ಮಾಜಿ ಸಿಎಂ ಸಿದ್ದರಾಮಯ್ಯಗೆ ಕೈಗೆ ಬಳೆ ತೊಟ್ಟಿಕೊಳ್ಳಿ ಎಂದು ಸಲಹೆ ನೀಡಿದ ಶೋಭಾ ಕರಂದ್ಲಾಜೆ; ಸಿದ್ದು ಬಲಹೀನರು ಎನ್ನುವ ಹೇಳಿಕೆ ಬಾರಿ ವೈರಲ್..

0
171

ರಾಜ್ಯ ರಾಜಕೀಯದಲ್ಲಿ ವಾದ ವಿವಾದಗಳು ಮುಂದುವರಿದಿದ್ದು ಮೈತ್ರಿಯಲ್ಲಿ ಹಲವು ಭಿನ್ನಮತಗಳು ಹುಟ್ಟಿಕೊಂಡಿದ್ದು ಎಲ್ಲಿ ಮೈತ್ರಿ ಉರುಳುತ್ತೋ ಎನ್ನೋ ಆತಂಕ ಶುರುವಾಗಿದ್ದು, ಇದರಿಂದ ಹೆಚ್ಚಿನ ಲಾಭ ಪಡೆದುಕೊಳ್ಳುತ್ತಿರುವುದು ಬಿಜೆಪಿ ಎಂದು ಆರೋಪಿಸಿರುವ ಸಿದ್ದರಾಮಯ್ಯ ಮೋದಿ ಮತ್ತು ಬಿಎಸ್ ಯಡಿಯೂರಪ್ಪನವರ ವಿರುದ್ದ ಟೀಕೆ ಮಾಡುತ್ತಲ್ಲೇ ಇದ್ದಾರೆ ಇದಕ್ಕೆ ಅಕ್ರೋಶಗೊಂಡ ಶೋಭಾ ಕರಂದ್ಲಾಜೆ ಸಿದ್ದರಾಮಯ್ಯ ಕೈಯಿಗೆ ಬಳೆ ಹಾಕಿಕೊಳ್ಳಬೇಕು ಎಂದು ಹೇಳಿದ್ದಾರೆ.

Also read: ಸಿದ್ದರಾಮಯ್ಯ ವಿರುದ್ದ ಸೋನಿಯಾ ಗಾಂಧಿಗೆ 18 ಪುಟಗಳ ದೂರು ಸಲ್ಲಿಸಿದ ಎಚ್‍ಡಿಡಿ; ಕೆಂಡಾಮಂಡಲವಾದ ಸಿದ್ದು ಹಾಗಾದ್ರೆ ಮೈತ್ರಿ ಪತನವಾಗುವುದು ನಿಜವಾ??

ಹೌದು ಸಿದ್ದರಾಮಯ್ಯನವರು ಅಪರೇಷನ್ ಕಮಲದ ವಿಷಯವಾಗಿ ಯಡಿಯೂರಪ್ಪನವರಿಗೆ ವಿರುದ್ದವಾಗಿ ಹೊದ್ದಬಂದಲ್ಲೆಲ್ಲ ಟೀಕೆ ಮಾಡಿಕೊಂಡು ಬರುತ್ತಿದ್ದಾರೆ. ಮೋದಿ ವಿರುದ್ದ ಕೂಡ ಹಲವು ಬಾರಿ ಟೀಕೆ ಮಾಡಿ ಅವನೊಬ್ಬ ಸುಳ್ಳುಗಾರ ಎನ್ನುವಂತ ಮಾತನ್ನು ಹೇಳಿದ್ದಾರೆ. ಇದೆ ವಿಷಯವಾಗಿ. ಮಾತನಾಡಿದ ಶೋಭಕ್ಕ, ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಶಕ್ತಿ ಇದ್ದರೆ ತಮ್ಮ ಶಾಸಕರನ್ನ ಹಿಡಿದಿಟ್ಟಿಕೊಳ್ಳಲಿ. ನೀವು ಬಲಹೀನರು, ನಿಮ್ಮ ಶಾಸಕರು ಎಲ್ಲಿದ್ದಾರೆ? ಅವರಿಗೆ ಸಮಾಧಾನಪಡಿಸುವ ಕೆಲಸ ನಿಮ್ಮದು. ಕೆಲಸ ಮಾಡಲು ಸಾಧ್ಯವಾಗದಿದ್ದರೆ ಕೈಗೆ ಬಳೆ ತೊಟ್ಟಿಕೊಳ್ಳಿ ಎಂದು ಸಂಸದೆ ಶೋಭಾ ಕರಂದ್ಲಾಜೆ ಕಿಡಿಕಾರಿ ಮಾದ್ಯಮಗಳ ಜೊತೆ ಮಾತನಾಡಿದ ಅವರು.

ಸಿದ್ದರಾಮಯ್ಯನವರು ಮತ್ತೆ ಸಿಎಂ ಆಗುವ ಕನಸು ಕಾಣುತ್ತಿದ್ದಾರೆ. ಅದಕ್ಕಾಗಿ ದೇವರಾಜ ಅರಸು ಅವರನ್ನ ಹೋಲಿಸಿಕೊಳ್ಳುತ್ತಿದ್ದಾರೆ. ಅರಸು ಅವರನ್ನ ಹೋಲಿಸಿಕೊಳ್ಳುವ ನೈತಿಕತೆ ಸಿದ್ದರಾಮಯ್ಯ ಅವರಿಗಿಲ್ಲ. ಅವರ ಶಾಸಕರನ್ನು ಹಿಡೆದಿಟ್ಟುಕೊಳ್ಳಲು ಆಗಲ್ಲ, ಕೆಲಸ ಮಾಡಲು ಆಗಲ್ಲ ಅಂದರೆ ಕೈಗೆ ಬಳೆ ತೊಟ್ಟುಕೊಳ್ಳಲಿ, ಅದನ್ನು ಬಿಟ್ಟು ಕೈಲಾಗದವರು ಮೈ ಪರಚಿಕೊಂಡರು ಎನ್ನುವ ಸ್ಥಿತಿಯಲ್ಲಿ ಸಿದ್ದರಾಮಯ್ಯ ಅವರಿದ್ದಾರೆ. ಅವರ ಪಕ್ಷದ ಸಾಧನೆ ಬಗ್ಗೆ ಹೇಳಲಿ, ಅದನ್ನು ಬಿಟ್ಟು ಸಿದ್ದರಾಮಯ್ಯ ಅವರು ಬಾಯಿ ಬಿಟ್ಟರೆ ಬಿಜೆಪಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರ ವಿರುದ್ಧ ಮಾತನಾಡುತ್ತಾರೆ. ಮೊದಲು ಅವರು ತಮ್ಮ ಯೋಗ್ಯತೆ ತಿಳಿದು ಬಾಯಿ ಬಿಡಬೇಕು.

ಅವರು ಮತ್ತೆ ಸಿಎಂ ಆಗುವ ಕನಸು ಇಟ್ಟುಕೊಂಡು ತಮ್ಮ ಬೆಂಬಲಿಗರಿಗೆ ಹುರಿದುಂಬಿಸುತ್ತಿದ್ದಾರೆ. ಅವರಂತೆ ಯಡಿಯೂರಪ್ಪನವರು ನಾನು ಮುಖ್ಯಮಂತ್ರಿ ಆಗುತ್ತೇನೆ ಎಂದು ಎಲ್ಲೂ ಹೇಳಿಲ್ಲ, ಇಂತಹ ಮಾತನ್ನು ಹೇಳಿಕೊಂಡು ತಿರುಗುತ್ತಿರುವ ಸಿದ್ದರಾಮಯ್ಯ ಮತ್ತು ಸಚಿವ ಡಿಕೆ ಶಿವಕುಮಾರ್ ಸಿಎಂ ಆಗ್ತೀವಿ ಎಂದು ಹೇಳುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಮತ್ತೆ ಈಗ ಕಮಿಷನ್ ಹೊಡೆದ ದುಡ್ಡಿನ ಚೀಲವನ್ನ ತಗೊಂಡು ಹೋಗುತ್ತಾರೆ. ಎನ್ನುವ ಭಯದಲ್ಲಿ ಡಿಕೆ ಶಿವಕುಮಾರ್ ಗೆ ಚುನಾವಣೆ ಉಸ್ತುವಾರಿ ನೀಡಿದ್ದಾರೆ. ಸೋಲಿನ ಭೀತಿಯಿಂದ ಸಮ್ಮಿಶ್ರ ಸರ್ಕಾರ ಯಾವ ರೀತಿಯ ಕುತಂತ್ರ ಮಾಡುತ್ತಿದೆ ಎನ್ನುವುದು ರಾಜ್ಯದ ಜನರಿಗೆ ಸರಿಯಾಗಿ ತಿಳಿದಿದೆ ಎಂದು ಹೇಳಿಕೆ ನೀಡಿದ್ದಾರೆ.

ಇದು ವಿರೋಧ ಪಕ್ಷದಿಂದ ಕೇಳಿಬರುತ್ತಿರುವ ಮಾತುಗಳಾದರೆ, ಮೈತ್ರಿಯಲ್ಲೇ ಸಿಎಂ ಪಟ್ಟಕೆ ವ್ಯಕ್ತಿಗಳ ಆಯ್ಕೆಯನ್ನು ವ್ಯಂಗ್ಯವಾಗಿ ಟ್ವೀಟ್ ಮಾಡುವ ಮೂಲಕ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಟ್ವೀಟ್ ವಾರ್ ನಡೆಸಿದ್ದು, ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಮಲ್ಲಿಕಾರ್ಜುನ್ ಖರ್ಗೆ ಮುಖ್ಯಮಂತ್ರಿಯಾಗಬೇಕಿತ್ತು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿಕೆ ನೀಡಿದ್ದರು. ಇಂದು ಟ್ವೀಟ್-ನಲ್ಲಿ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ ಅವರು, ಎಚ್.ಡಿ.ಕುಮಾರಸ್ವಾಮಿ ಹೇಳಿದ್ದು ಸರಿಯಾಗಿದೆ. ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಿಎಂ ಸ್ಥಾನ ಮಾತ್ರವಲ್ಲದೆ, ಅದಕ್ಕಿಂತಲೂ ಉನ್ನತ ಸ್ಥಾನದ ಅರ್ಹತೆ ಇದೆ. ಕಾಂಗ್ರೆಸ್-ಜೆಡಿಎಸ್ ಪಕ್ಷಗಳಲ್ಲಿ ಸಿಎಂ ಸ್ಥಾನದ ಅರ್ಹತೆಯ ಬಹಳಷ್ಟು ಜನ ಇದ್ದಾರೆ. ಅವರಲ್ಲಿ ಎಚ್.ಡಿ.ರೇವಣ್ಣ ಕೂಡ ಒಬ್ಬರು. ಎಲ್ಲಕ್ಕೂ ಕಾಲ ಕೂಡಿ ಬರಬೇಕು ಎಂದು ಟ್ವೀಟ್ ಮಾಡಿದ್ದಾರೆ.