ಯಶ್ ಮನೆಯಲ್ಲಿ ಐ.ಟಿ. ರೈಡ್ ಆದಾಗ ತಿಳಿದ ವಿಷಯ ಏನಂದ್ರೆ ಅವರ ಆಸ್ತಿಗಿಂತ ಸಾಲವೇ ಹೆಚ್ಚು, ಸಮಾಜ ಸೇವೆಗೆ ಸಾಲ ಮಾಡಿದ್ರ ಯಶ್??

0
712

ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ದೊಡ್ಡ ಐಟಿ ದಾಳಿ ನಡೆದಿದ್ದು ಎರಡನೇ ದಿನವೂ ಪರಿಶೀಲನೆ ಮುಂದುವರೆದಿದೆ. ಕೆಜಿಎಫ್ ಸಿನಿಮಾ ನಿರ್ಮಾಪಕ ವಿಜಯ್ ಕಿರಂಗದೂರು, ದಿ ವಿಲನ್ ನಿರ್ಮಾಪಕ ಸಿ.ಆರ್ ಮನೋಹರ್ ಹಾಗೂ ರಾಕ್ ಲೈನ್ ವೆಂಕಟೇಶ್, ಮತ್ತು ಜಯಣ್ಣ, ಪುನಿತ್, ಶಿವರಾಜ್ ಕುಮಾರ್, ಸುದೀಪ್, ಯಶ್ ಅವರ ಮನೆಗಳ ಮೇಲೆ ದಾಳಿ ಮಾಡಿದ ಅಧಿಕಾರಿಗಳು ರಾಕಿಂಗ್​ಸ್ಟಾರ್​ ಯಶ್​ ಅವರ ಆಸ್ತಿ ವಿವರ ಪರಿಶೀಲನೆ ನಡೆಸಿದ್ದು. ಇಲ್ಲಿಯವರೆಗೂ ಸಿಕ್ಕ ಆಸ್ತಿ ವಿವರದಲ್ಲಿ ಎಂಟು ಎಕರೆ ಜಮೀನು ಖರೀದಿಸಲು ವಿವಿಧ ಬ್ಯಾಂಕ್​ಗಳಲ್ಲಿ 40 ಕೋಟಿ ರೂ. ಸಾಲ ಪಡೆದಿರುವುದಾಗಿ ಯಶ್​ ಅವರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಯಶ್ ಮನೆಯಲ್ಲಿ ಸಿಕ್ಕ ಸಂಪತ್ತು?

Also read: ಕನ್ನಡ ಚಿತ್ರರಂಗದ ಮೇಲೆ IT ಶಾಕ್; ಸುದೀಪ್, ಪುನಿತ್, ಯಶ್, ಶಿವರಾಜ್ ಕುಮಾರ, ಸೇರಿದಂತೆ ಹಲವರ ಮನೆ ಮೇಲೆ IT ದಾಳಿ..

ಹೊಸಕೆರೆಹಳ್ಳಿಯಲ್ಲಿರುವ ಯಶ್ ಮನೆಯಲ್ಲಿ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಪರಿಶೀಲನೆ ವೇಳೆ ಸಿಕ್ಕಿರುವ ದಾಖಲೆಗಳನ್ನಿಟ್ಟುಕೊಂಡು ಐಟಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಮುಂಜಾನೆ ಮೂರು ಗಂಟೆಗೆ ಬಂದಿದ್ದ. ಐಟಿ ಅಧಿಕಾರಿಗಳ ಪ್ರಶ್ನೆಗೆ ತಾಯಿ ಉತ್ತರಿಸುತ್ತಿದ್ದಾರೆ. ಮನೆಯಲ್ಲಿರುವ ಚಿನ್ನ, ಆಸ್ತಿ ಪತ್ರ, ಬ್ಯಾಂಕ್‍ನ ಡಿಟೈಲ್ ನೀಡುತ್ತಿದ್ದಾರೆ. ಐಟಿ ಅಧಿಕಾರಿಗಳು ಯಶ್ ಮನೆಯಲ್ಲಿರುವ ಚಿನ್ನ ನಗನಾಣ್ಯ ಯಶ್ ಅವರ ತಾಯಿ ಮುಂದೆ ಲೆಕ್ಕ ಮಾಡಿದ್ದಾರೆ. 20 ಕೆಜಿಗೂ ಅಧಿಕ ಬೆಳ್ಳಿ, ಸುಮಾರು 450ಗ್ರಾಂ ಚಿನ್ನ, ಒಂದು ವಜ್ರದ ಸರ ಹಾಗೂ ಎರಡು ಪ್ಲಾಟಿನಮ್ ಸರ ಇರುವುದು ಬೆಳಕಿಗೆ ಬಂದಿದೆ.

ಯಶ್ ಅವರ ಸದ್ಯದ ಆಸ್ತಿ ಎಷ್ಟು?

ಯಶ್ ಅವರ ಆಸ್ತಿಗೆ ಸಂಬಂಧಪಟ್ಟ IT ಪರಿಶಿಳನೆಯಲ್ಲಿ ಹೊಸಕೆರೆಹಳ್ಳಿಯಲ್ಲಿ 80X60 ವಿಸ್ತೀರ್ಣದ ಮನೆ. Golf Club ರಸ್ತೆಯಲ್ಲಿರುವ ಪ್ರೆಸ್ಟೀಜ್ ಅಪಾರ್ಟ್​ಮೆಂಟ್​ನಲ್ಲಿ ‘ಪೆಂಟ್​ ಹೌಸ್​’ ಖರೀದಿ. ಇದರ ಬೆಲೆ ಅಂದಾಜು 8 ಕೋಟಿ ರೂ. ಎನ್ನಲಾಗಿದ್ದು, ಮಂಡ್ಯದ ಸಮೀಪ ಎಂಟು ಎಕರೆ ಜಮೀನು ಖರೀದಿ. ಸದ್ಯ ತಾಜ್ ವೆಸ್ಟೆಂಡ್ ನಲ್ಲಿ ವಾಸ್ತವ್ಯ. ತಿಂಗಳಿಗೆ ಲಕ್ಷಾಂತರ ರೂ. ಬಾಡಿಗೆ ಪಾವತಿ. ಎಂದು ತಿಳಿದು ಬಂದಿದು, ಇದೇ ವೇಳೆ ಯಶ್​ ಪತ್ನಿ ರಾಧಿಕಾ ಪಂಡಿತ್ ಅವರ ಮಲ್ಲೇಶ್ವರಂನಲ್ಲಿರುವ ನಿವಾಸಕ್ಕೂ ಐಟಿ ಅಧಿಕಾರಿಗಳು ತೆರಳಿದ್ದು, ಸದ್ಯ ಮನೆಯ ಮೂವರು ಚಾಲಕರ ಪೈಕಿ ಒಬ್ಬ ಚಾಲಕನನ್ನು ಐಟಿ ಅಧಿಕಾರಿಗಳು ಇನೋವಾ ಕಾರ್​ನಲ್ಲಿ ಕರೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ.

40 ಕೋಟಿ ರೂ. ಸಾಲದ ಮಾಹಿತಿ:

ಯಶ್ 8 ಬ್ಯಾಂಕ್ ಖಾತೆ ಹೊಂದಿದ್ದು, ನಾಲ್ಕು ಖಾತೆ ತಾಯಿಯೊಂದಿಗೆ ಜಂಟಿ ಖಾತೆ ಹೊಂದಿದ್ದಾರೆ. ಎರಡು ಬ್ಯಾಂಕ್ ನಲ್ಲಿ ಯಶ್ ಅವರಿಗೆ 40 ಕೋಟಿ ಸಾಲ ಇದೆ. ಬ್ಯಾಂಕ್ ನಲ್ಲಿ 13 ಕೋಟಿ, ಮತ್ತೊಂದರಲ್ಲಿ 17 ಕೋಟಿ ಸಾಲ ಇದೆ ಎಂದು ಹೇಳಲಾಗುತ್ತಿದೆ. ಮಂಡ್ಯದ ಬಳಿ ಜಮೀನೂ ಖರೀದಿ ಮಾಡಿರುವುದಾಗಿ ಯಶ್ ತಾಯಿ ಹೇಳಿದ್ದಾರೆ. ಅಲ್ಲದೇ 8 ಎಕರೆ ಯಶ್ ಮನೆ ಅವರ ಹೆಸರಲ್ಲಿ ರಿಜಿಸ್ಟರ್ ಆಗಿದೆ ಎಂಬುದಾಗಿ ಮಾಹಿತಿ ಲಭಿಸಿದೆ.

ಕಾಲಾವಕಾಶ ಕೇಳಿದ ಪುನೀತ್:

ಪುನೀತ್ ರಾಜ್‍ಕುಮಾರ್ ಅವರು ಐಟಿ ಅಧಿಕಾರಿಗಳು ಕೇಳುತ್ತಿರುವ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದು, ನನ್ನ ವ್ಯವಹಾರದ ಬಗ್ಗೆ ನನ್ನ ಬಳಿ ದಾಖಲೆ ಇವೆ. ಆದರೆ ದಾಖಲೆ ಸಲ್ಲಿಸಲು ಸ್ವಲ್ಪ ಸಮಯ ಬೇಕು. ಸಾಕಷ್ಟು ವ್ಯವಹಾರ ಮಾಡಿರುವುದರಿಂದ ಸ್ವಲ್ಪ ಗೊಂದಲವಿದೆ. ಪ್ರತಿಯೊಂದಕ್ಕೂ ರಶೀದಿ ಇಟ್ಟಿದ್ದೀನಿ. ಹೀಗಾಗಿ ದಾಖಲೆ ಸಲ್ಲಿಸಲು ಸ್ವಲ್ಪ ಕಾಲಾವಕಾಶ ಕೊಡಿ ಎಂದು ನಟ ಪುನೀತ್ ಸಮಾಧಾನವಾಗಿಯೇ ಅಧಿಕಾರಿಗಳ ಜೊತೆ ಮಾತನಾಡುತ್ತಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.