ನಕಲಿ ದಾಖಲಾತಿ ಮಾಡಿಸಿಸುವವರೆ ಎಚ್ಚರ! ಸಿಕ್ಕಿಬಿದ್ದ ಈ ಸರ್ಕಾರಿ ನೌಕರರಿಗೆ ಕೆಲಸವೂ ಇಲ್ಲ, ಡಿಗ್ರಿಯೂ ರದ್ದಾಗಿದೆ..

0
640

ಸರ್ಕಾರ, ಜನಪ್ರತಿನಿಧಿಗಳು ಅಥವಾ ರಾಜಕಾರಣಿಗಳು ಜನರನ್ನು ವಂಚಿಸುವುದು, ಮೋಸಮಾಡುವುದು, ಸುಳ್ಳು ಹೇಳುವುದು ಮತ್ತು ಪೂರೈಸಲು ಸಾಧ್ಯವಾಗದ ಆಶ್ವಾಸನೆಗಳನ್ನು ನೀಡುವುದನ್ನು ನೋಡಿರುತ್ತೀರ, ಕೇಳಿರುತ್ತೀರ. ಆದರೆ, ಜನ ಸರ್ಕಾರವನ್ನು ವಂಚಿಸಿರುವುದನ್ನು ಕೇಳಿದ್ದೀರಾ? ಹೌದು, ಇಂತಹ ಒಂದು ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಮಹಾರಾಷ್ಟ್ರದಲ್ಲಿ ಒಬ್ಬರಲ್ಲ ಇಬ್ಬರಲ್ಲ ಸಾವಿರಾರು ಅಭ್ಯರ್ಥಿಗಳು ನಕಲಿ ಪ್ರಮಾಣಪತ್ರವನ್ನು ನೀಡುವ ಮೂಲಕ ಸರ್ಕಾರವನ್ನೇ ವಂಚಿಸಿದ್ದಾರೆ. ನಕಲಿ ಪ್ರಮಾಣಪತ್ರಗಳ ಮೂಲಕ ತಮ್ಮ ಉದ್ಯೋಗವನ್ನು ಪಡೆದುಕೊಂಡ ಎಲ್ಲರನ್ನು ವಜಾಗೊಳಿಸಲು ಸುಪ್ರೀಂ ಕೋರ್ಟ್ ಆದೇಶಿಸಿದ ನಂತರ ಸಾವಿರಾರು ಮಹಾರಾಷ್ಟ್ರ ಸರಕಾರಿ ಉದ್ಯೋಗಿಗಳು ಕೆಲಸ ಕಳೆದು ಕೊಳ್ಳಲ್ಲಿದ್ದಾರೆ.

ಸುಪ್ರೀಂ ಕೋರ್ಟ್ ನಿರ್ದೇಶನದ ಪ್ರಕಾರ, ಪರಿಶಿಷ್ಟ ಪಂಗಡಗಳು (ST) ಕೋಟಾದ ಅಡಿಯಲ್ಲಿ ನಕಲಿ ಜಾತಿ ಪ್ರಮಾಣಪತ್ರಗಳ ಮೂಲಕ ಸ್ಥಾನ ಪಡೆದ 11,700 ಉದ್ಯೋಗಿಗಳು ಶೀಘ್ರದಲ್ಲೇ ತಮ್ಮ ಪದವಿ ಮತ್ತು ಕೆಲಸ ಎರಡನ್ನು ಕಳೆದುಕೊಳ್ಳಬಹುದು. ಇಂತಹ ಅಭ್ಯರ್ಥಿಗಳಿಗೆ ಮುಂದೆ, ಭವಿಷ್ಯದಲ್ಲಿ ಎಲ್ಲಿಯೂ ಕೆಲಸ ಸಿಗದ ಹಾಗೆ ಶಿಕ್ಷೆ ವಿಧಿಸಬಹುದು ಎಂದು ಹೇಳಲಾಗುತ್ತಿದೆ.

ಇನ್ನು ಗುಮಾಸ್ತರಾಗಿ (CLERKS) ನೇಮಿಸಲ್ಪಟ್ಟ ಈ ನೌಕರರಲ್ಲಿ ಹೆಚ್ಚಿನವರು ಬುಡಕಟ್ಟು ಜನಾಂಗದವರು, ಮತ್ತು ಅವರು ಕಳೆದ ಎರಡು ದಶಕಗಳಿಂದ ಸರ್ಕಾರದ ಕಚೇರಿಗಳಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಸೇವಾ ಅವಧಿಯ ಆದರದ ಮೇಲೆ ಈ ನೌಕರರು ರಾಜ್ಯ ಸರ್ಕಾರದ ಉಪ ಕಾರ್ಯದರ್ಶಿ ಸ್ಥಾನಗಳಿಗೆ ಮುಂಬಡ್ತಿ ಪಡೆದಿದ್ದಾರೆ. ಇಷ್ಟೆಲ್ಲ ವಂಚನೆ ಮಾಡಿದ ಇವರಿಗೆ ಹಲವು ರಾಜಕಾರಣಿಗಳು ಮತ್ತು ಒಕ್ಕೂಟಗಳು ಬೆಂಬಲ ನೀಡಿದ್ದಾರೆ ಮತ್ತು ಸರ್ಕಾರ ಮತ್ತು ನ್ಯಾಯಾಲಯದ ಈ ಕ್ರಮದ ವಿರುದ್ಧವಾಗಿ ಪ್ರತಿಭಟನೆ ಮಾಡಲಿದ್ದಾರಂತೆ.

ಮಹಾರಾಷ್ಟ್ರ ಸರ್ಕಾರವು ಅಪೆಕ್ಸ್ ಕೋರ್ಟ್ ನಿರ್ದೇಶನದಲ್ಲಿ ಈ ಕ್ರಮ ಕೈಗೊಳ್ಳಬೇಕಿದೆ ಮತ್ತು ಪ್ರತಿಭಟನೆಯಲ್ಲಿ ಮಾಡುವ ಕಾರ್ಯಕರ್ತರನ್ನು ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಿದೆ. ರಾಜ್ಯದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಕಾನೂನು ಮತ್ತು ನ್ಯಾಯಾಂಗ ಇಲಾಖೆಯೊಂದಿಗೆ ಚರ್ಚೆ ನಡೆಸುತ್ತಿದ್ದಾರೆ ಮತ್ತು ವಕೀಲ ಜನರಲ್ ಅವರು, ಈ ರೀತಿ ಸರ್ಕಾರಕ್ಕೆ ವಂಚನೆ ಮಾಡಿದ ಅಭ್ಯರ್ಥಿಗಳಿಗೆ ಅಥವಾ ವ್ಯಕ್ತಿಗಳಿಗೆ ಶಿಕ್ಷೆಯನ್ನು ಘೋಷಿಸಲಿದ್ದಾರೆ.

ಸುಪ್ರೀಂ ಕೋರ್ಟ್ ಜುಲೈನಲ್ಲಿ 2017 ರಲ್ಲಿ ನೀಡಿದ ತೀರ್ಪಿನ ಪ್ರಕಾರ ಕೆಲಸಕ್ಕೆ ಅಥವಾ ವಿದ್ಯಾಭ್ಯಾಸಕ್ಕೆಂದು ನಕಲಿ ಜಾತಿ ಪ್ರಮಾಣ ಪತ್ರ ಸಲ್ಲಿಸುವ ಇಂತಹ ಅಭ್ಯರ್ಥಿಗಳನ್ನು ಯಾವುದೇ ಕಾರಣಕ್ಕೂ ಕ್ಷಮಿಸಬಾರದು, ಇವರನ್ನು ತಕ್ಷಣ ಕೆಲಸದಿಂದ ತೆಗೆಯಬೇಕು ಮತ್ತು ಇಂತಹ ಅಭ್ಯರ್ಥಿಗಳ ಪದವಿ ಅಮಾನ್ಯಗೊಳಿಸಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆದೇಶಿಸಿತ್ತು.

ಒಟ್ಟಿನಲ್ಲಿ ಇಂತವರು ಕೇವಲ ಸರ್ಕಾರವನ್ನು ಮಾತ್ರವಲ್ಲದೆ ಕಷ್ಟಪಟ್ಟು ಓಡಿಪಾಸಾಗುವ ಅಭ್ಯರ್ಥಿಗಳಿಗೂ ಸಹ ವಂಚಿಸಿದಂತಾಗಿದೆ, ಇವರ ವಿರುದ್ಧ ಕಠಿಣ ಕ್ರಮ ಕೈಗೊಂಡಾಗಲೇ ಎಲ್ಲರಿಗೂ ನ್ಯಾಯ ಸಿಗುತ್ತದೆ.