ಕಿಡ್ನಿ ಮಾರಿ IMA ಸಂಸ್ಥೆಗೆ ಹಣ ಹೂಡಿದ ಮಹಿಳೆಯ ಮನಕಲುವ ಸುದ್ದಿ ವೈರಲ್; ಈ ವಂಚನೆಯಲ್ಲಿ ಹಣ ಕಳೆದುಕೊಂಡ ಸಾವಿರಾರು ಕುಟುಂಬಗಳ ಪರಿಸ್ಥಿತಿ ಹೇಗೆದೆ ನೋಡಿ..

0
366

ಐಎಂಎ ಸಂಸ್ಥೆ ಮಾಲೀಕ ಮನ್ಸೂರ್ ಖಾನ್ ಸಾವಿರಾರು ಕೋಟಿ ಹಣ ವಂಚನೆ ಮಾಡಿದ ಘಟನೆಯ ಹಿಂದೆ ಸಾವಿರಾರು ಕುಟುಂಬ ಬೀದಿಗೆ ಬಂದಿದ್ದು ಒಂದು ಕುಟುಂಬದ ಕತೆ, ಒಂದೊದು ಸಿನಿಮಾ ಕತೆ ತರಾ ಇದ್ದು, ಈ ಸಂಸ್ಥೆಗೆ ಹಣ ಹೂಡಿದ ಜನರಲ್ಲಿ ಮಹಿಳೆಯೊಬ್ಬಳು ತನ್ನ ಕಿಡ್ನಿಮಾರಿ ಹಣ ಹೂಡಿಕೆ ಮಾಡಿದಳು ಎನ್ನುವ ವಿಚಾರಗಳು ಹೊರಬಿದಿದ್ದು, ಅದೆಷ್ಟೋ ಮಕ್ಕಳು ಶಾಲೆಗೆ ಕಟ್ಟಲು ಹಣ ವಿಲ್ಲದೆ ಮನೆಯಲ್ಲಿದ್ದಾರೆ, ಚಿಕಿತ್ಸೆಗೆ ಕೂಡಿಟ್ಟ ಹಣವನ್ನು ಹೂಡಿಕೆ ಮಾಡಿ ಹಾಸಿಗೆ ಹಿಡಿದ್ದಾರೆ, ಮಕ್ಕಳ ಮದುವೆ ಮಾಡುವ ಹಣವನ್ನು ಕಳೆದುಕೊಂಡು ಮದುವೆಗಳೇ ನಿಂತಿವೆ, ಹಣ ಹೂಡಿಕೆ ಮಾಡಿದ ಪತ್ನಿಯನ್ನು ಪತಿ ಹೊರದಬ್ಬಿದ ವಿಚಾರಗಳು ತಿಳಿದು ಬರುತ್ತಿವೆ. ಹೀಗೆ ಸಾವಿರಾರು ಕುಟುಂಬಗಳು ಬೀದಿಗೆ ಬಿದ್ದ ಕರುಣಾಜನಕ ಕತೆ ಇಲ್ಲಿದೆ ನೋಡಿ.

@suddimane.com

Also read: ತನ್ನ ಜೀವನವನ್ನೇ ತ್ಯಾಗ ಮಾಡಿ ಮಗನ ಭವಿಷ್ಯಕ್ಕಾಗಿ ಶ್ರಮಿಸಿದ ಅಮ್ಮನಿಗೆ ಪುನರ್ ವಿವಾಹ ಮಾಡಿಸಿದ ಮಗ; ತಾಯಿಗೆ ಶುಭಾಶಯ ತಿಳಿಸಿದ್ದು ಹೀಗೆ..

ಕಿಡ್ನಿಮಾರಿ ಐಎಂಎ ಗೆ ಹಣ ಹೂಡಿಕೆ?

ಹೌದು ರಾಜ್ಯದಲ್ಲಿ ಬಿರುಗಾಳಿ ಎಬ್ಬಿಸಿದ ಜುವೇಲರಿ ಸಂಸ್ಥೆ ಮಾಲೀಕನ ವಂಚನೆಯಲ್ಲಿ ಶಿವಾಜಿನಗರ ಲೇಡಿ ಕರ್ಜನ್‌ ರಸ್ತೆಯಲ್ಲಿರುವ ‘ಐಎಂಎ’ ಕಚೇರಿ ಎದುರು ಆರ್‌.ಟಿ.ನಗರ ನಿವಾಸಿ ಫರೀದ ಬೇಗ್‌ (49) ಎಂಬುವವರು ಗೋಳಾಡುತ್ತಿದ್ದ ದೃಶ್ಯ ಮನಕಲಕುವಂತಿದೆ. ಪತಿಯಿಲ್ಲದ ಮುಸ್ಲಿಂ ಮಹಿಳೆ ಫರೀದಾ ಬೇಗ್‌ ಎನ್ನುವರು ಇಬ್ಬರು ಹೆಣ್ಣು ಮಕ್ಕಳು ಹಾಗೂ ಪುತ್ರನ ಜತೆ ಆರ್‌.ಟಿ.ನಗರದಲ್ಲಿ ನೆಲೆಸಿದ್ದಾರೆ. ಫರೀದ ಅವರು ಮನೆ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಪುತ್ರ ಗ್ಯಾರೇಜ್‌ ಕೆಲಸಕ್ಕೆ ಹೋಗುತ್ತಿದ್ದು, ಇಬ್ಬರು ಹೆಣ್ಣು ಮಕ್ಕಳನ್ನು ವ್ಯಾಸಂಗ ಮಾಡುತ್ತಿದ್ದಾರೆ. ಈ ನಡುವೆ ನಾಲ್ಕು ವರ್ಷಗಳ ಹಿಂದೆ ಫರೀದ ಅವರ ಪತಿ ನಿಧನ ಹೊಂದಿದ್ದರು.

Also read: ಮಂಡ್ಯದ ಕನಗನಮರಡಿ ಬಸ್ ದುರಂತದಲ್ಲಿ ಮೃತಪಟ್ಟ ಕುಟುಂಬಸ್ಥರಿಗೆ ಕೇಂದ್ರದಿಂದ ತಲಾ 2 ಲಕ್ಷ ರೂ. ಪರಿಹಾರ ಘೋಷಣೆ..

ಜೀವನಕ್ಕೆ ಏನು ಆಧಾರ ಇಲ್ಲದಾಗ ಹೇಗಾದರೂ ಮಾಡಿ ಮಕ್ಕಳ ಭವಿಷ್ಯವನ್ನು ನೋಡಬೇಕು ಎಂದು ಯೋಚನೆಯಲ್ಲಿದರು ಆಗ ನೆರವು ನೀಡುತ್ತಿದ್ದ ಕುಟುಂಬದ ಮಹಿಳೆ ಎರಡು ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದರು. ಫರೀದ ಅವರು ತಾವೇ ಸ್ವತಃ ಮಹಿಳೆಗೆ ಒಂದು ಮೂತ್ರಪಿಂಡವನ್ನು ದಾನ ಮಾಡಿದ್ದರು. ಇದಕ್ಕೆ ಪ್ರತಿಫಲವಾಗಿ ಮೂತ್ರಪಿಂಡ ಪಡೆದ ಮಹಿಳೆ ಕುಟುಂಬ ಫರೀದ ಅವರಿಗೆ ಮೂರು ಲಕ್ಷ ರು. ನೀಡಿತ್ತು. ಈ ಹಣದಿಂದ ಮಕ್ಕಳ ಮದುವೆ ಮಾಡುವ ಬಗ್ಗೆ ಯೋಚನೆಯಲ್ಲಿದ ಅವರು ಸದ್ಯ ಹಣವನ್ನು ಠೇವಣಿ ಇಟ್ಟಿದರು.
ಆದರೆ ಪರಿಚಯಸ್ಥರಿಂದ ಐಎಂಎ ಸಂಸ್ಥೆಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚು ಹಣ ಬರುತ್ತದೆ. ಎಂದು ತಿಳಿದು ಠೇವಣಿ ಇಟ್ಟಿದ್ದ ಹಣವನ್ನು ಒಂದೂವರೆ ವರ್ಷದ ಹಿಂದೆ ಐಎಂಎ ಸಂಸ್ಥೆಯಲ್ಲಿ ಹೂಡಿಕೆ ಮಾಡಿದ್ದರು. ಇದೀಗ ಏಕಾಏಕಿ ಸಂಸ್ಥೆಯ ಮಾಲೀಕ ವಂಚನೆ ಮಾಡಿ ಪರಾರಿಯಾಗಿದ್ದಾನೆ. ನಾನು ಹಣವನ್ನು ಹಣವನ್ನು ಐಎಂಇನಲ್ಲಿ ಹಾಕುವ ವೇಳೆ ಕಿಡ್ನಿ ಪಡೆದ ಮಹಿಳೆ, ಈ ರೀತಿ ದುಡ್ಡು ಹಾಕಿ ಕಳೆದುಕೊಳ್ಳಬೇಡಿ ಎಂದು ಸಲಹೆ ನೀಡಿದ್ದರು. ಆದರೆ, ಮಗಳ ಮದುವೆ ಖರ್ಚಿಗಾಗಿ ಹೆಚ್ಚಿನ ಹಣದ ಆಸೆಗೆ ಬಿದ್ದು, ಹಾಳುಮಾಡಿಕೊಂಡೆ. ಈಗ ಹಣ ಕಳೆದುಕೊಂಡ ನಾವು ಏನು ಮಾಡುವುದು ಎಂದು ಫರೀದ ಕಣ್ಣೀರಿಡುತ್ತಿದ್ದರೆ, ಅವರನ್ನು ಪುತ್ರಿ ಸಮಾಧಾನ ಮಾಡುತ್ತಿದ್ದ ದೃಶ್ಯ ಸ್ಥಳದಲ್ಲಿದ್ದವರ ಕಣ್ಣಿನಲ್ಲಿ ನೀರು ತರಿಸಿತ್ತು.

Also read: ಬೆಂಗಳೂರಿಗರಿಗೆ ನೂರಾರು ಕೋಟಿ ಪಂಗನಾಮ; ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಆಡಿಯೋ ಮಾಡಿಟ್ಟು IMA ಜ್ಯುವಲರ್ಸ್ ಮಾಲೀಕ ಎಸ್ಕೇಪ್..

ಹೀಗೆ ಸಾವಿರಾರು ಜನರು ತಮ್ಮ ಇಡಿ ಜೀವನವನ್ನೇ ದುಡಿದು ಹಣವನ್ನು ಈ ಸಂಸ್ಥೆ ಹಾಕಿದ್ದಾರೆ ಈ ರೀತಿಯ ವಂಚನೆ ಆಗಿದ್ದು ಜನರನ್ನು ಆತಂಕಕ್ಕೆ ತಳ್ಳಿದೆ. ಇದರ ಹಿಂದೆ ರಾಜಕಾರಣಿಗಳು, ಪೊಲೀಸ್ ಅಧಿಕಾರಿಗಳು, ಪತ್ರಕರ್ತರು ಸಹ ವಂಚನೆಯಲ್ಲಿ ಇದ್ದಾರೆ ಅವರೇ ಈಗ ದುಡ್ಡನು ವಾಪಸ್ ಕೊಡಿಸಬೇಕು ಎಂದು ಜನರು ಗೋಳಾಡುತ್ತಿದ್ದಾರೆ. ಇದರಿಂದ ಆದರು ಯಾವುದೇ ಸಂಸ್ಥೆಗೆ ಹಣ ಹಾಕುವ ಮುನ್ನ ಎಚ್ಚರವಹಿಸಬೇಕಾಗಿದೆ.