ಐ.ಪಿ.ಎಸ್. ಅಣ್ಣಾ ಮಲೈ ಗುಂಪುಗಾರಿಕೆಯನ್ನು ಮೆಟ್ಟಲು 71 ಪೊಲೀಸ್ ಸಿಬ್ಬಂದಿಯನ್ನು ಒಮ್ಮೆಲೇ ವರ್ಗಾವಣೆ ಮಾಡಿ ಇತಿಹಾಸ ಸೃಷ್ಟಿಸಿದ್ದಾರೆ!!!

0
540

ನ್ಯಾಯ ಕೇಳಿ ಪೊಲೀಸ್ ಸ್ಟೇಷನ್-ಗೆ ಬಂದಿರುವ ಮಹಿಳೆಯನ್ನು ಎಳೆದು ಹಲ್ಲೆ ಮಾಡಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಡಿತ್ತು. ಅದರ ವೀಡಿಯೊ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ರೀತಿಯ ದರ್ಪ ಮೆರೆದ ಪೊಲೀಸ್ ಸಿಬ್ಬಂದಿ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಹಲವರು ಒತ್ತಾಯಿಸಿದರು. ಈ ವಿಷಯವಾಗಿ ಡಿಸಿಪಿ ಅಣ್ಣಾಮಲೈ ಅವರು ಆ ದಿನವೇ ಎಎಸ್​​ಐ ರೇಣುಕಯ್ಯ ಅವರನ್ನು ಅಮಾನತುಗೊಳಿಸಿದರು. ನಂತರ ಮತ್ತೊಬ್ಬ ಪೊಲೀಸ್ ಸಿಬ್ಬಂದಿಯನ್ನೂ ಅಮಾನತುಗೊಳಿಸಿ ಆದೇಶ ಹೊರಡಿಸಿದರು. ಈ ವಿಷಯ ಮಾಧ್ಯಮಗಳಲ್ಲಿ ದೊಡ್ಡ ಮಟ್ಟದ ಸುದ್ದಿಯಾಗಿತ್ತು. ಈ ಪ್ರಕರಣ ಅಷ್ಟಕ್ಕೇ ನಿಲ್ಲದೆ ಹೊಸ ಇತಿಹಾಸ ಸೃಷ್ಟಿಸಿದೆ.

ಹೌದು ಕುಮಾರಸ್ವಾಮಿ ಪೊಲೀಸ್ ಠಾಣೆಯಲ್ಲಿ ಮಹಿಳೆಯೊಬ್ಬರ ಮೇಲೆ ಪೊಲೀಸ್ ಸಿಬ್ಬಂದಿಯೇ ಹಲ್ಲೆ ಎಸಗಿದ ಘಟನೆ ರಾಜ್ಯಾದ್ಯಂತ ಜೋರು ಸದ್ದು ಮಾಡಿತ್ತು. ಅದಕ್ಕೆ ಸರಿಯಾದ ಕ್ರಮಕೈಗೊಳ್ಳಲಾಗಿತ್ತು ಆದರು ನಿಲ್ಲದೆ ಪೊಲೀಸ್ ಠಾಣೆಯ ಒಳಜಗಳ ತಾರಕಕ್ಕೇರಿ ಡಿಸಿಪಿ ಅಣ್ಣಾಮಲೈ 71 ಸಿಬ್ಬಂದಿಗಳನ್ನು ವರ್ಗಾವಣೆ ಮಾಡಿ ಠಾಣೆಯಲ್ಲಿ ಗುಂಪುಗಾರಿಕೆ ಮಾಡುವ ಸಿಬ್ಬಂದಿಗೆ ತಕ್ಕ ಪಾಠ ಕಲಿಸಿದ್ದಾರೆ. ಆದರೆ ಒಂದೇ ಬಾರಿಗೆ ವರ್ಗಾವಣೆಗೊಂಡ ವಿಚಾರ ತಿಳಿದು ಹೆಡ್ ಕಾನ್‍ಸ್ಟೇಬಲ್ ನಡಾಫ್ (52) ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಏನಿದು ಪ್ರಕರಣ?

ಜನವರಿ 30ರಂದು ಕುಮಾರಸ್ವಾಮಿ ಲೇಔಟ್​ನಲ್ಲಿ ದೂರು ಕೊಡಲು ಹೋದ ಇಬ್ಬರು ಮಹಿಳೆಯರನ್ನು ಪೊಲೀಸರು ಬಲವಂತವಾಗಿ ಹೊರಗೆ ನೂಕಿದ್ದಾರೆ. ಸಿವಿಲ್ ಡ್ರೆಸ್​ನಲ್ಲಿದ್ದ ಎಎಸ್​ಐ ರೇಣುಕಯ್ಯ ಅವರು ಒಬ್ಬ ದೂರುದಾರೆಯ ಮೇಲೆ ಹಲ್ಲೆ ನಡೆಸಿ ಹೊರಗೆ ನೂಕುತ್ತಿರುವ ವಿಡಿಯೋ ಮಾಧ್ಯಮಗಳಿಗೆ ಸಿಕ್ಕಿತ್ತು. ಇದು ಸೋಷಿಯಲ್ ಮೀಡಿಯಾದಲ್ಲೂ ವೈರಲ್ ಆಯಿತು. ಡಿಸಿಪಿ ಅಣ್ಣಾಮಲೈ ಅವರು ಆ ದಿನವೇ ಎಎಸ್​​ಐ ರೇಣುಕಯ್ಯ ಅವರನ್ನು ಅಮಾನತುಗೊಳಿಸಿದರು. ನಂತರ ಮತ್ತೊಬ್ಬ ಪೊಲೀಸ್ ಸಿಬ್ಬಂದಿಯನ್ನೂ ಅಮಾನತುಗೊಳಿಸಿ ಆದೇಶ ಹೊರಡಿಸಿದರು. ಆದರೆ, ಠಾಣೆಯಲ್ಲಿ ಒಳಜಗಳ ತೀವ್ರ ಮಟ್ಟದಲ್ಲಿರುವುದು ಗಮನಕ್ಕೆ ಬಂದ ಬಳಿಕ ಇಡೀ ಠಾಣೆಯ ಸಿಬ್ಬಂದಿಯನ್ನೇ ಎತ್ತಂಗಡಿ ಮಾಡಿದ್ದಾರೆ.

ವರ್ಗಾವಣೆಗೆ ಒಳಜಗಳವೆ ಕಾರಣವಾಯಿತಾ?

ಮಹಿಳೆಯ ಪ್ರಕರಣ ನಡೆದ ನಂತರ ಠಾಣೆಯಲ್ಲಿ ಗುಂಪುಗಾರಿಕೆ ಮಾಡುತ್ತಿದ್ದಾರೆ ಎನ್ನುವ ಮಾಹಿತಿ ಅಣ್ಣಾಮಲೈ ಅವರಿಗೆ ಸಿಕ್ಕಿತ್ತು. ಅಷ್ಟೇ ಅಲ್ಲದೆ ಮಹಿಳೆಯ ಮೇಲೆ ಹಲ್ಲೆ ಪ್ರಕರಣದಲ್ಲಿ ಎರಡು ಠಾಣೆಯಲ್ಲಿದ್ದ ಎರಡು ಗುಂಪಿನ ಮಧ್ಯೆ ಗಲಾಟೆ ಕೂಡ ಆಗಿತ್ತು. ಕೆಲ ತಿಂಗಳುಗಳ ಹಿಂದೆ ಠಾಣಾಧಿಕಾರಿಯನ್ನು ಸಸ್ಪೆಂಡ್ ಮಾಡಿಸಲು ಪೇದೆಗಳು ರೈಫಲ್‍ಗಳನ್ನು ಕದ್ದು ಮುಚ್ಚಿಟ್ಟಿದ್ದ ವಿಚಾರ ಬೆಳಕಿಗೆ ಬಂದಿತ್ತು. ಜೊತೆಗೆ ಠಾಣೆಯ ವಾಟ್ಸಾಪ್ ಗ್ರೂಪ್‍ನಲ್ಲಿ ಇತ್ತೀಚೆಗೆ ಸಿಬ್ಬಂದಿ ಪರಸ್ಪರ ಬೈದಾಡಿಕೊಂಡಿದ್ದರು. ಈ ಎಲ್ಲ ಅಹಿತಕರ ಬೆಳವಣಿಗೆ ಹಿನ್ನೆಲೆಯಲ್ಲಿ ಅಣ್ಣಾಮಲೈ ಒಂದೇ ಬಾರಿಗೆ 71 ಮಂದಿಯನ್ನು ವರ್ಗಾವಣೆ ಗೊಳಿಸಿದ್ದಾರೆ.

ಈ ಪ್ರಕರಣದಲ್ಲಿ ಮಹಿಳೆಯದೇ ತಪ್ಪು:

ಕಿಡ್ನಾಪ್ ಆಗಿದ್ದ ತಾರಕೇಶ್ವರಿಯನ್ನು ರಕ್ಷಿಸಿ ಕುಮಾರಸ್ವಾಮಿ ಪೊಲೀಸ್ ಠಾಣೆಗೆ ಕರೆತರಲಾಗಿರುತ್ತದೆ. ಆಗ ಅಲ್ಲಿಗೆ ಬರುವ ಮಹಿಳೆಯು ತನ್ನ ಮಗಳು ಹಣ ದೋಚಿದ್ದಾಳೆಂದು ದೂರು ದಾಖಲಿಸಲು ಬರುತ್ತಾರೆ. ಈ ವೇಳೆ ಮಗಳನ್ನು ಕಳುಹಿಸಿ, ಇಲ್ಲವಾದರೆ ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಗಲಾಟೆ ಮಾಡುತ್ತಿದ್ದರು. ಆಗ ಪೊಲೀಸರು ಹುಡುಗಿ ಮೇಜರ್ ಇದ್ದಾರೆ. ಆಕೆಗೆ ನಿಮ್ಮ ಜೊತೆ ಬರುವುದಕ್ಕೆ ಇಷ್ಟಪಡುತ್ತಿಲ್ಲ. ಆದ್ದರಿಂದ ಯಾವುದೇ ಕಾರಣಕ್ಕೂ ನಾವು ಆಕೆಯನ್ನು ನಿಮ್ಮ ಜೊತೆಗೆ ಕಳುಹಿಸಿ ಕೊಡುವುದಿಲ್ಲವೆಂದು ಹೇಳಿದ್ದರು. ಆಗ ಹುಡುಗಿಯ ತಾಯಿ ಠಾಣೆಯಲ್ಲಿದ್ದ ಮಹಿಳಾ ಪೊಲೀಸ್ ಸಿಬ್ಬಂದಿ ಮೇಲೆ ಕೈ ಮಾಡುತ್ತಾರೆ. ಆಗ ಸ್ಥಳದಲ್ಲಿ ಮಫ್ತಿಯಲ್ಲಿದ್ದ ಎಎಸ್​ಐ ರೇಣುಕಯ್ಯ ಅವರು ಆ ಮಹಿಳೆಯನ್ನು ಬಲವಂತವಾಗಿ ಠಾಣೆಯ ಹೊರನೂಕುತ್ತಾರೆ. ಇಲ್ಲಿದ ಶುರುವಾದ ಜಗಳ ಈಗ 71 ಪೊಲೀಸ್ ಸಿಬ್ಬಂದಿಗಳ ವರ್ಗಾವಣೆ ನಂತರ ಅಂತ್ಯಕಂಡಿದೆ.

Also read: ಚಿಕ್ಕಮಗಳೂರು ಎಸ್.ಪಿ. ಅಣ್ಣಾ ಮಲೈ ಅವರ ತಂಡದ ಬಗ್ಗೆ ಎಷ್ಟು ಕಾಳಜಿ ವಹಿಸುತ್ತಾರೆ ಅಂತ ನೋಡಿ, ಅದಕ್ಕೆ ಅವರನ್ನು ಕಂಡರೆ ಎಲ್ಲರಿಗೂ ಪ್ರೀತಿ..