ಸ್ನೇಹಿತ ಜನ್ಮದಿನವನ್ನು ಸೆಲಬ್ರೇಟ್‌ ಮಾಡುವ ಖುಷಿಯಲ್ಲಿ ಜನ್ಮದಿನದ ಪ್ರೀತಿಯ ಗುದ್ದು ನೀಡಿದ ಸ್ನೇಹಿತರು; ಪ್ರಾಣವನ್ನೇ ಬಿಟ್ಟ ವಿದ್ಯಾರ್ಥಿ..

0
404

ಯುವಪಿಳಿಗೆ ಹರೆಯದ ವಯಸ್ಸಿನಲ್ಲಿ ಮಾಡುವ ಹುಚ್ಚುತನಕ್ಕೆ ಮಿತಿಯೇ ಇರೋದಿಲ್ಲ ಅದರಲ್ಲಿ BIRTHDAY ಆಚರಣೆ ಮಾಡುವ ವೇಳೆ ಅಂತು ಏನೆಲ್ಲ ಮಾಡುತ್ತಾರೆ ಎನ್ನುವುದಕ್ಕೆ ವಿದ್ಯಾರ್ಥಿ ಜೀವನದಲ್ಲಿ ಆಗಿರುವ ನೆನಪುಗಳು ಗೊತ್ತೇ ಇದೆ. ಇತ್ತಿಚ್ಚಿಗೆ ಇದರ ಹುಚ್ಚಾಟ ಹೆಚ್ಚಾಗಿದೆ. ಹುಟ್ಟುಹಬ್ಬವಿರುವ ಯುವಕ/ಯುವತಿಯರಿಗೆ ಕೆಲವು ಮಾರಕ ಸ್ಪ್ರೆಗಳನ್ನು ಹಾಕಿ ಅದರಿಂದ ಮಜ್ಜಾ ಮಾಡುವುದು, ಇಲ್ಲ ಹಸಿ ಎಗ್ ಹಾಕುವುದು, ನೀರು ಎರಚುವುದು ಹೊಡೆಯುವುದು ಹೀಗೆ ಹಲವು ರೀತಿಯಲ್ಲಿ ಬರ್ತ್ಡೇ ಆಚರಣೆ ಮಾಡುವುದು ಸಾಮಾನ್ಯವಾಗಿದೆ. ಇದೆ ರೀತಿಯಲ್ಲಿ ಸ್ನೇಹಿತರು ನೀಡಿದ ಬರ್ತ್ಡೇ ಗುದ್ದಿಗೆ ವಿದ್ಯಾರ್ಥಿ ಪ್ರಾಣವನ್ನೇ ಕಳೆದುಕೊಂಡಿದ್ದಾನೆ.

Also read: ಮಕ್ಕಳ ಉತ್ಪನ್ನಗಳ ಮಾರಾಟದಲ್ಲಿ ಭಾರೀ ಜನಪ್ರಿಯವಾಗಿರುವ ಜಾನ್ಸನ್ ಬೇಬಿ ಶಂಪೂ ಮಕ್ಕಳಿಗೆ ಹಾನಿಕಾರಕ ಎಂದು ರದ್ದಾಗಿದೆ, ಇದು ಇನ್ನೂ ನಿಮ್ಮ ಮನೆಯಲ್ಲಿದ್ದರೆ ಬಿಸಾಡಿ!!

ಹೌದು ಕೇವಲ ಕೇಕ್‌ ಕಟ್‌ ಮಾಡಿ ಜನ್ಮ ದಿನ ಆಚರಣೆ ಮಾಡುವುದು, ಸಿಹಿ ಹಂಚುವುದಷ್ಟೇ ಅಲ್ಲ ಚಿತ್ರ ವಿಚಿತ್ರವಾಗಿ ಆಚರಿಸುತ್ತಾರೆ. ಹುಟ್ಟು ಹಬ್ಬ ಆಚರಿಸಿಕೊಳ್ಳುವವನಿಗೆ ಅಚ್ಚರಿಯನ್ನಷ್ಟೇ ಅಲ್ಲ, ಭಯಪಡಿಸುವ ಹುಚ್ಚುತನ ಹಲವರಿಗಿದೆ. ಇದನ್ನ ಮಾಡಲು ಹೋಗಿ ಐಎಂಎಂ ವಿದ್ಯಾರ್ಥಿಗಳ ಇಲ್ಲೊಂದು ಗುಂಪು ಸ್ನೇಹಿತ ಜನ್ಮದಿನದಂದು ಸೆಲಬ್ರೇಟ್‌ ಮಾಡುವ ನೆಪದಲ್ಲಿ ಚೆನ್ನಾಗಿ ಗುದ್ದಿದ್ದಾರೆ. ಖುಷಿಯ ಅಮಲಲ್ಲಿದ್ದ ಎಲ್ಲರೂ ಸೇರಿ ಹಾಗೆ ಗುದ್ದಿದರ ಪರಿಣಾಮ ಏನಾಗುತ್ತದೆ ಎಂಬ ಅರಿವು ಅವರಿಗಾಗಿರಲಿಲ್ಲ. ಅರಿವಾಗುವಷ್ಟರಲ್ಲಿ ಜನ್ಮದಿನವನ್ನು ಆಚರಿಸಿಕೊಂಡ ಸ್ನೇಹಿತ ಪ್ರಾಣ ತ್ಯಜಿಸಿದ್ದಾನೆ.

ಈ ಘಟನೆಯ ವೀಡಿಯೊ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದ್ದು ಪಾಲಕರಲ್ಲಿ ಆತಂಕ ಮೂಡಿಸಿದೆ. ಇದು ನಡೆದಿದ್ದು ಕಳೆದ 2 ತಿಂಗಳ ಹಿಂದೆ ತಮ್ಮ ಸ್ನೇಹಿತನ ಹುಟ್ಟುಹಬ್ಬದ ದಿನ ಜನ್ಮದಿನದ ಪ್ರೀತಿಯ ಗುದ್ದು ಎಂದು ಸಿಕ್ಕಾಪಟ್ಟೆ ಹೊಡೆದಿದ್ದಾರೆ. ಕೆಲವರು ಮನಬಂದಂತೆ ತುಳಿದಿದ್ದಾರೆ. ಸಿಕ್ಕಿದ್ದೇ ಚಾನ್ಸ್‌ ಎಂಬಂತೆ ಥಳಿಸಿದ್ದಾರೆ. ಪರಿಣಾಮ ಮರುದಿನ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಸ್ನೇಹಿತರ ಹೊಡೆತದಿಂದ ಮೇದೋಜ್ಜೀರಕ ಗ್ರಂಥಿಗೆ ಗಂಭೀರವಾದ ಗಾಯವಾಗಿತ್ತು. ವೈದ್ಯಕೀಯ ಚಿಕಿತ್ಸೆ ಫಲಕಾರಿಯಾಗಲಿಲ್ಲ.
ಕೊನೆಗೆ ಜನ್ಮದಿನದ ಖುಷಿಯಲ್ಲಿದ್ದ ವಿದ್ಯಾರ್ಥಿ ಪ್ರಾಣವನ್ನೇ ಕಳೆದುಕೊಂಡಿದ್ದಾನೆ.

Also read: ಯುವಪಿಳಿಗೆಗೆ ಮಾರಕವಾದ TikTok ಆ್ಯಪ್ ಬ್ಯಾನ್ ನಂತೆ ಪಬ್ಜಿ ಗೇಮ್ ಗೂ ಬ್ಯಾನ್ ಬಿಸಿ??

ಇಂತಹ ಹುಚ್ಚಾಟದ ಆಚರಣೆಗಳು ಹೆಚ್ಚಾಗಿ ಕಾಲೇಜ್ ಜೀವನದಲ್ಲಿ ನಡೆಯುತ್ತೇವೆ, ಅದರಂತೆಯೇ ಐಎಂಎಂ ವಿದ್ಯಾರ್ಥಿಗಳ ಹುಚ್ಚಾಟದ ಹುಟ್ಟುಹಬ್ಬ ಆಚರಣೆಯ ವೀಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದ್ದು ನೋಡಿದವರು ತೀವ್ರ ಆಘಾತ ವ್ಯಕ್ತ ಪಡಿಸಿದ್ದಾರೆ. ಈ ವೀಡಿಯೊ ವಿಕ್ಷಿಸಿದ ಪಾಲಕರು ಕೂಡ ಮಕ್ಕಳನ್ನು ಸ್ನೇಹಿತ ಜೊತೆಯಲ್ಲಿ ಕಳುಹಿಸಲು ಹಿಂಜರಿಯುತ್ತಿದ್ದಾರೆ. ಒಂದು ಚಿಕ್ಕ ಮನರಂಜನೆಗೋಸ್ಕರ ವಿದ್ಯಾರ್ಥಿಯ ಜೀವವೆ ಹೋಗಿದೆ. ಅಂದರೆ ಯುವಪಿಳಿಗೆ ಯಾವರೀತಿಯ ವರ್ತಿಸುತ್ತಿದ್ದಾರೆ ಎನ್ನುವುದು ತಿಳಿಯುತ್ತಿಲ್ಲ. ಆದಕಾರಣ ಪಾಲಕರು ತಮ್ಮ ಮಕ್ಕಳನ್ನು ಪಾರ್ಟಿ ಅಂತ ಸಮಯದಲ್ಲಿ ಕಳುಹಿಸುವ ಮುನ್ನ ಕೆಲವೊಂದು ತಿಳುವಳಿಕೆಯನ್ನು ಹೇಳಿ ಕಳುಹಿಸಬೇಕು.

ಅದರಲ್ಲಿ ವಯಸ್ಸಿನ ಜೋಶ್-ನಲ್ಲಿರುವ ವಿದ್ಯಾರ್ಥಿಗಳು ಇಂತಹ ಹುಚ್ಚುತನವನ್ನು ಬಿಡಲಿಲ್ಲವಾದರೆ ನಿಮ್ಮ ಪ್ರಾಣವನ್ನ ಕಳೆದುಕೊಳ್ಳುವುದರಲ್ಲಿ ಅನುಮಾನವಿಲ್ಲ, ಈಗ ಆಗಿರುವ ಘಟನೆಯಿಂದ ವಿದ್ಯಾರ್ಥಿಗಳನ್ನು ವಿಚಾರಣೆ ಮಾಡಲಾಗುತ್ತಿದೆ. ಮೃತಪಟ್ಟ ವಿದ್ಯಾರ್ಥಿಗಳು ಮನಸ್ಸು ಮಾಡಿದರೆ ಹತ್ತಾರು ವಿದ್ಯಾರ್ಥಿಗಳನ್ನು ಜೈಲು ಸೇರುವ ಹಾಗೆ ಮಾಡಬಹುದು ಆದಕಾರಣ ಯಾವುದೇ ಸಂದರ್ಭದಲ್ಲಿ ಸ್ವಲ್ಪ ಜವಾಬ್ದಾರಿಯಿಂದ ವರ್ತನೆ ಮಾಡುವುದು ಒಳ್ಳೆಯದು.