ಈ ಶಾಲೆಯ ಬಿಸಿ ಊಟಕ್ಕೆ ಮಕ್ಕಳ ಪೋಷಕರೇ ಬೆಳೆದ ಕೃಷಿ ಉತ್ಪನ್ನದಿಂದ ಮಕ್ಕಳ ಅಮ್ಮಂದಿರು ಅಡುಗೆ ತಯಾರಿಸುತ್ತಾರೆ.!

0
89

ಶಾಲೆಯಲ್ಲಿ ಮಕ್ಕಳಿಗೆ ಕೊಡುವ ಬಿಸಿ ಊಟಕ್ಕೆ ಸಂಬಂಧಿಸಿದಂತೆ ದೇಶದಲ್ಲಿ ಹಲವು ಪ್ರಕರಣ ಕೇಳಿ ಬರುತ್ತಿವೆ, ಏಕೆಂದರೆ ಅಡುಗೆ ತಯಾರಿಸುವ ಸಿಬ್ಬಂದಿಗಳ ನಿರ್ಲಕ್ಷೆಯಿಂದ ಈಗಾಗಲೇ ಹಲವು ಮಕ್ಕಳು ಪ್ರಾಣವನ್ನೇ ಕಳೆದುಕೊಂಡಿವೆ ಅದರಂತೆ ತಿಂಗಳಲ್ಲಿ ಒಂದಾದರು ಯಡವಟ್ಟಾಗಿ ಮಕ್ಕಳು ಆಸ್ಪತ್ರೆಗೆ ಸೇರುತ್ತಿವೆ. ಅದಕ್ಕಾಗಿ ಸರ್ಕಾರ ಹಲವು ಕ್ರಮಗಳನ್ನು ಕೈ ಗೊಂಡು ಅಡುಗೆ ತಯಾರಿಸುವವರಿಗೆ ತರಬೇತಿಯನ್ನು ನೀಡಿದರು ಕೂಡ ಒಂದಿಲ್ಲದೊಂದು ತಪ್ಪು ನಡೆಯುತ್ತಾನೆ ಇರುತ್ತೇವೆ ಅದಕ್ಕಾಗಿ. ಇಲ್ಲೊಂದು ಶಾಲೆಯಲ್ಲಿ ಮಕ್ಕಳ ಅಪ್ಪಂದಿರು ಬೆಳೆದ ಆಹಾರ ಪದಾರ್ಥಗಳನ್ನು ಬಳಸಿ ಮಕ್ಕಳ ಅಮ್ಮಂದಿರು ಊಟಕ್ಕೆ ತಯಾರಿಸುವುದು ಭಾರಿ ಮೆಚ್ಚುಗೆ ಪಡೆದುಕೊಂಡಿದೆ.

Also read: ಪರಿಸರ ಕಾಳಜಿಯಿಂದ 10 ಕಿ.ಮೀ ನಡೆದು ಹೋಗಿ ತರಕಾರಿ ತರುವ ಈ ಐಎಎಸ್ ಅಧಿಕಾರಿ ಪ್ರತಿಯೊಬ್ಬರಿಗೂ ಮಾದರಿ.!

ಹೌದು ಛತ್ತೀಸ್ ಗಢದ ಬುಡಕಟ್ಟು ಪ್ರದೇಶದ ಈ ಖಾಸಗಿ ಶಾಲೆಯಲ್ಲಿ ಮಕ್ಕಳ ಅಪ್ಪಂದಿರೆ ಬಿಸಿ ಊಟಕ್ಕೆ ತಾಜಾ ಕೃಷಿ ಉತ್ನನ್ನಗಳನ್ನು ಪೂರೈಸಿದರೆ ಅವರ ಅಮ್ಮಂದಿರೆ ಅಡಿಗೆ ಮಾಡಿ ಬಡಿಸುತ್ತಾರೆ. ಏಕೆಂದರೆ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿ ಊಟಕ್ಕೆ ಮಕ್ಕಳಿಗೆ ಕಳಪೆ ಗುಣಮಟ್ಟದ ಆಹಾರ ನೀಡುವುದು ಸಾಮಾನ್ಯವಾಗಿದ್ದು, ಅದಕ್ಕಾಗಿ ಅಂಬಿಕಾಪುರ್ ಜಿಲ್ಲಾ ಕೇಂದ್ರದಿಂದ ಸುಮಾರು 60 ಕಿ.ಮೀ ದೂರದಲ್ಲಿರುವ ಸಲಹಿ ಗ್ರಾಮದಲ್ಲಿ ಪೋಷಕರೇ ಶಾಲೆಯಲ್ಲಿ ಓದುತ್ತಿರುವ ತಮ್ಮ ಮಕ್ಕಳಿಗೆ ಗುಣಮಟ್ಟದ ಪೌಷ್ಟಿಕ ಆಹಾರ ಸಿದ್ಧಪಡಿಸುತ್ತಾರೆ.
ಅದಾನಿ ವಿದ್ಯಾಮಂದಿರ ಶಾಲೆಯಲ್ಲಿ ಸಿಬ್ಬಂದಿ ಸೇರಿದಂತೆ ಒಟ್ಟು 750 ಜನರಿಗೆ ಮಧ್ಯಾಹ್ನದ ಬಿಸಿ ಊಟ ಸಿದ್ಧಪಡಿಸಲಾಗುತ್ತಿದ್ದು, ಅಡಿಗೆ ಮಾಡುವುದಕ್ಕೆ ಅದಕ್ಕೆ ಆಹಾರ ಪದಾರ್ಥಗಳನ್ನು ಪೂರೈಸುವುದಕ್ಕೆ ಯಾವುದೇ ವ್ಯಾಪಾರಿ ಅಥವಾ ಗುತ್ತಿಗೆದಾರರಿಗೆ ನೀಡಿಲ್ಲ. ಅದಕ್ಕಾಗಿ ಗ್ರಾಮದ ಮಹಿಳೆಯರನ್ನೊಳಗೊಂಡ ಸಮಿತಿ ರಚಿಸಲಾಗಿದೆ. ಈ ಸಮಿತಿಯ 12 ಮಹಿಳೆಯರು ಆಹಾರ ಪದರ್ಥಗಳನ್ನು ಸಂಗ್ರಹಿಸಿ, ತಯಾರಿಸಿ, ಬಡಿಸುತ್ತಾರೆ.

Also read: 120ಕ್ಕೂ ಹೆಚ್ಚು ವರ್ಷ ಬದುಕುವ ಈ ಜನಾಂಗದವರನ್ನು ಕಂಡರೆ ನಿಮಗೆ ಖಂಡಿತ ಆಶ್ಚರ್ಯವಾಗುತ್ತೆ

ಈ ತಾಯಂದಿರು ಸಿದ್ಧಪಡಿಸುವ ಆಹಾರ ಮನೆ ಊಟದಂತೆ ಇರುತ್ತದೆ. ಸಾವಯವ ಕೃಷಿಯಲ್ಲಿ ತೊಡಗಿರುವ ಮಕ್ಕಳ ಅಪ್ಪಂದಿರು ಮಧ್ಯಾಹ್ನದ ಬಿಸಿ ಊಟಕ್ಕೆ ಅಕ್ಕಿ, ಗೋದಿ ಹಾಗೂ ತರಕಾರಿಗಳನ್ನು ಪೂರೈಸುತ್ತಾರೆ. ಮಸಾಲೆ ಪದಾರ್ಥಗಳನ್ನು ಸ್ಥಳೀಯ ಸ್ವ-ಸಹಾಯ ಸಂಘ, ಮಹಿಳಾ ಉದ್ಯಮಿ ಬಹುದ್ದೇಶಿ ಸಹಕಾರಿ ಸಮಿತಿಯಿಂದ ಖರೀದಿಸಲಾಗುತ್ತದೆ. ಈ ಮೂಲಕ ಮಹಿಳಾ ಸಬಲೀಕರಣಕ್ಕೂ ಉತ್ತೇಜನ ನೀಡಲಾಗುತ್ತಿದೆ ಎಂದು ಗ್ರಾಮದ ನಿವಾಸಿ ವೇದಮತಿ ಅವರು ಹೇಳುತ್ತಾರೆ.

Also read: ಮದುವೆ ಪಿಕ್ಸ್ ಆದ ಬಳಿಕ ಮದುಮಗ ಶೌಚಾಲಯದಲ್ಲಿ ನಿಂತು ಸೆಲ್ಫಿ ತೆಗೆದುಕೊಂಡರೆ ವಧುಗೆ ಸಿಗುತ್ತೆ ರೂ.51 ಸಾವಿರ.!

ಈ ಶಾಲೆಯಲ್ಲಿ ಮಕ್ಕಳಿಗೆ ಬೆಳಗಿನ ಉಪಹಾರವನ್ನು ನೀಡಲಾಗುತ್ತಿದೆ. ಉಪಹಾರಕ್ಕೆ ಅಲ್ವಾ, ಪೋಹಾ, ಉಪ್ಪಿಟ್ಟು ಮತ್ತು ಹಾಲನ್ನು ನೀಡಲಾಗುತ್ತದೆ. ವಿಶೇಷ ದಿನಗಳಲ್ಲಿ ಮಕ್ಕಳು ಕೇಳಿದನ್ನು ಮಾಡಿಕೊಡಲಾಗುತ್ತದೆ. 2013ರಿಂದ ಈ ಬಿಸಿ ಊಟ ನೀಡಲಾಗುತ್ತಿದ್ದು, ಗುಣಮಟ್ಟ ಮತ್ತು ಸ್ವಚ್ಛತೆಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗಿದೆ. ಗುಣಮಟ್ಟದ ಮತ್ತು ಪೌಷ್ಟಿಕ ಆಹಾರ ನೀಡುತ್ತಿರುವುದರಿಂದ ಮಕ್ಕಳ ಆರೋಗ್ಯವು ಉತ್ತಮಗೊಳ್ಳುತ್ತಿದೆ. ಅಲ್ಲದೆ ಪೌಷ್ಠಿಕ ಆಹಾರದ ಬಗ್ಗೆ ಗ್ರಾಮಸ್ಥರಲ್ಲಿ ಜಾಗೃತಿ ಕೂಡ ವೇಗವಾಗಿ ಹರಡುತ್ತಿದೆ ”ಎಂದು ಶಾಲೆಯ ಪ್ರಾಂಶುಪಾಲರಾದ ರಜನಿಕಾಂತ್ ಶರ್ಮಾ ಹೇಳಿದ್ದಾರೆ. ಇದೊಂದು ಹೊಸ ಮಾದರಿಯಾಗಿದ್ದು ದೇಶದ ಎಲ್ಲ ಶಾಲೆಯಲ್ಲಿ ಇದನ್ನೇ ಜಾರಿಗೆ ತಂದರೆ ಯಾವುದೇ ಪ್ರಕರಣಗಳು ನಡೆಯುದಿಲ್ಲ ಅನಿಸುತ್ತೆ.