ಹೊರ ಬಿದ್ದಿದೆ ಸತ್ಯ, ಮೋದಿ ವಿದೇಶ ಪ್ರವಾಸದ ಬಗ್ಗೆ ಟೀಕಿಸುತ್ತಿದ್ದವರು ನೋಡಿ; ದೇಶಕ್ಕೆ ಎಷ್ಟು ಲಾಭಗಳಾಗಿವೆ ಗೊತ್ತಾ??

0
349

ದೇಶದಲ್ಲಿ ಹೆಚ್ಚು ವಿದೇಶಿ ಪ್ರವಾಸ ಕೈಗೊಂಡ ದುಬಾರಿ ಪ್ರಧಾನಿ ಎನ್ನುವ ಪಟ್ಟಕ್ಕೆರಿದ ಪ್ರಧಾನಿ ನರೇಂದ್ರ ಮೋದಿಯವರ ವಿದೇಶಿ ಪ್ರವಾಸಗಳಿಗೆ ಖರ್ಚು ಮಾಡಿದ್ದ ಹಣವೆಷ್ಟು ಎಂಬ ಬಗ್ಗೆ ಉದ್ಭವಿಸಿದ್ದ ಗೊಂದಲಗಳಿಗೆ ಈಗ ಸ್ಪಷ್ಟ ಮಾಹಿತಿ ಸಿಕ್ಕಿದ್ದು. ಏರ್ ಇಂಡಿಯಾ ನೀಡಿರುವ ಮಾಹಿತಿ ಪ್ರಕಾರ ಕಳೆದ 5 ವರ್ಷಗಳಲ್ಲಿ ಪ್ರಧಾನಿ ಮೋದಿ ಅವರ ವಿದೇಶ ಪ್ರವಾಸದ ವಿಮಾನಯಾನ ಸೇವೆಯ ವೆಚ್ಛ 443.4 ಕೋಟಿ ರೂ. ಆಗಿದೆ ಎಂದು ತಿಳಿಸಿದೆ.

Also read: ಮೋದಿ ಜಾತಕದಲ್ಲಿ ಅಖಂಡ ಸಾಮ್ರಾಜ್ಯ ಯೋಗ; ಎರಡನೇ ಬಾರಿಗೆ ಮೋದಿ ಪ್ರಧಾನಿಯಾಗೋದನ್ನ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ; ಜ್ಯೋತಿರ್ವಿಜ್ಞಾನಿ ಪ್ರಕಾಶ್ ಅಮ್ಮಣ್ಣಾಯ..

ಹೌದು ಮೋದಿ ಅವರ ವಿದೇಶ ಪ್ರವಾಸದ ಕುರಿತು ಪರ-ವಿರೋಧದ ಚರ್ಚೆ ನಡೆಯುತ್ತಲೇ ಇದೆ. ಈ ಮಧ್ಯೆ ಏರ್ ಇಂಡಿಯಾ ಪ್ರಧಾನಿ ವಿದೇಶಿ ಪ್ರವಾಸದ ಶುಲ್ಕ ಕೇಳಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದೆ. ಈ ಮಾಹಿತಿಯಂತೆ ಪ್ರಧಾನಿ ನರೇಂದ್ರ ಮೋದಿ ಅಧಿಕೃತ ವಿದೇಶಿ ಭೇಟಿಗಳಿಗಾಗಿ ಮಾಡಿರುವ ವಿಮಾನಯಾನದ ವೆಚ್ಚ 443.4 ಕೋಟಿ ರೂ. ಏರ್‍ಇಂಡಿಯಾ ವಿಮಾನ ಸಂಸ್ಥೆ ಮೋದಿ ವಿದೇಶ ಪ್ರವಾಸಗಳಿಗಾಗಿ ಇಷ್ಟು ಮೊತ್ತದ ಬಿಲ್ ನೀಡಿದೆ. ಆದರೆ ಇದೇ ವೇಳೆ ಪ್ರಧಾನಿಯವರ ಆದರೆ, ಇದೇ ವೇಳೆ ಪ್ರಧಾನಿಯವರ ಇನ್ನೂ ಐದು ಸಾಗರೋತ್ತರ ದೇಶಗಳ ಪ್ರವಾಸಗಳಿಗೆ ವೈಮಾನಿಕ ಸಂಸ್ಥೆ ಇನ್ನೂ ವೆಚ್ಚದ ವಿವರ ನೀಡಿಲ್ಲ.

ಪ್ರಧಾನ ಮಂತ್ರಿ ಕಚೇರಿ ನೀಡಿರುವ ಮಾಹಿತಿ ಪ್ರಕಾರ, ಪ್ರಧಾನ ಮಂತ್ರಿಗಳ ಸಾಗರೋತ್ತರ ದೇಶಗಳಿಗೆ ಭೇಟಿ ನೀಡಿದ ಸಂಖ್ಯೆ 44. ಮೋದಿ ಅವರು 2014ರ ಮೇನಲ್ಲ ಪ್ರಧಾನಿಯಾದ ದಿನದಿಂದ ಈವರೆಗೆ 44 ಅಂತರರಾಷ್ಟ್ರೀಯ ಪ್ರವಾಸ ಕೈಗೊಂಡಿದ್ದಾರೆ. ಇದರಲ್ಲಿ ಹಲವು ದೇಶಗಳು ಸೇರಿವೆ. ಈ ಎಲ್ಲ ಪ್ರವಾಸಗಳಿಗೆ ವೈಮಾನಿಕ ಸಂಸ್ಥೆ ಪ್ರಧಾನಿ ಕಚೇರಿಗೆ ಬಿಲ್ ಕಳುಹಿಸುತ್ತದೆ. ಈ ಹಣವನ್ನು ಸರ್ಕಾರದಿಂದ ಏರ್ ಇಂಡಿಯಾಗೆ ಪಾವತಿಸಲಾಗುತ್ತದೆ.

Also read: ಮೋದಿಯವರು ಎಲ್.ಕೆ.ಅಡ್ವಾಣಿಯವರನ್ನು ಒದ್ದು ವೇದಿಕೆಯಿಂದ ಹೊರಡಬ್ಬಿದ್ದರು: ಸುಳ್ಳು ಪ್ರಚಾರ ಮಾಡುತ್ತಿರುವ ರಾಹುಲ್ ಗಾಂಧಿ??

ಮೋದಿ ಇಷ್ಟೆಲ್ಲಾ ವಿದೇಶ ಪ್ರವಾಸ ಕೈಗೊಂಡಿದ್ದರೂ ಸಹ ಅವರ ನಿಕಟಪೂರ್ವ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ತಮ್ಮ ಎರಡನೇ ಅವಧಿ 2009-2014)ಯಲ್ಲಿ ವೈಮಾನಿಕ ಯಾನಕ್ಕಾಗಿ ಮಡಿದ ವೆಚ್ಚಕ್ಕಿಂತ ಇದು 50 ಕೋಟಿ ರು. ಕಡಿಮೆಯಾಗಿದೆ. ಸಿಂಗ್ ಅವರು ಆ ಅವಧಿಯಲ್ಲಿ 38 ವಿದೇಶ ಪ್ರವಾಸ ಕೈಗೊಂಡಿದ್ದರು. ಇದಕ್ಕಾಗಿ ಅವರಿಗೆ 493.2 ಕೋಟಿ ರು. ವೆಚ್ಚವಾಗಿತ್ತು. ಮೋದಿ ಒಂದೇ ಬಾರಿಗೆ ಅನೇಕ ರಾಷ್ಟ್ರಗಳ ಪ್ರವಾಸ ಮಾಡುವುದರಿಂದಾಗಿ ಅವರ ವಿದೇಶ ಪ್ರವಾಸದಲ್ಲಿನ ಒಟ್ಟಾರೆ ಅಥವಾ ಸರಾಸರಿ ವೆಚ್ಚದಲ್ಲಿ ಇಳಿಕೆಯಾಗಿದೆ.

ಅಲ್ಲದೆ ಮೋದಿ ತಮ್ಮ ಇತರೆ ಆರು ಅಂತರಾಷ್ಟ್ರೀಯ ಭೇಟಿಗಳಿಗಾಗಿ ಏರ್ ಇಂಡಿಯಾ ಬದಲಿಗೆ ಭಾರತೀಯ ವಾಯುಪಡೆಯ ವ್ಯಾಪಾರಿ ಜೆಟ್ ಬಳಕೆ ಮಾಡಿದ್ದಾರೆ. ಇದೂ ಸಹ ಅವರ ಒಟ್ಟಾರೆ ವಿದೇಶ ಪ್ರಯಾಣದ ವೆಚ್ಚ ಕಡಿತವಾಗಲು ಕಾರಣವಾಗಿತ್ತು. ಮೋದಿಯವರು ಬೋಯಿಂಗ್ 737 ವ್ಯಾಪಾರ ಜೆಟ್‍ನಲ್ಲಿ ನೇಪಾಳ, ಬಾಂಗ್ಲಾದೇಶ, ಇರಾನ್ ಮತ್ತು ಸಿಂಗಪುರಕ್ಕೆ ಪ್ರಯಾಣಿಸಿದ್ದರು. ಆದರೆ ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ ಬಾಂಗ್ಲಾದೇಶ, ಸಿಂಗಪುರನಂತಹ ನೆರೆಹೊರೆ ರಾಷ್ಟ್ರಗಳಿಗೆ ತೆರಳಲು ಸಹ ಏರ್ ಇಂಡಿಯಾವನ್ನೇ ಬಳಸಲಾಗುತ್ತಿತ್ತು.

ಮೋದಿ ವಿದೇಶಿ ಪ್ರವಾಸದ ಸಿಕ್ಕ ದುಬಾರಿ ಉಡುಗೊರೆಗಳು:

Also read: “ನಮೋ ಟಿವಿ” ವಿರುದ್ದ ಚುನಾವಣಾ ಆಯೋಗಕ್ಕೆ ದೊರು ನೀಡಿದ್ದ ಆಮ್ ಆದ್ಮಿ ಪಾರ್ಟಿಗೆ ಮುಖಭಂಗ; ಮೋದಿಗೆ ಇನ್ನೊಂದು ಜಯ??

2017ರ ಜುಲೈನಿಂದ 2018 ಜೂನ್ ವರೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈ ಒಂದು ವರ್ಷದ ಅವಧಿಯಲ್ಲಿ ಒಟ್ಟು 12.57 ಲಕ್ಷ ಮೌಲ್ಯದ 168 ಉಡುಗೊರೆಗಳು ಸಿಕ್ಕಿವೆ ಎಂದು ವಿದೇಶಾಂಗ ಸಚಿವಾಲಯದ ಖಜಾನೆ ವಿಭಾಗ ಮಾಹಿತಿ ನೀಡಿದೆ. ಇವುಗಳಲ್ಲಿ 1.10 ಲಕ್ಷ ರೂ. ಬೆಲೆಯ ‘ಮೋಂಟ್‌ಬ್ಲಾಂಕ್‌’ ಕೈ ಗಡಿಯಾರ, ಬೆಳ್ಳಿಯ ಪದಕ, 3.4 ಲಕ್ಷ ರೂ. ಬೆಲೆಯ ಎರಡು ಮೋಂಟ್‌ಬ್ಲಾಂಕ್‌ ಪೆನ್ನುಗಳು ಸೇರಿವೆ.