ಬಿಳಿ ಅಕ್ಕಿ, ಕೆಂಪು ಅಕ್ಕಿ ಬಗ್ಗೆ ಕೇಳಿರುತ್ತೀರಿ; ಇದಕ್ಕಿಂತ ಆರೋಗ್ಯಕ್ಕೆ ಒಳ್ಳೆದಾದ ಕಪ್ಪು ಅಕ್ಕಿ ಬಗ್ಗೆ ಕೇಳಿದ್ದೀರೇ?? ಅಕ್ಕಿಯಲೋಕದ ಅಚ್ಚರಿ….!

0
1073

ಅಕ್ಕಿಯ ಲೋಕದ ಅಚ್ಚರಿಗಳಲ್ಲೊಂದು ಈ ಕಪ್ಪು ಅಕ್ಕಿ. ಬಿಳಿ ಬಣ್ಣಕ್ಕೆ ಪರ್ಯಾಯ ಪದ ಅನ್ನ ಎಂಬ ಮಾತು ರೂಢಿಯಲ್ಲಿರುವಾಗ, ಅದಕ್ಕೆ ವ್ಯತಿರಿಕ್ತವಾಗಿ ಕಪ್ಪು ಅಕ್ಕಿ ಕಾಣಿಸಿಕೊಳ್ಳುತ್ತದೆ. ಕೃಷಿ ಲೋಕದ ವೈಶಿಷ್ಟ್ಯ ಎಂದರೆ ಇದೇ ತಾನೇ?!

ಈಶಾನ್ಯ ರಾಜ್ಯಗಳ ರಾಣಿಲಕ್ಷಾಂತರ ಅಕ್ಕಿ ತಳಿಗಳ ಮಧ್ಯೆ ಕಪ್ಪು ಅಕ್ಕಿಗೆ ಮಹತ್ವದ ಸ್ಥಾನವಿದೆ. ಭಾರತದ ಈಶಾನ್ಯ ರಾಜ್ಯಗಳಲ್ಲಿ ಕಪ್ಪಕ್ಕಿ ಕೃಷಿ ನಡೆದುಕೊಂಡು ಬಂದಿದೆ. ಉಳಿದಂತೆ ಇದರ ಬೇಸಾಯ ಹೆಚ್ಚು ವ್ಯಾಪಿಸಿರುವುದು ಚೀನಾ ದೇಶದಲ್ಲಿ. ಭಾರತದಲ್ಲಿ ಹಸಿರು ಕ್ರಾಂತಿಯಿಂದಾಗಿ ದೇಸಿ ತಳಿಗಳಿಗೆ ಕುತ್ತು ಬಂದೊದಗಿದ್ದು ಗೊತ್ತು. ಆ ವ್ಯಾಪ್ತಿಯಿಂದ ಕಪ್ಪು ಅಕ್ಕಿ ಆಚೆಗೇನೂ ಹೋಗಿಲ್ಲ. ಹಾಗಿದ್ದರೂ ತನ್ನಲ್ಲಿರುವ ಅಪೂರ್ವ ಗುಣಲಕ್ಷಣಗಳಿಂದಾಗಿ, ಕಪ್ಪಕ್ಕಿಯು ಅನ್ನದ ತಟ್ಟೆಯಿಂದ ಸಂಪೂರ್ಣವಾಗಿ ಮಾಯವಾಗಿಲ್ಲ ಎಂಬುದು ಸಮಾಧಾನದ ಸಂಗತಿ.

ಕಪ್ಪಕ್ಕಿ ಅನ್ನ ತೀರಾ ಮೃದು ಹಾಗೂ ಹೆಚ್ಚು ಜಿಗುಟು. ಮಣಿಪುರ ಹಾಗೂ ಬರ್ಮಾದಲ್ಲಿ ನಡೆಯುವ ಧಾರ್ಮಿಕ ಹಾಗೂ ಸಾಂಸ್ಕøತಿಕ ಸಮಾರಂಭಗಳಲ್ಲಿ ವಿಶೇಷ ಅಡುಗೆ ತಿನಿಸುಗಳಿU ಇದನ್ನು ಬಳಸಲಾಗುತ್ತದೆ. ಅಂದ ಹಾಗೆ ಬರೀ ಅಡುಗೆಗೆ ಮಾತ್ರವಲ್ಲ; ಅಲಂಕಾರಿಕ ಕಲಾಕೃತಿಗಳು ಹಾಗೂ ಕರಕುಶಲ ಸಾಮಗ್ರಿಗಳ ಅಂದ ಹೆಚ್ಚಿಸಲು ಕಪ್ಪಕ್ಕಿ ಬಳಸುವುದೂ ಉಂಟು!

ಆರೋಗ್ಯಕ್ಕೆ ಪೂರಕವಾದ ಕಪ್ಪಕ್ಕಿಯಲ್ಲಿ ವಿಟಮಿನ್ ‘ಬಿ’, ‘ಇ’, ಕ್ಯಾಲ್ಸಿಯಂ, ಮೆಗ್ನಿಷಿಯಂ ಹಾಗೂ ಸತು ಹೇರಳವಾಗಿವೆ. ಅಕ್ಕಿಯ ತೌಡಿನಲ್ಲಿ (ಹೊರಕವಚ) ಆಂಟಿ-ಆಕ್ಸಿಡೆಂಟ್ ಸಾಕಷ್ಟು ಪ್ರಮಾಣ ದಲ್ಲಿವೆ. ಕೆಂಪಕ್ಕಿಯಲ್ಲಿ ಇರುವಷ್ಟೇ ಪೋಷಕ ನಾರು ಇದರಲ್ಲಿದೆ. ಇದು ಪಚನಕ್ರಿಯೆ ಹೆಚ್ಚಿಸಲು ಸಹಕಾರಿಯಾಗಿದ್ದು, ಮಲಬದ್ಧತೆಯನ್ನು ದೂರವಿಡುತ್ತದೆ. ಕಬ್ಬಿಣದ ಅಂಶ ಇರುವುದರಿಂದ ರಕ್ತಹೀನತೆಗೆ ಇದು ರಾಮಬಾಣ.

ಈ ಅಕ್ಕಿಯ ನಿತ್ಯ ಸೇವನೆಯಿಂದ ಬೊಜ್ಜು ಕರಗುತ್ತದೆ; ಕೊಲೆಸ್ಟ್ರಾಲ್ ಕಡಿಮೆ ಮಾಡಿ ಹೃದಯ ಸಂಬಂಧಿ ಕಾಯಿಲೆಗಳು ನಿಯಂತ್ರಣಕ್ಕೆ ಬರುತ್ತವೆ. ಅಕ್ಕಿಯಲ್ಲಿರುವ ಅಂಥೊಸಿಯಾ ನಿನ್ನಿಂ್ದಾಗಿ ಅದಕ್ಕೆ ಆ ಬಣ್ಣ ಬಂದಿದೆ. ಕೇಕ್, ಬ್ರೆಡ್ ಹಾಗೂ ನ್ಯೂಡಲ್ಸ್ ಮಾಡಲು ಇದು ಸೂಕ್ತ. ಭಾರತದಲ್ಲಿ ಕಪ್ಪು ಭತ್ತದ ಕೃಷಿಗೆ ಆರು ಸಾವಿರ ವರ್ಷಗಳ ಇತಿಹಾಸವಿದೆ. ಅದರಲ್ಲೂ ಮಣಿಪುರ ರಾಜ್ಯ ಈ ಕೃಷಿಗೆ ಖ್ಯಾತಿ ಪಡೆದಿದೆ. ವಾತಾವರಣz ವೈಪರೀತ್ಯಕ್ಕೆ ಹೊಂದಿಕೊಂಡು ಬೆಳೆಯುವ ಕಪ್ಪು ಭತ್ತದ ತಳಿಗಳಲ್ಲಿ ಸುವಾಸಿತ ಅಕ್ಕಿ ತಳಿಯೂ ಇವೆ. ಮಣಿಪುರದಲ್ಲಿ ಇದನ್ನು `ಚಕ್-ಹಾವ್’ ಎಂದು ಕರೆಯುತ್ತಾರೆ. ಬಹುತೇಕ ಹಬ್ಬಗಳಲ್ಲಿ ಮಾಡುವ ಮುದ್ದೆ ತರಹದ ತಿನಿಸಿಗೆ ಕಪ್ಪು ಅಕ್ಕಿಯೇ ಬೇಕು.

ಈಶಾನ್ಯ ರಾಜ್ಯಗಳಲ್ಲದೇ ಪಶ್ಚಿಮ ಬಂಗಾಳ, ಮಧ್ಯ ಪ್ರದೇಶ, ಒಡಿಸ್ಸಾದಲ್ಲೂ ಅಲ್ಲಲ್ಲಿ ಬೆಳೆಯಲಾಗುತ್ತದೆ. ಸಾವಯವ ಕೃಷಿಗೆ ಸುಲಭವಾಗಿ ಒಗ್ಗಿಕೊಳ್ಳುವ ಈ ಅಕ್ಕಿಯ ಮಹತ್ವ ಗಮನಿಸಿರುವ ಕೇಂದ್ರ ಸರ್ಕಾರ, ಪಾರಂಪರಿಕ ಕೃಷಿ ವಿಕಾಸ ಯೋಜನೆಗೆ ಮಣಿಪುರದಲ್ಲಿ ಕಪ್ಪು ಭತ್ತ ಕೃಷಿಗೆ ಉತ್ತೇಜನ ಕೊಡುವ ಯೋಜನೆಗೆ ಒಪ್ಪಿಗೆ ನೀಡಿದೆ.ಇಳುವರಿ ಕಡಿಮೆ ಎಂಬ ಒಂದೇ ಕಾರಣಕ್ಕಾಗಿ ಕಪ್ಪು ಭತ್ತದ ಬೇಸಾಯವನ್ನು ರೈತರು ಕಡಿಮೆ ಮಾಡಿದ್ದಾರೆ. ಆದರೆ ಅದರ್ಕೆ ಇರುವ ಬೆಲೆ ಇತರ ಅಕ್ಕಿಗಳಿಗಿಂತ ಎಷ್ಟೋ ಪಟ್ಟು ಹೆಚ್ಚು.

MRR ನ್ಯೂಲೈಫ್
ನ್ಯೂ ನಂ 7 , ಎರಡನೇ ಮಹಡಿ
50 ಅಡಿ ರಸ್ತೆ, ಹನುಮಂತನಗರ
ಬೆಂಗಳೂರು 50
ದೂರವಾಣಿ ಸಂಖ್ಯೆ: 9071904622 , 8217224840