮ ಆಧಾರ್ ಕಾರ್ಡ್ ಸಂಪೂರ್ಣ ವಿವರ ಪರದೆಯ ಮೇಲೆ ಬರುತ್ತದೆ. ಒಂದು ವೇಳೆ ಲಿಂಕ್ ಆಗಿಲ್ಲವಾದರೆ ಹತ್ತಿರದ ಆಧಾರ್ ನೋಂದಣಿ ಕೇಂದ್ರಕ್ಕೆ ಬೇಟಿ ನೀಡಿ. ಆಧಾರ್ ಅಪ್ಡೇಟ್ ಫಾರ್ಮ್ ಅನ್ನು ಭರ್ತಿ ಮಾಡಿ ನಿಮ್ಮ ಬಯೋಮೆಟ್ರಿಕ್ ನೀಡಿ.

ಏನಿದು ಬಯೋಮೆಟ್ರಿಕ್?

ಸುಪ್ರಿಂ ಕೋರ್ಟ್ ತಿಳಿಸಿದಂತೆ. ಆಧಾರ್ ಕಾರ್ಡ್-ನಲ್ಲಿ ಕೇವಲ ಕನಿಷ್ಠ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ. ಆಧಾರ್ ದೇಶದ ಸಾಮಾನ್ಯ ನಾಗರಿಕರ ಗುರುತಾಗಿದೆ. ಆಧಾರ್‌ ಕಾರ್ಡ್‌ಗೂ ಗುರುತಿಗೂ ವ್ಯತ್ಯಾಸವಿದೆ. ಬಯೋಮೆಟ್ರಿಕ್‌ ಮಾಹಿತಿಯನ್ನು ಒಂದು ಬಾರಿ ಸಂಗ್ರಹ ಮಾಡಿದರೆ ಅದು ವ್ಯವಸ್ಥೆಯಲ್ಲೇ ಉಳಿಯಲಿದೆ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ. ಬಡವರಿಗೆ ಆಧಾರ್ ಯೋಜನೆ ಅನುಕೂಲವಾಗಿದ್ದು, ಇದರಿಂದ ಫಲಾನುಭಾವಿಗಳಿಗೆ ನೇರವಾಗಿ ತಲುಪುತ್ತದೆ. ಜನತೆಗೆ ಆಧಾರ್ ಕಾರ್ಡ್ ನಿಂದ ಉಪಯೋಗವಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ಅದರಂತೆ ಆಧಾರ್ ಕಾಯ್ದೆಯ ಸೆಕ್ಷನ್ 57ನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿದೆ. ಇದರಿಂದಾಗಿ ಖಾಸಗಿ ಸಂಸ್ಥೆಗಳಿಗೆ ಅಥವಾ ಕಾರ್ಪೊರೇಟ್ ಸಂಸ್ಥೆಗಳಿಗೆ ಬಯೋಮೆಟ್ರಿಕ್ ಮಾಹಿತಿಯನ್ನು ನೀಡುವಂತಿಲ್ಲ. ಖಾಸಗಿ ಕಂಪನಿಗಳು ಆಧಾರ್ ಬಳಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.

ಹಾಗೆಯೇ ಸರ್ಕಾರಿ ಸೇವೆಗಳಲ್ಲಿ ಆಧಾರ್ ಬಳಕೆ ಮಾಡುವುದು ಕಡ್ಡಾಯ ಎಂದು ಕೂಡ ತಿಳಿಸಿತ್ತು. ಮತ್ತು ಪಾನ್ ಕಾರ್ಡ್ ಜೋಡಣೆಗು ಕೂಡ ಆಧಾರ್ ಕಡ್ಡಾಯ ಎಂದು ತಿಳಿಸಿದೆ. ಹೀಗೆ ಯಾವುದೇ ಒಂದು ಸೇವೆಯಲ್ಲಿ ಮೂರು ವರ್ಷಗಳಲ್ಲಿ ಆಧಾರ್ ಕಾರ್ಡ್ ಬಳಸದಿದ್ದರೆ ಆಧಾರ್ ರದ್ದಾಗಬಹುದು ಎಂದು ತಿಳಿದು ಬಂದಿದೆ.

Also read: ಪಾಸ್-ಪೋರ್ಟ್ ಇಲ್ಲ ಅಂತ ವಿದೇಶ ಪ್ರವಾಸ ಮಾಡೋಕೆ ಆಗ್ತಿಲ್ಲ ಅಂತ ಯೋಚನೆ ಮಾಡ್ಬೇಡಿ, ಇನ್ಮೇಲಿಂದ ಈ ದೇಶಗಳಿಗೆ ಹೋಗಿಬರಲು ಅಧಾರ್ ಕಾರ್ಡ್ ಸಾಕು!!