ಈ ಊರಿನಲ್ಲಿ ಮದುಮಗ ಶೃಂಗಾರಗೊಂಡು ಮನೆಯಲ್ಲೇ ಇರಬೇಕು; ಏಕೆಂದರೆ ವಧುವಿಗೆ ತಾಳಿ ಕಟ್ಟಿ ಮದುವೆಯಾಗುವುದು ವರನ ಸಹೋದರಿ ಅಂತೆ..

0
301

ಭಾರತೀಯ ಸಂಪ್ರದಾಯದ ಪ್ರಕಾರ ಮದುವೆ ಎಂದರೆ ಆ ಸಂಭ್ರಮವೇ ಬೇರೆಯಾಗಿರುತ್ತದೆ. ಯಾವುದೇ ಜಾತಿಯ ಮದುವೆಯಾದರು ಕೆಲವು ಪದ್ದತಿಗಳು ಮಾತ್ರ ಬೇರೆಯಾದರೂ ವಧು-ವರರ ಭರ್ಜರಿಯಾಗಿ ಸಿಂಗಾರಗೊಂಡು ಬಂಗಾರದ ಒಡವೆಗಳನ್ನು ಧರಿಸಿಕೊಂಡು ವಿಭಿನ್ನ ರೀತಿಯಲ್ಲಿ ತಯಾರಾಗಿ ಮದು ಮಕ್ಕಳು ಒಟ್ಟಿಗೆ ಹಾರ ಬದಲಾಯಿಸುವ ಮೂಲಕ ತಾಳಿ ಕಟ್ಟುವ ಮೂಲಕ ಮದುವೆಯಾಗುವುದು ಮೊದಲಿನಿಂದ ನಡೆದುಕೊಂಡ ಬಂದ ಸಂಪ್ರದಾಯವಾಗಿದೆ. ಆದರೆ ಇಲ್ಲೊಂದು ವಿಚಿತ್ರ ಮದುವೆ ಸಂಪ್ರದಾಯವಿದ್ದು ವರನ ಸಹೋದರಿ ವಧುವನ್ನು ಮದುವೆಯಗುವ ಪದ್ಧತಿ ಇದೆ ಅಂತೆ.

Also read: ವಿಚಿತ್ರ ಪ್ರೇಮ ಕತೆ; ಮದುವೆಯಾದ ಒಂದೇ ವಾರದಲ್ಲಿ ಮದುವೆ ಮಾಡಿಸಿದ ಪುರೋಹಿತನ ಜೊತೆಯಲ್ಲೇ ನವವಿವಾಹಿತೆ ಪರಾರಿ..

ಹೌದು ಕೇಳಲು ಆಶ್ಚರ್ಯವೆನಿಸಿದರು ಈ ಪದ್ಧತಿ ಮಾತ್ರ ಇನ್ನೂ ಚಾಲ್ತಿಯಲ್ಲಿದೆ. ಇಂತಹ ಪದ್ಧತಿ ಇರುವುದು ಗುಜರಾತ್‍ನ ಚೋಟಾ ಉದಯ್‍ಪುರ ಪ್ರದೇಶದ ಬುಡಕಟ್ಟಿನ ಸಮುದಾಯದಲ್ಲಿ, ಇವರ ಮದುವೆಯಲ್ಲಿ ಎಲ್ಲಿವೂ ಕೇಳಲಾಗದ ಕೆಲವು ಪದ್ದತಿಗಳು ಜಾರಿಯಲ್ಲಿವೆ. ತನ್ನ ಮದುವೆ ಸಮಾರಂಭದಲ್ಲಿಯೇ ವರನಿಗೆ ಭಾಗವಹಿಸಲು ಅವಕಾಶ ಇರುವುದಿಲ್ಲ. ಆತನ ಸಹೋದರಿ ಅಥವಾ ಆತನ ಕುಟುಂಬದಲ್ಲಿ ಮದುವೆ ಆಗದೆ ಇರುವ ಯುವತಿ ವರನ ಪರವಾಗಿ ಮದುವೆ ಸಮಾರಂಭದಲ್ಲಿ ಭಾಗವಹಿಸುತ್ತಾಳೆ. ಮದುವೆಯ ಮೆರವಣಿಗೆಯಿಂದ ಹಿಡಿದು, ವಧುವಿಗೆ ತಾಳಿ ಕಟ್ಟುವ ಶಾಸ್ತ್ರವನ್ನು ಆಕೆಯೇ ನಿರ್ವಹಿಸುತ್ತಾಳೆ.

ಮದುಮಗ ನಿಲ್ಲದೆ ಮದುವೆ?

ಮದುವೆ ಗಂಡು ತನ್ನ ಮದುವೆಗೆ ಸ್ವಯಂ ಹಾಜರಾಗುವಂತಿಲ್ಲ, ಬದಲಾಗಿ ಎಲ್ಲ ರೀತಿಯಲ್ಲಿ ಶೃಂಗಾರ ಮಾಡಿಕೊಂಡು ಮದುವೆಯ ದಿನ ಮನೆಯಲ್ಲೇ ತಾಯಿ ಜೊತೆ ಇರಬೇಕು. ವರನ ವಿಹಾಹದ ಎಲ್ಲಾ ಸಂಪ್ರದಾಯವನ್ನು ವರನ ಸಹೋದರಿ ಮಾಡುತ್ತಾಳೆ. ಮೆರವಣಿಗೆಯಲ್ಲಿ ತೆರಳಿ, ವಧುವಿಗೆ ತಾಳಿ ಕಟ್ಟುವುದು, ಸಪ್ತಪದಿ ತುಳಿಯುವುದು ಹಾಗೂ ಇನ್ನಿತರ ಶಾಸ್ತ್ರಗಳನ್ನು ಅವಳೇ ನೆರವೇರಿಸುತ್ತಾಳೆ. ಇದು ಒಂದು ರೀತಿಯ ಮುಜುಗರ ಅನಿಸಿದರು ವಿವಾಹದ ಕಟ್ಟುಪಾಡು ಎಲ್ಲ ಮುಗಿದ ಮೇಲೆ ವಧುವನ್ನು ವರನ ಮನೆಗೆ ತಂದು ಒಪ್ಪಿಸುತ್ತಾರೆ. ಅವರು ಬಳಿಕ ಒಂದಾಗುತ್ತಾರೆ.

ಈ ಪದ್ದತಿಗೆ ಕಾರಣ?

ಈ ಮದುವೆ ಉದಯ್‍ಪುರ ಪ್ರದೇಶದ ಬುಡಕಟ್ಟು ಜನಾಂಗದಲ್ಲಿರುವ ವಿಶಿಷ್ಟ ಪದ್ದತಿಯ ಮದುವೆಯಾಗಿದೆ. ಈ ಎಲ್ಲ ಪದ್ದತಿಗಳ ಹಿಂದೆ ಅವರದ್ದೇ ಆದ ಹಲವು ನಂಬಿಕೆಗಳ ಮೂಲಕ ನಡೆಯುತ್ತಿವೆ. ಏಕೆಂದರೆ ಇಲ್ಲಿನ ಬುಡಕಟ್ಟು ಜನಾಂಗದವರು ಈ ಊರಿನ ದೇವರುಗಳು ಅವಿವಾಹಿತರು ಎಂದು ನಂಬುತ್ತಾರೆ. ಈ ಅವಿವಾಹಿತ ದೇವರುಗಳಿಗೆ ಗೌರವ ಸಲ್ಲಿಸುವ ಸಲುವಾಗಿ ವರನು ತನ್ನ ಮದುವೆಯಲ್ಲಿ ಭಾಗಿಯಾಗುವುದಿಲ್ಲ. ಮದುಮಗನಿಗೆ ಯಾವುದೇ ದೋಷ ತಟ್ಟದಂತೆ ಆತನನ್ನು ಸಿಂಗರಿಸಿ ಮನೆಯಲ್ಲಿಯೇ ಕೂರಿಸಲಾಗುತ್ತದೆ.

Also read: ಮೆಡಿಕಲ್ ಪರೀಕ್ಷೆಯಲ್ಲಿ ಫೇಲ್ ಆಗಲು ಪ್ರೇಯಸಿ ಕಾರಣ; ಈಗ ಅವಳೆ ಫೀಸ್ ಕಟ್ಟಬೇಕು ಎಂದು ಹಠ ಹಿಡಿದ ಪ್ರಿಯಕರ..

ಇದೆಲ್ಲ ವಿಚಿತ್ರವಾದರು ಇಂತಹ ಮದುವೆ ಕೇವಲ ಸುರ್ಕೇಡಾ, ಸಾನಂದಾ ಮತ್ತು ಅಂಬಾಲ್​ ಗ್ರಾಮಗಳಲ್ಲಿ ಮಾತ್ರ ಇದೆ. ಇಂತಹ ಪದ್ದತಿಯನು ಮಿರಿ ಮದುವೆಯಾದರೆ ಅದು ಅಪಶಕುನ ಅಥವಾ ಅದರ ಕೆಟ್ಟ ಪರಿಣಾಮ ಅನುಭವಿಸಬೇಕಾದೀತು ಎಂಬ ಭಯ ಗ್ರಾಮಸ್ಥರಲ್ಲಿದೆ. ಹೀಗೆ ಸಂಪ್ರದಾಯ ಮುರಿದು ಮದುವೆಯಾದವರು ಅದರ ಕೆಟ್ಟ ಪರಿಣಾಮ ಅನುಭವಿಸಿದ್ದಾರೆ. ವಿಚ್ಛೇದನ, ಸದಾ ಜಗಳ, ಮದುವೆಯ ಸಂಬಂಧ ದೀರ್ಘ ಕಾಲ ಬಾಳಿಕೆ ಬರುವುದಿಲ್ಲ ಎಂಬ ಉದಾಹರಣೆಗಳನ್ನು ಗ್ರಾಮಸ್ಥರು ಕಂಡಿದ್ದಾರೆ ಎಂದು ಈ ಮದುವೆ ಸಂಪ್ರದಾಯ ಚಾಲ್ತಿಯಲ್ಲಿದೆ. ಇದೇ ರೀತಿಯ ಹಲವು ನಂಬಲಾಗದ ಮದುವೆ ಪದ್ದತಿಗಳು ಭಾರತೀಯ ಸಂಪ್ರದಾಯಗಳಲ್ಲಿ ಕಂಡು ಬರುತ್ತಿವೆ.