ಸ್ಯಾಲರಿ ಸ್ಲಿಪ್ ಬಗ್ಗೆ ನೀವು ತಿಳಿಯಲೇಬೇಕಾದ ಕೆಲವು ವಿಷಯಗಳು ಇಲ್ಲಿದೆ ತಪ್ಪದೇ ಓದಿ?

0
2286

Kannada News | kannada Useful Tips

ಪ್ರತಿ ತಿಂಗಳು ಉದ್ಯೋಗದಲ್ಲಿರುವವರು ಕೇಳುವ ಒಂದು ಸಾಮಾನ್ಯ ಪದವೆಂದರೆ ಅದು “ಸ್ಯಾಲರಿ ಸ್ಲಿಪ್”. ಎಷ್ಟು ಸಂಬಳ ಬಂದಿದೆ, ಏನೆಲ್ಲಾ ಕಡಿತವಾಗಿದೆ, ಹೆಚ್ಚಿನ ಗಂಟೆಗಳು ಮಾಡಿದ ಕೆಲಸಕ್ಕೆ ಕಂಪನಿಯವರು ಸಂಬಳ ನೀಡಿದ್ದಾರೋ ಇಲ್ಲವೋ ಮತ್ತು ಇನ್ನಿತರ ಮಾಹಿತಿಯನ್ನು ಒಳಗೊಂಡಿರುತ್ತದೆ.

ಸ್ಯಾಲರಿ ಸ್ಲಿಪ್ ಪ್ರತಿಯೊಬ್ಬ ಉದ್ಯೋಗಿಯೂ, ಪ್ರತಿ ತಿಂಗಳು ತಾವು ಉದ್ಯೋಗ ಮಾಡುವ ಸಂಸ್ಥೆಯಿಂದ ಪಡೆಯುವ ಸಂಬಳದ ವಿವರವಾಗಿದೆ. ಸಂಬಳದಲ್ಲಿ ಕಡಿತವಾಗಿ ಎಷ್ಟು ನಿವ್ವಳ ವೇತನ ನೀವು ಪಡೆದಿರುವಿರಿ, ಮೂಲ ವೇತನ, ಭತ್ಯೆ, ವೈದ್ಯಕೀಯ ಭತ್ಯೆ, ಪಿಎಫ್ ಮೊತ್ತ, ತೆರಿಗೆ ಕಡಿತ ಇತ್ಯಾದಿ ಎಂಬುದನ್ನು ನಿಮಗೆ ತಿಳಿಸಲಾಗುತ್ತದೆ.

ಬೆಸಿಕ್ ಸ್ಯಾಲರಿ:

ಸ್ಯಾಲರಿ ಸ್ಲಿಪ್ ನಲ್ಲಿ ಬೆಸಿಕ್ ಸ್ಯಾಲರಿ ಎಷ್ಟಿದೆ ಎಂಬುದು ತುಂಬಾ ಮುಖ್ಯ. ಸಂಬಳದ ಒಟ್ಟು ಮೊತ್ತದಲ್ಲಿ ಅತಿ ಹೆಚ್ಚಿನ ಪ್ರಮಾಣವನ್ನು ಬೆಸಿಕ್ ಸ್ಯಾಲರಿಯನ್ನು ಉದ್ಯೋಗಿಗಳು ಪಡೆಯುತ್ತಾರೆ. ಇದು ಕಂಪನಿಯ ನೀತಿ ಹಾಗೂ ವ್ಯಕ್ತಿಗಳ ವೇತನದ ಆಧಾರದ ಮೇಲೆ ಶೇಕಡಾವಾರು ಬದಲಾಗುತ್ತದೆ. ಬೆಸಿಕ್ ಸ್ಯಾಲರಿಯ ಮೇಲೆಯೇ ತೆರಿಗೆ ಕಡಿತವಾಗುತ್ತದೆ.

ಬಾಡಿಗೆ ಭತ್ಯೆ:

ಬಾಡಿಗೆ ಭತ್ಯೆ ಅಥವಾ HRA ಎಂಬುದು ನೀವು ವಾಸವಿರುವ ಮನೆಗೆ ಬಾಡಿಗೆ ಕಟ್ಟಲು ಕಂಪನಿ ನೀಡುವ ಒಂದು ಸೌಲಭ್ಯವಾಗಿದೆ. HRA ನೀವು ವಾಸವಿರುವ ನಗರಗಳ ಮೇಲೆ ಅವಲಂಬಿಸಿರುತ್ತದೆ. ಒಂದು ವೇಳೆ ನೀವು ಮೆಟ್ರೋನಗರಗಳಾದ ಮುಂಬೈ, ದೆಹಲಿ, ಕೊಲ್ಕತ್ತಾ ಮತ್ತು ಚೆನ್ನೈನಲ್ಲಿ ವಾಸವಿದ್ದರೆ, ವೇತನದಲ್ಲಿ ಶೇ. 50 ರಷ್ಟು ಅಥವಾ ಶೇ. 40 ರಷ್ಟು ಬಾಡಿಗೆ ಭತ್ಯೆ ಪಡೆಯಲು ಅರ್ಹವಾಗಿರುತ್ತದೆ. ಸಂಬಳದ ಭಾಗವಾಗಿ HRA ಭತ್ಯೆ ಪಡೆಯುವ ವ್ಯಕ್ತಿಗಳು ತೆರಿಗೆ ವಿನಾಯಿತಿ ಕೂಡ ಇರುತ್ತದೆ.

ವಾಹನ ಭತ್ಯೆ:

ಕಂಪನಿಯ ಕೆಲಸಕ್ಕಾಗಿ, ಉದ್ಯೋಗಿ ಬೇರೆಡೆ ಹೋದಾಗ ಅವರಿಗೆ ವಾಹನ ಭತ್ಯೆ, ಉಪಾಹಾರ ಭತ್ಯೆ, ಸಮವಸ್ತ್ರ ಭತ್ಯೆ ನೀಡಲಾಗುತ್ತದೆ. ತಿಂಗಳಿಗೆ ರೂ. 1,600 ಹಾಗೂ ವಾರ್ಷಿಕವಾಗಿ 19,200 ಸಾರಿಗೆ ಭತ್ಯೆ ಆದಾಯ ತೆರಿಗೆ ಅಡಿಯಲ್ಲಿ ಸಂಪೂರ್ಣವಾಗಿ ತೆರಿಗೆಯಿಂದ ವಿನಾಯಿತಿ ಪಡೆಯಬಹುದು.

ವೈದ್ಯಕೀಯ ಭತ್ಯೆ:

ಉದ್ಯೋಗ ಮಾಡುವ ಕಂಪನಿ ತನ್ನ ತನ್ನ ನೌಕರರಿಗೆ ವೈದ್ಯಕೀಯ ಚಿಕಿತ್ಸೆಗೆಂದು ನೀಡುವ ನಿರ್ಧಿಷ್ಟ ಪ್ರಮಾಣದ ಮೊತ್ತವೇ ವೈದ್ಯಕೀಯ ಭತ್ಯೆ, ಇದಕ್ಕೆ ತೆರಿಗೆ ವಿಧಿಸಲಾಗುತ್ತದೆ. ವೈದ್ಯಕೀಯ ಚಿಕಿತ್ಸೆಯ ರಸೀದಿಗಳನ್ನು ನಿರ್ಧಿಷ್ಟ ಸಮಯದೊಳಗೆ ಸಂಸ್ಥೆಗೆ ಸಲ್ಲಿಸಿದರೆ ರೂ. 15,000 ವರೆಗಿನ ಮೊತ್ತಕ್ಕೆ ತೆರಿಗೆ ವಿನಾಯಿತಿಪಡೆಯಬಹುದು.

ರಜೆ ಭತ್ಯೆ:

ರಜೆ ಪ್ರಯಾಣ ಭತ್ಯೆ ಕಂಪನಿ ತನ್ನ ಉದ್ಯೋಗಿಗಳಿಗೆ ನೀಡುವ ಒಂದು ಹೆಚ್ಚಿನ ಸೌಲಭ್ಯವಾಗಿದೆ. ಇದನ್ನು ಇನ್ಸೆಂಟಿವ್ ಅನ್ನಬಹುದು. ಇದಕ್ಕೆ ಆದಾಯ ತೆರಿಗೆ ಇಲಾಖೆಯ ಸೆಕ್ಷನ್ 10 (5)ಅಡಿಯಲ್ಲಿ ತೆರಿಗೆ ವಿನಾಯಿತಿ ಕೂಡ ಇರುತ್ತದೆ.

ಪ್ರಾವಿಡೆಂಟ್ ಫಂಡ್ ಅಥವಾ ಪಿಎಫ್:

ನಿಮ್ಮ ಸಂಬಳದ ಮೂಲ ವೇತನದಿಂದ ಪ್ರತಿ ತಿಂಗಳು ಶೇ. 12 ರಷ್ಟು ಪ್ರಾವಿಡೆಂಟ್ ಫಂಡ್ ಅಥವಾ ಪಿಎಫ್ ನಿಮ್ಮ ಇಪಿಎಫ್ ಖಾತೆಗೆ ಜಮಾ ಆಗುತ್ತದೆ. ಇಷ್ಟೇಪ್ರಮಾಣದ ಮೊತ್ತ ಎಂದರೆ ಶೇ. 12 ರಷ್ಟು ನಿಮ್ಮ ಉದ್ಯೋಗದಾತರಿಂದ ನಿಮ್ಮ ಖಾತೆಗೆ ಜಮಾ ಆಗುತ್ತದೆ, ಇದು ಭವಿಷ್ಯದಲ್ಲಿ ತುಂಬಾ ಉಪಯೋಗಕ್ಕೆ ಬರುತ್ತದೆ.

ವೃತ್ತಿಪರ ತೆರಿಗೆ:

ವೃತ್ತಿಪರ ತೆರಿಗೆ ರಾಜ್ಯ ಸರ್ಕಾರಗಳು ಜಾರಿಗೊಳಿಸಿದ ಒಂದು ವಿಧದ ತೆರಿಗೆ. ರಾಜ್ಯದ ಉದ್ಯೋಗ ನೀಡುವ ಸಂಸ್ಥೆ, ಸಂಬಳದಿಂದ ವೃತ್ತಿಪರ ತೆರಿಗೆ ಕಡಿತಗೊಳಿಸುವ ಜವಾಬ್ದಾರಿ ಹೊಂದಿದೆ. ವೃತ್ತಿಪರ ತೆರಿಗೆ ಉದ್ಯೋಗಿಗಳ ಆದಾಯದ ಮೇಲೆ ಅವಲಂಬಿರಿಸುತ್ತದೆ.

Also Read: ವೈದ್ಯಕೀಯ ಚಿಕಿತ್ಸೆಗಾಗಿ ಅತಿಯಾದ ಶುಲ್ಕಕ್ಕೆ ಕಡಿವಾಣ ಹಾಕದ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್..!