ಸಾವಿರಾರು ಕೋಟಿ ರೂಪಾಯಿ ವಂಚನೆ ಮಾಡಿದ್ದ ಗೂಗಲ್ ಸಂಸ್ಥೆ, ಕೊನೆಗೂ ಕೇಸ್-ಗೆದ್ದ ಆದಾಯ ತೆರಿಗೆ ಇಲಾಖೆ

0
726

ಗೂಗಲ್ ಸರ್ಚ್ ಎಂಜಿನ್ ಯಾರಿಗೆ ತಾನೆ ಗೊತ್ತಿಲ್ಲ, ಚಿಕ್ಕ ಮಕ್ಕಳಿಂದ ಹಿಡಿದು ಎಲ್ಲಾ ವಯೋಮಾನದವರಿಗೆ ಗೂಗಲ್ ಹಾಟ್ ಫೇವರಿಟ್, ತನ್ನ ಪ್ರತಿಸ್ಪರ್ದಿಗಳನ್ನು ಹಿಂದೆಹಾಕುತ್ತಾ ಹಾಗು ಜನರ ಹೃದಯ ಗೆಲ್ಲುತಾ ಬಂದಿದ್ದ ಗೂಗಲ್-ಗೆ ಈಗ ಭಾರತದ ಆದಾಯ ತೆರಿಗೆ ಇಲಾಖೆ ಶಾಕ್ ನೀಡಿದೆ.

google-job-monthly-12lak-3

ಆರು ವರ್ಷಗಳಿಂದ ಗೂಗಲ್ ಎಂಬ ಈ ಟೆಕ್ ದೈತ್ಯನ ವಿರುದ್ಧ ನ್ಯಾಯಾಲಯದಲ್ಲಿ ಹೋರಾಡಿದ್ದ ಭಾರತದ ಆದಾಯ ತೆರಿಗೆ ಇಲಾಖೆಗೆ ಕೊನೆಗೂ ಜಯ ಸಿಕ್ಕಿದೆ. ಈ ಘಟನೆ ಬೇರೆ ದೇಶದಿಂದ ಭಾರತದಲ್ಲಿ ಆದಾಯ ಗಳಿಸುತ್ತಿರುವ MNC -ಗೆ ಇದೊಂದು ಉದಾಹರಣೆ.

ಕೇಸಿನ ವಿವರ:

ಗೂಗಲ್ ಕಂಪನಿ ತಾನು ಭಾರತದಲ್ಲಿ ಗಳಿಸಿದ ದೊಡ್ಡ ಮೊತ್ತದ ಆದಾಯವನ್ನು ಐರ್ಲೆಂಡ್ಗೆ Gift Voucher ಮೂಲಕ ಕಳಿಸುತ್ತಿತ್ತು. ಬಹುತೇಕ ಎಲ್ಲಾ MNC -ಗಳು ಐರ್ಲೆಂಡ್-ನಲ್ಲಿ ತಮ್ಮ ಸಂಸ್ಥೆಯನ್ನು ತೆರೆದಿರುತ್ತವೆ, ಕಾರಣವೇನೆಂದರೆ ಐರ್ಲೆಂಡ್-ನಲ್ಲಿ ಅತಿ ಕಡಿಮೆ ದರದಲ್ಲಿ ತೆರಿಗೆ ಸ್ವೀಕರಣೆ ಮಾಡುತ್ತವೆ.  ಇದರ ಕುರಿತಾಗಿ ಆದಾಯ ತೆರಿಗೆ ಇಲಾಖೆ ಗೂಗಲ್ ಇಂಡಿಯಾ  ಕಂಪನಿಗೆ ನೋಟೀಸ್ ಜಾರಿ ಮಾಡಿತ್ತು, ಇದನ್ನು ಗೂಗಲ್ ಸಂಸ್ಥೆ ಕೋರ್ಟ್ನಲ್ಲಿ ಸ್ಪರ್ದಿಸಿತ್ತು, ಇದು ೨೦೦೭-೨೦೦೮ ಮತ್ತು ೨೦೧೨-೨೦೧೩ ಸಂಬಂಧಪಟ್ಟ ಕೇಸ್ ಆಗಿದ್ದು, ೬ ಅಪೀಲ್-ಗಳನ್ನೂ ಗೂಗಲ್ ಸಂಸ್ಥೆ ಮಾಡಿತ್ತು.

ಕೆಲವು ದಿನಗಳ ಹಿಂದೆ ಗೂಗಲ್ ಇಂಡಿಯಾದ ಎಲ್ಲ ಅಪೀಲ್ ಗಳು Income Tax Appellate Tribunal ( ITAT) ವಜಾ ಮಾಡಿದೆ. ಗೂಗಲ್ ಇಂಡಿಯಾ ಮತ್ತು ಗೂಗಲ್ ಐರ್ಲೆಂಡ್ ಟ್ಯಾಕ್ಸ್ ಕಟ್ಟದಿರುವ ಉದ್ದೇಶದಿಂದ ಈ ರೀತಿ ಮಾಡಿದೆ ಎಂಬುದೇ ಆದಾಯ ತೆರಿಗೆ ಇಲಾಖೆ ವಾದ. ಈಗ ಗೂಗಲ್ ಇಂಡಿಯಾ ಆದಾಯ ತೆರಿಗೆ ಇಲಾಖೆಗೆ ರೂ.೧೪೫೭ ಕೋಟಿ ತೆರಿಗೆ ಪಾವತಿ ಮಾಡಬೇಕು.  ಗೂಗಲ್ ಇಂಡಿಯಾ ಹಾಗು ಗೂಗಲ್ ಐರ್ಲೆಂಡ್ ನಡುವೆ ಒಂದು ಜಾಹಿರಾತು ಪ್ರೋಗ್ರಾಮ್ ಇದೆ ಅದು “Adwords ” . ಗೂಗಲ್ ಇಂಡಿಯಾ ಭಾರತೀಯ ಜಾಹೀರಾತುದಾರರಿಗೆ Adwords -ನ ಹಂಚಿಕೆದಾರ ಅಥವಾ ಡಿಸ್ಟ್ರಿಬ್ಯೂಟರ್. ತಾನು Adwords -ನ ಕೇವಲ ಹಂಚಿಕೆದಾರ ಮಾತ್ರವೆಂಬುದು ಗೂಗಲ್ ಇಂಡಿಯಾದ ವಾದ.

ಆದರೆ ಟ್ಯಾಕ್ಸ್ ಟ್ರಿಬ್ಯೂನಲ್ ಪ್ರಕಾರ ಗೂಗಲ್ ಇಂಡಿಯಾ ಗೂಗಲ್ ಐರ್ಲೆಂಡ್ ಕಡೆಯಿಂದ Information  and  Technology -ಗಾಗಿ  ಪೇಟೆಂಟ್ಅ-ನ್ನು ಪಡೆದಿದೆ. ಬೆಂಗಳೂರು  ಬೆಂಚ್ ಆಪ್ ದಿ  ಟ್ರಿಬ್ಯೂನಲ್ ಪ್ರಕಾರ ಗೂಗಲ್ ಇಂಡಿಯಾ ಕೇವಲ ಗ್ರಾಹಕರ ಮಾಹಿತಿ ಮಾತ್ರವಲ್ಲದೆ ಅದು ಗೂಗಲ್ ಐರ್ಲೆಂಡ್ಗೆ ಕಳುಹಿಸಿದ ಆದಾಯವನ್ನು ಪೇಟೆಂಟ್, ಇನ್ವೆಂಷನ್, ಮಾಡೆಲ್, ಡಿಸೈನ್, ಸೀಕ್ರೆಟ್ ಫಾರ್ಮುಲಾ ,ಹಾಗು  ಪ್ರೋಸೆಸ್ಗಾಗಿ ಉಪಯೋಗಿಸಲಾಗುತ್ತಿದೆ ಹಾಗು ಗೂಗಲ್ ಇಂಡಿಯಾ ಬುಕ್ಸ್ ಆಪ್ ಅಕೌಂಟ್ಸ್ ಹಾಗು ಟೀ ಡೀ ಸ್ ಟ್ಯಾಕ್ಸ್ ಡಿಡೆಕ್ಷನ್  ಅಟ್ ಸೊರ್ಸ್ ಮಾಹಿತಿ ಯನ್ನು ಮೈನಸ್ ಮಾಡಬೇಕು, ಆದರೆ ಅದು ಇವೆಲ್ಲ ಮಾಡಿಲ್ಲ

ಹೀಗೆ ಭಾರತದ ಕಾನೂನಿಗೆ ವಿರುದ್ಧವಾಗಿ ಇಂತಹ ದೊಡ್ಡ MNC -ಗಳು ತೆರಿಗೆ ವಂಚನೆ ಮಾಡಿರುವುದು ಇದೆ ಮೊದಲಲ್ಲ ಈ ಹಿಂದೆ ವೊಡಾಫೋನ್ ಕೂಡ ಭಾರತ ಸರ್ಕಾರಕ್ಕೆ ತೆರಿಗೆ ವಂಚನೆ ಮಾಡಿತ್ತು. ಭಾರತದಿಂದ ಸಾವಿರಾರು ಕೋಟಿ ಲಾಭ ಮಾಡಿಕೊಳ್ಳುತ್ತಿರುವ ಇಂತಹ MNC -ಗಳು ಸ್ವಲ್ಪ ಪ್ರಾಮಾಣಿಕವಾಗಿ ತೆರಿಗೆ ಕಟ್ಟಿದರೆ ಒಳಿತು.