ನೀವು ಈ ರೀತಿ ಮಾಡ್ತಾ ಇದ್ರೆ, ನಿಮ್ಮ ಫೋನ್ ಬ್ಯಾಟರಿ ಬೇಗ ಹಾಳಾಗುತ್ತೆ..! ಫೋನ್ ಬ್ಯಾಟರಿ ಚೆನ್ನಾಗಿರಬೇಕು ಅಂದ್ರೆ ಹೀಗೆ ಮಾಡಿ..

0
1746

Kannada News | kannada Useful Tips

ಎಲ್ಲಾ ಬ್ಯಾಟರಿಗಳು ಮುಕ್ತಾಯ ದಿನಾಂಕವನ್ನು ಹೊಂದಿರುತ್ತವೆ. ಅದು ಸ್ಮಾರ್ಟ್ಫೋನ್, ಮಲ್ಟಿಮೀಡಿಯಾ ಫೋನ್ ಬ್ಯಾಟರಿಗಳಿಗೆ ಕೂಡ ಅನ್ವಹಿಸುತ್ತದೆ. ಅದಕ್ಕೆ ಮುಕ್ತಾಯ ದಿನಾಂಕ ಮುಗಿದ ನಂತರ ಅದನ್ನು ಬಳಸದಿರುವುದು ಒಳ್ಳೆಯದು.

ನಿಮ್ಮ ಚಾರ್ಜಿಂಗ್ ಪದ್ಧತಿಗಳು ಮತ್ತು ಬಳಸುವ ಚಾರ್ಜರ್ಗಳು ಸಹ ಪ್ರಮುಖ ಪಾತ್ರವಹಿಸುತ್ತವೆ. ನಿಮ್ಮ ಫೋನ್ ರಾತ್ರಿಯ ಇಡೀ ಚಾರ್ಜಿಂಗ್ ಮಾಡುವುದರಿಂದ ಬ್ಯಾಟರಿ ಬೇಗ ಹಾಳಾಗುತ್ತದೆ.

ನಿಮ್ಮ ಫೋನ್ ಅನ್ನು ಅದೇ ಕಂಪನಿಯ ಚಾರ್ಜರ್ನೊಂದಿಗೆ ಮಾತ್ರ ಚಾರ್ಜ್ ಮಾಡಿ. ನೀವು ಬಳಸುವ ಚಾರ್ಜರ್ ಫೋನಿನ USB ಪೋರ್ಟಿಗೆ ಹೊಂದಿಕೆಯಾಗದಿದ್ದರು ಹಾಗೆ ಚಾರ್ಜ್ ಮಾಡಿದರೆ, ನಿಮ್ಮ ಬ್ಯಾಟರಿ ಕಾರ್ಯಕ್ಷಮತೆ, ಚಾರ್ಜ್ ಮತ್ತು ಸಾಮರ್ಥ್ಯವನ್ನು ಶೇಖರಿಸುವ ಸಾಮರ್ಥ್ಯ ಮೇಲೆ ಪರಿಣಾಮ ಬೀರುತ್ತದೆ.

ಕಂಪನಿ ಚಾರ್ಜರ್ ಗಿಂತಲೂ ಬೇರೆ ಚಾರ್ಜರ್ನ ಔಟ್ಪುಟ್ ವೋಲ್ಟೇಜ್ (V) ಮತ್ತು ಅಂಪೇರ್ (AMP) ರೇಟಿಂಗ್ ಮೂಲ ಅಡಾಪ್ಟರ್-ಗೆ ಹೊಂದಿಕೆಯಾಗುತ್ತದೆ ಅಥವಾ ಫೋನ್ ತಯಾರಕರಿಂದ ಅಂಗೀಕರಿಸಲ್ಪಟ್ಟಿದೆ ಅದಕ್ಕೆ ಬ್ಯಾಟರಿ ಮತ್ತು ಫೋನಿಗೆ ಸೂಕ್ತವಾದ ಚಾರ್ಜರ್ ಆನ್ ಬಳಸಿ.

ಲೋಕಲ್ ಉತ್ಪಾದಕರಿಂದ ಅಗ್ಗದ ಚಾರ್ಜರ್ಗಳನ್ನು ಬಳಸುವುದು ನಿಲ್ಲಿಸಿ. ಕರೆಂಟ್ ಏರಿಳಿತದ ವಿರುದ್ಧ ಮತ್ತು ಓವರ್ ಚಾರ್ಜಿಂಗ್ ಆಗದಿರುವುದನ್ನು ತಪ್ಪಿಸಲು ಅವರು ಯಾವುದೇ ಸುರಕ್ಷತಾ ಕಾರ್ಯವಿಧಾನಗಳನ್ನು ಚಾರ್ಜರ್ಗಳಲ್ಲಿ ಅಳವಡಿಸಿರುವುದಿಲ್ಲ. ಇಂತಹ ಅಗ್ಗದ ಅಡಾಪ್ಟರ್ ವೈಫಲ್ಯವು ಬ್ಯಾಟರಿ ಮತ್ತು ಫೋನ್ನನ್ನು ಶಾಶ್ವತವಾಗಿ ಹಾನಿಗೊಳಿಸುತ್ತದೆ. ಇದಲ್ಲದೆ ಅಗ್ಗದ ಚಾರ್ಜರ್ಗಳನ್ನು ಬಳಸುವುದು ನಿಮ್ಮ ಸ್ಮಾರ್ಟ್ಫೋನ್ ಮತ್ತು ಅದರ ಬ್ಯಾಟರಿಗೆ ಅಪಾಯಕಾರಿ.

ಚಾರ್ಜ್ ಮಾಡುತ್ತಿರುವಾಗ ಫೋನಿನ ಬ್ಯಾಕ್ ಕೇಸ್ ಅನ್ನು ತೆಗೆದು ಚಾರ್ಗಿಂಗ್ ಗೆ ಹಾಕಿ. ಹೀಗೆ ಮಾಡುವುದರಿಂದ ಬ್ಯಾಟರಿ ಸ್ವಲ್ಪ ತಣ್ಣಗಿರಲು ಸಹಾಯವಾಗುತ್ತದೆ.

ಚಾರ್ಜ್ ಮಾಡುವಾಗ ಫೋನ್ ಅನ್ನು ಬಟ್ಟೆಯ ಮೇಲೆ ಇಡೀ. ಈ ರೀತಿ ಮಾಡುವುದರಿಂದ ಚಾರ್ಗಿಂಗ್ ನಿಂದಾಗುವ ಹೆಚ್ಚಿನ ಶಾಖವನ್ನು ಫೋನ್ ಮತ್ತು ಬ್ಯಾಟರಿಗೆ ಹೆಚ್ಚಿನ ನಷ್ಟವಾಗುವುದಿಲ್ಲ.

ಫಾಸ್ಟ್ ಚಾರ್ಜರ್ ಬಳಸುವುದರಿಂದ ನಿಮ್ಮ ಬ್ಯಾಟರಿ ಬಹು ಬೇಗ ಹಾಳಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಫೋನಿನ ಬ್ಯಾಟರಿಗೆ ಕಳುಹಿಸಬೇಕಾದ ವೋಲ್ಟೇಜ್ ಗಿಂತ ಹೆಚ್ಚಿನ ವೋಲ್ಟೇಜ್ ಅನ್ನು ಫಾಸ್ಟ್ ಚಾರ್ಜರ್ ಕಳಿಸುತ್ತದೆ, ಇದು ಫೋನು ಬಿಸಿ ತ್ವರಿತ ಏರಿಕೆಗೆ ಕಾರಣವಾಗುತ್ತದೆ. ನಿಮ್ಮ ಸ್ಮಾರ್ಟ್ಫೋನ್ ನಲ್ಲಿ ಈ ಆಯ್ಕೆಯನ್ನು ಒದಗಿಸಿದ್ದರೆ, ಇದರ ಬದಲಾಗಿ ಸಾಮಾನ್ಯ ಚಾರ್ಜರ್ ಅನ್ನು ಆರಿಸಿಕೊಳ್ಳಿ.

ಥರ್ಡ್ ಪಾರ್ಟಿ ಬ್ಯಾಟರಿ ಅಪ್ಲಿಕೇಶನ್ಗಳನ್ನು ಬಳಸುವುದನ್ನು ಆದಷ್ಟು ಕಡಿಮೆ ಮಾಡಿ. ಅವುಗಳಲ್ಲಿ ಹೆಚ್ಚಿನವು ಬ್ಯಾಕ್-ಗ್ರೌಂಡ್ ನಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿರುತ್ತವೆ. ಇಂತಹ ಅಪ್ಲಿಕೇಶನ್ ಗಳು ಬ್ಯಾಟರಿ ಲೈಫ್ ಅನ್ನು ಬಹು ಬೇಗ ಕಡಿಮೆ ಮಾಡುವುದಲ್ಲದೆ ನಿಮ್ಮ ಫೋನಿನ ಮೆಮೊರಿಯನ್ನು ಆಕ್ರಮಿಸುತ್ತವೆ.

ಚಾರ್ಗಿಂಗ್ ಹಾಕಿದಾಗ ಬ್ಯಾಟರಿ 80 ರಷ್ಟು ಚಾರ್ಜ್ ಆದ ನಂತರ ತೆಗೆದು ಬಿಡಿ. ಪೂರ್ತಿ 100 ರಷ್ಟು ಚಾರ್ಜ್ ಮಾಡುವುದರಿಂದಲೂ ಸಹ ಬ್ಯಾಟರಿ ಬೇಗನೆ ಹಾಳಾಗುತ್ತವೆ.

ಕಡಿಮೆ ಎಂದರು ಬ್ಯಾಟರಿ 20 ರಷ್ಟು ಇರುವಾಗ ಚಾರ್ಗಿಂಗ್ ಗೆ ಹಾಕಿ. ಪೂರ್ತಿ ಚಾರ್ಜ್ ಮುಗಿದ ನಂತರ ಚಾರ್ಜ್ ಮಾಡಿದರೆ ಬ್ಯಾಟರಿ ಬಹಳ ಬೇಗ ಹಾಳಾಗುತ್ತದೆ.

ಪವರ್ ಬ್ಯಾಂಕ್ ಬಳಸುತ್ತಿದ್ದರೆ, ಚಾರ್ಜ್ ಆಗುವಾಗ ಫೋನ್ ಬಳಸಬೇಡಿ ಹಾಗು ಒಳ್ಳೆಯ ಕಂಪನಿಯ ನಿಮ್ಮ ಫೋನಿನ ವೋಲ್ಟೇಜ್ ಮತ್ತು ಆಂಪಿಯರ್ ಗೆ ಸರಿ ಹೊಂದುವಂತಹ ಪವರ್ ಬ್ಯಾಂಕ್ ಆನ್ ಖರೀದಿಸಿರಿ.

Also Read: ನಿಮ್ಮ ಮೆದುಳು ಎಂಥ ವಿಸ್ಮಯಕಾರಿ ಕೆಲಸಗಳನ್ನು ಮಾಡುತ್ತೆ ಗೊತ್ತ??