ಚಿಕನ್ ಪ್ರಿಯರೆ ಎಚ್ಚರ; ಬೆಂಗಳೂರಿನಲ್ಲಿ ರೋಗದಿಂದ ಸತ್ತ ಕೋಳಿ ಮಾಂಸದಿಂದ ತಯಾರಾಗುತ್ತೆ ಚಿಕನ್ ಕಬಾಬ್..!

0
464

ಬೆಂಗಳೂರಿನಲ್ಲಿ ಮಾಂಸ ತಿನ್ನಬೇಕು ಎಂದರೆ ಹತ್ತು ಸಾರಿ ಯೋಚನೆ ಮಾಡಲೇಬೇಕಾಗುತ್ತೆ. ಏಕೆಂದರೆ ಕೋಳಿ ಮಾಂಸದ ಜೊತೆಗೆ ದನದ, ನಾಯಿಯ ಮಾಂಸವನ್ನು ಮಿಶ್ರಣ ಮಾಡಿ ಮಾರುತ್ತಿದ್ದ ಬಗ್ಗೆ ಹಲವು ಸುದ್ದಿ ಹರಡಿದ್ದವು, ಈಗ ಅದಕ್ಕೂ ಭಯಾನಕವಾದ ಸತ್ಯವನ್ನು ಪಬ್ಲಿಕ್ ಟಿವಿ ಪತ್ತೆ ಮಾಡಿದ್ದು, ಬೆಂಗಳೂರಿನಲ್ಲಿ ಪ್ರತಿನಿತ್ಯವೂ ಸಾವಿರಾರು ಕೆಜಿ ಸತ್ತ ಕೋಳಿಯ ಮಾಸವನ್ನು ಮಾರಾಟ ಮಾಡುತ್ತಿರುವುದು ಪತ್ತೆಯಾಗಿದೆ. ಆಘಾತಕಾರಿ ವಿಷಯವೆಂದರೆ ಚಿಕನ್ ಐಟಂಗಳಿಗೆ ಪೇಮಸ್ ಆದ ದೊಡ್ಡ ದೊಡ್ಡ ಹೋಟೆಲ್-ಗಳು ಇಂತಹ ಮಾಂಸವನ್ನು ಖರೀದಿ ಮಾಡುತ್ತಿರುವುದು ಸ್ವತಹ ಚಿಕನ್ ವ್ಯಾಪಾರಿಯೇ ಬಾಯಿಬಿಟ್ಟಿದ್ದಾನೆ. ಇದು ಕೇವಲ ಬೆಂಗಳೂರಿನಲ್ಲಿ ಮಾತ್ರವಲ್ಲದೆ ರಾಜ್ಯದ ತುಂಬೆಲ್ಲ ಇದೆ ಪರಿಸ್ಥಿತಿ ಇದೆ ಅಂತೆ.

ಹೌದು ಪ್ರತಿನಿತ್ಯವೂ ಚಿಕನ್ ಇಲ್ಲದೆ ಊಟ ಸೇರುವುದಿಲ್ಲ ಎನ್ನುವರು ಸಾಕಷ್ಟಿದ್ದು, ಇಂತವರು ನೋಡಲೇ ಬೇಕಾದ ಸುದ್ದಿ ಇಲ್ಲಿದೆ. ಸಿಲಿಕಾನ್ ಸಿಟಿಯಲ್ಲಿ ಸತ್ತ ಕೋಳಿಗಳ ಕರಾಳ ಮಾರಾಟ ದಂಧೆ ನಡೆಯುತ್ತಿದೆ. ಸತ್ತು ಒಂದೆರಡು ದಿನ ಆಗಿರುವ ಕೋಳಿಗಳನ್ನ ಮಾರಾಟ ಮಾಡುತ್ತಿದ್ದಾರೆ. ಹಲವು ರೋಗದಿಂದ ಸತ್ತ ಕೋಳಿಗಳನ್ನು ಕಡಿಮೆ ಹಣಕ್ಕೆ ಮಾರಾಟ ಮಾಡುತ್ತಿದ್ದು ಇದನ್ನು ಕಬಾಬ್ ಅಂಗಡಿಯವರು, ಹೋಟೆಲ್-ನವರು ತಂದು ಗ್ರಾಹಕರಿಗೆ ತಿನಿಸುತ್ತಿದ್ದಾರೆ. ಮಾಹಿತಿಯಂತೆ ಹೆಗ್ಗನಹಳ್ಳಿಯ ಚಿಕನ್ ಸೆಂಟರ್‌-ನಲ್ಲಿ ಚಿಕನ್ ಬೆಲೆಯನ್ನು ವಿಚಾರಿಸಿದಾಗ ವ್ಯಾಪಾರಿ ಕೂಡಲೇ 50 ರೂಪಾಯಿ ಎಂದು ತಿಳಿಸಿದ್ದಾನೆ. 200 ರೂಪಾಯಿ ಬೆಲೆಯಿರುವ ಚಿಕನ್ ಹೇಗೆ 50 ಕ್ಕೆ ಸಿಗುತ್ತೆ ಎಂದು ಅನುಮಾನಗೊಂಡು ವಿಚಾರಣೆ ನಡೆಸಿದ್ದಾಗ ಸತ್ತ ಕೋಳಿ ಮಾರಾಟದ ಜಾಲ ದೊಡ್ಡದಿದೆ ಅನ್ನೊದು ತಿಳಿದಿದ್ದು.

Chicken-Farm-4
source:flickr.com

ಕೆ.ಆರ್ ಮಾರ್ಕೆಟಿನಲ್ಲಿರುವ ಮಾಂಸದ ಮಾರುಕಟ್ಟೆಯಿಂದ ಹಲವು ಕಡೆಗಳಿಗೆ ದೊಡ್ಡ ಮಟ್ಟದಲ್ಲಿ ಮಾಂಸ ಸರಬರಾಜಾಗುತ್ತದೆ. ಅಲ್ಲಿಯೂ ಕಬಾಬ್ ಅಂಗಡಿಗೆ ಚಿಕನ್ ಬೇಕು ಎಂದು ಕೇಳಿದಾಗ, ಅಲ್ಲಿ ಒಬ್ಬೊಬ್ಬರು ಒಂದೊಂದು ದರ ಹೇಳಿದರು. ಯಾವಾಗ ನಾವು 50 ರೂಪಾಯಿಗೆ ಚಿಕನ್ ಸಿಗುತ್ತೆ ಎಂದು ಹೇಳಿದಾಗ, ವಿಳಾಸ ತೋರಿಸಿದರು. ಅಲ್ಲಿ ವಿಧವಿಧ ಮಾಂಸದ ತುಂಡು ಮಾಡುತ್ತಿದ್ದ ವ್ಯಕ್ತಿಯನ್ನ ಮಾತನಾಡಿಸಿದಾಗ ಆತ ಎಲ್ಲವನ್ನೂ ಹೇಳಲು ಶುರು ಮಾಡಿದ. “40 ರೂಪಾಯಿಗೆ ಒಂದು ಕೆಜಿ ಕೋಳಿ ಮಾಂಸ ಸಿಗುತ್ತೆ. ನಾಳೆ ಬೆಳಗ್ಗೆ ಬನ್ನಿ. ನೂರಾರು ಕೆಜಿ ಸತ್ತ ಕೋಳಿಯ ಮಾಂಸಕ್ಕೆ ಬೇಡಿಕೆ ಇದೆ. ಒಂದೊಂದು ಹೋಟೆಲಿಗೂ 50-60 ಕೆಜಿ ಕೊಡುತ್ತೇವೆ” ಎಂದು ಹೇಳಿದ್ದಾನೆ.

ವೀಡಿಯೊ ಕೃಪೆ: Public tv

ಅಷ್ಟೇಅಲ್ಲದೆ ಪ್ರತಿದಿನ 300, 400 ಕೆಜಿ ಬರುತ್ತೆ. ಬೋಗ್ ರಾಜ್ ಫ್ಯಾಕ್ಟರಿಯಿಂದ, ಕೋಲಾರ್ ರಸ್ತೆಯಿಂದ ಈ ಕೋಳಿಗಳು ಬರುತ್ತೆ. ಕೋಳಿ ಬಾಡಿ 40 ರೂಪಾಯಿಗೆ ಒಂದು ಕೆಜಿ ಸಿಗುತ್ತೆ. ನೋಡೋಕೆ ಸತ್ತ ಹಾಗೆ ಕಾಣುತ್ತೆ ಕಟ್ ಮಾಡಿದ ಬಳಿಕ ಗೊತ್ತಾಗಲ್ಲ. ಬೇಕಿದ್ದರೆ ಈ ಮಾಂಸದ ಜೊತೆಗೆ ಸ್ವಲ್ಪ ತಾಜಾ ಮಾಂಸವನ್ನು ಮಿಕ್ಸ್ ಮಾಡಿ ಏನೂ ಗೊತ್ತಾಗಲ್ಲ. 300 ಕೆಜಿ ಏನು ಎಷ್ಟು ಬೇಕಾದರು ಮಾಂಸ ಸಿಗುತ್ತೆ ಸತ್ತ ಕೋಳಿ ಎಂದು ಜನರಿಗೆ ತಿಳಿಯುವುದಿಲ್ಲ, ರುಚಿಯಲ್ಲಿ ಏನು ವ್ಯತ್ಯಾಸ ಬರಲ್ಲ. ಶೇ.10 ಬೇರೆ ರೀತಿ ಅನಿಸಬಹುದು. ಅದಕ್ಕೆ ವೆನಿಗರ್ ಅಲ್ಲಿ ಚಿಕನ್ ತೊಳೆದು, ಉಪ್ಪು ಖಾರ ಚೆನ್ನಾಗಿ ಹಾಕಿದರೆ ಗೊತ್ತಾಗಲ್ಲ. ಬೆಳಗ್ಗೆ ಬಂದು ನೋಡಿ ಒಬ್ಬೊಬ್ರು 50ರಿಂದ 60 ಕೆಜಿ ಸತ್ತ ಕೋಳಿ ಮಾಂಸ ತೆಗೆದುಕೊಂಡು ಹೋಗುತ್ತಾರೆ ಎಂದು ಸತ್ಯಾಂಶ ಬಾಯಿಬಿಟ್ಟಿದ್ದಾನೆ. ಅದಕ್ಕಾಗಿ ಚಿಕನ್ ಪ್ರಿಯರು ಸ್ವಲ್ಪ ಎಚ್ಚರವಹಿಸಿ ಚಿಕನ್ ಸೇವಿಸುವುದು ಒಳ್ಳೆಯದು. ಇಲ್ಲದಿದ್ದರೆ ಅಪಾಯಕಾರಿ ಚಿಕನ್ ತಿಂದು ಹಲವು ರೋಗಗಳಿಗೆ ತುತ್ತಾಗಬೇಡಿ.

Also read: ಮೋದಿಯಿಂದಲೇ ಚಂದ್ರಯಾನ-2ಗೆ ಅಪಶಕುನವಾಯಿತು; ಎಚ್.ಡಿ.ಕೆ.ಯಿಂದ ಬೇಜವಾಬ್ದಾರಿ ಹೇಳಿಕೆ!!

ಮಾಹಿತಿ ಕೃಪೆ: Public tv