ಹಿಂದೂ ಶಾಸ್ತ್ರಗಳಲ್ಲಿ ಮಂಗಳ ಸೂತ್ರಕ್ಕೆ ಎಂತಹ ಮಹತ್ವವಾದ ಸ್ಥಾನ ಇದೆ ಅಂತ ತಿಳ್ಕೊಳ್ಳಿ, ನಮ್ಮ ಶಾಸ್ತ್ರಗಳ ಬಗ್ಗೆ ಹೆಮ್ಮೆ ಮೂಡುತ್ತೆ..

0
2379

Kannada News | kannada Useful Tips

ಹಿಂದೂಗಳ ವಿವಾಹದಲ್ಲಿ ನಡೆಯುವ ಶಾಸ್ತ್ರ ಹಾಗೂ ಒಂದೊಂದು ಮಂತ್ರಕ್ಕೂ ಸಹ ನಮ್ಮ ವೇದ, ಉಪನಿಷತ್ತು, ಪುರಾಣ, ನೀತಿ ಸಂಹಿತೆಗಳಲ್ಲಿ ವಿವಾಹಕ್ಕೊಂದು ಮಹತ್ತರ ಸ್ಥಾನವಿದೆ. ವೈದೀಕ ಪದ್ಧತಿಯ ವಿವಾಹವು ಜೀವನದ ಅವಿಭಾಜ್ಯ ಅಂಗವಾಗಿದೆ. ಧರ್ಮದ ಹಲವು ಮೂಲಭೂತ ಅಂಶಗಳನ್ನು ಅದು ಸಮೀಕರಿಸಿಕೊಂಡಿದೆ. ಆದರೆ ಇಂದಿನ ಯಾಂತ್ರಿಕ ಆಧುನಿಕ ಯುಗದಲ್ಲಿ ವಿವಾಹ ಸಂಸ್ಕಾರವಾಗಿ ಉಳಿಯದೇ ಅದೊಂದು ಪ್ರತಿಷ್ಠೆಯನ್ನು ತೋರುವ ಕುಟುಂಬದ ಸಮಾರಂಭವಾಗಿ ಮಾರ್ಪಟ್ಟಿದೆ.

ಹಿಂದೂ ಧರ್ಮದಲ್ಲಿ ಮದುವೆಗೆ ತುಂಬಾ ಮಹತ್ವ ಇದೆ. ಅದೇ ರೀತಿ, ವರ-ವಧುವಿಗೆ ಕಟ್ಟುವ ಕರಿಮಣಿ ಸರಕ್ಕೂ ಅಷ್ಟೇ ಪಾಮುಖ್ಯತೆ ಇದೆ. ಇದಕ್ಕೆ ಮಂಗಳ ಸೂತ್ರ, ತಾಳಿ, ಕಂಠಿ, ಕರಿಮಣಿ, ಮಾಂಗಲ್ಯ ಇತ್ಯಾದಿ ವಿವಿಧ ಹೆಸರುಗಳಿರುವ ಅತಿ ಪವಿತ್ರ ಮತ್ತು ಅತ್ಯಂತ ಭಾವನಾತ್ಮಕವಾದ ಆಭರಣವಿದು. ವೈವಾಹಿಕ ಸ್ಥಿತಿಯ ಸಂಕೇತವಾಗಿ ಮಹಿಳೆಯರು ಮಂಗಳ ಸೂತ್ರವನ್ನು ಧರಿಸುತ್ತಾರೆ.

ಮೊದಲಿಗೆ ಮಾಂಗಲ್ಯ ಅಂದತಕ್ಷಣ ನಮ್ಮಲ್ಲಿ ಕರಿಮಣಿ, ತಾಳಿ, ಹವಳ ಹೀಗೆ ಅವರವರ ಸಂಪ್ರದಾಯಗಳ ಪ್ರಕಾರ ಮಂಗಳ ಸೂತ್ರ ವನ್ನು ಧರಿಸಲಾಗುತ್ತದೆ. ಜ್ಯೋತಿಷ್ಯಶಾಸ್ತ್ರ ಗ್ರಂಥಗಳಲ್ಲಿ ಯಾವ ರಾಶಿಯವರು ಎಷ್ಟೆಷ್ಟು ಕರಿಮಣಿಯನ್ನು ಸರದಲ್ಲಿ ಹಾಕಿಕೊಳ್ಳಬೇಕೆಂಬುದನ್ನು ಉಲ್ಲೇಖಿಸಲಾಗಿದೆ. ಹಾಗಾದರೆ ಬನ್ನಿ ಜ್ಯೋತಿಷ್ಯಶಾಸ್ತ್ರ ಗ್ರಂಥಗಳಲ್ಲಿ ಮಾಂಗಲ್ಯಕ್ಕೆ ಇರುವ ಮಹತ್ವವನ್ನು ತಿಳಿಯೋಣ.

ಕಪ್ಪು ಬಣ್ಣದ ಕರಿಮಣಿ

ವಿವಾಹಿತ ಹೆಂಗಸಿನ ಮೇಲೆ ಕೆಟ್ಟ ದೃಷ್ಟಿ ಬೀಳದಿರಲೆಂದೇ ಮಂಗಲ ಸೂತ್ರದಲ್ಲಿ ಕಪ್ಪು ಬಣ್ಣದ ಮಣಿಗಳಿರುವುದು ಎಂಬ ನಂಬಿಕೆಯಿದೆ. ಋಣಾತ್ಮಕ ಶಕ್ತಿಕ್ಷೇತ್ರವನ್ನೆಲ್ಲ ಕಪ್ಪು ಮಣಿ ಹೀರಿಕೊಳ್ಳುತ್ತವೆ ಮತ್ತು ವಧುವನ್ನು ಮತ್ತು ಅವಳ ಕುಟುಂಬವನ್ನು ತಗಲದಂತೆ ಮಾಡುವ ಗುಣವಿರುತ್ತದಂತೆ. ಅಷ್ಟೇ ಅಲ್ಲ, ಯೌವನ ಸೌಂದರ್ಯಭರಿತ ಗೃಹಿಣಿಯನ್ನು ಪರ ಪುರುಷರು ಕಾಮದ ದೃಷ್ಟಿಯಿಂದ ಅಥವಾ ಇತರೆ ಯಾವುದೇ ಕೆಟ್ಟ ದೃಷ್ಟಿಯಿಂದ ನೋಡಬಾರದು.

ಕುತ್ತಿಗೆಯಲ್ಲಿ ಈ ಮಂಗಲಸೂತ್ರ ಧರಿಸುವುದು

ಮಾಂಗಲ್ಯವನ್ನು ಕುತ್ತಿಗೆ ಕಟ್ಟುವುದರಿಂದ ತಾಳಿಯು ಎದೆ ಭಾಗದಲ್ಲಿ ಇರುತ್ತದೆ. ಇದರಿಂದ ಎದೆ ಭಾಗದಲ್ಲಿ ಉಂಟಾಗುವ ಉಷ್ಣತೆಯನ್ನುಈ ತಾಳಿಯು ಹೀರಿಕೊಳ್ಳುತ್ತದೆ. ಅಷ್ಟೇ ಅಲ್ಲದೆ, ಹಾಲುಣಿಸುವ ತಾಯಿಯಲ್ಲಿ ಎದೆ ಹಾಲಿನ ಉಷ್ಣತೆಯನ್ನು ಹೀರಿಕೊಂಡು ಎದೆಹಾಲು ಕೆಡದಂತೆ ಶಿಶುವಿಗೆ ಉಣಲೂ ಅನುಕೂಲವಾದ ಸಮ ಉಷ್ಣತೆಯಲ್ಲಿರಿಸಲು ಸಹಾಯ ಮಾಡುತ್ತದೆ. ಕತ್ತಿನ ಸುತ್ತ ಸುಷುಮ್ನಾ ನಾಡಿಗೆ ಸಮ್ಮಿಲನ ಚಕ್ರಗಳ ಆಧಾರವಾದ ಬೆನ್ನೆಲುಬಿನ ಮೇಲ್ಭಾಗ(ಕತ್ತಿನ ಹಿಂಭಾಗದಿಂದ) ವಿಶುದ್ಧ ಚಕ್ರಕ್ಕೆ ಹರಿದು ಬಂದು ಹೃದಯದ ಭಾಗದಲ್ಲಿರುವ ಅನಾಹುತ ಚಕ್ರದಲ್ಲಿ ಸಮ್ಮಿಲನಗೊಳ್ಳುತ್ತದೆ. ಹೃದಯ ಜ್ಯೋತಿಯು ಸದಾ ದರ್ಶನೀಯವೆಂದು ಕುತ್ತಿಗೆಯಲ್ಲಿ ಈ ಮಂಗಲಸೂತ್ರವನ್ನು ಧರಿಸಲಾಗುತ್ತದೆ.

ಮಂಗಳಸೂತ್ರದಲ್ಲಿ ಬರುವ ಇನ್ನೊಂದು ವಸ್ತು ಹವಳ

ಜ್ಯೋತಿಷ್ಯದ ಪ್ರಕಾರ ಹವಳ ಕುಜ ಗ್ರಹವನ್ನು ಸೂಚಿಸುತ್ತದೆ. ಕುಜ ಶರೀರದಲ್ಲಿ ಶಕ್ತಿಯನ್ನು ವೃದ್ಧಿಸುತ್ತದೆ. ಅದರಂತೆಯೇ ಶರೀರದಲ್ಲಿ ಶಕ್ತಿ ಹಾಗೂ ಸದಾ ಕ್ರಿಯಾಶೀಲ ವ್ಯಕ್ತಿತ್ವ ಇವೆರಡೂ ಸಹ ಗೃಹಿಣಿಗೆ ಅತ್ಯಂತ ಆವಶ್ಯ. ಇದರಿಂದಾಗಿಯೇ ವಿವಾಹದ ನಂತರ ಕುಜ ದೋಷದಿಂದಾಗಿ ದಂಪತಿಗಳ ಮಧ್ಯದಲ್ಲಿ ಯಾವುದೇ ವಿರಸ ಅಥವಾ ಜಗಳ ಉಂಟಾಗಬಾರದು ಎಂದು ಕುಜನ ರತ್ನವಾದ ಈ ಹವಳವನ್ನು ಮಂಗಳಸೂತ್ರದಲ್ಲಿ ಹಾಕುವುದು.

Also Read: ATM ನಲ್ಲಿ ಹಣ ಕಳೆದುಕೊಳ್ಳುತ್ತಿರುವ ಬೆಂಗಳೂರಿನ ನೂರಾರು ಮಂದಿ. ನಿಮ್ಮ ಹಣನು ಸೇಫ್ ಆಗಿರಬೇಕು ಅಂದ್ರೆ ಈ ಟಿಪ್ಸ್ ಅಳವಡಿಸಿಕೊಳ್ಳಿ…!