ಐ.ಟಿ.ಯಿಂದ Refund ಬಂದಿದೆ ಅಂತ ಸುಳ್ಳು ಇ-ಮೇಲ್, ಎಸ್.ಎಂ.ಎಸ್. ಮತ್ತು ಕರೆ ಮಾಡಿ ಖದೀಮರು ವಂಚನೆ ಮಾಡುತ್ತಿದ್ದಾರೆ, ನೀವು ಮೋಸ ಹೋಗಬಾರದು ಅಂದ್ರೆ ಇದನ್ನು ಓದಿ..

0
366

ಸೈಬರ್ ವಂಚಕರು ಇಷ್ಟು ದಿನ ಮೊಬೈಲ್ ಬ್ಯಾಂಕಿಂಗ್, Credit, debit card ವಂಚನೆ ಮಾಡುತ್ತಿರುವ ಪ್ರಕರಣಗಳು ಜನರ ಮತ್ತು ಬ್ಯಾಂಕ್- ಗಳ ನಿದ್ದೆಗೆಡಿಸಿತ್ತು, ಇದರ ಬಗ್ಗೆ ಹಲವಾರು ಬದಲಾವಣೆಗಳನ್ನು ಮಾಡಲಾಯಿತು. ಈಗ ಹೊಸ ತರಹದ ವಂಚನೆಗಳು ನಡೆಯುತ್ತಿದು. ಇಂಟರ್ನೆಟ್ ಕಳ್ಳರು ಆದಾಯ ತೆರಿಗೆ ಇಲಾಖೆಯ ಸೊಗಡಿನಲ್ಲಿ ವಂಚನೆ ಮಾಡುತ್ತಿದ್ದಾರೆ. ಇದರ ಬಗ್ಗೆ ಟ್ವಿಟ್ಟರ್ ನಲ್ಲಿ ಚರ್ಚೆಗಳು ನಡೆಯುತ್ತಿದ್ದು ತೆರಿಗೆ ಪಾವತಿದಾರರು ಎಚ್ಚರಿಕೆಯಿಂದ ಇರಲು ತಿಳಿಸಲಾಗಿದೆ.

Also read: ಇನ್ಮುಂದೆ ATM​ ಬಳಸದೇ ಸ್ಯ್ಕಾನ್ ಮಾಡಿ ಹಣ ಪಡೆಯಬಹುದು; ಇದರಿಂದ ಕಾರ್ಡ್​ ಬಳಕೆ ವೇಳೆ ನಡೆಯುತ್ತಿರುವ ವಂಚನೆಗಳಿಗೆ ಕಡಿವಾಣ ಹಾಕುತ್ತಾ?

ಹೌದು ಆದಾಯ ತೆರಿಗೆ ಇಲಾಖೆಯ ಹೆಸರಿನಲ್ಲಿ ಸೈಬರ್‌ ಅಪರಾಧಿಗಳು ಕಳಿಸುವ ಎಸ್‌ಎಂಎಸ್‌ ಮತ್ತು ಇ-ಮೇಲ್‌ಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಏಕೆಂದರೆ ಇಂತಹ ಸದೇಶಗಳು ವಂಚನೆ ಮಾಡುವ ಉದ್ದೇಶದಿಂದ ಕಳುಹಿಸಲಾಗುತ್ತೆ ತಕ್ಷಣ ನೀವು ಅದಕ್ಕೆ ರಿಪ್ಲೈ ಮಾಡಿದರೆ ನಿಮ್ಮ ಎಲ್ಲ ಹಣವನ್ನು ದರೋಡೆ ಮಾಡುವುದರಲ್ಲಿ ಯಾವುದೇ ಅನುಮಾನಗಳಿಲ್ಲ.

ಐ.ಟಿ ರಿಟರ್ನ್‌ ಹೆಸರಲ್ಲಿ ಬರುತ್ತಿದೆ ಸಂದೇಶ:

ಐ.ಟಿ ರಿಟರ್ನ್‌ ಸಲ್ಲಿಸಿದವರರಿಗೆ ಹಣ ಮರುಪಾವತಿ ಮಾಡಲಾಗಿದ್ದು, ಪಾವತಿದಾರರು ನಿಮ್ಮ ಬ್ಯಾಂಕ್ ಮಾಹಿತಿ ನೀಡಿ ತೆರಿಗೆ ಹಣವನ್ನು ಪಡೆಯಬೇಕು ಎಂದು, ವಂಚಕರು ನಿಮ್ಮ ಮೊಬೈಲ್ ಸಂಖ್ಯೆಗೆ ಇಲ್ಲ email ಗೆ ಸಂದೇಶ ಕಳುಹಿಸುತ್ತಾರೆ. ಇದನ್ನು ಸತ್ಯವೆಂದು ತಿಳಿಯಬೇಡಿ. ಇದರ ಬಗ್ಗೆ ಹೆಚ್ಚಿನ ಜಾಗೃತರಾಗಬೇಕು ಎಂದು ಕೇಂದ್ರ ಸರ್ಕಾರದ ಸೈಬರ್‌ ಸುರಕ್ಷತಾ ಸಂಸ್ಥೆ ‘ಕಂಪ್ಯೂಟರ್‌ ಕ್ಷಿಪ್ರ ಪ್ರತಿಕ್ರಿಯಾ ತಂಡ’ (ಸಿಇಆರ್‌ಟಿ-ಇನ್‌) ಮನವಿ ಮಾಡಿಕೊಂಡಿದೆ.

ನಕಲಿ ಸಂದೇಶಗಳು:

Also read: ನೀವು ಕ್ರೆಡಿಟ್​ ಕಾರ್ಡ್​ ಬಳಕೆದಾರರೆ? ಹಾಗಾದ್ರೆ ತಪ್ಪದೆ ಈ ಮಾಹಿತಿ ನೋಡಿ; ಹಣ ವಂಚನೆಯಾದರೆ ಸಿಗಲಿದೆ ಪರಿಹಾರ..

ಹಣ ವಂಚನೆ ಮಾಡಲು ನಕಲಿ ಎಸ್‌ಎಂಎಸ್‌ಗಳನ್ನು ವಂಚಕರು ಕಳುಹಿಸುತ್ತಿದು ಅವುಗಳನ್ನು ಗುರುತ್ತಿಸಲು ಸೈಬರ್ ತಂಡ ಮಾಹಿತಿ ನೀಡಿದೆ. ಈ ಬಗ್ಗೆ ತಂಡವು ಮಾಹಿತಿ ನೀಡಿದ ಪ್ರಕಾರ. bit.ly, goo.gl, ow.ly and t.co ಹೆಸರಿನ ಅಂತರ್ಜಾಲ ತಾಣದ ವಿಳಾಸದಿಂದ ಬರುವ ಎಸ್‌ಎಂಎಸ್‌ಗಳಲ್ಲಿ. ಆದಾಯ ತೆರಿಗೆಯಲ್ಲಿನ ಹೆಚ್ಚುವರಿ ಹಣ ಮರಳಿಸುವುದಕ್ಕೆ ಅಂಗೀಕಾರ ದೊರೆತಿದೆ. ಶೀಘ್ರದಲ್ಲಿಯೇ ನಿಮ್ಮ ಬ್ಯಾಂಕ್‌ ಖಾತೆಗೆ ಹಣ ಜಮೆ ಆಗಲಿದೆ ಎನ್ನುವ ಎಸ್‌ಎಂಎಸ್‌ನಲ್ಲಿ ಒಂದು ವಿಷಯ ತಿಳಿಸಲಾಗುತ್ತೆ. ನೀವು ಬ್ಯಾಂಕ್ ವಿವರವನ್ನು ತಪ್ಪಾಗಿ ನಮೊದಿಸಿದ್ದಿರಾ ಆದಕಾರಣ ಮರಳಿ ಬರುವ ಹಣ ವರ್ಗಾವಣೆಗೆ ಮಾಹಿತಿಯನ್ನು ಈ ಲಿಂಕ್ ಮೂಲಕ ಸರಿಯಾದ ಬ್ಯಾಂಕ್‌ ಖಾತೆ ಸಂಖ್ಯೆ ನಮೂದಿಸಿ ಮಾಹಿತಿ ನೀಡಿ ಎಂದು ಕಳುಹಿಸಲಾಗುತ್ತೆ.

ವಂಚನೆಯ ಲಿಂಕ್ ಕ್ಲಿಕ್ ಮಾಡಿದರೆ ಏನಾಗುತ್ತೆ?

Also read: ATM ಕಾರ್ಡ್​ ಸುರಕ್ಷಿತಕ್ಕಾಗಿ ಬಂದಿದೆ ಹೊಸ ಮೊಬೈಲ್ app; ಬೇಕಾದ ಸಮಯದಲ್ಲಿ ಕಾರ್ಡ್ Block ಅಥವಾ Unblock ಮಾಡಿಕೊಳ್ಳಬಹುದು..

ನಿಮಗೆ ಬಂದ ಸಂದೇಶದ ಪ್ರಕಾರ ನಕಲಿ ಅಂತರ್ಜಾಲ ತಾಣಕ್ಕೆ ಭೇಟಿ ನೀಡುತ್ತಿದ್ದಂತೆ ಆದಾಯ ತೆರಿಗೆ ಇಲಾಖೆಯ ಅಧಿಕೃತ ಅಂತರ್ಜಾಲ ತಾಣದ ತರಹದ ಇನ್ನೊದು ಸುಳ್ಳು ವೆಬ್ ಸೈಟ್ ತೆರೆದುಕೊಳ್ಳುತ್ತದೆ. ಅಲ್ಲಿರುವ ರಿಟರ್ನ್‌ ಸಲ್ಲಿಕೆಯ ಅರ್ಜಿ ಭರ್ತಿ ಮಾಡಿ ಲಾಗಿನ್‌ ಮತ್ತು ಪಾಸ್‌ವರ್ಡ್‌ ನಮೂದಿಸಲು ಸೂಚಿಸಲಾಗುತ್ತದೆ. ಅದೇ ಪ್ರಕಾರ ನೀವು ನೀಡುವ ವೈಯಕ್ತಿಕ ಮಾಹಿತಿಯನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತದೆ. ನಿಮ್ಮ ಹಣವನ್ನು ವಂಚನೆ ಮಾಡಲಾಗುತ್ತೆ ಈ ಬಗ್ಗೆ ಬಗ್ಗೆ ಜಾಗರೂಕರಾಗಿರಬೇಕು ಎಂದು ತಿಳಿಸಿದೆ.