ನೀವು ಒಂದು ಸರ್ಜಿಕಲ್ ಸ್ಟ್ರೈಕ್ ಮಾಡಿದರೆ, ನಾವು 10 ಅಂತಹ ದಾಳಿ ಮಾಡುತ್ತೀವಿ; ಭಾರತಕ್ಕೆ ಪಾಕ್-ನ ಎಚ್ಚರಿಕೆ!!

0
398

ಭಾರತ ನಮ್ಮ ಮೇಲೆ ಒಂದೇ ಒಂದು ಸರ್ಜಿಕಲ್ ದಾಳಿ ಮಾಡಿದರೂ ಅದಕ್ಕೆ ಪ್ರತಿಯಾಗಿ ನಾವು 10 ಸರ್ಜಿಕಲ್ ದಾಳಿ ಮಾಡುತ್ತೇವೆಂದು ಪಾಕಿಸ್ತಾನ ಎಚ್ಚರಿಕೆ ನೀಡಿದೆ. ಲಂಡನ್ ನಲ್ಲಿ ಸೇನಾ ಮುಖ್ಯಸ್ಥ ಜ.ಕಮರ್ ಜಾವೇದ್ ಬಾಜ್ವಾ ಅವರ ಜೊತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಇಂಟರ್ ಸರ್ವೀಸಸ್ ಪಬ್ಲಿಕ್ ರಿಲೇಷನ್ಸ್‌ ಜ.ಆಸಿಫ್ ಗಫೂರ್, ನಮ್ಮ ವಿರುದ್ಧ ದುಸ್ಸಾಹಸಕ್ಕೆ ಕೈಹಾಕುವವರಿಗೆ ಪಾಕಿಸ್ತಾನದ ಸಾಮರ್ಥ್ಯದ ಬಗ್ಗೆ ಯಾವುದೇ ಅನುಮಾನ ಬೇಡ ಎಂದಿದ್ದಾರೆ.

Also read: ಚತ್ತೀಸ್ಘಡದಲ್ಲಿ ಚುನಾವಣೆಗೂ ಮುಂಚೆಯೇ ಆಪರೇಷನ್ ಕಮಲ ನಡೆದು ಹೋಯಿತೇ??

ಪಾಕಿಸ್ತಾನದಲ್ಲಿ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಬೇಕು ಎಂಬುದು ಸೇನೆಯ ಬಯಕೆಯಾಗಿದೆ. ಜುಲೈನಲ್ಲಿ ನಡೆದ ಸಾರ್ವತ್ರಿಕ ಚುನಾವಣೆ ದೇಶದ ಇತಿಹಾಸದಲ್ಲೇ ಅತ್ಯಂತ ಪಾರದರ್ಶಕವಾಗಿತ್ತು ಎಂದೂ ಅವರು ಹೇಳಿದ್ದಾರೆ. ಮಾಧ್ಯಮದ ಮೇಲೆ ನಿಯಂತ್ರಣ ಹೇರಲಾಗಿದೆ ಎಂಬ ವರದಿಗಳನ್ನು ಅಲ್ಲಗಳೆದಿರುವ ಅವರು, ದೇಶದಲ್ಲಿ ಸಂಪೂರ್ಣ ವಾಕ್ ಸ್ವಾತಂತ್ರ್ಯವಿದೆ ಎಂದು ಪ್ರತಿಪಾದಿಸಿದ್ದಾರೆ. ಇದನ್ನು ‘ರೇಡಿಯೊ ಪಾಕಿಸ್ತಾನ್’ ವರದಿ ಮಾಡಿದೆ.

Also read: ರಾಹುಲ್ ಗಾಂಧಿ ಎಚ್.ಎ.ಎಲ್. ಸಂಸ್ಥೆಯ ಉಳಿವಿಗಿ ಮಾಡ್ತಿರೋ ಕೆಲಸಗಳನ್ನು ನೋಡಿದ್ರೆ ಗೊತ್ತಾಗುತ್ತೆ ಅವರಲ್ಲಿ ಎಷ್ಟು ಪ್ರಬುದ್ದತೆ ಬಂದಿದೆ ಅಂತ…

ಇತ್ತೀಚೆಗಷ್ಟೇ ಗಡಿ ನಿಯಂತ್ರಣ ರೇಖೆಯಲ್ಲಿದ್ದುಕೊಂಡು ಭಾರತದ ಮೇಲೆ ವಿಧ್ವಂಸಕ ದಾಳಿ ನಡೆಸಲು ಹೊಂಚು ಹಾಕಿ ಕೂತಿರುವ ಉಗ್ರರ ವಿರುದ್ಧ ಮತ್ತೊಂದು ಸರ್ಜಿಕಲ್ ದಾಳಿಯ ಅವಶ್ಯಕತೆ ಇದೆ ಎಂದು ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದರು.. ಈ ಹೇಳಿಕೆ ಬೆನ್ನಲ್ಲೇ ಪಾಕ್ ಸರ್ಜಿಕಲ್ ಸ್ಟ್ರೈಕ್ ನಡೆಸುವ ಎಚ್ಚರಿಕೆ ನೀಡಿದೆ.


Also read: ರಾಜಕೀಯ ತಿರುವು ಪಡೆದ ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶ ವಿಚಾರ; ಶಬರಿಮಲೆ ಉಳಸಿ ಘೋಷವಾಕ್ಯದಡಿ ಪಾದಯಾತ್ರೆ..!

ಇತ್ತ 2019ರ ಲೋಕಸಭೆ ಚುನಾವಣೆಯಲ್ಲಿ ಸರ್ಜಿಕಲ್ ಸ್ಟ್ರೈಕ್ ಚುನಾವಣೆಯ ಪ್ರಮುಖ ವಿಷಯಗಳಲ್ಲೊಂದಾಗಲಿದೆ. ಪಾಕಿಸ್ತಾನದ ಗಡಿಪ್ರದೇಶದಲ್ಲಿ ಭಯೋತ್ಪಾದಕ ಶಿಬಿರಗಳ ಮೇಲೆ ಸೈನಿಕರು ಸೀಮಿತ ದಾಳಿ ಮಾಡಿರುವುದು ಸಾಮಾನ್ಯ ಮಾತಲ್ಲ. ಹಿಂದೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಕಾರ್ಗಿಲ್ ಮೇಲೆ ದಾಳಿ ನಡೆಸಿದ ಪಾಕ್ ಸೈನಿಕರ ವಿರುದ್ದ ಹಿಮ್ಮೆಟ್ಟಿಸಿ ಭಾರತ ವಿಜಯದ ಪತಾಕೆ ಹಾರಿಸಿತ್ತು. ಹೀಗಾಗಿ ಪ್ರತಿ ವರ್ಷ ಕಾರ್ಗಿಲ್ ವಿಜಯೋತ್ಸವ ಆಚರಣೆ ಮಾಡಲಾಗುತ್ತಿದೆ. ಇದೇ ರೀತಿ ಸರ್ಜಿಕಲ್ ದಿನಾಚರಣೆಯನ್ನು ಮಾಡಲು ಕೇಂದ್ರ ಸರ್ಕಾರ ಕಳೆದ ತಿಂಗಳು ಸರ್ಜಿಕಲ್ ದಿನವನ್ನು ಆಚರಿಸಿತ್ತು. 2016 ಸೆ.28ರಂದು ಭಾರತೀಯ ಸೇನಾಪಡೆ ಪಿಒಕೆಯಲ್ಲಿ ಭಾರತದ ಮೇಲೆ ದಾಳಿ ನಡೆಸಲು ಹೊಂಚು ಹಾಕಿದ್ದ ಪಾಕಿಸ್ತಾನ ಬೆಂಬಲಿತ ಅನೇಕ ಭಯೋತ್ಪಾದಕ ನೆಲೆಗಳ ಮೇಲೆ ಒಂದೇ ರಾತ್ರಿಯಲ್ಲಿ ದಾಳಿ ಮಾಡಿ ಧ್ವಂಸ ಮಾಡಿತ್ತು. ಈ ಮಿಂಚಿನ ಕಾರ್ಯಾಚರಣೆಯಲ್ಲಿ ಹಲವು ಉಗ್ರರು ಹತರಾಗಿದ್ದರು.