ವಿದೇಶಗಳಿಂದ ಕಸ ಆಮದು ಮಾಡಿಕೊಳ್ಳುವ ಈ ದೇಶ ಯಾವುದು ಗೊತ್ತೆ?

0
1437

ಕಸ ಅಂದರೆ ಮೂಗು ಮುರೊಯೋರೇ ಎಲ್ಲ. ಕಸ ತೆಗೆಯೋದು ಅಂದ್ರೆ ನಮ್ಮವರಿಗೆ ಉದಾಸೀನ. ದೇಶವನ್ನು ಸ್ವಚ್ಛವಾಗಿಡಿ ಅಂತಲೇ ಪ್ರಧಾನಮಂತ್ರಿಗಳು ಕೋಟ್ಯಂತರ ರೂ. ಖರ್ಚು ಮಾಡಿ ಸ್ವಚ್ಛ ಅಭಿಯಾನಕ್ಕೆ ಕರೆ ಕೊಟ್ಟರೂ ನಮ ದೇಶ ಇನ್ನೂ ಕ್ಲೀನ್ ಆಗಿಲ್ಲ. ಆದರೆ ಇಲ್ಲೊಂದು ದೇಶ ವಿದೇಶಗಳಿಂದ ಕಸವನ್ನು ಆಮದು ಮಾಡಿಕೊಳ್ಳುತ್ತಿದೆ.

ಆ ದೇಶ ಯಾವುದು ಗೊತ್ತೆ? ಜಗತ್ತಿನ ಅತ್ಯಂತ ಸುಂದರ ಮತ್ತು ಕಿರಿದಾದ ದೇಶ ಸ್ವಿಡನ್!

ಈ ದೇಶ ಕಸದ ತೀವ್ರ ಕೊರತೆ ಎದುರಿಸುತ್ತಿದೆ. ಎಷ್ಟರಮಟ್ಟಿಗೆ ಅಂದರೆ ಅನಿವಾರ್ಯವಾಗಿ ಬೇರೆ ದೇಶಗಳಿಂದ ಕಸ ತರಿಸಿಕೊಳ್ಳುವ ಪರಿಸ್ಥಿತಿಗೆ ಸಿಲುಕಿದೆ.

ಕಸವನ್ನು ‘ರಸ’ ಮಾಡುವ ರಿಸೈಕಲ್ ಮಾಡುವ ಕಂಪನಿಗಳು ಕಸ ಇಲ್ಲದೇ ಮುಚ್ಚುವ ಸ್ಥಿತಿ ತಲುಪಿವೆ. ಕಸದ ಮೇಲೆ ಅತ್ಯಂತ ಹೆಚ್ಚು ತೆರಿಗೆ ವಿಧಿಸಿದ ಮೊದಲ ದೇಶ (೧೯೯೧) ಕೂಡ ಸ್ವೀಡನ್ ಆಗಿದೆ. ಇದರಿಂದ ಜನರೇ ಕಸವನ್ನು ಹೆಚ್ಚಾಗಿ ಪುನರ್ ಬಳಕೆ ಮಾಡುತ್ತಿದ್ದು, ಈ ಕಂಪನಿಗಳಿಗೆ ಮನೆಗಳಿಂದ ಶೇ.೧ರಷ್ಟು ಮಾತ್ರ ತಲುಪುತ್ತಿದೆ.

ಕಸದ ಪುನರ್ ಬಳಕೆಯಿಂದ ವಿದ್ಯುತ್ ಕೂಡ ಉತ್ಪಾದಿಸಲಾಗುತ್ತಿದ್ದು, ಇದರ ಉತ್ಪಾದನೆ ಪ್ರಮಾಣವೂ ಈಗ ಕಡಿಮೆಯಾಗಿದೆ.

ಪರಿಸರ ಸಂರಕ್ಷಣೆ ಎಷ್ಟು ಮುಖ್ಯ ಮತ್ತು ತಮ್ಮ ಜವಾಬ್ದಾರಿ ಏನು ಎನ್ನುವುದು ಇಲ್ಲಿನ ಜನರು ಚೆನ್ನಾಗಿ ಅರಿತಿದ್ದಾರೆ. ಹಾಗಾಗಿ ಈ ದೇಶದಲ್ಲಿ ಕಸದ ಪ್ರಮಾಣ ತುಂಬಾ ಕಡಿಮೆ ಇದೆ. ಅರಿವು ಮೂಡಿಸುವ ಹಲವಾರು ಕಾರ್ಯಕ್ರಮಗಳು ಯಶಸ್ವಿಯಾಗಿವೆ ಎಂದು ಕಸ ನಿರ್ವಹಣಾ ಕಂಪನಿಯೊಂದರ ಸಾರ್ವಜನಿಕ ಸಂಪರ್ಕಾಧಿಕಾರಿ ಅನ್ನಾ ಕಾರಿಯೊನ್ ತಿಳಿಸಿದ್ದಾರೆ. ಖಾಸಗಿ ಕಂಪನಿಗಳಿಗೆ ಕೂಡ ಕಸ ಪುನರ್ ಬಳಕೆ ಅಥವಾ ರಿಸೈಕ್ಲಿಂಗ್ ನಿಯಮ ಜಾರಿಗೆ ತರಲಾಗಿದೆ. ಆದರೆ ಈ ಕಂಪನಿಗಳಿಗೂ ಕಸ ಸಮಸ್ಯೆ ಉಂಟಾಗಿದೆ ಎಂದು ಅವರು ವಿವರಿಸಿದರು.

ಇಂಗ್ಲೆಂಡ್ ಸೇರಿದಂತೆ ಯುರೋಪ್ ದೇಶಗಳಿಂದ ಸ್ವೀಡನ್ ಹೆಚ್ಚಾಗಿ ಕಸ ಆಮದು ಮಾಡಿಕೊಳ್ಳಲಾಗುತ್ತಿದೆ.