ಬಂಗಾರ ಪ್ರಿಯರೆ ಎಚ್ಚರ; ಚಿನ್ನದ ಆಭರಣಗಳಲ್ಲಿ ಕಳಬೆರೆಕೆಯಾಗುತ್ತಿದೆ ಸಿಮೆಂಟ್ ಮಿಶ್ರಿತ ಪೌಡರ್.!

0
425

ಭಾರತ ದೇಶದಲ್ಲಿ ಚಿನ್ನಕ್ಕೆ ಭಾರಿ ಬೇಡಿಕೆ ಇದೆ. ಅದರಂತೆ ಪ್ರತಿಯೊಂದು ಹಬ್ಬದಲ್ಲಿವೂ ಬಂಗಾರದ ಖರೀದಿ ಜೋರಾಗಿರುತ್ತದೇ, ಅದರಲ್ಲಿ ಹೆಣ್ಣು ಮಕ್ಕಳ ಕೈಯಲ್ಲಿ ಸ್ವಲ್ಪ ದುಡ್ಡು ಸಿಕ್ಕರೆ ಮೊದಲು ಖರೀದಿ ಮಾಡುವುದೇ ಬಂಗಾರವಾಗಿದೆ. ಕೆಲವು ಬಂಗಾರ ಎಷ್ಟೊಂದು ಶುದ್ಧವಾಗಿರುತ್ತೆ ಎನ್ನುವುದು ಕಾತರಿ ಹೇಳುವುದು ಕಷ್ಟವಾಗಿದೆ. ಏಕೆಂದರೆ ವ್ಯಾಪಾರಿಗಳು ಗ್ರಾಹಕರಿಗೆ ಯಾವುದೇ ರೀತಿಯಲ್ಲಿ ಮೋಸ ಮಾಡೇ ಮಾಡುತ್ತಾರೆ. ಒಂದು ತೂಕದಲ್ಲಿ ಇಲ್ಲ ಬೆಲೆಯಲ್ಲಿ ಮೋಸ ಮಾಡಿದರೆ. ಇನ್ನೂ ಕಳಬೇರೆಕೆ ಚಿನ್ನ ನೀಡಿ ಮೋಸ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

source:newstracklive.com

ಹೌದು ಎಷ್ಟೇ ಬೆಲೆ ಏರಿಕೆಯಾದರು ಬಿಡದೆ ಖರೀದಿ ಮಾಡುವ ಚಿನ್ನ ಕೊಳ್ಳುವ ಜನರು ಹಬ್ಬದ ಸಂಭ್ರಮದಲ್ಲಿದ್ದಾರೆ. ಅದಕ್ಕಾಗಿ ಜನತೆ ಚಿನ್ನ ಖರೀದಿಸಲು ಮುಗಿಬೀಳುತ್ತಿದ್ದಾರೆ. ಈ ನಡುವೆ ಆಭರಣ ಪ್ರಿಯರಿಗೆ ಶಾಕಿಂಗ್​ ಸುದ್ದಿಯೊಂದು ಹೊರಬಿದ್ದಿದ್ದು, ಬಂಗಾರದಲ್ಲಿ ಬೆರಕೆಯಾಗುತ್ತಿದೆ ಎಂಬ ಸುದ್ದಿಯೊಂದು ಹರಿದಾಡುತ್ತಿದೆ. ಇದು ಈಗಿನದು ಅಲ್ಲ ಹಲವು ದಿನಗಳಿಂದ ಚಿನ್ನದಲ್ಲಿ ಬೇರೆ ವಸ್ತು ಬೇರೆಕೆಯಾಗುತ್ತಿದೆ ಎನ್ನುವ ವಿಷಯ ಹರಿದಾಡುತ್ತಿತ್ತು ಈಗ ಅದಕ್ಕೆ ಸಾಕ್ಷಿ ಕೂಡ ಸಿಕ್ಕಿದ್ದು ಗ್ರಾಹಕರು ಖರೀದಿಸುವ ಚಿನ್ನದಲ್ಲಿ ಸಿಮೆಂಟ್​ ಮಿಶ್ರಿತ ಪುಡಿಯೊಂದನ್ನು ಬೆರಕೆ ಮಾಡಿ ಮಾರಲಾಗುತ್ತಿದೆ ಎಂಬ ಶಾಕಿಂಗ್​ ಸುದ್ದಿಯೊಂದು ದೆಹಲಿ ಪ್ರದೇಶದಲ್ಲಿ ಭಾರೀ ಚರ್ಚೆಯಾಗುತ್ತಿದೆ.

ಸಿಮೆಂಟ್​ನಂತೆ ಕಾಣುವ ಈ ಪುಡಿಯನ್ನು ವಿದೇಶದಿಂದ ಭಾರತಕ್ಕೆ ತರಿಸಿಕೊಳ್ಳಲಾಗುತ್ತಿದೆ ಎಂದು ತಿಳಿದುಬಂದಿದೆ. ಈ ವಿಚಾರ ಎಲ್ಲೆಡೆ ಹರಿದಾಡುತ್ತಿದ್ದಂತೆ ಜ್ಯುವೆಲರ್ಸ್​ ಅಸೋಸಿಯೇಷನ್​ಗೆ ಸಾಕಷ್ಟು ದೂರುಗಳು ಬರುತ್ತಿವೆಯಂತೆ. ಇದನ್ನು ಭಾರತೀಯರು ಬಂಗಾರ ಪ್ರಿಯರು ಎಂಬುದರಲ್ಲಿ ಎರಡು ಮಾತಿಲ್ಲ. ಎನ್ನುವುದನ್ನು ಗುರಿಯಾಗಿಟ್ಟುಕೊಂಡು ಮೋಸ ನಡೆಯುತ್ತಿದೆ. ಅದರಂತೆ ಜನರು ಹಬ್ಬಕ್ಕೆ ಚಿನ್ನ ಖರೀದಿ ಮಾಡಲು ಮುಂದಾಗುತ್ತಾರೆ. ಇದೀಗ ದೇಶದಾದ್ಯಂತ ಜನರು ದೀಪಾವಳಿ ಸಂಭ್ರಮದಲ್ಲಿದ್ದಾರೆ. ಚೀನಿವಾರ ಪೇಟೆಯಲ್ಲಿ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡುಬಂದರು ಬಂಗಾರ ಖರೀದಿಸುತ್ತಿದ್ದಾರೆ. ಇದರಿಂದಾಗಿ ಚಿನ್ನದ ಬೇಡಿಕೆ ಕೂಡ ಹೆಚ್ಚಾಗಿದೆ. ಆದರೆ ಚಿನ್ನದಲ್ಲಿ ಬೆರಕೆಯಾಗುತ್ತಿದೆ ಎಂಬ ಸುದ್ದಿಯನ್ನು ಕೇಳಿ ಭಯಬೀತರಾಗಿದ್ದಾರೆ.

ಒಂದು ಲೆಕ್ಕಾಚಾರ ಮಾಡಿ ನೋಡಿದರೆ ಚಿನ್ನ ಜನರಿಗೆ ಮೋಸದ ವಸ್ತುವಾಗುತ್ತಿದೆ, ಏಕೆಂದರೆ ಕೊಳ್ಳುವಾಗಲು ಜನರಿಗೆ ಮೋಸ ನಡೆಯುತ್ತೆ ಇನ್ನೂ ಮೈಮೇಲೆ ಹಾಕಿಕೊಂಡರೆ ಕಳ್ಳರು ಯಾವ ಸಮಯದಲ್ಲಿ ಕಿತ್ತುಕೊಳ್ಳುತ್ತಾರೋ ಗೊತ್ತಿಲ್ಲ, ಇನ್ನೂ ಹಾಗಂತ ಬ್ಯಾಂಕ್-ನಲ್ಲಿ ಇಟ್ಟರು ಕೂಡ ಬಡ್ಡಿ ಕಟ್ಟುವುದು ತಪ್ಪುವುದಿಲ್ಲ, ಒಟ್ಟಾರೆಯಾಗಿ ಚಿನ್ನಕ್ಕೆ ಬೆಲೆ ಎಷ್ಟಿದೆ ಅಷ್ಟೇ ಅಪಾಯವು ಕೂಡ ಇದೆ. ಅದಕ್ಕಾಗಿ ಹಬ್ಬದ ಕುಷಿಯಲ್ಲಿ ಸರಿಯಾದ ಚಿನ್ನವನ್ನು ಸರಿಯಾಗಿ ಪರೀಕ್ಷಿಸಿ ಖರೀದಿಸುವುದು ಒಳ್ಳೆಯದು.