ಇನ್ಮುಂದೆ ನೀವು ಪ್ರಯಾಣಿಸುವ ವಿಮಾನ ರದ್ದಾದರೆ ಸಿಗಲಿದೆ 20 ಸಾವಿರ ಪರಿಹಾರ..

0
385

ವಿಮಾನ ಪ್ರಯಾಣಿಕರಿಗೆ ಅನುಕೂಲವಾಗಲೆಂದು ಹಲವು ಹೊಸ ಮಾರ್ಪಾಡುಗಳನ್ನು ಜಾರಿಗೆ ತರುತ್ತಿರುವ ವಿಮಾನ ಸಂಸ್ಥೆ ಟಿಕೆಟ್ ದರದಲ್ಲಿ ಬಾರಿ ಇಳಿಕೆ ಮಾಡಿ ಈ ಹಿಂದೆ ಸುದ್ದಿಯಲ್ಲಿತ್ತು. ಅದೇರೀತಿ ಈಗ ಪ್ರಯಾಣಿಕರು ಬುಕ್ ಮಾಡಿರುವ ವಿಮಾನ ಮುಂಚಿತವಾಗಿ ರದ್ದಾದರೆ ಪ್ರಯಾಣಿಕರು ಅಕ್ರೋಶಗೊಳ್ಳದಂತೆ ಅವರಿಗೆ ಪರಿಹಾರ ರೊಪದಲ್ಲಿ 20 ,000 ಸಾವಿರ ಹಣವನ್ನು ನೀಡಲು ಸಂಸ್ಥೆ ನಿರ್ಧಾರ ಮಾಡಿದೆ. ಈ ಕುರಿತು ಅಂತಿಮ ಕರಡನ್ನು ಸಿದ್ದಪಡಿಸಲಾಗಿದೆ. ಈ ಕರಡಿನಲ್ಲಿ ಅನೇಕ ವಿನಾಯತಿಗಳನ್ನು ಈಗಾಗಲೇ ನೀಡಲಾಗಿದೆ, ಕೆಲವು ವೈಮಾನಿಕ ವಿಷಯಗಳ ಕುರಿತು ಈ ಹಿಂದೆ ಧ್ವನಿ ಎತ್ತಿದ್ದ ಪ್ರಯಾಣಿಕರಿಗೆ ಈ ಕರಡಿನಲ್ಲಿ ಅನೇಕರ ಮಾರ್ಪಡುಗಳನ್ನು ನೀಡಲಾಗಿದೆ. ಎಂದು ಸಂಸ್ಥೆ ತಿಳಿಸಿದೆ.


Also read: ಪೇ ಚಾನೆಲ್‌ ಆಯ್ಕೆ ಮಾಡಿಲ್ಲವೇ ? ಹಾಗಾದ್ರೆ ಇಂದೇ ಸ್ಥಗಿತವಾಗುತ್ತೆ ನಿಮ್ಮ ಟಿವಿ ಪ್ರಸಾರ..

ಹೌದು ಒಂದು ವೇಳೆ ನೀವು ಪ್ರಯಾಣಿಸುತ್ತಿದ್ದ ವಿಮಾನ ರದ್ದಾದರೆ ವಿಮಾನ ಸಂಸ್ಥೆಗಳೆ ಪರಿಹಾರ ನೀಡುವ ನಿಯಮ ಕೂಡ ಈ ಕರಡಲ್ಲಿ ಸೇರಿಸಲಾಗಿದೆ. ಇದರಿಂದ ಪ್ರಯಾಣಿಕರಿಗೆ ಅನುಕೂಲವಾಗುತ್ತೆ ಎಂದು ಈ ನಿಯಮವನ್ನು ಜಾರಿ ತರುತ್ತಿದ್ದು ಷೇರುದಾರರೊಂದಿಗೆ ಮಾತನಾಡಿ ಈ ಬಗ್ಗೆ ಸರ್ಕಾರ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ಅಧಿಕೃತವಾಗಿ ತಿಳಿಸಿದೆ. ಸದ್ಯ ಇದೆ ವಿಷಯಕ್ಕೆ ಇದ್ದ ನಿಯಮದಲ್ಲಿ ವಿಮಾನಗಳು ರದ್ದುಗೊಂಡಾಗ ಪ್ರಯಾಣಿಕರ ಹಣದಲ್ಲಿ ಸ್ವಲ್ಪ ಹಣವನ್ನು ಪರಿಹಾರ ನೀಡಲಾಗುತ್ತದೆ. ಅದು ಕೂಡ ಬದಲಿ ವಿಮಾನ ವ್ಯವಸ್ಥೆ ಮಾಡಿಕೊಡದ ಸಂದರ್ಭದಲ್ಲಿ ಮಾತ್ರ ಮಾಡಲಾಗುತ್ತಿತು. ಈ ಹೊಸ ನಿಯಮದಲ್ಲಿ ಬದಲಿ ವಿಮಾನ ವ್ಯವಸ್ಥೆ ಹಾಗೂ ಪರಿಹಾರ ಹಣ ನೀಡುವ ಬಗ್ಗೆ ಕೂಡ ಈ ವಿಮಾನ ಸಂಸ್ಥೆಗಳು ಪ್ರಕಟಿಸಲಿದೆ.


Also read: ನೀವು ಭಾರತೀಯ ಜೀವ ವಿಮಾ ನಿಗಮದ ಗ್ರಾಹಕರೆ? ಹಾಗಾದ್ರೆ ತಪ್ಪದೆ ಈ ಮಾಹಿತಿ ನೋಡಿ ಇಲ್ಲದಿದ್ದರೆ ಭವಿಷ್ಯದಲ್ಲಿ ದಂಡ ಪಾವತಿಸಬೇಕಾಗುತ್ತೆ..

ಏನಿದೆ ಹೊಸ ರಚನೆಯ ಕರಡಿನಲ್ಲಿ?

ಹೊಸದಾಗಿ ರಚನೆ ಮಾಡಿರುವ ಈ ಕರಡಿನಲ್ಲಿ ವಿಮಾನ ಸಂಸ್ಥೆಗಳು 5 ಸಾವಿರದಿಂದ 20 ಸಾವಿರ ಹಣವನ್ನು ಪರಿಹಾರ ನೀಡಬೇಕು. ವಿಮಾನ ದರದಲ್ಲಿ ಕೂಡ ಏಕತೆಯನ್ನು ಅನುಸರಿಸಲು ಮುಂದಾಗಲಾಗಿದೆ, ಏರ್​ ಟ್ರಾಫಿಕ್​ ಅಥವಾ ಹವಾಮಾನ ವೈಪರೀತ್ಯದಿಂದ ವಿಮಾನಗಳು ನಿಧಾನವಾದರೆ ಇದಕ್ಕೆ ಪರಿಹಾರ ನೀಡಲಾಗುವುದಿಲ್ಲ. ಸೀಟ್​ ಆಯ್ಕೆಯಲ್ಲಿ ಕೂಡ ಹೆಚ್ಚುವರಿ ಮೊತ್ತ ನಿಗದಿಸಲು ಸರ್ಕಾರ ನಿರ್ಧರಿಸಿದೆ. ಅದೇ ರೀತಿ ಸ್ಪೈಸ್​ ಜೆಟ್​ ವಿಮಾನಗಳ ದರದಲ್ಲಿ ಬಾರಿ ರಿಯಾಯಿತಿ ನೀಡಿದೆ.

ಸ್ಪೈಸ್​ ಜೆಟ್​ ಭರ್ಜರಿ ಆಫರ್​:


Also read: ಹೆಚ್ಚು ದುಡ್ಡು ಬರುತ್ತೆ ಅಂತ ಸೌದಿ-ಯು.ಎ.ಇ. ಗೆ ಹೋಗೋರಿಗೆ ಇದನ್ನು ತೋರಿಸಿ, ಭಾರತೀಯರು ಅಲ್ಲಿ ಎಷ್ಟು ಕಷ್ಟ ಎದುರಿಸುತ್ತಿದ್ದಾರೆ ಗೊತ್ತಾ??

ಸ್ಪೈಸ್​ ಜೆಟ್​ ಅತ್ಯುತ್ತಮ ಆಫರ್​ವೊಂದನ್ನು ನೀಡಿದೆ. ಈ ಆಫರ್​ನಲ್ಲಿ ನೀವು ಪ್ರಯಾಣಿಸಲು ಪ್ರತಿ ಕಿ.ಮೀಗೆ ಕೇವಲ 1.75 ರೂ.ಗಳನ್ನು ಮಾತ್ರ ಪಾವತಿಸಿದರೆ ಸಾಕು. ಇದರ ಮೇಲೆ ಯಾವುದೇ ಹೆಚ್ಚುವರಿ ತೆರಿಗೆಗಳನ್ನು ವಿಧಿಸಲಾಗುವುದಿಲ್ಲ ಎಂದು ಸ್ಪೈಸ್​ ಜೆಟ್​ ತಿಳಿಸಿದೆ. ಈ ಕೊಡುಗೆಯಲ್ಲಿ ಅಂತರರಾಷ್ಟ್ರೀಯ ವಿಮಾನ ಟಿಕೆಟ್​ ದರ ಪ್ರತಿ ಕಿ.ಮೀ ಗೆ 2.5 ರೂನಿಂದ ಆರಂಭವಾಗಲಿದೆ. ಅಂದರೆ ದೇಶಿಯ ದರಗಳು 899 ರೂ.ನಿಂದ ಆರಂಭವಾದರೆ ಅಂತರಾಷ್ಟ್ರೀಯ ವಿಮಾನ ದರ 3699 ರೂಪಾಯಿಂದ ಪ್ರಾರಂಭವಾಗುತ್ತದೆ. ಅದೇರೀತಿ ಸ್ಟೇಟ್​ ಬ್ಯಾಂಕ್ ಆಫ್ ಇಂಡಿಯಾದ ಕ್ರೆಡಿಟ್ ಕಾರ್ಡ್​ ಬಳಸಿ ವಿಮಾನ ಟಿಕೆಟ್​ಗಳನ್ನು ಬುಕ್​ ಮಾಡಿದರೆ ಗ್ರಾಹಕರಿಗೆ 10% ಡಿಸ್ಕೌಂಟ್ ಸಿಗಲಿದೆ.

ಈ ವಿಶೇಷ ಕೊಡುಗೆಯನ್ನು ಸ್ಪೈಸ್ ಜೆಟ್​ ಅಧಿಕೃತ ವೆಬ್​ಸೈಟ್​ www.spicejet.com ಮಾತ್ರ ಲಭ್ಯವಿದೆ. ಮತ್ತು ಗ್ರಾಹಕರು ಪ್ರೊಮೊ ಕೋಡ್​ ರಿಯಾಯಿತಿಗಳನ್ನು ಬಳಸಿಕೊಳ್ಳಬಹುದಾಗಿದೆ. ಈ ಆಫರ್​ನಲ್ಲಿ ಪ್ರಯಾಣಿಕರು ಆಹಾರ ಮತ್ತು ಸ್ಪೈಸ್​ಮ್ಯಾಕ್ಸ್​ ಆಸನದ ಮೇಲೆ 25% ರಿಯಾಯಿತಿ ಪಡೆದುಕೊಳ್ಳಬಹುದಾಗಿದೆ. ಹಾಗೆಯೇ ಸ್ಪೈಸ್​ ಜೆಟ್​ ಮೊಬೈಲ್​ ಆ್ಯಪ್​ ಮೂಲಕ ಟಿಕೆಟ್​ ಬುಕ್ಕಿಂಗ್ ಮಾಡಿದರೆ 5% ಹೆಚ್ಚುವರಿ ರಿಯಾಯಿತಿ ಸಿಗಲಿದೆ.