ಅದ್ಧೂರಿ ಮದುವೆಯ ಖರ್ಚಿನ ಕುರಿತು ಜನಾರ್ದನ ರೆಡ್ಡಿಗೆ ಆದಾಯ ಇಲಾಖೆ ಕೇಳಿದ 15 ಪ್ರಶ್ನೆಗಳು ಏನು ಗೊತ್ತಾ?

0
725

ಪುತ್ರಿ ಬ್ರಹ್ಮಿಣಿ ಮದುವೆಯನ್ನು ಬೆಂಗಳೂರಿನಲ್ಲಿ ಅದ್ಧೂರಿಯಾಗಿ ನಡೆಸಿದ್ದು ದೇಶಾದ್ಯಂತ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಆದಾಯ ತೆರಿಗೆ ಇಲಾಖೆ ಸೋಮವಾರ ಬಳ್ಳಾರಿಯ ಅವರ ಕಚೇರಿ ಮೇಲೆ ದಾಳಿ ನಡೆಸಿದೆ. ಮತ್ತೊಂದೆಡೆ ಮದುವೆಯ ಖರ್ಚುವೆಚ್ಚ ಕುರಿತ 15 ಪ್ರಶ್ನೆಗಳಿಗೆ ಉತ್ತರಿಸುವಂತೆ ನೋಟೀಸ್ ಜಾರಿ ಮಾಡಿದೆ.

ಅಕ್ರಮ ಗಣಿಗಾರಿಕೆ, ನ್ಯಾಯಾಧೀಶರಿಗೆ ಲಂಚ ನೀಡಲು ಯತ್ನ ಸೇರಿದಂತೆ ಹಲವಾರು ಪ್ರಕರಣಗಳಲ್ಲಿ ವಿಚಾರಣೆ ಎದುರಿಸುತ್ತಿರುವ ಜನಾರ್ದನ ರೆಡ್ಡಿ ಜಾಮೀನಿನ ಮೇಲೆ ಬಿಡುಗಡೆ ಆಗಿದ್ದಾರೆ. ಮಗಳ ಮದುವೆ ಕಾರಣ ಬಳ್ಳಾರಿಗೆ ಪ್ರವೇಶಿಸಲು ಅನುಮತಿ ನೀಡಲಾಗಿತ್ತು. ಆದರೆ ಜನಾರ್ದನ ರೆಡ್ಡಿ ತನ್ನ ಮಗಳ ಮದುವೆಗೆ ಸುಮಾರು 500ರಿಂದ 600 ಕೋಟಿ ರೂ. ಖರ್ಚು ಮಾಡಿರುವುದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಬಹುತೇಕ ಪಾವತಿಯನ್ನು ಚೆಕ್ ಮುಖಾಂತರ ಮಾಡಲಾಗಿದೆ. 500 ಮತ್ತು 1000 ನೋಟು ರದ್ದುಪಡಿಸಿದ ಈ ಸಂದರ್ಭದಲ್ಲೂ ಇಷ್ಟು ಖರ್ಚು ಮಾಡಿದ ಬಗ್ಗೆ ಸಂಸತ್ ಅಧಿವೇಶನದಲ್ಲೂ ಪ್ರತಿಧ್ವನಿಸಿತ್ತು.

ಈ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸೋಮವಾರ ಬಳ್ಳಾರಿಯ ರೆಡ್ಡಿ ಅವರ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ಮಾಡಿದ್ದಾರೆ. ಮತ್ತೊಂದೆಡೆ ಬೆಂಗಳೂರಿನಿಂದ ಮದುವೆಯ ಖರ್ಚು ವೆಚ್ಚದ ವಿವರ ಸೇರಿದಂತೆ 15 ಪ್ರಶ್ನೆಗಳಿಗೆ ಉತ್ತರಿಸುವಂತೆ ನೋಟೀಸ್ ಜಾರಿ ಮಾಡಲಾಗಿದೆ. ಸುಮಾರು 3 ಪುಟಗಳ ನೋಟೀಸ್‌ಗೆ ಶುಕ್ರವಾರದೊಳಗೆ ಉತ್ತರಿಸುವಂತೆ ಸೂಚಿಸಿದೆ. 2 ಪುಟಗಳಲ್ಲಿ 15 ಪ್ರಶ್ನೆಗಳನ್ನು ಕೇಳಲಾಗಿದೆ. ಅದರಲ್ಲಿ ಮನುಷ್ಯನ ಎತ್ತರದ ಪ್ರತಿಮೆಗಳು, ಎಲ್‌ಸಿಡಿ ಟೀವಿ, ಜ್ಯುವೆಲರಿ, ಬಟ್ಟೆ, ಮನರಂಜನಾ ಕಾರ್ಯಕ್ರಮಗಳು, ಆಹಾರ ಮುಂತಾದವುಗಳಿಗೆ ಹಣ ಹೇಗೆ ಬಂತು ಮತ್ತು ಎಷ್ಟು ಖರ್ಚು ಮಾಡಲಾಯಿತು ಎಂದು ವಿವರ ಕೇಳಿದೆ.

ಸುಮಾರು 50 ಸಾವಿರ ಮಂದಿ ಮದುವೆಗೆ ಆಗಮಿಸಿದ್ದು, ಅವರಿಗೆ ಹೈದರಾಬಾದ್ ಮತ್ತು ಬೆಂಗಳೂರಿನಲ್ಲಿ ಒದಗಿಸಲಾದ ಸೇವೆಗಳ ವಿವರ ಪಡೆಯಲಾಗುತ್ತಿದೆ. ಅಲ್ಲದೇ ಬೆಂಗಳೂರು ಮತ್ತು ಬಳ್ಳಾರಿಯಲ್ಲಿ ನಡೆದ ಕಾರ್ಯಕ್ರಮಗಳ ಸ್ಥಳಗಳಿಗೆ ಭೇಟಿ ನೀಡಿದ್ದು, ಎಲ್ಲಾ ವಿವರಗಳನ್ನು ಕಲೆ ಹಾಕುತ್ತಿದೆ.