ಪ್ರಧಾನಿ ಮೋದಿ ಅವರಿಂದ ಮಹತ್ವದ ಮಾಹಿತಿ; ಭಾರತದ ರಕ್ಷಣೆಯಲ್ಲಿ ‘ಮಿಷನ್ ಶಕ್ತಿ’ ಅತ್ಯಂತ ಮಹತ್ವದ ಹಜ್ಜೆ, ಅಂತರಿಕ್ಷ ಸಮರಕ್ಕೆ ಸಿದ್ಧವಾದ ಭಾರತ..

0
249

ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್​ ಮಾಡಿ ದೇಶದ ಜನತೆಗೆ ಪ್ರಮುಖ ಸಂದೇಶ ರವಾನೆ ಮಾಡುತ್ತೇನೆ,” ಎಂದು ಹೇಳಿದ್ದರು. ಇದಕ್ಕೆ ಜನರಲ್ಲಿ ಕುತೊಹಲ ಮೂಡಿ ಮೋದಿ ಅವರು ಮತ್ತೆ ಏನು ಮಾಡಲಿದ್ದಾರೆ ಎನ್ನುವ ಮಾತುಗಳು ಹರಿದಾಡಲು ಶುರುವಾಗಿತ್ತು. ಅದರಂತೆ ಮಾತನಾಡಿದ ಮೋದಿ ಜನರು ಊಹಿಸಲು ಸಾಧ್ಯವಾಗದ ವಿಚಾರಯೊಂದನ್ನು ಪ್ರಶ್ತಾಪಿಸಿದ್ದು. ಬಾಹ್ಯಾಕಾಶ ಗುಪ್ತಚರ ಉಪಗ್ರಹ ಹೊಡೆದುರಳಿಸುವ ತಂತ್ರಜ್ಞಾನವನ್ನು ಭಾರತ ಪಡೆದಿದ್ದು, ಅಂತರೀಕ್ಷ ಸಮರಕ್ಕೂ ಭಾರತ ಸಿದ್ಧವಾಗಿದೆ ಎಂಧು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟಪಡಿಸಿದ್ದಾರೆ.


Also read: ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಬಡ ಕುಟುಂಬಕ್ಕೆ ವಾರ್ಷಿಕ 72 ಸಾವಿರ ರೂ. ಆದಾಯ; 65 ವರ್ಷದಿಂದ ಮಾಡದೋರು ಇವಾಗ ಮಾಡ್ತಾರ??

ಹೌದು ಗಂಭೀರತೆ ಕಾದು ಕುಳಿತ್ತಿದ ಜನರಿಗೆ ಪ್ರಧಾನಿ ಮೋದಿಯವರು ಶತ್ರುರಾಷ್ಟ್ರದ ಕಣ್ಗಾವಲು ಸ್ಯಾಟೆಲೈಟ್ ಗಳನ್ನು ಹೊಡೆದುರುಳಿಸುವ ಶಕ್ತಿ ಭಾರತಕ್ಕೂ ಪ್ರಾಪ್ತವಾಗಿದ್ದು, ಭಾರತದ ರಕ್ಷಣೆಯಲ್ಲಿ ‘ಮಿಷನ್ ಶಕ್ತಿ’ ಅತ್ಯಂತ ಮಹತ್ವದ ಹಜ್ಜೆಯಾಗಿದೆ ಎಂದು ಹೇಳಿದ ಪ್ರಧಾನಿ ನರೇಂದ್ರ ಮೋದಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತೀಯ ವಿಜ್ಞಾನಿಗಳು ಮಹತ್ವದ ಸಾಧನೆ ಮಾಡಿದ್ದು, ಬಾಹ್ಯಾಕಾಶದಲ್ಲಿ ಭಾರತ ಕೂಡ ಸೂಪರ್‌ ಪವರ್‌ ದೇಶವಾಗಿ ಹೊರಹೊಮ್ಮಿದೆ. ಇದುವರೆಗೆ ಅಮೆರಿಕ, ರಷ್ಯಾ ಮತ್ತು ಚೀನಾ ಮಾತ್ರ ಸಕ್ರಿಯ ಉಪಗ್ರಹವನ್ನು ಹೊಡೆದುರುಳಿಸುವ ತಂತ್ರಜ್ಞಾನ ಹೊಂದಿದ್ದವು. ಇದೀಗ ಭಾರತವೂ ಈ ಸಾಲಿಗೆ ಸೇರಿದ್ದು. ವಿಶ್ವದ ನಾಲ್ಕನೇ ದೇಶವಾಗಿ ಈ ಸಾಧನೆ ಮಾಡಿದೆ. ಆ ಮೂಲಕ ಭಾರತ ಕೂಡ ಸೂಪರ್ ಪವರ್‌ ದೇಶವೆನಿಸಿದೆ.

Also read: ಮೋದಿ ಈ ಬಾರಿ ಗೆದ್ದರೆ, ಬಿ.ಜೆ.ಪಿ. ಶಾಶ್ವತವಾಗಿ ಅಧಿಕಾರದಲ್ಲಿರುತ್ತೆ: ಕೇಜ್ರಿವಾಲ್; ಕೇಜ್ರಿವಾಲ್ ಗೆ ನಿಮ್ಮ ಬೆಂಬಲ ಇದ್ಯಾ?

ಕೇವಲ 3 ನಿಮಿಷಗಳ ಅಂತರದಲ್ಲಿ ಸಕ್ರಿಯ ಉಪಗ್ರಹವೊಂದನ್ನು ಆ್ಯಂಟಿ ಸ್ಯಾಟೆಲೈಟ್ ಮಿಸೈಲ್ ಎ-ಸ್ಯಾಟ್ ಮೂಲಕ ಹೊಡೆದುರುಳಿಸಲಾಗಿದೆ. ಕೆಲ ನಿಮಿಷಗಳ ಹಿಂದಷ್ಟೇ ಭಾರತವು ಉಪಗ್ರಹ ನಿಗ್ರಹ ಕ್ಷಿಪಣಿ ಎ-ಸ್ಯಾಟ್ ಕ್ಷಿಪಣಿ ಪ್ರಯೋಗಿಸಿ ಕೆಳ ಕಕ್ಷೆಯಲ್ಲಿದ್ದ (ಭೂಮಿಯ ಸನಿಹ) ಉಪಗ್ರಹವನ್ನು ಹೊಡೆದುರುಳಿಸಲಾಗಿದೆ. ‘ಮಿಷನ್ ಶಕ್ತಿ’ ಯೋಜನೆಯಡಿ ನಮ್ಮ ವಿಜ್ಞಾನಿಗಳು ಈ ಸಾಧನೆ ಮಾಡಿದ್ದಾರೆ. ಕೇವಲ ಮೂರು ನಿಮಿಷಗಳಲ್ಲಿ ಕಾರ್ಯಾಚರಣೆ ಪೂರ್ಣಗೊಂಡಿದೆ. ನಮ್ಮ ವಿಜ್ಞಾನಿಗಳು ಬಾಹ್ಯಾಕಾಶದಲ್ಲಿ 3,000 ಕಿ.ಮೀ ದೂರ (ಎಲ್‌ಇಓ) (ಲೋ ಅರ್ಥ್ ಆರ್ಬಿಟ್)ದಲ್ಲಿರುವ ಸಕ್ರಿಯ ಉಪಗ್ರಹವನ್ನು ಹೊಡೆದುರುಳಿಸಿದ್ದಾರೆ. ಕೇವಲ 3 ನಿಮಿಷಗಳಲ್ಲಿ ಯಶಸ್ವಿಯಾಗಿ ಈ ಕಾರ್ಯಾಚರಣೆಯನ್ನು ವಿಜ್ಞಾನಿಗಳು ಯಶಸ್ವಿಗೊಳಿಸಿದ್ದಾರೆ.


Also read: ಪುಲ್ವಾಮ ದಾಳಿ ಮಾಡಿಸಿದ್ದು ಬಿ.ಜೆ.ಪಿ. ಸರ್ಕಾರ ಮಾಡಿದ ನಾಟಕ ಎಂದು ಹೇಳಿ ಸೇನೆಗೆ ಅವಮಾನ ಮಾಡಿದ ಕಾಂಗ್ರೆಸ್ ನಾಯಕ ಪರಮೇಶ್ವರ್ ನಾಯಕ್

ಮಿಷನ್ ಶಕ್ತಿ ಎಂಬ ಅತ್ಯಂತ ಕಠಿಣ ಕಾರ್ಯಾಚರಣೆ ಇದಾಗಿತ್ತು. ಅತ್ಯಂತ ಹೆಚ್ಚು ವೆಚ್ಚ ಬಯಸುವ ಈ ಕಾರ್ಯಾಚರಣೆಯನ್ನು ಅತಿ ಕಡಿಮೆ ವೆಚ್ದದಲ್ಲಿ ನಮ್ಮ ವಿಜ್ಞಾನಿಗಳು ಈ ಸಾಧನೆ ಮಾಡಿದ್ದಾರೆ. ನಮ್ಮ ವಿಜ್ಞಾನಿಗಳು ಬಾಹ್ಯಾಕಾಶದಲ್ಲಿ 3,000 ಕಿ.ಮೀ ದೂರ (ಎಲ್‌ಇಓ) (ಲೋ ಅರ್ಥ್ ಆರ್ಬಿಟ್)ದಲ್ಲಿರುವ ಶತ್ರು ದೇಶದ ಉಪಗ್ರಹವನ್ನು ಹೊಡೆದುರುಳಿಸಿದ್ದಾರೆ. ಕೇವಲ 3 ನಿಮಿಷಗಳಲ್ಲಿ ಯಶಸ್ವಿಯಾಗಿ ಈ ಕಾರ್ಯಾಚರಣೆಯನ್ನು ವಿಜ್ಞಾನಿಗಳು ಯಶಸ್ವಿಗೊಳಿಸಿದ್ದಾರೆ. ಮಿಷನ್ ಶಕ್ತಿ ಎಂಬ ಅತ್ಯಂತ ಕಠಿಣ ಕಾರ್ಯಾಚರಣೆ ಇದಾಗಿತ್ತು. ಅತ್ಯಂತ ಹೆಚ್ಚು ವೆಚ್ಚ ಬಯಸುವ ಈ ಕಾರ್ಯಾಚರಣೆಯನ್ನು ಅತಿ ಕಡಿಮೆ ವೆಚ್ಚದಲ್ಲಿ ನಮ್ಮ ವಿಜ್ಞಾನಿಗಳು ಈ ಸಾಧನೆ ಮಾಡಿದ್ದಾರೆ. ಎಂದು ಮೋದಿ ಹೇಳಿದ್ದಾರೆ
ಒಟ್ಟಾರೆಯಾಗಿ ಮೋದಿ ಯಾರೂ ಊಹಿಸದ ವಿಚಾರ ಪ್ರಸ್ತಾಪ ಮಾಡಿದ್ದಾರೆ. ಲಬಾಹ್ಯಾಕಾಶ ಕ್ಷೇತ್ರದ ಬಗ್ಗೆ ಹೇಳಿದ್ದಾರೆ. ಕ್ಷಿಪಣಿಯಿಂದ ನಾವು ಸೆಟಲೈಟ್​ ಹೊಡೆದುರುಳಿಸಿದ್ದೇವೆ. ಈ ವೇಳೆ ನಾವು ಅಂತಾರಾಷ್ಟ್ರೀಯ ಕಾನೂನು ಉಲ್ಲಂಘಿಸಿಲ್ಲ. ಭಾರತದ ಮಿಷನ್ ಶಕ್ತಿ ಯಶಸ್ವಿಯಾಗಿದೆ ಎಂದರು. ಕೇವಲ ಮೂರು ನಿಮಿಷಗಳಲ್ಲಿ ಈ ಕಾರ್ಯಾಚರಣೆ ನಡೆದಿದೆ ಎಂದು ಹೇಳಿದ್ದಾರೆ.