ಪ್ಯಾನ್ ಕಾರ್ಡ್​ ನಿಯಮದಲ್ಲಿ ಆದಾಯ ತೆರಿಗೆ ಇಲಾಖೆ ತಂದ ಬದಲಾವಣೆ: Pan Card ಪಡೆಯುವ ಮುನ್ನ ಈ ಮಾಹಿತಿ ನೋಡಿ..

0
516

ಸರ್ಕಾರ ತಂದ್ದಿರುವ ಕೆಲವೊಂದು ಡಾಕ್ಯುಮೆಂಟ್ಸ್ ಮತ್ತು ಖಾತೆಗಳನ್ನು ತೆರೆಯಲು ಅರ್ಜಿಯಲ್ಲಿ ಕೇಳಿರುವ ಸರಿಯಾದ ಮಾಹಿತಿಯನ್ನು ತುಂಬಲೇ ಬೇಕಾಗುತ್ತೆ. ಅದರಲ್ಲಿ ಒಂದು ಮಿಸ್ ಆದರು ಕೂಡ ನಿಮ್ಮ ಅರ್ಜಿ ರದ್ದಾಗುತ್ತದೆ. ಇಂತಹ ಸಮಸ್ಯೆ ಎಂದರೆ ಅರ್ಜಿಯಲ್ಲಿ ತಂದೆಯ ಹೆಸರು ನಮೋದಿಸುವುದು, ಕೆಲವೊಂದು ಅರ್ಜಿದಾರರಿಗೆ ಹುಟ್ಟಿನಿಂದ ತಂದೆಯ ಪಾಲನೆಯಿಲ್ಲದೆ ತಾಯಿಯ ಪಾಲನೆಯಲ್ಲಿ ಬೆಳೆದಿರುತ್ತಾರೆ. ಹಾಗಾಗಿ ತಂದೆಯ ದಾಖಲಾತಿಗಳು ಇರದೇ ಸರ್ಕಾರದ ಕೆಲವೊಂದು ದಾಖಲಾತಿ ಪಡೆಯುವಲ್ಲಿ ಪರದಾಡುವುದು ಎಲ್ಲರಿಗೂ ಗೊತ್ತೇ ಇದೆ.

Also read: ATM ಕಾರ್ಡ್​ ಸುರಕ್ಷಿತಕ್ಕಾಗಿ ಬಂದಿದೆ ಹೊಸ ಮೊಬೈಲ್ app; ಬೇಕಾದ ಸಮಯದಲ್ಲಿ ಕಾರ್ಡ್ Block ಅಥವಾ Unblock ಮಾಡಿಕೊಳ್ಳಬಹುದು..

ಆದಾಯ ತೆರಿಗೆ ಇಲಾಖೆಯ ಹೊಸ ನಿಯಮ?

ಈ ತೊಂದರೆಯನ್ನು ಅರಿತ ಕೇಂದ್ರ ಸರ್ಕಾರ ಪ್ಯಾನ್ ಕಾರ್ಡ್ (ಖಾಯಂ ಖಾತೆ ಸಂಖ್ಯೆ) ಅರ್ಜಿಗೆ ಸಂಬಂಧಿಸಿದ ನಿಮಯದಲ್ಲಿ ಕೆಲ ತಿದ್ದುಪಡಿ ಮಾಡಿಕೊಂಡಿದೆ. ಈ ಹೊಸ ನಿಯಮದಂತೆ ಇನ್ನು ಮುಂದೆ ಪ್ಯಾನ್​ ಕಾರ್ಡ್​ಗೆ​ ಅರ್ಜಿ ಸಲ್ಲಿಸುವಾಗ ತಂದೆಯ ಹೆಸರನ್ನು ನಮೂದಿಸುವುದು ಕಡ್ಡಾಯವಲ್ಲ. ಅದರಂತೆ ಇನ್ನು ಮುಂದೆ ಅರ್ಜಿಯಲ್ಲಿ ಪೋಷಕ ಸ್ಥಾನದಲ್ಲಿ ತಾಯಿ ಹೆಸರಿನ ಆಯ್ಕೆ ಇರಲಿದ್ದು, ಅರ್ಜಿದಾರರು ತಾಯಿಯ ಹೆಸರನ್ನು ನಮೂದಿಸಿಕೊಳ್ಳುವ ಅವಕಾಶವಿರಲಿದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.

Also read: ನೀವು ಕ್ರೆಡಿಟ್​ ಕಾರ್ಡ್​ ಬಳಕೆದಾರರೆ? ಹಾಗಾದ್ರೆ ತಪ್ಪದೆ ಈ ಮಾಹಿತಿ ನೋಡಿ; ಹಣ ವಂಚನೆಯಾದರೆ ಸಿಗಲಿದೆ ಪರಿಹಾರ..

ಇದರಿಂದ Pan card ಗೆ ಅರ್ಜಿ ಸಲ್ಲಿಸುವರಿಗೆ ಮಹತ್ವದ ಉಪಯೋಗವಾಗಿದೆ. ಸದ್ಯದ ಅರ್ಜಿ ಸಲ್ಲಿಕೆಯ ವೇಳೆ ತಂದೆಯ ಹೆಸರು ನಮೂದಿಸುವುದು ಕಡ್ಡಾಯವಾಗಿದ್ದು, ಆದರೆ ತಾಯಿಯಿಂದ ಪೋಷಿಸಲ್ಪಟ್ಟವರು ಅನೇಕರಿದ್ದಾರೆ. ಇಂತಹ ಸಂದರ್ಭದಲ್ಲಿ ಅರ್ಜಿದಾರರು ಯಾರ ಹೆಸರು ನಮೂದಿಸಬೇಕೆಂಬ ಇಕ್ಕಟ್ಟಿಗೆ ಸಿಲುಕುತ್ತಾರೆ. ಈ ಹಿನ್ನಲೆ ಅಪ್ಲಿಕೇಶನ್​ನಲ್ಲಿ ಕೆಲ ತಿದ್ದುಪಡಿಗಳನ್ನು ತರಲಾಗಿದ್ದು, ಆ ಮೂಲಕ ತಂದೆಯ ಹೆಸರಿನ ಬದಲು ತಾಯಿಯ ಹೆಸರು ಬರೆಯಲು ಅವಕಾಶ ಕಲ್ಪಿಸಲಾಗುತ್ತದೆ. ಈ ಹೊಸ ನಿಯಮವು ಡಿಸೆಂಬರ್​ 5ರ ಬಳಿಕ ಜಾರಿಗೆ ಬರಲಿದೆ ಎಂದು ತಿಳಿಸಲಾಗಿದೆ.

ಅಷ್ಟೇ ಅಲ್ಲದೆ ಆದಾಯ ತೆರಿಗೆ ಇಲಾಖೆ ತಂದ ಹೊಸ ನಿಯಮದಲ್ಲಿ ವಾರ್ಷಿಕ 2.5 ಲಕ್ಷ ರೂ. ಅಥವಾ ಅದಕ್ಕಿಂತ ಮೇಲ್ಪಟ್ಟು ಆರ್ಥಿಕ ವಹಿವಾಟು ನಡೆಸುವ ಸಂಸ್ಥೆಗಳು ಪ್ಯಾನ್ ಕಾರ್ಡ್‌ ಪಡೆಯುವುದು ಕಡ್ಡಾಯ ಮಾಡಲಾಗಿದ್ದು, ಅದಕ್ಕಾಗಿ ಮೆ.31 ರೊಳಗಾಗಿ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.